Home
ಸುದ್ದಿಜಾಲ

ಭಾರತಕ್ಕೆ ಎಂಟ್ರಿ ಕೊಟ್ಟ Yaber Pro U6 ಮಿನಿ ಆಂಡ್ರಾಯ್ಡ್ ಹೋಮ್ ಪ್ರೊಜೆಕ್ಟರ್: ಬೆಲೆ ಎಷ್ಟು?

ಭಾರತದ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ ಪ್ರೊಜೆಕ್ಟರ್‌ಗಳಿಗೆ ಭಾರಿ ಡಿಮ್ಯಾಂಡ್‌ ಇದೆ. ವಿಭಿನ್ನ ಶೈಲಿಯ ಪ್ರೊಜೆಕ್ಟರ್‌ಗಳು ಇನ್ನು ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡಿವೆ. ಈ ಸಾಲಿನಲ್ಲಿ ಯಾಬರ್‌ ಕಂಪೆನಿ ಕೂಡ ಸೇರಿದೆ. ಇದೀಗ ಯಾಬರ್‌ ಕಂಪೆನಿ ತನ್ನ ಮತ್ತೊಂದು ಹೊಸ ಪ್ರೊಜೆಕ್ಟರ್‌ ಅನ್ನು ಬಿಡುಗಡೆ ಮಾಡಿದೆ.ಈ ಪ್ರೊಜೆಕ್ಟರ್ 1.6m ನಿಂದ 10m ವರೆಗಿನ ಹೊಂದಿಕೊಳ್ಳುವ ಪ್ರೊಜೆಕ್ಷನ್ ದೂರವನ್ನು ಹೊಂದಿದೆ.

ಹೌದು, ಯಾಬರ್‌ ಕಂಪೆನಿ ಹೊಸದಾಗಿ Yaber Pro U6 ಮಿನಿ ಆಂಡ್ರಾಯ್ಡ್ ಹೋಮ್ ಪ್ರೊಜೆಕ್ಟರ್ ಅನ್ನು ಅನಾವರಣಗೊಳಿಸಿದೆ. ಇದು 50 ರಿಂದ 500 ಇಂಚುಗಳವರೆಗಿನ ಪ್ರೊಜೆಕ್ಷನ್ ಗಾತ್ರದೊಂದಿಗೆ ದೊಡ್ಡ ವ್ಯೂ ಆಂಗಲ್‌ ಅನ್ನು ನೀಡಲಿದೆ. ಹಾಗಾದ್ರೆ ಹೊಸದಾಗಿ ಪರಿಚಯಿಸಿರುವ ಯಾಬರ್‌ ಪ್ರೊ U6 ಮಿನಿ ಆಂಡ್ರಾಯ್ಡ್ ಹೋಮ್ ಪ್ರೊಜೆಕ್ಟರ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಭಾರತಕ್ಕೆ ಎಂಟ್ರಿ ಕೊಟ್ಟ Yaber Pro U6 ಮಿನಿ ಆಂಡ್ರಾಯ್ಡ್ ಹೋಮ್ ಪ್ರೊಜೆಕ್ಟರ್!

