ಶಿಯೋಮಿಯಿಂದ ಹೊಸ ಸ್ಮಾರ್ಟ್‌ ಡಿಸ್‌ಪ್ಲೇ ಡಿವೈಸ್‌ ಲಾಂಚ್‌!

|

ಚೀನಾ ಮೂಲದ ಜನಪ್ರಿಯ ಸ್ಮಾರ್ಟ್‌ಫೋನ್‌ ಕಂಪೆನಿ ಶಿಯೋಮಿ ತನ್ನ ಹೊಸ ಸ್ಮಾರ್ಟ್‌ಹೋಮ್‌ ಪ್ರಾಡಕ್ಟ್‌ ಶಿಯಾವೊಎಐ ಟಚ್‌ಸ್ಕ್ರೀನ್ ಸ್ಪೀಕರ್ ಪ್ರೊ 8 ನ್ನ ಬಿಡುಗಡೆ ಮಾಡಿದೆ. ಗೆಜೆಟ್‌ ಲೋಕದಲ್ಲಿ ಸ್ಮಾರ್ಟ್‌ಪ್ರಾಡಕ್ಟ್‌ಗಳಿಗೆ ಉತ್ತಮ ಮಾರುಕಟ್ಟೆಯಿದೆ. ಮಲ್ಟಿ ಟಾಸ್ಕಿಂಗ್‌ ಸ್ಮಾರ್ಟ್‌ಪ್ರಾಡಕ್ಟಗಳಿಗೆ ಎಲ್ಲಿಲ್ಲದ ಬೇಡಿಕೆ ಇದ್ದೆ ಇದೆ. ಸದ್ಯ ಶಿಯೋಮಿ ಕಂಪೆನಿ ಲಾಂಚ್‌ ಮಾಡಿರೋ ಹೊಸ ಸ್ಮಾರ್ಟ್‌ ಡಿಸ್‌ಪ್ಲೇ ಕೂಡ ಮಲ್ಟಿ ಟಾಸ್ಕಿಂಗ್‌ ಪ್ರಾಡಕ್ಟ್‌ ಆಗಿದ್ದು, ಗೂಗಲ್‌ ನೆಸ್ಟ್‌ಹಬ್‌ ಮತ್ತು ಅಮೆಜಾನ್‌ ಎಕೋ ಪ್ರಾಡಕ್ಟ್‌ಗಳಿಗೆ ಪೈಪೋಟಿ ನೀಡಲಿದೆ ಎಂದು ಹೇಳಲಾಗ್ತಿದೆ.

ಶಿಯೋಮಿ

ಹೌದು, ಶಿಯೋಮಿ ಲಾಂಚ್‌ ಮಾಡಿರೋ ಸ್ಮಾರ್ಟ್ ಡಿಸ್‌ಪ್ಲೇ ಶಿಯಾವೊಎಐ ಟಚ್‌ಸ್ಕ್ರೀನ್ ಸ್ಪೀಕರ್ ಪ್ರೊ 8 ಮಲ್ಟಿ ಮೀಡಿಯಾ ಸ್ಟ್ರೀಮಿಂಗ್‌ ಆಗಿದ್ದು, ವಿಡಿಯೋ ಕರೆಗಳ ಜೊತೆಗೆ ಮೂರು ಸಬ್‌ವೂಫರ್‌ಗಳನ್ನ ಒಳಗೊಂಡಿದ್ದು 50.8 ಎಂಎಂ, 10 ಡಬ್ಲ್ಯೂ ಡ್ರೈವರ್ ಜೊತೆಗೆ ಡಿಟಿಎಸ್ ಆಡಿಯೊ ಟ್ಯೂನಿಂಗ್ ಕೂಡ ನೀಡುತ್ತದೆ. ಅಲ್ಲದೆ ಶಿಯೋಮಿ ಆಂಡ್ರಾಯ್ಡ್‌ ಮತ್ತು ಐಒಎಸ್ ಸ್ಮಾರ್ಟ್ ಪ್ರಾಡಕ್ಟ್‌ಗಳ ಜೊತೆಗೆ ಹೊಂದಾಣಿಕೆಯನ್ನು ಸಹ ಮಾಡಿಕೊಳ್ಳಬಹುದಾಗಿದೆ.

