ಭಾರತೀಯ ಮಾರುಕಟ್ಟೆಗೆ ಬರಲಿದೆ ಡ್ಯುಯಲ್ ಸ್ಕ್ರಿನ್ ಸ್ಮಾರ್ಟ್ ಫೋನ್: ಏನಿದರ ವಿಶೇಷತೆ..?

By: Precilla Dias

ಡ್ಯುಯಲ್ ಸ್ಕ್ರಿನ್ ಗಳಿಗೆ ಹೆಸರಾದ ಯೊಟಾಫೋನ್ ಶೀಘ್ರವೇ ಭಾರತೀಯ ಮಾರುಕಟ್ಟೆಯಲ್ಲಿ ಪ್ರವೇಶಿಸಲಿದ್ದು, ಸದ್ಯ ಚೀನಾ ಮಾರುಕಟ್ಟೆಯಲ್ಲಿ ಡ್ಯುಯಲ್ ಸ್ಕ್ರಿನ್ ಫೋನ್ ಬಿಡುಗಡೆಗೆ ಮುಂದಾಗಿದ್ದು, ಅಲ್ಲಿ ಲಾಂಚ್ ಆದ ಕೆಲವೇ ದಿನಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ. ಈಗಾಗಲೇ ಯೊಟಾಫೋನ್ 4 ಲಾಂಚ್ ಮಾಡಲು ಸಿದ್ಧತೆ ನಡೆದಿದೆ.

ಭಾರತೀಯ ಮಾರುಕಟ್ಟೆಗೆ ಬರಲಿದೆ ಡ್ಯುಯಲ್ ಸ್ಕ್ರಿನ್ ಸ್ಮಾರ್ಟ್ ಫೋನ್

ಸದ್ಯ ಯೊಟಾಫೋನ್ 3 ಭಾರಿ ಸದ್ದು ಮಾಡುತ್ತಿದ್ದು, ಇದು ಎರಡು ಮಾದರಿಯಲ್ಲಿ ಲಭ್ಯವಿದೆ ಎನ್ನಲಾಗಿದೆ. 64GB ಮತ್ತು 128 GB ಆವೃತ್ತಿಯಲ್ಲಿ ದೊರೆಯಲಿದೆ. ಅನುಕ್ರಮವಾಗಿ $350 (ರೂ.22,500) ಮತ್ತು $450 (ರೂ.29,000)ಗಳಾಗಲಿದೆ. ಈ ಸ್ಮಾರ್ಟ್ ಫೋನ್ ರಷ್ಯಾ ಮತ್ತು ಚೀನಾದಲ್ಲಿ ಮೊದಲು ದೊರೆಯಲಿದೆ. ನಂತರ ಭಾರತೀಯ ಮಾರುಕಟ್ಟೆಗೆ ಬರಲಿದೆ.

ಯೂಟಾಪೋನ್ 3 ಸ್ಮಾರ್ಟ್ ಫೋನಿನಲ್ಲಿ ಹಿಂಭಾಗ ಮತ್ತು ಮುಂಭಾಗದಲ್ಲಿ ಸ್ಕ್ರಿನ್ ಇದೆ. ಬ್ಯಾಕ್ ಸೈಡಿನಲ್ಲಿ ಇ-ಲಿಂಕ್ ಡಿಸ್ ಪ್ಲೇ ಕಾಣಬಹುದಾಗಿದ್ದು, ಮುಂಭಾಗದಲ್ಲಿ ಅಮೊಲೈಡ್ ಡಿಸ್ ಪ್ಲೇಯನ್ನು ಅಳವಡಿಸಲಾಗಿದೆ. ಇದನ್ನು ಬಿಟ್ಟರೆ ಮೊಬೈಲ್ ನಲ್ಲಿರುವ ಸ್ಕ್ರಿನ್ ಬಗ್ಗೆ ಹೆಚ್ಚಿನ ಮಾಹಿತಿಯೂ ಲಭ್ಯವಾಗಿಲ್ಲ.

ಯೊಟಾಫೋನ್ 3 ಗಿಂತಲೂ ಮುಂಚೆ ಯೊಟಾಪೋನ್ 2 ಕಾಣಿಸಿಕೊಂಡಿತ್ತು ಆದರೆ ಇದು ಭಾರತದಲ್ಲಿ ಲಭ್ಯವಿರಲಿಲ್ಲ. ಈ ಫೋನಿನ ವಿಶೇಷತೆಗಳು ಈ ಕೆಳಕಂಡತೆ ಇದೆ.

ಈ ಫೋನಿನಲ್ಲಿ ಮುಂಭಾಗದಲ್ಲಿ 4.3 ಇಂಚಿನ ಡಿಸ್ ಪ್ಲೇ ಹಿಂಭಾಗದಲ್ಲಿಯೂ 4.3 ಇಂಚಿನ ಡಿಸ್ ಪ್ಲೇ ಇದೆ. ಯೊಟಾಫೋನ್ ಫೋನ್ ಹಿಂಭಾಗದ ಡಿಸ್ ಪ್ಲೇ ನೋಟಿಫಿಕೇಷನ್ ಸಹ ತೋರಿಸಲಿದೆ. ಈ ಫೋನ್ ಗಳು 2GB RAM ಕಾಣಬಹುದಾಗಿದೆ. ಅಲ್ಲದೇ 1.7 GHz ಸ್ನಾಪ್ ಡ್ರಾಗನ್ 400 ಡ್ಯುಯಲ್ ಕೋರ್ ಪ್ರೋಸೆಸರ್ ಇತ್ತು.

ಇದಲ್ಲದೆ ಈ ಫೋನಿನ ಹಿಂಭಾಗದಲ್ಲಿ 13 MP ಕ್ಯಾಮೆರವನ್ನು ಮತ್ತು ಮುಂಭಾಗದಲ್ಲಿ 1 MP ಕ್ಯಾಮೆರಾವನ್ನು ನೀಡಲಾಗಿತ್ತು. ಇದರೊಂದಿಗೆ 1,800 mAh ಬ್ಯಾಟರಿಯನ್ನು ಇದರಲ್ಲಿ ಅಳವಡಿಸಲಾಗಿತ್ತು.Read more about:
English summary
YotaPhone 3 is likely tipped to be released in select markets by the end of this year.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot