ಡಿಜಿಟಲ್‌ ಸೇವೆ ಉತ್ತೇಜಿಸಲು ಎಸ್‌ಬಿಐ ಡೆಬಿಟ್ ಕಾರ್ಡ್‌ ಸ್ಥಗಿತ!..ಮುಂದೇನು?

|

ಡಿಜಿಟಲ್‌ ಪಾವತಿ ಸೇವೆ ಉತ್ತೇಜಿಸುವ ಸಲುವಾಗಿ ಡೆಬಿಟ್ ಕಾರ್ಡ್‌ಗಳನ್ನು ಬಳಕೆಯಿಂದ ಕೈಬಿಡಲು ದೇಶದ ಅತೀ ದೊಡ್ಡ ಬ್ಯಾಂಕಿಂಗ್ ಸಂಸ್ಥೆಯಾಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ನಿರ್ಧಾರ ಕೈಗೊಂಡಿದೆ. ಡೆಬಿಟ್ ಕಾರ್ಡ್ ಬದಲಿಗೆ ಯೋನೊ ಡಿಜಿಟಲ್‌ ಸೇವೆಯ ಮೂಲಕ ಎಟಿಎಂಗಳಿಂದ ನಗದು ಪಡೆಯಲು, ವ್ಯಾಪಾರ ವಹಿವಾಟಿಗೆ ಹಣ ಪಾವತಿಸಲು ಸಹಾಯವಾಗುವಂತೆ ಶೀಘ್ರದಲ್ಲೇ ತನ್ನ ಎಲ್ಲ ಡೆಬಿಟ್ ಕಾರ್ಡ್ ಸೇವೆಗಳನ್ನು ಸ್ಥಗಿತಗೊಳಿಸುವುದಾಗಿ ಹೇಳಿದೆ.

ಡಿಜಿಟಲ್‌ ಸೇವೆ ಉತ್ತೇಜಿಸಲು ಎಸ್‌ಬಿಐ ಡೆಬಿಟ್ ಕಾರ್ಡ್‌ ಸ್ಥಗಿತ!..ಮುಂದೇನು?

ಮುಂಬರುವ ದಿನಗಳಲ್ಲಿ ಡೆಬಿಟ್ ಕಾರ್ಡ್‌ಗಳ ಬಳಕೆಯನ್ನು ಕ್ರಮೇಣ ಸ್ಥಗಿತಗೊಳಿಸಲು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಉದ್ದೇಶಿಸಿದ್ದು, ಎಟಿಎಂಗಳಿಂದ ನಗದು ಪಡೆಯಲು, ವ್ಯಾಪಾರ ವಹಿವಾಟಿಗೆ ಹಣ ಪಾವತಿಸಲು, ಬ್ಯಾಂಕ್ ಈಗಾಗಲೇ ಅಭಿವೃದ್ಧಿಪಡಿಸಿರುವ ಡಿಜಿಟಲ್‌ ಸೇವೆ ಯೊನೊ (You Only Need One-Yono) ಆಪ್‌ ನೆರವಾಗಲಿದೆ. ಈ ಆಪ್‌ ನೆರವಿನಿಂದ ಎಟಿಎಂಗಳಿಂದ ನಗದು ಪಡೆಯಬಹುದು ಮತ್ತು ಅಂಗಡಿ ಮಳಿಗೆಗಳಲ್ಲಿ ಹಣ ಕೂಡ ಪಾವತಿಸಬಹುದಾಗಿದೆ.