ಪ್ರೊಜೆಕ್ಟರ್‌ ವಿಶೇಷತೆ ಏನು?
ಯಾಬರ್‌ ಪ್ರೊ U6 ಮಿನಿ ಆಂಡ್ರಾಯ್ಡ್ ಹೋಮ್ ಪ್ರೊಜೆಕ್ಟರ್ ನವೀನ ಮಾದರಿಯ ಟೆಕ್ನಾಲಜಿಯೊಂದಿಗೆ ಎಂಟ್ರಿ ನೀಡಿದೆ. ಇದು ದೊಡ್ಡ ವ್ಯೂ ಆಂಗಲ್‌ ನೀಡಲಿದ್ದು, ಬಳಕೆದಾರರಿಗೆ ಅತ್ಯುತ್ತಮ ಅನುಭವವನ್ನು ನೀಡಲಿದೆ. ಇದು 1920x1080p ನ ಸ್ಥಳೀಯ ರೆಸಲ್ಯೂಶನ್ ಹೊಂದಿದ್ದು, 4K ರೆಸಲ್ಯೂಶನ್‌ಗಳನ್ನು ಬೆಂಬಲಿಸುತ್ತದೆ. ಜೊತೆಗೆ ಈ ಸ್ಮಾರ್ಟ್‌ ಪ್ರೊಜೆಕ್ಟರ್‌ 20000:1 ಹೆಚ್ಚಿನ ಕಾಂಟ್ರಾಸ್ಟ್ ಅನುಪಾತ ಮತ್ತು 99% NTSC ಟೆಕ್ನಾಲಜಿಯೊಂದಿಗೆ ವಾಸ್ತವಿಕ ವೀಕ್ಷಣೆಯ ಅನುಭವವನ್ನು ನೀಡುತ್ತದೆ.

ಇನ್ನು ಈ ಪ್ರೊಜೆಕ್ಟರ್ 1.6m ನಿಂದ 10m ವರೆಗಿನ ಹೊಂದಿಕೊಳ್ಳುವ ಪ್ರೊಜೆಕ್ಷನ್ ರೇಂಜ್‌ ನೀಡಲಿದೆ. ಈ ಪ್ರೊಜೆಕ್ಟರ್‌ SmarEco ತಂತ್ರಜ್ಞಾನ ಮತ್ತು ಸ್ಥಿರವಾದ LED ದೀಪವನ್ನು ಒಳಗೊಂಡಿದ್ದು, 200,000 ಗಂಟೆಗಳವರೆಗೆ ಜೀವಿತಾವಧಿಯನ್ನು ಹೊಂದಿದೆ. ಇದರಲ್ಲಿ ನೀವು ಇನ್‌ಬಿಲ್ಟ್‌ USB ಪೋರ್ಟ್‌ನಿಂದ ವಿವಿಧ ಫೈಲ್ ಫಾರ್ಮ್ಯಾಟ್‌ಗಳನ್ನು ನೇರವಾಗಿ ಪ್ರೊಜೆಕ್ಟ್ ಮಾಡಬಹುದಾಗಿದೆ. ಅಲ್ಲದೆ ಇದರ 15,000 ಲ್ಯುಮೆನ್ಸ್ ಬ್ರೈಟ್‌ನೆಸ್‌ನಲ್ಲಿ ಚೆನ್ನಾಗಿ ಬೆಳಗುವ ಪರಿಸರದಲ್ಲಿಯೂ ಸಹ ಸ್ಪಷ್ಟವಾದ ಪ್ರದರ್ಶನವನ್ನು ನೀಡಲಿದೆ.

ಭಾರತಕ್ಕೆ ಎಂಟ್ರಿ ಕೊಟ್ಟ Yaber Pro U6 ಮಿನಿ ಆಂಡ್ರಾಯ್ಡ್ ಹೋಮ್ ಪ್ರೊಜೆಕ್ಟರ್!

ಈ ಪ್ರೊಜೆಕ್ಟರ್‌ ಒಳಾಂಗಣ ಮತ್ತು ಹೊರಾಂಗಣ ಬಳಕೆಗೆ ಸೂಕ್ತವಾಗಿದೆ. ಏಕೆಂದರೆ ಬೆಳಕಿನ ಪ್ರದೇಶದಲ್ಲಿಯೂ ಸಹ ಇದರ ಪ್ರದರ್ಶನ ಸಾಮರ್ಥ್ಯದ ಅತ್ಯುತ್ತಮವಾಗಿರುವುದು. ಜೊತೆಗೆ ಇದು ಸ್ವಯಂಚಾಲಿತ ಕೀಸ್ಟೋನ್ ತಿದ್ದುಪಡಿ, ರಿಮೋಟ್‌ನೊಂದಿಗೆ ಜೂಮ್ ಮಾಡುವುದನ್ನು ಸಹ ಬೆಂಬಲಿಸಲಿದೆ. ಅಲ್ಲದೆ 2.4G+5G ವೈ-ಫೈ, ಬ್ಲೂಟೂತ್ v5.1, HDMI/AV ಪೋರ್ಟ್‌ಗಳು ಮತ್ತು ಇಂಟಿಗ್ರೇಟೆಡ್ 10-ವ್ಯಾಟ್ ಹೈ-ಫೈ ಸ್ಪೀಕರ್‌ಗಳ ಮೂಲಕ ತಡೆರಹಿತ ಸಂಪರ್ಕವನ್ನು ಒಳಗೊಂಡಿದೆ.

