Home
ಸುದ್ದಿಜಾಲ

ವಾಟ್ಸಾಪ್‌ನಲ್ಲಿ ವೀಡಿಯೊ ಡೌನ್‌ಲೋಡ್‌ ಆಗುತ್ತಿಲ್ಲವೆ! ಇಲ್ಲಿದೆ ಪರಿಹಾರ!

ವಾಟ್ಸಾಪ್‌ನಲ್ಲಿ ಕಳೆದ ರಾತ್ರಿಯಿಂದ ವೀಡಿಯೋ ಡೌನ್‌ಲೋಡ್‌ ಸಮಸ್ಯೆ ಕಾಣಿಸಿಕೊಂಡಿದೆ. ಈಗಾಗಲೇ ಈ ವಿಚಾರವಾಗಿ ಸಾಕಷ್ಟು ಬಳಕೆದಾರರು ತಮ್ಮ ಸಮಸ್ಯೆಯನ್ನು ವರದಿಮಾಡಿದ್ದಾರೆ. ಇನ್ನು ನೀವು ಕೂಡ ವಾಟ್ಸಾಪ್‌ನಲ್ಲಿ ವೀಡಿಯ ಡೌನ್‌ಲೋಡ್‌ ಮಾಡುವುದಕ್ಕೆ ಸಮಸ್ಯೆ ಎದುರಿಸುತ್ತಿದ್ದರೆ, ನೀವು ಕೆಲವು ಮಾರ್ಗಗಳನ್ನು ಅನುಸರಿಸಬಹುದಾಗಿದೆ.

ಹೌದು, ವಾಟ್ಸಾಪ್‌ನಲ್ಲಿ ವೀಡಿಯೋ ಡೌನ್‌ಲೋಡ್‌ ಮಾಡಲು ಸಮಸ್ಯೆ ಎದುರಾಗಿದೆ. ಹಾಗಂತ ನೀವು ಚಿಂತಿಸಿಬೇಕಾದ ಅಗತ್ಯವಿಲ್ಲ. ಏಕೆಂದರೆ ವಾಟ್ಸಾಪ್‌ನಲ್ಲಿ ನೀವು ಸ್ವೀಕರಿಸಿದ ವೀಡಿಯೊವನ್ನು ಡೌನ್‌ಲೋಡ್ ಮಾಡಲು ಹಲವು ಮಾರ್ಗಗಳಿವೆ. ಹಾಗಾದ್ರೆ ನೀವು ವಾಟ್ಸಾಪ್‌ನಲ್ಲಿ ವೀಡಿಯೊ ಡೌನ್‌ಲೋಡ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌ನಲ್ಲಿ ವೀಡಿಯೊ ಡೌನ್‌ಲೋಡ್‌ ಆಗುತ್ತಿಲ್ಲವೆ! ಇಲ್ಲಿದೆ ಪರಿಹಾರ!

ಪ್ರಮುಖ ಮೆಸೇಜಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿರುವ ವಾಟ್ಸಾಪ್‌ನಲ್ಲಿ ವೀಡಿಯೊ ಡೌನ್‌ಲೋಡ್‌ ಸಮಸ್ಯೆ ಎದುರಾಗಿದೆ. ಅಷ್ಟೇ ಅಲ್ಲದೆ ಕೆಲವು ಬಳಕೆದಾರರು ವೀಡಿಯೊ ಡೌನ್‌ಲೋಡ್‌ ಸಮಸ್ಯೆಯನ್ನು ಆಗಾಗ ಎದುರಿಸುತ್ತಿರುತ್ತಾರೆ. ಇಂತಹ ಸಮಯದಲ್ಲಿ ವೀಡಿಯೊ ಡೌನ್‌ಲೋಡ್‌ ಮಾಡುವುದಕ್ಕೆ ಮಾತ್ರವಲ್ಲದೆ, ವೀಕ್ಷಿಸುವುದಕ್ಕೆ ಕೂಡ ತೊಂದರೆಯಾಗಲಿದೆ. ಆದರೆ ನೀವು ವಾಟ್ಸಾಪ್‌ನಲ್ಲಿ ಕೆಲವು ಅಂಶಗಳನ್ನು ಅನುಸರಿಸಿದರೆ ಸುಲಭವಾಗಿ ವೀಡಿಯೊ ಡೌನ್‌ಲೋಡ್‌ ಮಾಡಬಹುದು.

ವಾಟ್ಸಾಪ್‌ನಲ್ಲಿ ವೀಡಿಯೊ ಡೌನ್‌ಲೋಡ್‌ ಆಗುತ್ತಿಲ್ಲವೆ! ಇಲ್ಲಿದೆ ಪರಿಹಾರ!