ಶಿಯಾವೊಎಐ

ಇನ್ನು ಶಿಯೋಮಿ ಶಿಯಾವೊಎಐ ಟಚ್‌ಸ್ಕ್ರೀನ್ ಸ್ಪೀಕರ್ ಪ್ರೊ 8, 1280x800 ಪಿಕ್ಸೆಲ್‌ ರೆಸಲ್ಯೂಶನ್ ಹೊಂದಿರುವ 8 ಇಂಚಿನ ಮಲ್ಟಿ-ಟಚ್ ಡಿಸ್ಪ್ಲೇಯನ್ನು ಹೊಂದಿದೆ. ಅಲ್ಲದೆ ಡಿಸ್‌ಪ್ಲೇ 50.8 ಎಂಎಂ 10 ಡಬ್ಲ್ಯೂ ಡ್ರೈವರ್ ಅನ್ನು ಹೊಂದಿದ್ದು ಮೂರು ಸಬ್ ವೂಫರ್‌ಗಳಿಗೆ ಸಂಪರ್ಕಿಸುತ್ತದೆ. ಜೊತೆಗೆ ಬಳಕೆದಾರರು ಮುಂಭಾಗದ ಕ್ಯಾಮೆರಾವನ್ನು ಬಳಸುವ ಮೂಲಕ ವೀಡಿಯೊ ಕರೆಗಳನ್ನು ಮಾಡಬಹುದು ಅಲ್ಲದೆ ಡಿಜಿಟಲ್ ಫೋಟೋ ಫ್ರೇಮ್‌ನಂತೆ ಕೂಡ ಬಳಸಬಹುದಾಗಿದೆ.

ಸ್ಮಾಟ್‌ಡಿಸ್‌ಪ್ಲೇ

ಅಲ್ಲದೆ ಈ ಸ್ಮಾಟ್‌ಡಿಸ್‌ಪ್ಲೇ ಡ್ಯುಯಲ್-ಬ್ಯಾಂಡ್ ವೈ-ಫೈ 802.11ac ಮತ್ತು ಬ್ಲೂಟೂತ್ ವಿ 5.0 ಕನೆಕ್ಟಿವಿಟಿ ಆಯ್ಕೆಯನ್ನ ಒಳಗೊಂಡಿದೆ. ಇದು ಕನಿಷ್ಠ ಆಂಡ್ರಾಯ್ಡ್ 4.4 ಅಥವಾ ಐಒಎಸ್ 9.0 ಸ್ಮಾರ್ಟ್‌ಡಿವೈಸ್‌ಗಳ ಜೊತೆ ಹೊಂದಿಕೊಳ್ಳುತ್ತದೆ. ಜೊತೆಗೆ ಅಮೆಜಾನ್ ಎಕೋ ಶೋ 8 ಮತ್ತು ಗೂಗಲ್ ನೆಸ್ಟ್ ಹಬ್‌ನಂತೆಯೇ, ಕ್ಸಿಯಾವೋಎಐ ಟಚ್‌ಸ್ಕ್ರೀನ್ ಸ್ಪೀಕರ್ ಪ್ರೊ 8 ಕೂಡ ಡೌಯಿನ್, ಐಕ್ಯೂ, ಮತ್ತು ಯೂಕುಗಳಂತಹ ಓವರ್-ದಿ-ಟಾಪ್ (ಒಟಿಟಿ) ಪ್ಲಾಟ್‌ಫಾರ್ಮ್‌ಗಳೊಂದಿಗೆ ಕಾರ್ಯನಿರ್ವಹಿಸುತ್ತದೆ.

ಮಿ.ಕಾಮ್

ಇನ್ನು ಈ ಸ್ಮಾರ್ಟ್‌ ಡಿಸ್‌ಪ್ಲೇ ಮಕ್ಕಳನ್ನ ಕೇಂದ್ರೀಕರಿಸಿದ ವಿಷಯಗಳು ಮತ್ತು ಅಲಾರಮ್‌ಗಳನ್ನು ಹೊಂದಿಸುವ ಸಾಮರ್ಥ್ಯವನ್ನು ಸಹ ಒದಗಿಸುತ್ತದೆ. ಬಳಕೆದಾರರ ನೀಡಿದ ಧ್ವನಿ ಆಜ್ಞೆಗಳನ್ನು ಆಲಿಸಿಕೊಂಡು ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನ ಕ್ಸಿಯಾವೋಎಐ ಡಿಸ್‌ಪ್ಲೇ ಹೊಂದಿದ್ದು, ಇದರ ಬೆಲೆ ಸಿಎನ್‌ವೈ 499 (ಅಂದಾಜು 5,100 ರೂ.) ಆಗಿದ್ದು. ಡಿಸೆಂಬರ್ 18 ರಿಂದ ಮಿ.ಕಾಮ್ ಮತ್ತು ಜೆಡಿ.ಕಾಂನಂತಹ ಆನ್‌ಲೈನ್ ಪೋರ್ಟಲ್‌ಗಳ ಮೂಲಕ ಚೀನಾದಲ್ಲಿ ಮಾರಾಟವಾಗಲಿದೆ.

Most Read Articles
Best Mobiles in India

English summary
Xiaomi has launched the XiaoAI Touchscreen Speaker Pro 8 as its new smart home device to take on the likes of Google Nest Hub and Amazon Echo Show 8. Featuring an 8-inch display, the XiaoAI Touchscreen Speaker Pro 8 provides real-time weather updates, multimedia streaming, and video calling features.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more