ಇನ್ನು Yaber ಪ್ರೊ U6 ಮಿನಿ ಆಂಡ್ರಾಯ್ಡ್‌ ಹೋಮ್‌ ಪ್ರೊಜೆಕ್ಟರ್‌ ಪ್ರಪಂಚದಾದ್ಯಂತ 400,000+ ಚಲನಚಿತ್ರಗಳು ಮತ್ತು ಟಿವಿ ಸಂಚಿಕೆಗಳ ವಿಶಾಲವಾದ ಲೈಬ್ರರಿಯನ್ನು ಒದಗಿಸುವ 7,000 Android ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ನೀಡುತ್ತದೆ. ಇದು Netflix, Prime Video, YouTube, Disney+, HBO Maxನಂತ ಪ್ರಿ ಲೋಡ್‌ OTT ಅಪ್ಲಿಕೇಶನ್‌ಗಳನ್ನು ಸಹ ಹೊಂದಿರಲಿದೆ.

ಭಾರತಕ್ಕೆ ಎಂಟ್ರಿ ಕೊಟ್ಟ Yaber Pro U6 ಮಿನಿ ಆಂಡ್ರಾಯ್ಡ್ ಹೋಮ್ ಪ್ರೊಜೆಕ್ಟರ್!
ya

ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ ಯಾಬರ್‌ ಪ್ರೊ U6 ಮಿನಿ ಆಂಡ್ರಾಯ್ಡ್ ಹೋಮ್ ಪ್ರೊಜೆಕ್ಟರ್ 19,990ರೂ ಬೆಲೆಯನ್ನು ಹೊಂದಿದೆ. ಇದನ್ನು ನೀವು Amazon.in ಮತ್ತು originshop.co.in ನಲ್ಲಿ ಖರೀದಿಸಬಹುದಾಗಿದೆ.

ಪ್ರೊಜೆಕ್ಟರ್‌ ವಲಯದಲ್ಲಿ ಇತ್ತೀಚಿನ ಸುದ್ದಿಗಳನ್ನು ಗಮನಿಸುವುದಾದರೆ ಜನಪ್ರಿಯ BenQ ಕಂಪೆನಿ ಭಾರತದಲ್ಲಿ ಹೊಸದಾಗಿ BenQ GV31 ಪೋರ್ಟಬಲ್ ಪ್ರೊಜೆಕ್ಟರ್ ಅನ್ನು ಪರಿಚಯಿಸಿದೆ. ಈ ಪ್ರೊಜೆಕ್ಟರ್‌ ತಿರುಗುವ ಪ್ರೊಜೆಕ್ಟರ್‌ ಆಗಿದ್ದು ಉತ್ತಮ ಅನುಭವವನ್ನು ನೀಡಲಿದೆ. ಜೊತೆಗೆ ಡ್ಯುಯಲ್ 4W ಮಿಡ್‌ರೇಂಜ್ ಟ್ವೀಟರ್‌ಗಳು ಮತ್ತು 8W ವೂಫರ್‌ನೊಂದಿಗೆ ಸಂಯೋಜಿತ 2.1-ಚಾನೆಲ್ ಸೌಂಡ್ ಸಿಸ್ಟಮ್ ಅನ್ನು ಒಳಗೊಂಡಿದೆ.

Best Mobiles in India

English summary
Yaber Pro U6 Mini Android Projector with up to 4K video support launched in India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+