ಯಾಹೂ ಹ್ಯಾಕ್ ನಿಂದ ಕಲಿತುಕೊಳ್ಳಬೇಕಾದ ಪಾಠ

By Varun
|
ಯಾಹೂ ಹ್ಯಾಕ್ ನಿಂದ ಕಲಿತುಕೊಳ್ಳಬೇಕಾದ ಪಾಠ

ಈ ತಿಂಗಳು ಕ್ಲೌಡ್ ಶೇರಿಂಗ್ ವ್ಯವಸ್ಥೆಯಾದ ಡ್ರಾಪ್ ಬಾಕ್ಸ್ ಅನ್ನು ಹ್ಯಾಕ್ ಮಾಡಲಾಗಿತ್ತು. ಅದಕ್ಕೂಮುಂಚೆ ಯಾಹೂ, ಲಿಂಕ್ಡ್ ಇನ್ ಅನ್ನೂ ಹ್ಯಾಕ್ ಮಾಡಲಾಗಿತ್ತು.

ಈ ರೀತಿ ಪ್ರತಿ ತಿಂಗಳೂ ಒಂದೊಂದಾಗಿ ಖಾತೆಗಳು ಹ್ಯಾಕ್ ಆದರೂ ಕೂಡ ಜನರಿಗೆ ಇನ್ನೂ ಬುದ್ಧಿ ಬಂದಂತಿಲ್ಲ. ಹ್ಯಾಕರುಗಳಿಗೆ ಹ್ಯಾಕ್ ಮಾಡಲು ಸಾಧ್ಯವಾಗುವುದು, ನಿಮ್ಮ ಖಾತೆಗಳಿಗೆ ಶಕ್ತಿಶಾಲಿಯಾದ ಪಾಸ್ವರ್ಡ್ ಇಲ್ಲದೆ ಇರೋದೇ ಕಾರಣ.

ಹೋದ ತಿಂಗಳು ಹ್ಯಾಕ ಆದ ಯಾಹೂ ಖಾತೆಗಳ ಪಾಸ್ವರ್ಡ ಅನ್ನು ಅಧ್ಯಯನ ಮಾಡಿದ enterprise innovation ಎಂಬ ಕಂಪನಿಯೊಂದು, ಎಲ್ಲಾ 4.5 ಲಕ್ಷ ಖಾತೆಗಳನ್ನು ವಿಶ್ಲೇಷಿಸಿ ಯಾವ ಯಾವ ಪಾಸ್ವರ್ಡ್ ಕೊಡಲಾಗಿತ್ತು ಎಂದು ವರದಿಯೊಂದನ್ನು ಹೊರತಂದಿದೆ.

ಅದರ ಪ್ರಕಾರ ಹ್ಯಾಕ್ ಆದ ಖಾತೆಗಳಲ್ಲಿ ಕೊಟ್ಟಿದ್ದ ಟಾಪ್ 10 ಪಾಸ್ವರ್ಡ್ ಗಳು ಈ ರೀತಿ ಇದ್ದವಂತೆ;

  • 123456

  • password

  • welcome

  • ninja

  • abc123

  • 123456789

  • princess

  • sunshine

  • 12345678

  • 0
ಈ ರೀತಿ ಸುಲಭವಾಗಿ ಊಹೆ ಮಾಡಬಹುದಾದ ಪಾಸ್ವರ್ಡ್ ಕೊಟ್ರೆ ಯಾರು ತಾನೇ ಹ್ಯಾಕ ಮಾಡಲ್ಲ ಹೇಳಿ. ಹಾಗಾಗಿ ನಿಮ್ಮ ಖಾತೆಗೆ ಸುಭದ್ರವಾಗಿ ಪಾಸ್ವರ್ಡ್ ಕೊಡಲು ಅಂಕಿಗಳು, ದೊಡ್ಡ ಅಕ್ಷರಗಳು, ಸಣ್ಣ ಅಕ್ಷರಗಳು, ಚಿನ್ಹೆಗಳು, ಈ ರೀತಿ ಮಿಕ್ಸ್ ಆಗಿರುವ 8 character ಇರುವ ಪಾಸ್ವರ್ಡ್ ಅನ್ನು ಕೊಟ್ಟರೆ ಹ್ಯಾಕರುಗಳಿಗೆ ನಿಮ್ಮ ಖಾತೆಯನ್ನು ಹ್ಯಾಕ್ ಮಾಡುವುದು ಕಷ್ಟವಾದೀತು ಎಂಬುದು ಈ ಸಂಸ್ಥೆಯ ಅಭಿಪ್ರಾಯ.

ಉದಾ : P1a2s3s4w5! ಎಂದು ಕೊಟ್ಟರೆ ಇನ್ನೂ ಒಳ್ಳೆಯದಂತೆ.

ಹಾಗಿದ್ದರೆ ಇವಾಗ್ಲೆ ಹಳೆ ಪಾಸ್ವರ್ಡ್ ನ ಬದಲಾಯಿಸ್ತೀರ ತಾನೇ ?

ಪಾಸ್ವರ್ಡ್ ಟಿಪ್ಸ್

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X