ವಾಟ್ಸಾಪ್‌ನಲ್ಲಿ ವೀಡಿಯೊ ಡೌನ್‌ಲೋಡ್‌ ಸಮಸ್ಯೆ ನಿವಾರಿಸುವುದು ಹೇಗೆ?

* ಮೊದಲಿಗೆ ನಿಮ್ಮ ಲ್ಯಾಪ್‌ಟಾಪ್‌ನಲ್ಲಿ ವಾಟ್ಸಾಪ್‌ ಡೆಸ್ಕ್‌ಟಾಪ್‌ ಆವೃತ್ತಿಯನ್ನು ಡೌನ್‌ಲೋಡ್‌ ಮಾಡಿ ನಂತರ ತೆರೆಯಿರಿ
* ಇದೀಗ ನಿಮ್ಮ ಫೋನ್‌ನಲ್ಲಿ ವಾಟ್ಸಾಪ್‌ ತೆರೆಯಿರಿ
* ನಿಮ್ಮ ಫೋನ್‌ ವಾಟ್ಸಾಪ್‌ನಲ್ಲಿ ತೆರೆದು ಮೇಲಿನ ಬಲ ಮೂಲೆಯಲ್ಲಿರುವ ಮೂರು ಚುಕ್ಕೆಗಳ ಮೇಲೆ ಟ್ಯಾಪ್ ಮಾಡಿ.
* ಇದರಲ್ಲಿ ಲಿಂಕ್ಡ್‌ ಡಿವೈಸ್‌ ಆಯ್ಕೆಯನ್ನು ಟ್ಯಾಪ್‌ ಮಾಡಿ.
* ನಂತರ ನಿಮ್ಮ ಫೋನ್‌ ವಾಟ್ಸಾಪ್‌ ಅನ್ನು ಲಿಂಕ್‌ ಮಾಡಲು ಲ್ಯಾಪ್‌ಟಾಪ್‌ ಡೆಸ್ಕ್‌ಟಾಪ್ ಸ್ಕ್ರೀನ್‌ ಮೇಲೆ ತೋರಿಸಿರುವ QR ಕೋಡ್ ಅನ್ನು ಸ್ಕ್ಯಾನ್ ಮಾಡಿ
* ಇದೀಗ ವಾಟ್ಸಾಪ್‌ ಡೆಸ್ಕ್‌ಟಾಪ್‌ಗೆ ನಿಮ್ಮ ಫೋನ್‌ ವಾಟ್ಸಾಪ್‌ ಲಿಂಕ್‌ ಆಗಲಿದೆ.
* ನಂತರ ನಿಮ್ಮ ವಾಟ್ಸಾಪ್‌ ಚಾಟ್‌ನಲ್ಲಿ ಸ್ವೀಕರಿಸಿದ ವೀಡಿಯೋ ಮೇಲೆ ಕ್ಲಿಕ್‌ ಮಾಡಿ, ಡೌನ್‌ಲೋಡ್‌ ಮಾಡಿ.

ಇದಲ್ಲದೆ ನೀವು ನೇರವಾಗಿ ಯಾವುದೇ ಬ್ರೌಸರ್‌ನಲ್ಲಿ ವಾಟ್ಸಾಪ್‌ ವೆಬ್‌ಗೆ ಬೇಟಿ ನೀಡುವ ಮೂಲಕ ಕೂಡ ವೀಡಿಯೊ ಡೌನ್‌ಲೋಡ್‌ ಮಾಡಬಹುದಾಗಿದೆ. ಇಲ್ಲಿಯೂ ಕೂಡ ವಾಟ್ಸಾಪ್‌ ವೆಬ್‌ಗೆ ನಿಮ್ಮ ಫೋನ್‌ ವಾಟ್ಸಾಪ್‌ ಅನ್ನು ಲಿಂಕ್‌ ಮಾಡಬೇಕಾಗುತ್ತದೆ.

ವಾಟ್ಸಾಪ್‌ನಲ್ಲಿ ವೀಡಿಯೊ ಡೌನ್‌ಲೋಡ್‌ ಆಗುತ್ತಿಲ್ಲವೆ! ಇಲ್ಲಿದೆ ಪರಿಹಾರ!

ವಾಟ್ಸಾಪ್‌ನಲ್ಲಿ ಡಿಲೀಟ್‌ ಆದ ಫೋಟೋಗಳನ್ನು ಮರಳಿ ಪಡೆಯುವುದು ಹೇಗೆ?

