Subscribe to Gizbot

ಝೋಲೋ ಇರಾ 1X ಪ್ರೋ ರೂ5888ಗೆ ಲಭ್ಯ, ಸ್ನ್ಯಾಪ್‍ಡೀಲ್‍ನಲ್ಲಿ ಮಾತ್ರ

By: Tejaswini P G

ಸೆಪ್ಟೆಂಬರ್ 2016 ರಲ್ಲಿ ಝೋಲೋ ಕಂಪೆನಿಯು ಇರಾ 1X ಎಂಬ ಬಜೆಟ್ ಫೋನ್ ಅನ್ನು ಬಿಡುಗಡೆ ಮಾಡಿತ್ತು.ಈಗ ಮತ್ತೊಮ್ಮೆ ಝೋಲೋ ಕಂಪೆನಿಯು ಇರಾ 1X ಪ್ರೋ ಎಂಬ ಸುಧಾರಿತ ಆವೃತ್ತಿಯೊಂದನ್ನು ಹೊರತಂದಿದೆ.

ಝೋಲೋ ಇರಾ 1X ಪ್ರೋ ರೂ5888ಗೆ ಲಭ್ಯ, ಸ್ನ್ಯಾಪ್‍ಡೀಲ್‍ನಲ್ಲಿ ಮಾತ್ರ

ಝೋಲೋ ಇರಾ 1X ಪ್ರೋ ಸ್ಮಾರ್ಟ್ಫೋನ್ ಸೆಲ್ಫೀ ಸ್ಪೆಶಲಿಸ್ಟ್ ಎಂದರೆ ತಪ್ಪಾಗಲಾರದು. ಸೆಲ್ಫೀಗಳಿಗೆಂದೇ 5MP ಸೆಲ್ಫೀ ಕ್ಯಾಮೆರಾ ಹೊಂದಿರುವ ಈ ಮೊಬೈಲ್ ಮುಂಭಾಗದಲ್ಲಿ ಡ್ಯುಯಲ್ LED ಫ್ಲ್ಯಾಶ್ ಕೂಡ ಪಡೆದಿದೆ.ಇಷ್ಟಲ್ಲದೆ ಝೋಲೋ ಇರಾ 1X ಪ್ರೋ 4G VoLTE ಸಪೋರ್ಟ್, ಆಂಡ್ರಾಯ್ಡ್ ಮಾರ್ಷ್ ಮೆಲ್ಲೊ ಹೀಗೆ ಹಲವಾರು ಉತ್ತಮ ಫೀಚರ್ಗಳನ್ನು ಹೊಂದಿದೆ.

ಝೋಲೋ ಇರಾ 1X ಪ್ರೋ 1.5GHz ಕ್ವಾಡ್ ಕೋರ್ ಪ್ರಾಸೆಸರ್ ಹೊಂದಿದೆ.ಆದರೆ ಝೋಲೋ ಕಂಪೆನಿಯು ಚಿಪ್ಸೆಟ್ನ ಹೆಸರನ್ನು ಬಹಿರಂಗ ಪಡಿಸಿಲ್ಲ.ಈ ಸ್ಮಾರ್ಟ್ಫೋನ್ 2GB RAM ಹಾಗೂ 16 GB ಮೆಮೋರಿ ಹೊಂದಿದೆ.ಮೈಕ್ರೋSD ಕಾರ್ಡ್ ಮೂಲಕ ಮೆಮೋರಿಯನ್ನು 32 GB ವರೆಗೆ ವಿಸ್ತರಿಸಬಹುದು. ಇದು 5 ಇಂಚ್ HD 720p ಡಿಸ್ಪ್ಲೇ ಹೊಂದಿದೆ.

ಈಗಾಗಲೇ ಹೇಳಿದಂತೆ ಫ್ರಂಟ್ ಕ್ಯಾಮೆರವು 5MP ಸೆನ್ಸರ್ ಆಗಿದ್ದು,ಪ್ರೈಮರಿ ಕ್ಯಾಮೆರಾ 8MP ಇದ್ದು,LED ಫ್ಲ್ಯಾಶ್ ಕೂಡ ಹೊಂದಿದೆ. ಪ್ರೈಮರಿ ಕ್ಯಾಮೆರಾವು ಬರ್ಸ್ಟ್ ಮೋಡ್,ಬ್ಯೂಟಿ ಮೋಡ್,ಟೈಮ್ ಲ್ಯಾಪ್ಸ್ ವಿಡಿಯೋ,ಲೈವ್ ಫೋಟೋ,ಆಡಿಯೋ ನೋಟ್, ಸ್ಲೋ ಮೋಶನ್ ವೀಡಿಯೋ ಮೊದಲಾದ ಫೀಚರ್ ಹೊಂದಿದೆ.ಝೋಲೋ ಇರಾ 1X ಪ್ರೋ 2500mAh Li-Po ಬ್ಯಾಟರಿ ಹೊಂದಿದೆ.

ಬ್ಲ್ಯಾಕ್ ಮತ್ತು ಗೋಲ್ಡ್ ಬಣ್ಣಗಳಲ್ಲಿ ಲಭ್ಯವಿರುವ ಝೋಲೋ ಇರಾ 1X ಪ್ರೋನ ಬೆಲೆ ಕೇವಲ ರೂ 5888.ಸಧ್ಯಕ್ಕೆ ಝೋಲೋ ಇರಾ 1X ಪ್ರೋ ಸ್ನ್ಯಾಪ್ಡೀಲ್ನಲ್ಲಿ ಮಾತ್ರ ದೊರಕಲಿದೆ.

ಝೋಲೋ ಕಂಪೆನಿಯು ಗ್ರಾಹಕರಿಗೆ ಒಂದು ಆಕರ್ಷಕ ಆಫರ್ ನೀಡಿದೆ.ಜುಲೈ 31,2017 ರ ಒಳಗೆ ಈ ಮೊಬೈಲನ್ನು ಖರೀದಿಸುವ ಗ್ರಾಹಕರಿಗೆ 365 ದಿನಗಳ ಸ್ಕ್ರೀನ್ ರಿಪ್ಲೇಸ್ಮೆಂಟ್ ಆಫರ್ ದೊರೆಯಲಿದೆ. ಈ ಆಫರ್ ಅನ್ವಯ ಮೊಬೈಲ್ ಖರೀದಿಯ 365 ದಿನಗಳ ಒಳಗೆ ಒಂದು ಬಾರಿ ಉಚಿತವಾಗಿ ಮೊಬೈಲ್ ಸ್ಕ್ರೀನ್ ರಿಪ್ಲೇಸ್ ಮಾಡುವ ಅವಕಾಶವಿದೆ.ಇಷ್ಟೆಲ್ಲಾ ಫೀಚರ್ಗಳೊಂದಿಗೆ ಝೋಲೋ ಇರಾ 1X ಪ್ರೋ ಕಡಿಮೆ ಬಜೆಟ್ನ ಉತ್ತಮ ಫೋನ್ ಎನ್ನುವುದರಲ್ಲಿ ಸಂಶಯವಿಲ್ಲ.

Read more about:
English summary
Xolo Era 1X Pro has been launched in India at a price of Rs. 5,888. It is a selfie-centric smartphone with dual LED flash at the front.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot