Just In
- 1 hr ago
ಬಿಎಸ್ಎನ್ಎಲ್ನ ಈ ಪೋಸ್ಟ್ಪೇಯ್ಡ್ ಪ್ಲ್ಯಾನ್ ಬೆಲೆ ಅಗ್ಗ; ಆದ್ರೆ, ರೀಚಾರ್ಜ್ ಕಷ್ಟ!
- 2 hrs ago
ಅಗ್ಗದ ಬೆಲೆಗೆ ಹೊಸ ಪ್ಲ್ಯಾನ್ ಪರಿಚಯಿಸಿದ ವಿ ಟೆಲಿಕಾಂ; ಸಿಮ್ ಆಕ್ಟಿವ್ ಇಡಲು ಇದು ಬೆಸ್ಟ್!
- 4 hrs ago
ಏರ್ಟೆಲ್ ಜೊತೆಗೆ ಕೈ ಜೋಡಿಸಿದ ಮೆಟ್ರೋ, ಇನ್ಮುಂದೆ ಪ್ರಯಾಣಿಕರಿಗೆ ಈ ಸೇವೆ ಇನ್ನಷ್ಟು ಸರಳ!
- 5 hrs ago
ಪೊಕೊ X5 ಪ್ರೊ ಲಾಂಚ್ಗೆ ಡೇಸ್ ಫಿಕ್ಸ್; ಭಾರೀ ಕುತೂಹಲ ಮೂಡಿಸಿದ ಫೀಚರ್ಸ್!
Don't Miss
- Lifestyle
ಫೆ.1ಕ್ಕೆ ಜಯ ಏಕಾದಶಿ: ಈ ರೀತಿ ಮಾಡಿದರೆ ದಾರಿದ್ರ್ಯ ಹೋಗಿ ಸಂಪತ್ತು ವೃದ್ಧಿಸುವುದು
- Automobiles
ಭಾರತದಲ್ಲಿ ಮೊದಲ ಬಾರಿಗೆ 2.5 ಕೋಟಿ ಕಾರುಗಳ ಮಾರಾಟ ಮೈಲಿಗಲ್ಲು ಸಾಧಿಸಿದ ಜನಪ್ರಿಯ ಕಂಪನಿ
- Sports
IND vs NZ: 2ನೇ ಟಿ20 ಪಂದ್ಯದಲ್ಲಿ ಕಳಪೆ ಪಿಚ್ ನಿರ್ಮಾಣ; ಲಕ್ನೋ ಪಿಚ್ ಕ್ಯುರೇಟರ್ ವಜಾ
- Finance
Economic Survey: ಶೇ.6-6.8 ಜಿಡಿಪಿ ಬೆಳವಣಿಗೆ, 3 ವರ್ಷದಲ್ಲೇ ಮಂದಗತಿ
- News
ಯೂಟ್ಯೂಬ್ ನೋಡಿ ಕಳ್ಳತನ ಕಲಿತ ಜೋಡಿ: ಶಶಿಕಲಾ ಜೊಲ್ಲೆ ಮಾಲೀಕತ್ವದ ಬ್ಯಾಂಕ್ಗೆ ಕನ್ನ
- Movies
ಬಾಲನಟಿಯರಾಗಿ ಬಂದು ನಾಯಕಿಯರಾಗಿ ರಂಜಿಸುತ್ತಿರುವ ಚೆಂದುಳ್ಳಿ ಚೆಲುವೆಯರ ಜರ್ನಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
108 ಮೆಗಾಪಿಕ್ಸೆಲ್ ಕ್ಯಾಮೆರಾ ಫೋನ್ ತಯಾರಿಸುತ್ತಿದೆ ಶಿಯೋಮಿ!
ಇತ್ತೀಚಿಗಷ್ಟೇ 64 ಮೆಗಾಪಿಕ್ಸೆಲ್ ಕ್ಯಾಮರಾ ಹೊಂದಿರುವ ರೆಡ್ಮಿ ನೋಟ್ 8 ಪ್ರೊ ಸ್ಮಾರ್ಟ್‌ಫೋನನ್ನು ಪರಿಚಯಿಸಿರುವ ಶಿಯೋಮಿ ಮುಂದಿನ ಹಂತದಲ್ಲಿ 108 ಮೆಗಾಪಿಕ್ಸೆಲ್ ಕ್ಯಾಮರಾ ಹೊಂದಿರುವ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ ಎನ್ನಲಾಗಿದೆ. ಶಿಯೋಮಿ 108 ಮೆಗಾಪಿಕ್ಸೆಲ್ ಪ್ರೈಮರಿ ರಿಯರ್ ಕ್ಯಾಮೆರಾದೊಂದಿಗೆ ಒಟ್ಟು ನಾಲ್ಕು ನೂತನ ಸ್ಮಾರ್ಟ್‌ಫೋನ್‌ಗಳ ತಯಾರಿಕೆಗೆ ಮುಂದಾಗಿದೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿದೆ.

