ಯಾಹೂವಿನಿಂದ ಸುಭದ್ರ ಭದ್ರತೆ ನಿಮ್ಮ ಖಾತೆಗೆ

Written By:

ನಿಮ್ಮ ಯಾಹೂ ಖಾತೆಗೆ ಯಾವುದೇ ಧಕ್ಕೆಯನ್ನುಂಟು ಮಾಡದೇ ಹೆಚ್ಚುವರಿ ಭದ್ರತೆಯನ್ನು ಒದಗಿಸುವ ಹೊಸ ಯೋಜನೆಗೆ ಯಾಹೂ ಮುಂದಾಗಿದೆ.

"ಆನ್ ಡಿಮಾಂಡ್" ವ್ಯವಸ್ಥೆಯನ್ನು ಇದು ಪ್ರಸ್ತುತಪಡಿಸಿದ್ದು ನೀವು ಲಾಗಿನ್ ಮಾಡಬೇಕೆಂದು ಬಯಸಿದಾಗ ಇದು ಒನ್ ಟೈಮ್ ಪಾಸ್‌ವರ್ಡ್ ಅನ್ನು ನಿಮಗೆ ಕಳುಹಿಸುತ್ತದೆ. ಜನರು ತಮ್ಮ ಹೆಚ್ಚಿನ ಸೇವೆಗಳಿಗೆ ಒಂದೇ ಪಾಸ್‌ವರ್ಡ್ ಅನ್ನು ಬಳಸುವುದು ಒಮ್ಮೊಮ್ಮೆ ಹ್ಯಾಕಿಂಗ್‌ನಂತಹ ಸಮಸ್ಯೆಯನ್ನು ತಂದೊಡ್ಡಬಹುದು. ಆದರೆ ಆನ್ ಡಿಮ್ಯಾಂಡ್ ಪಾಸ್‌ವರ್ಡ್‌ಗಳು ನೀವು ಲಾಗಿನ್‌ ಆದ ನಂತರ ಅದನ್ನು ಇನ್ನೊಮ್ಮೆ ಬಳಸಲಾಗುವುದಿಲ್ಲ. ಅಲ್ಲದೆ ನಿಮ್ಮ ಯಾಹೂ ಖಾತೆಗೆ ಮಾತ್ರವೇ ಇದನ್ನು ನಿರ್ದಿಷ್ಟವಾಗಿ ಬಳಸಬಹುದಾಗಿದೆ.

ಯಾಹೂವಿನಿಂದ ಸುಭದ್ರ ಭದ್ರತೆ ನಿಮ್ಮ ಖಾತೆಗೆ

ಮೊಬೈಲ್ ಭದ್ರತೆಯತ್ತ ಹೆಚ್ಚಿನ ಗಮನವನ್ನು ಈ ದಿನಗಳಲ್ಲಿ ಯಾಹೂ ನೀಡುತ್ತಿದ್ದು, ಆನ್ ಡಿಮ್ಯಾಂಡ್‌ನಂತಹ ಪಾಸ್‌ವರ್ಡ್‌ಗಳು ನಿಮ್ಮ ಫೋನ್ ಕಳೆದು ಹೋದಾಗಲೂ ಯಾಹೂ ಖಾತೆಗೆ ಧಕ್ಕೆಯಾಗದಂತೆ ನೋಡಿಕೊಳ್ಳುತ್ತದೆ. ನಿಮ್ಮ ಲಾಕ್ ಸ್ಕ್ರೀನ್‌ನಲ್ಲಿ ಎಸ್‌ಎಮ್‌ಎಸ್ ಅಧಿಸೂಚನೆಗಳನ್ನು ನೀವು ಪಡೆದಾಗ, ಆನ್ ಡಿಮ್ಯಾಂಡ್ ಪಾಸ್‌ವರ್ಡ್ ನಿಮ್ಮ ಫೋನ್ ಲಾಕ್ ಆಗಿದೆ ಎಂಬುದನ್ನು ತೋರಿಸುತ್ತದೆ. ಎಲ್ಲಿಯಾದರೂ ನಿಮ್ಮ ಫೋನ್ ಅನ್ನು ನೀವು ಕಳೆದುಕೊಂಡಾಗ, ನಿಮ್ಮ ಯಾಹೂ ಖಾತೆಗೆ ಅವರಿಗೆ ಪ್ರವೇಶವನ್ನು ಪಡೆಯಲಾಗುವುದಿಲ್ಲ.

English summary
Yahoo Introduces Password Free Login Just Don’t Lose Your Phone.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot