ಶಿಯೋಮಿ ಕಂಪೆನಿಯಿಂದ ಹೊಸ ಬಗೆಯ ಕೀಬೋರ್ಡ್‌ ಬಿಡುಗಡೆ!

|

ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಈಗಾಗಲೇ ತನ್ನದೇ ಬ್ರಾಂಡ್‌ ಹೊಂದಿರೋ ಶಿಯೋಮಿ ಕಂಪೆನಿ ಇತರೆ ಸ್ಮಾರ್ಟ್‌ಪ್ರಾಡಕ್ಟ್‌ಗಳನ್ನು ಸಹ ಮಾರುಕಟ್ಟೆಗ ಪರಿಚಯಿಸುತ್ತಾ ಬಂದಿದೆ. ಹೊಸ ಬಗೆ ಫೀಚರ್ಸ್‌ಗಳುಳ್ಳ ಸ್ಮಾರ್ಟ್‌ ಪ್ರಾಡಕ್ಟ್‌ಗಳನ್ನ ಬಿಡುಗಡೆ ಮಾಡೋ ಶಿಯೋಮಿ ಇದೀಗ ಹೊಸ ಮಾದರಿಯ ಕೀಬೋರ್ಡ್‌ ಒಂದನ್ನ ಚೀನಾ ಮಾರುಕಟ್ಟೆಗ ಪರಿಚಯಿಸಿದೆ. ಇದು 2016ರಲ್ಲಿ ಶಿಯೋಮಿ ಕಂಪೆನಿಯೇ ಪರಿಚಯಿಸಿದ್ದ ಕೀಬೋರ್ಡ್‌ನ ಅಪ್‌ಗ್ರೇಡ್‌ ವರ್ಷನ್‌ ಆಗಿದೆ.

ಹೌದು,

ಹೌದು, ಸ್ಮಾರ್ಟ್‌ಫೋನ್‌ ತಯಾರಕ ಕಂಪೆನಿ ಶಿಯೋಮಿ 2016 ರಲ್ಲಿ ಶಿಯೋಮಿ ಕೀಬೋರ್ಡ್‌ ಅನ್ನ ಚೀನಾ ಮಾರುಕಟ್ಟೆಗೆ ಪರಿಚಯಿಸಿತ್ತು. ಇದೀಗ ಅದರ ಅಪ್‌ಗ್ರೇಡ್‌ ವರ್ಷನ್‌ ಆದ ಮೆಕ್ಯಾನಿಕಲ್ ಕೀಬೋರ್ಡ್ ಅನ್ನು ಚೀನಾದಲ್ಲಿ ಬಿಡುಗಡೆ ಮಾಡಿದೆ. ಈ ಕೀಬೋರ್ಡ್‌ ವಿನ್ಯಾಸದಲ್ಲಿ ಹೊಸ ಮಾದರಿಯನ್ನ ಒಳಗೊಂಡಿದ್ದು ಬಳಕೆದಾರರನ್ನ ಆಕರ್ಷಿಸಲಿದೆ. ಸದ್ಯ ಹೊಸ ಶಿಯೋಮಿ ಕೀಬೋರ್ಡ್ 87-ಕೀಗಳುಳನ್ನ ಒಳಗೊಂಡಿದ್ದು, ಅಲ್ಯೂಮಿನಿಯಂ ಮಿಶ್ರಲೋಹದಿಂದ ವಿನ್ಯಾಸಗೊಂಡಿದೆ.

ಇನ್ನು

ಇನ್ನು ಈ ಕೀಬೋರ್ಡ್‌ನ 87 ಕೀ ಕಾಪ್‌ಗಳು ಕೂಡ ಡ್ಯುಯಲ್-ಕಲರ್ ವಿನ್ಯಾಸವನ್ನು ಹೊಂದಿದೆ. ಅಲ್ಲದೆ ಕೀಬೋರ್ಡ್ ಅನ್ನ ಟಿಟಿಸಿ ರೆಡ್ ಶಾಫ್ಟ್ ಮತ್ತು ಎಬಿಎಸ್ ಮೇಟಿರಿಯಲ್ಸ್‌ನಿಂದ ತಯಾರಿಸಲಾಗಿದೆ. ಈ ಕೀಬೋರ್ಡ್ 358MM X, 128MMM X, 31.6MM X, ಉದ್ದ, ಗಾತ್ರ ಹಾಗೂ ಸುತ್ತಳತೆಯನ್ನ ಹೊಂದಿದೆ. ಜೊತೆಗೆ ಈ ಕೀಬೋರ್ಡ್‌ ಸುಮಾರು 940 ಗ್ರಾಂ ತೂಕವನ್ನ ಹೊಂದಿದೆ ಎಂದು ಹೇಳಲಾಗ್ತಿದೆ.