ವಾಟ್ಸಾಪ್‌ನಲ್ಲಿ ಬರುವ ಫೋಟೋಗಳು ಮತ್ತು ವೀಡಿಯೋಗಳು ಸಾಮಾನ್ಯವಾಗಿ ಫೋನ್‌ ಗ್ಯಾಲರಿಯಲ್ಲಿ ಸೇವ್‌ ಆಗಲಿವೆ. ಆದರೆ ಕೆಲವರು ವಾಟ್ಸಾಫ್‌ ಮೀಡಿಯಾ ಗ್ಯಾಲರಿಯಲ್ಲಿ ಸೇವ್‌ ಆಗದಂತೆ ಆಯ್ಕೆ ಮಾಡಿರುತ್ತಾರೆ. ಆದರಿಂದ ನೀವು ವಾಟ್ಸಾಪ್‌ ಮೀಡಿಯಾ ಫೋನ್‌ ಗ್ಯಾಲರಿಯಲ್ಲಿ ಸೇವ್‌ ಆಗುವ ಆಯ್ಕೆ ಸೆಟ್‌ ಮಾಡಿದ್ದರೆ ಎಲ್ಲಾ ಫೋಟೋಗಳು ಗ್ಯಾಲರಿಯಲ್ಲಿರುತ್ತವೆ. ಇಂತಹ ಸನ್ನಿವೇಶದಲ್ಲಿ ವಾಟ್ಸಾಪ್‌ನಲ್ಲಿರುವ ಫೋಟೋ ವೀಡಿಯೋಗಳಿರುವ ಚಾಟ್‌ ಡಿಲೀಟ್‌ ಆಗಿದ್ದರು ಗ್ಯಾಲರಿಯಲ್ಲಿರುತ್ತದೆ.

ಇನ್ನು ವಾಟ್ಸಾಪ್‌ ಚಾಟ್‌ಗಳನ್ನು ಡಿಲಿಟ್‌ ಮಾಡಿದ್ದರೂ ನಿಮ್ಮ ಫೋಟೋ ಮತ್ತು ವೀಡಿಯೋ ನಿಮಗೆ ಸಿಗಬೇಕಾದರೆ ವಾಟ್ಸಾಪ್‌ ಚಾಟ್‌ ಮತ್ತು ಮೀಡಿಯಾವನ್ನು ಗೂಗಲ್‌ ಡ್ರೈವ್‌ನಲ್ಲಿ ಬ್ಯಾಕ್‌ಅಪ್‌ ಮಾಡುವುದು ಉತ್ತಮ. ದೈನಂದಿನ ಬ್ಯಾಕಪ್ ನಂತರ ಮೀಡಿಯಾವನ್ನು ನೀವು ಡಿಲೀಟ್‌ ಮಾಡಿದ್ದರೆ, ನಿಮ್ಮ ಗೂಗಲ್‌ ಡ್ರೈವ್‌ನಲ್ಲಿ ಎಲ್ಲವೂ ಸ್ಟೋರೇಜ್‌ ಆಗಿರುತ್ತದೆ.
ಗೂಗಲ್‌ ಡ್ರೈವ್‌ನಲ್ಲಿರುವ ನಿಮ್ಮ ಮೀಡಿಯಾವನ್ನು ರಿಕವರಿ ಮಾಡಲು ಈ ಕೆಳಗಿನ ನಿಯಮಗಳನ್ನು ಅನುಸರಿಸಿ.
* ಮೊದಲಿಗೆ ನಿಮ್ಮ ಡಿವೈಸ್‌ನಲ್ಲಿ ವಾಟ್ಸಾಪ್‌ ಅನ್‌ ಇನ್‌ಸ್ಟಾಲ್‌ ಮಾಡಿ ಮತ್ತು ರಿ ಇನ್‌ಸ್ಟಾಲ್‌ ಮಾಡಿ.
* ನಿಮ್ಮ ಫೋನ್ ಸಂಖ್ಯೆಯೊಂದಿಗೆ ವಾಟ್ಸಾಪ್‌ ಸೆಟಪ್ ಮಾಡಿ.
* ಇದೀಗ ವಾಟ್ಸಾಪ್‌ ಬ್ಯಾಕಪ್‌ನಿಂದ ಡೇಟಾವನ್ನು ರಿಸ್ಟೋರ್‌ ಮಾಡಲು ಕೇಳಿದಾಗ ಅದನ್ನು ಅಕ್ಸೆಪ್ಟ್‌ ಮಾಡಿ.
* ಸೆಟ್‌ಅಪ್‌ ಪೂರ್ಣಗೊಂಡ ನಂತರ ಡ್ರೈವ್‌ನಲ್ಲಿರುವ ಎಲ್ಲಾ ಮೀಡಿಯಾ ಹಾಗೂ ಚಾಟ್‌ಗಳು ವಾಟ್ಸಾಪ್‌ನಲ್ಲಿ ರಿಕವರಿ ಆಗಲಿದೆ.

Best Mobiles in India

English summary
You are facing issues while downloading received videos on WhatsApp? here’s solution!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+