ಈ ಕುರಿತಂತೆ ದೆಹಲಿಯಲ್ಲಿ ನಡೆದ ಬ್ಯಾಂಕಿಂಗ್‌ ವಾರ್ಷಿಕ ಸಮ್ಮೇಳನದಲ್ಲಿ ಮಾತನಾಡಿದ ಎಸ್ ಬಿಐ ಚೇರ್ಮನ್ ರಜನೀಶ್ ಕುಮಾರ್ ಅವರು, 'ಡೆಬಿಟ್‌ ಕಾರ್ಡ್‌ ಬಳಕೆ ನಿರ್ಮೂಲನೆ ಮಾಡುವುದು ನಮ್ಮ ಆಶಯವಾಗಿದೆ. ಡೆಬಿಟ್ ಕಾರ್ಡ್‌ ರಹಿತ ಬ್ಯಾಂಕಿಂಗ್‌ ವ್ಯವಸ್ಥೆಗೆ, ಬ್ಯಾಂಕ್‌ ಈಗಾಗಲೇ ಅಭಿವೃದ್ಧಿಪಡಿಸಿರುವ ಡಿಜಿಟಲ್‌ ಸೇವೆ ಯೊನೊ ನೆರವಾಗಲಿದೆ ಎಂದು ಹೇಳಿದ್ದಾರೆ. ಹಾಗಾದರೆ, ಏನಿದು ಯೊನೊ ಆಪ್?, ಈ ಆಪ್‌ ನೆರವಿನಿಂದ ಬ್ಯಾಂಕಿಂಗ್ ವ್ಯವಹಾರ ನಡೆಸುವುದು ಹೇಗೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಏನಿದು ಯೊನೊ ಆಪ್?

ಏನಿದು ಯೊನೊ ಆಪ್?

ಸರ್ಕಾರಿ ಸ್ವಾಮ್ಯದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಬ್ಯಾಂಕಿಂಗ್ ಸೇವೆಯ ಜೊತೆಗೆ ಡಿಜಿಟಲ್‌ ಸೇವೆಗಳೆಲ್ಲ ಒಂದೆಡೆಯೇ ದೊರೆಯುವಂತಹ ಸಮಗ್ರ ಸ್ವರೂಪದ ಆಪ್ ಈ 'ಯೊನೊ' (You Only Need One-Yono).ಕೃತಕ ಬುದ್ಧಿಮತ್ತೆ, ಮಷಿನ್ ಲರ್ನಿಂಗ್ ಆಧರಿಸಿ ಈ ಎಸ್‌ಬಿಐ ಬ್ಯಾಂಕ್ ಆಪ್‌ ಅಭಿವೃದ್ಧಿಪಡಿಸಿದ್ದು, ಗ್ರಾಹಕರಿಗೆ ಉತ್ತಮ ಬ್ಯಾಂಕಿಂಗ್ ಸೌಲಭ್ಯಗಳನ್ನು ನಿಡುತ್ತಿದೆ.

ಎಟಿಎಂಗಳಿಂದ ನಗದು

ಎಟಿಎಂಗಳಿಂದ ನಗದು

ಈ ಆಪ್‌ ನೆರವಿನಿಂದ ಎಟಿಎಂಗಳಿಂದ ನಗದು ಪಡೆಯಬಹುದು. ಅಂಗಡಿ ಮಳಿಗೆಗಳಲ್ಲಿ ಹಣ ಪಾವತಿಸಬಹುದಾಗಿದೆ. 'ಎಸ್‌ಬಿಐ ಈಗಾಗಲೇ ಯೊನೊ ಆಪ್‌ ಮೂಲಕವೇ ನಗದು ಪಡೆಯುವ 68 ಸಾವಿರ 'ಯೊನೊ ಕ್ಯಾಷ್‌ಪಾಯಿಂಟ್ಸ್‌'ಗಳನ್ನು ಆರಂಭಿಸಿದೆ. ಒಂದೂವರೆ ವರ್ಷದಲ್ಲಿ ಇವುಗಳ ಸಂಖ್ಯೆಯನ್ನು 10 ಲಕ್ಷಕ್ಕೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಬ್ಯಾಂಕ್ ತಿಳಿಸಿದೆ.

ಏಕೈಕ ಆಪ್ ಇದಾಗಿದೆ.

ಏಕೈಕ ಆಪ್ ಇದಾಗಿದೆ.

