ಶಿಯೋಮಿಯಿಂದ ಅಲಾರಂ ಕ್ಲಾಕ್‌ ಸ್ಪೀಕರ್‌ ಬಿಡುಗಡೆ!

|

ಟೆಕ್‌ ಮಾರುಕಟ್ಟೆಗೆ ಇತ್ತೀಚಿಗೆಷ್ಟೇ ಬ್ಲೂಟೂತ್‌ ಅಲಾರಂ ಗಡಿಯಾರವನ್ನ ಬಿಡುಗಡೆ ಮಾಡಿದ್ದ ಶಿಯೋಮಿ ಕಂಪೆನಿ ಇದೀಗ ZMI ಅಲಾರಂ ಕ್ಲಾಕ್‌ ಸ್ಪೀಕರ್‌ ಅನ್ನ ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಎಕೋ ಸಿಸ್ಟಂ ವ್ಯವಸ್ಥೆಯನ್ನ ಹೊಂದಿರುವ ಈ ಅಲಾರಂ ಕ್ಲಾಕ್‌ ಸ್ಪೀಕರ್‌ ಬ್ಲೂಟೂತ್‌ 5.0 ಕನೆಕ್ಟಿವಿಟಿಯನ್ನ ಒಳಗೊಂಡಿದ್ದು, ಅರ್ಧವೃತ್ತಾಕಾರದ ವಿನ್ಯಾಸವನ್ನ ಹೊಂದಿರುವುದು ತುಂಬಾನೇ ವಿಶೇಷವಾಗಿದೆ.

ಹೌದು

ಹೌದು, ಚೀನಾ ಮೂಲದ ಜನಪ್ರಿಯ ಸ್ಮಾರ್ಟ್‌ಫೋನ್‌ ಕಂಪೆನಿಯಾಗಿರೋ ಶಿಯೋಮಿ ಕಂಪೆನಿಯು ಚೀನಾ ಮಾರುಕಟ್ಟೆಗೆ ZMI ಅಲಾರಂ ಕ್ಲಾಕ್‌ ಸ್ಪೀಕರ್‌ ಅನ್ನ ಲಾಂಚ್‌ ಮಾಡಿದೆ. ಇದು ವಾತಾವರಣದ ತಾಪಮಾನ ಮತ್ತು ಆರ್ದ್ರತೆ ಸೆನ್ಸಾರ್‌ ಅನ್ನ ಬೆಂಬಲಿಸಲಿದ್ದು, ಪರಿಸರ ಸ್ನೇಹಿಯಾಗಿದೆ. ಇದು ಫ್ಲಾಟ್ ಫ್ರಂಟ್ ಪ್ಯಾನೆಲ್‌ನೊಂದಿಗೆ ಬರುತ್ತದೆ, ಇದು ಬಿಳಿ ಬಣ್ಣದ ಅಕ್ಷರಗಳಲ್ಲಿ ಮಾಹಿತಿಯನ್ನು ಡಿಸ್‌ಪ್ಲೇ ಮಾಡುತ್ತದೆ. ಇದರ ಸ್ಪೀಕರ್ ಬಿಳಿ ಬಣ್ಣದ ರೂಪಾಂತರದಲ್ಲಿ ಬರುತ್ತದೆ.

ಶಿಯೋಮಿ

ಶಿಯೋಮಿ ಕಂಪೆನಿಯ ಹೊಸ ಮಾದರಿಯ ಈ ಅಲಾರಂ ಸ್ಪೀಕರ್‌ ಕೇವಲ ಅಲಾರಂ ಮಾತ್ರವಲ್ಲದೆ ಸಂಗೀತ ಸಾಧಕವಾಗಿಯೂ ಕಾರ್ಯನಿರ್ವಹಿಸಲಿದೆ. ಇದಕ್ಕಾಗಿಯೇ ಬ್ಲೂಟೂತ್‌ ಕನೆಕ್ಟಿವಿಟಿಯನ್ನ ನೀಡಲಾಗಿದೆ. ಅಲ್ಲದೆ ಇದು ವಾಟರ್‌ ಪ್ರೂಪ್‌ ಆಗಿರುವುದರಿಂದ ಉತ್ತಮ ಬಾಳಿಕೆ ಕೂಡ ಬರಲಿದೆ. ಜೊತೆಗೆ ಈ ಅಲಾರಂ ಸ್ಪೀಕರ್‌ನಲ್ಲಿ ನಿರ್ಧೀಷ್ಟ ಸಮಯವನ್ನ ತಿಳಿಯುವ ಅವಕಾಶ ಸಹ ಇರಲಿದೆ. ಇದಕ್ಕಾಘಿ ನೂತನ ಮಾದರಿಯ ಅಲಾರಂ ಪ್ರೋಗ್ರಾಂಗಳನ್ನ ಸಹ ಅಳವಡಿಸಲಾಗಿದೆ.