ಬಾಡಿ

ಈ ಕೀಬೋರ್ಡ್‌ನ ಬಾಡಿ 6-ಲೇಯರ್ ವಿನ್ಯಾಸವನ್ನು ಹೊಂದಿದ್ದು ಎಚ್ 32 ಅಲ್ಯೂಮಿನಿಯಂ ಮಿಶ್ರಲೋಹದ ಉಕ್ಕಿನಿಂದ ಮಾಡಲ್ಪಟ್ಟಿದೆ. ಶಿಯೋಮಿ ಯ ಈ ಮೆಕ್ಯಾನಿಕಲ್ ಕೀಬೋರ್ಡ್ ನಾಲ್ಕು ವಿಭಿನ್ನ ಹಂತದ ಎಲ್ಇಡಿ ಬ್ಯಾಕ್ಲೈಟ್ ಅನ್ನು ಹೊಂದಿದ್ದು. ಈ ಕೀಬೋರ್ಡ್ 32-ಬಿಟ್ ARM ಮುಖ್ಯ ನಿಯಂತ್ರಣ ಚಿಪ್ಅನ್ನ ಒಳಗೊಂಡಿದೆ, 1000Hz ರಿಫ್ರೆಶ್ ರೇಟ್‌ ಮತ್ತು 1ms ರೆಸ್ಪಾನ್ಸ್‌ ಟೈಂ ಅನ್ನ ಹೊಂದಿದೆ.

ಇದು

ಸದ್ಯ ಇದು ಯುಎಸ್‌ಬಿ ಟೈಪ್-ಸಿ ಇಂಟರ್‌ ಪೇಸ್‌ ಸಂಪರ್ಕವನ್ನು ಹೊಂದಿದೆ. ಅಲ್ಲದೆ ಸರಳ ಪ್ಲಗ್ ಮತ್ತು ಪ್ಲೇ ಮಾದರಿಯಿಂದ ಕಾರ್ಯನಿರ್ವಹಿಸುತ್ತದೆ. ಇನ್ನು ಶಿಯೋಮಿಯ ಮೆಕ್ಯಾನಿಕಲ್‌ ಕೀಬೋರ್ಡ್‌ ಈ ತಲೆಮಾರಿನ ಯುವಜನತೆಯ ಆಕರ್ಷಣೆಗೆ ತಕ್ಕಂತೆ ವಿನ್ಯಾಸ ಮಾಡಲಾಗಿದ್ದು ಗಾತ್ರ ಹಾಗೂ ತೂಕ ಕೂಡ ಆಕರ್ಷಣೆಗೆ ಕಾರಣವಾಗಿದೆ. ಅಲ್ಯೂಮಿನಿಯಂ ಬಣ್ಣದಲ್ಲಿ ಬಿಡುಗಡೆಯಾಗಿರುವ ಈ ಕೀಬೋರ್ಡ್‌ ಬಳಕೆದಾರರಿಗೆ ಹೊಸ ಅನಭವ ನೀಡುವುದರಲ್ಲಿ ಅನುಮಾನವಿಲ್ಲ ಎಂಬ ಮಾತು ಇದೀಗ ಕೇಳಿ ಬರುತ್ತಿದೆ.

ಚೀನಾ

ಚೀನಾ ಮಾರುಕಟ್ಟೆಯಲ್ಲಿ ಇದೀಗ ಸಂಚಲನಕ್ಕೆ ಕಾರಣವಾಗಿರೋ ಯುಯೆಮಿ ಮೆಕ್ಯಾನಿಕಲ್ ಕೀಬೋರ್ಡ್ ತನ್ನ ವಿನ್ಯಾಸದ ಜೊತೆಗೆ ಉತ್ತಮ ಮಾದರಿಯ ಕೀ ಕಾಪ್‌ಗಳನ್ನ ಒಳಗೊಂಡಿದೆ. ಅಲ್ಲದೆ ಕೀ ಕಾಪ್‌ಗಳ ನಡುವಿನ ಅಂತರವೂ ಕೂಡ ಬಳಕೆದಾರರಿಗೆ ಉಪಯೋಗವಾಗಲಿದೆ. ಸದ್ಯ ಹೊಸ ಮಾದರಿಯ ಕೀಬೋರ್ಡ್ ಆಗಿರುವುದರಿಂದ ಚೀನಾದಲ್ಲಿ ಪ್ರಸ್ತುತ 299 ಯುವಾನ್(ಸುಮಾರು 3,050 ರೂ)ಬೆಲೆಯನ್ನ ಹೊಂದಿದೆ.

Most Read Articles
Best Mobiles in India

Read more about:
English summary
Xiaomi recently launched a few unique smart products in China. Now, the company has unveiled a new Xiaomi Yuemi Mechanical Keyboard in the country. This is a second-generation Xiaomi keyboard as it was first introduced in the year 2016. This product was launched for 299 Yuan, and Xiaomi will be selling the new one at the same price tag. Read on to know more about the keyboard.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X