ಹಣಕಾಸು ಸೇವೆ ಮತ್ತು ಜೀವನಶೈಲಿಯ ಸೇವೆಗಳು, ಉತ್ಪನ್ನಗಳು ಒಂದೇ ತಾಣದಲ್ಲಿ ದೊರೆಯುವ ಏಕೈಕ ವಿಶಿಷ್ಟ ಆಪ್ ಇದಾಗಿದೆ. ಬಳಕೆದಾರರಿಗೆ ಸಂಪೂರ್ಣ ಸುರಕ್ಷತೆಯನ್ನು ಒದಗಿಸುವ ವಿಶೇಷ ಸುರಕ್ಷತಾ ತಂತ್ರಜ್ಞಾನವನ್ನು ಈ ಆಪ್‌ನಲ್ಲಿ ಅಳವಡಿಸಿರುವುದರಿಂದ ಬ್ಯಾಂಕಿಂಗ್ ಸೇವೆಗಳನ್ನು ಅತ್ಯಂತ ಹೆಚ್ಚು ಸುರಕ್ಷತೆಯಿಂದ ಪಡೆಯಲು ಎಸ್‌ಬಿಐ ಗ್ರಾಹಕರಿಗೆ ಸಾಧ್ಯವಾಗಲಿದೆ.

ಖಾತೆಯನ್ನೂ ತೆರೆಯಬಹುದು!

ಖಾತೆಯನ್ನೂ ತೆರೆಯಬಹುದು!

ಈ ಆಪ್‌ ಮೂಲಕ ಐದು ನಿಮಿಷಗಳಲ್ಲಿ ಎಸ್‌ಬಿಐ ಬ್ಯಾಂಕ್‌ ಖಾತೆಯನ್ನೂ ತೆರೆಯಬಹುದಾಗಿದ್ದು, ನಿಮ್ಮ ಬ್ಯಾಂಕ್ ಖಾತೆಯಿಂದ ಖಾತೆಗೆ ಹಣ ರವಾನೆ, ಮಂಜೂರಾದ ಸಾಲದ ಮೊತ್ತ ಪಡೆಯುವ, ಸ್ಥಿರ ಠೇವಣಿ ಆಧರಿಸಿ ಓವರ್‌ಡ್ರಾಫ್ಟ್‌ ಪಡೆಯುವುದು, ವಿಮೆ ಉತ್ಪನ್ನಗಳ ಖರೀದಿ, ಹಣ ವೆಚ್ಚ ಮಾಡಿದ ವಿಶ್ಲೇಷಣೆ ಸೇವೆಗಳೆಲ್ಲ ಈ 'ಯೊನೊ' ಆಪ್‌ನಲ್ಲಿ ದೊರೆಯಲಿವೆ.

ಇ-ಕಾಮರ್ಸ್ ವಹಿವಾಟು

ಇ-ಕಾಮರ್ಸ್ ವಹಿವಾಟು

ಸಿನಿಮಾ, ಬಸ್‌, ರೈಲು ಟಿಕೆಟ್ , ಹೋಟೆಲ್‌ ಬುಕ್ಕಿಂಗ್ ಮತ್ತು ಕ್ಯಾಬ್ ಬುಕಿಂಗ್ ಹೀಗೆ ಡಿಜಿಟಲ್‌ ಸೇವೆಗಳೆಲ್ಲ ಒಂದೆಡೆಯೇ ದೊರೆಯುವ ಈ ಆಪ್‌ನಲ್ಲಿ ಮೂಲಕ ಅಮೆಜಾನ್‌, ಮಿಂತ್ರಾ, ಜಬಾಂಗ್, ಷಾಪರ್ಸ್ ಸ್ಟಾಪ್, ಯಾತ್ರಾ ಸೇರಿದಂತೆ 60ಕ್ಕೂ ಹೆಚ್ಚು ಇ-ಕಾಮರ್ಸ್ ಸಂಸ್ಥೆಗಳ ವಹಿವಾಟನ್ನು ನಡೆಸಬಹುದು ಮತ್ತು ಖರೀದಿಗೆ ಆಕರ್ಷಕ ಕೊಡುಗೆಗಳನ್ನು ಪಡೆಯಬಹುದು.

Best Mobiles in India

English summary
SBI's Yono is the key to doing away with debit cards. Kumar highlighted that with platforms like Yono, one can withdraw cash at ATMs or make transactions without a debit card ( Yono ). to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X