ಅಲಾರಾಂ

ಈ ಅಲಾರಾಂ ಗಡಿಯಾರವು ಅಂತರ್ನಿರ್ಮಿತ NdFeB ಇಂಟರ್‌ನಲ್‌ ಮ್ಯಾಗ್ನೆಟಿಕ್ ಹಾರ್ನ್‌ಗಳನ್ನು ಬೆಂಬಲಿಸಲಿದೆ. ಅಲ್ಲದೆ ಈ ಅಲಾರಾಂ ಕ್ಲಾಕ್ ಸ್ಪೀಕರ್ ಒಂದೇ ಚಾರ್ಜ್‌ನಲ್ಲಿ 72 ಗಂಟೆಗಳವರೆಗೆ ಬ್ಯಾಟರಿ ಅವಧಿ ಬಾಳಿಕೆ ಬರಲಿದೆ ಎಂದು ಹೇಳಲಾಗಿದೆ. ಅಲ್ಲದೆ ಉತ್ತಮ ಬ್ಯಾಟರಿ ಪ್ಯಾಕಪ್‌ ಹೊಂದಿರುವುದರಿಂದ ಪ್ರವಾಸ ಸಮಯದಲ್ಲಿಯೂ ಇದನ್ನ ಸುಲಭವಾಗಿ ಕ್ಯಾರಿ ಮಾಡಬಹುದಾಗಿದೆ.

ಸ್ಪೀಕರ್‌

ಅಲ್ಲದೆ ಈ ಅಲಾರಂ ಸ್ಪೀಕರ್‌ ಕ್ಸಿಯಾವೋ ಎಐಗೆ ಬೆಂಬಲವನ್ನು ನೀಡಲಿದ್ದು, 30 ರೀತಿಯ ವಿವಿಧ ಅಲಾರಾಂ ಗಡಿಯಾರಗಳನ್ನು ಹೊಂದಿರುವ ಪ್ರೋಗ್ರಾಂ ಅನ್ನು ಒಳಗೊಂಡಿದೆ. ಅಷ್ಟೇ ಅಲ್ಲ ಈ ಸ್ಪೀಕರ್ ನ ಒಂದೇ ಸೌಂಡ್‌ನಿಂದ ಎಚ್ಚರಗೊಳಿಸಬಹುದು ಎಂದು ಹೇಳಲಾಗಿದೆ. ಸದ್ಯ ಜನವರಿ 15 ರಿಂದ ಈ ಸ್ಮಾರ್ಟ್ ಸ್ಪೀಕರ್ ಖರೀದಿಗೆ ಲಭ್ಯವಿರುತ್ತದೆ. ಆಸಕ್ತ ಗ್ರಾಹಕರು ಇದನ್ನು ಶಿಯೋಮಿ ಕಂಪನಿಯ ಅಧಿಕೃತ ಚೈನೀಸ್ ಆನ್‌ಲೈನ್ ಶಾಪಿಂಗ್‌ ಮೂಲಕ ಖರೀದಿ ಮಾಡಬಹುದಾಗಿದೆಪಡೆಯಬಹುದು. ಇದರ ಬೆಲೆ ಸುಮಾರು 1,020 ರೂ. ಇರಬಹುದೆಂದು ಅಂದಾಜಿಸಲಾಗಿದೆ.

Most Read Articles
Best Mobiles in India

English summary
Xiaomi recently launched a Bluetooth Alarm clock, which supports temperature and humidity sensor. Now, the Chinese company’s Ecological chain company Zimi has unveiled a ZMI alarm clock speaker. The new product from Xiaomi offers support for a variety of functions. It features a Bluetooth 5.0 connectivity and has a round hemispherical design.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more