ಹೌದು, ಶಿಯೋಮಿ ಸ್ಯಾಮ್ಸಂಗ್ ಐಸೊಸೆಲ್ ಬ್ರೈಟ್ ಎಚ್‌ಎಂಎಕ್ಸ್ ಸಂವೇದಕವನ್ನು ಒಳಗೊಂಡಿರುವ "ಟುಕಾನಾ", "ಡ್ರಾಕೊ", "ಉಮಿ" ಮತ್ತು "ಸೆಮಿ" ಎಂಬ ಸಂಕೇತನಾಮ ಹೊಂದಿರುವ ನಾಲ್ಕು ಫೋನ್‌ಗಳನ್ನು ತಯಾರಿಸುತ್ತಿದೆ ಎಂದು ಹೇಳಲಾಗಿದೆ. ಎಕ್ಸ್‌ಡಿಎ ಡೆವಲಪರ್‌ಗಳ ಪ್ರಕಾರ, ಈ ಎಲ್ಲಾ ಸಂಕೇತನಾಮಗಳು ಶಿಯೋಮಿ ಕಂಪನಿಯಿಂದ ಬಿಡುಗಡೆಯಾಗಲಿರುವ ಹೊಸ ಸಾಧನಗಳಿಗೆ ಸೇರಿವೆ ಎಂದು ಅಭಿಪ್ರಾಯಪಟ್ಟಿರುವುದನ್ನು ಚೀನಾದ ಮಾಧ್ಯಮಗಳು ಪ್ರಕಟಿಸಿವೆ.
ಅಧಿಕ ಮೆಗಾಪಿಕ್ಸೆಲ್ ಮತ್ತು ರೆಸೊಲ್ಯೂಶನ್ ಆಧಾರಿತ ಸ್ಮಾರ್ಟ್‌ಫೋನ್‌ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಹೀಗಾಗಿ ಅಧಿಕ ಮೆಗಾಪಿಕ್ಸೆಲ್ ಸಹಿತ ಕ್ಯಾಮರಾ ಸ್ಮಾರ್ಟ್‌ಫೋನ್ ಬಿಡುಗಡೆಗೆ ಶಿಯೋಮಿ ಮುಂದಾಗಿದ್ದು, ಇದಕ್ಕಾಗಿ ಪೂರಕ ಹಾರ್ಡ್‌ವೇರ್ ಮತ್ತು ಓಎಸ್ ಸಾಫ್ಟ್‌ವೇರ್ ಅಭಿವೃದ್ಧಿಪಡಿಸುತ್ತಿದೆ. ಪ್ರಸ್ತುತ ಅತ್ಯಧಿಕ ಸಂಖ್ಯೆಯ ಸ್ಮಾರ್ಟ್‌ಫೋನ್‌ಗಳು 48 ಮೆಗಾಪಿಕ್ಸೆಲ್ ಕ್ಯಾಮರಾ ಸಹಿತ ಮಾರುಕಟ್ಟೆ ಪ್ರವೇಶಿಸುತ್ತಿರುವುದು ಶಿಯೋಮಿಯ ಈ ಹೊಸ ಯೋಜನೆಗೆ ಕಾರಣ ಎಂದು ಹೇಳಲಾಗಿದೆ.

108 ಮೆಗಾಪಿಕ್ಸೆಲ್ ಪೂರ್ಣ ರೆಸಲ್ಯೂಶನ್ ಚಿತ್ರಗಳನ್ನು ನೋಡುವ ಸಾಮರ್ಥ್ಯದ ಅಂತಹ ಸಾಧನಗಳ ಬಗ್ಗೆ ಸಾಕಷ್ಟು ಪುರಾವೆಗಳಿಲ್ಲ. ಈ ಹಿಂದೆ ಗ್ಯಾಲರಿ ಅಪ್ಲಿಕೇಶನ್‌ಗಳು ಹೆಚ್ಚಿನ ಮೆಗಾಪಿಕ್ಸೆಲ್ ಸಂವೇದಕಗಳೊಂದಿಗೆ ಸೆರೆಹಿಡಿಯಲಾದ ದೊಡ್ಡ ಫೋಟೋಗಳ ಪೂರ್ಣ ಗಾತ್ರಕ್ಕೆ ಜೂಮ್ ಮಾಡಲು ಕಂಪೆನಿ ಬಳಕೆದಾರರನ್ನು ಅನುಮತಿಸಲಿಲ್ಲ. ಆದರೆ, ಪೂರ್ಣ ರೆಸಲ್ಯೂಶನ್ 108 ಮೆಗಾಪಿಕ್ಸೆಲ್ ಚಿತ್ರಗಳ ಬೆಂಬಲವು ನೈಸರ್ಗಿಕ ಪ್ರಗತಿಯನ್ನು ಸೂಚಿಸುತ್ತದೆ.
ಇನ್ನು ಈ ಯಾವುದೇ ಸಾಧನ ಕೋಡ್ ಹೆಸರುಗಳು ಶಿಯೋಮಿಯ ಮಿಂದಿನ ಮಿ ಮಿಕ್ಸ್ 4 ಸ್ಮಾರ್ಟ್‌ಫೋನಿಗೆ ಹೊಂದಿಕೆಯಾಗುವುದಿಲ್ಲ ಎಂದು ವರದಿಯು ತೋರಿಸುತ್ತಿದೆ ಗ್ಯಾಲರಿ ಅಪ್ಲಿಕೇಶನ್‌ನಲ್ಲಿ ಸೂಚಿಸಲಾದ ಕೋಡ್‌ನಲ್ಲಿ ಈ ಸಾಧನದ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಸೋರಿಕೆಗಳು ಮಿ ಮಿಕ್ಸ್ 4 ಐಸೊಸೆಲ್ ಬ್ರೈಟ್ ಎಚ್‌ಎಂಎಕ್ಸ್ ಸಂವೇದಕದೊಂದಿಗೆ ಬರಲಿದೆ ಎಂದು ಸೂಚಿಸಿದೆ. ಆದಾಗ್ಯೂ, ಮಿ ಮಿಕ್ಸ್ 4 64 ಮೆಗಾಪಿಕ್ಸೆಲ್ ಮುಖ್ಯ ಸಂವೇದಕವನ್ನು ಬಳಸುತ್ತದೆ ಎಂದು ವರದಿ ಹೇಳಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470