Subscribe to Gizbot

ಮೈಕ್ರೋಸಾಫ್ಟ್‌ನೊಂದಿಗೆ ಜತೆಗೂಡಿದ ಯೆಸ್ ಬ್ಯಾಂಕ್

By: Shwetha PS

ಆಫೀಸ್ 365 ಮತ್ತು ಮೈಕ್ರೋಸಾಫ್ಟ್ ಕೈಜಾಲಾವನ್ನು ನಿಯೋಜಿಸಲು ಯೆಸ್ ಬ್ಯಾಂಕ್ ತನ್ನ ಪಾಲುದಾರಿಕೆಯನ್ನು ಮೈಕ್ರೋಸಾಫ್ಟ್‌ನೊಂದಿಗೆ ಘೋಷಿಸಿಕೊಂಡಿದೆ. ಯೆಸ್ ಬ್ಯಾಂಕ್‌ನ ಸಿಇಒ ರಾನಾ ಕಪೂರ್ ಹೇಳುವಂತೆ ಯೆಸ್ ಬ್ಯಾಂಕ್ ಇದೀಗ ತಂತ್ರಜ್ಞಾನತ್ತ ತನ್ನ ವಹಿವಾಟುಗಳನ್ನು ಮುಂದುವರಿಸಲು ಬಯಸಿದ್ದು ಇದರಿಂದ ವ್ಯವಹಾರದಲ್ಲಿ ಬ್ಯಾಂಕ್ ಇನ್ನಷ್ಟು ಉತ್ತಮ ಪ್ರಗತಿಯನ್ನು ಕಂಡುಕೊಳ್ಳಲು ಸಾಧ್ಯವಿದೆ.

ಮೈಕ್ರೋಸಾಫ್ಟ್‌ನೊಂದಿಗೆ ಜತೆಗೂಡಿದ ಯೆಸ್ ಬ್ಯಾಂಕ್

ಕೈಜಾಲಾ ಸಲ್ಯೂಶನ್ ಉದ್ಯೋಗಿಗಳನ್ನು ಇನ್ನಷ್ಟು ಚತುರ ಮತ್ತು ಕ್ರಿಯಾತ್ಮಕರನ್ನಾಗಿಸಲಿದ್ದು ಡಿಜಿಟಲ್ ಸಂವಹನಗಳ ಮೂಲಕ ಗ್ರಾಹಕರನ್ನು ತಾಂತ್ರಿಕವಾಗಿ ನಿಪುಣರನ್ನಾಗಿಸುವತ್ತ ದೃಷ್ಟಿ ಬೀರಲಿದೆ. ಮೈಕ್ರೋಸಾಫ್ಟ್ ಕೈಜಾಲಾವನ್ನು ದೊಡ್ಡ ಗುಂಪುಗಳಿಗಾಗಿ ಸಿದ್ಧಪಡಿಸಲಾಗಿದ್ದು ಚಾಟ್ ಇಂಟರ್ಫೇಸ್ ಮತ್ತು ಕಾರ್ಯನಿರ್ವಹಣೆಯನ್ನು ಇದು ಲೀಲಾಜಾಲವನ್ನಾಗಿಸಲಿದೆ.

ಮೈಕ್ರೋಸಾಫ್ಟ್ ಇಂಡಿಯಾದ ಪ್ರೆಸಿಡೆಂಟ್ ಮಹೇಶ್ವರಿಯವರು ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದು, ಯೆಸ್ ಬ್ಯಾಂಕ್‌ನ ಭಾಗವಾಗಿ ನಾವು ಕಾರ್ಯನಿರ್ವಹಿಸುತ್ತಿರುವುದು ನಮಗೆ ಸಂತೋಷವನ್ನುಂಟು ಮಾಡಿದೆ ಆಫೀಸ್ 365 ಮತ್ತು ಮೈಕ್ರೋಸಾಫ್ಟ್ ಕೈಜಾಲಾದಂತಹ ಕಾರ್ಯನಿರ್ವಹಣೆಯಲ್ಲಿ ಕ್ಲೌಡ್ ಆಧಾರಿತ ಸಲ್ಯೂಶನ್ ಆಧುನಿಕವಾಗಿ ಬ್ಯಾಂಕ್ ಕೆಲಸಗಳನ್ನು ನಿರ್ವಹಿಸಲು ಸಹಾಯ ಮಾಡಲಿದೆ. ನಮ್ಮ ಭಾಗವಾಗಲು ಆಸಕ್ತಿ ತೋರಿದ ಯೆಸ್ ಬ್ಯಾಂಕ್‌ಗೆ ನಾವು ವಂದನೆಗಳನ್ನು ಸಲ್ಲಿಸುತ್ತಿದ್ದೇವೆ.

ಕನ್ನಡದಲ್ಲಿಯೇ ಮೀಮ್ ತಯಾರಿಸುವುದು ಹೇಗೆ?

ಡೆಸ್ಕ್‌ಟಾಪ್ ಮತ್ತು ಮೊಬೈಲ್ ಎರಡರಲ್ಲೂ ಕಾರ್ಯನಿರ್ವಹಿಸುವಂತೆಯೇ ಈ ಸಾಫ್ಟ್‌ವೇರ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ ಅಜೂರ್ ಕ್ಲೌಡ್ ಪ್ಲಾಟ್‌ಫಾರ್ಮ್ ಇದನ್ನು ಚಾಲನೆ ಮಾಡುತ್ತಿದೆ.

ಕೈಜಾಲಾ ಈಗ ಉಚಿತವಾಗಿ ಭಾರತದಲ್ಲಿ ಲಭ್ಯವಿದ್ದು ಐಓಎಸ್ ಮತ್ತು ಆಂಡ್ರಾಯ್ಡ್ ಫೋನ್ ಬಳಕೆದಾರರು ಇದನ್ನು ಪಡೆದುಕೊಳ್ಳಬಹುದಾಗಿದೆ. 'ಕೈಜಾಲಾ ಪ್ರೊ' ರೂ 130 ಕ್ಕೆ ಪ್ರತಿ ತಿಂಗಳ ದರದಲ್ಲಿ ಬಳಕೆದಾರರಿಗೆ ಲಭ್ಯವಿದೆ.

Read more about:
English summary
Microsoft Kaizala is designed for large group communication in a chat interface and work management and integrates with Office 365.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot