Home
ಸುದ್ದಿಜಾಲ

ಇಯರ್‌ಫೋನ್‌ ಖರೀದಿಸಬೇಕೆ? ಇಲ್ಲಿವೆ ಅತ್ಯುತ್ತಮ ಬೆಸ್ಟ್‌ ಇಯರ್‌ಫೋನ್‌ಗಳು!

ಸ್ಮಾರ್ಟ್‌ಫೋನ್‌ ಗಾತ್ರ ವಿನ್ಯಾಸ ಬದಲಾದಂತೆ ಇಯರ್‌ಫೋನ್‌ಗಳು ಕೂಡ ಸಾಕಷ್ಟು ಬೆಳವಣಿಗೆಯನ್ನು ಕಂಡಿವೆ. ಇಂದು ಟೆಕ್‌ ವಲಯದಲ್ಲಿ ಸ್ಮಾರ್ಟ್‌ಫೋನ್‌ಗಳಿಗಿರುವಷ್ಟೇ ಬೇಡಿಕೆ ಇಯರ್‌ಫೋನ್‌ಗಳು ಕೂಡ ಪಡೆದುಕೊಂಡಿವೆ. ಅದರಲ್ಲೂ ಜನಪ್ರಿಯ ಬ್ರ್ಯಾಂಡ್‌ಗಳ ಇಯರ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಹೊಸ ಟ್ರೆಂಡ್‌ ಅನ್ನು ಹುಟ್ಟುಹಾಕಿವೆ.

ಹೌದು, ಇಯರ್‌ಫೋನ್‌ಗಳಿಗೆ ಭಾರಿ ಬೇಡಿಕೆಯಿದೆ. ಇದಕ್ಕೆ ತಕ್ಕಂತೆ ಹಲವು ಬ್ರ್ಯಾಂಡ್‌ಗಳು ತಮ್ಮ ವಿಶೇಷ ಇಯರ್‌ಫೋನ್‌ಗಳನ್ನು ಪರಿಚಯಿಸುತ್ತಾ ಬಂದಿವೆ. ಪ್ರಸ್ತುತ ನೀವು ಕೂಡ ಅತ್ಯುತ್ತಮ ಇಯರ್‌ಫೋನ್‌ ಖರೀದಿಸಬೇಕೆಂದು ಕೊಂಡರೆ ಹಲವು ಆಯ್ಕೆಗಳು ಲಭ್ಯವಾಗಲಿವೆ. ಇವುಗಳಲ್ಲಿ ನೀವು ಯಾವುದನ್ನು ಖರೀದಿಸಬಹುದು ಅನ್ನೊ ಯೋಚನೆ ಇದ್ದೆ ಇರುತ್ತದೆ. ಹಾಗಂತ ನೀವು ಯೋಚಿಸಬೇಕಾದ ಅಗತ್ಯವಿಲ್ಲ. ನಿಮಗಾಗಿಯೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯುತ್ತಮ ಇಯರ್‌ಫೋನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇಯರ್‌ಫೋನ್‌ ಖರೀದಿಸಬೇಕೆ? ಇಲ್ಲಿವೆ ಅತ್ಯುತ್ತಮ ಬೆಸ್ಟ್‌ ಇಯರ್‌ಫೋನ್‌ಗಳು!

ಸೋನಿ WF-1000XM4

ಸೋನಿ WF-1000XM4 ನೀವು ಖರೀದಿಸಬಹುದಾದ ಅತ್ಯುತ್ತಮ ಬ್ಲೂಟೂತ್‌ ವಾಯರ್‌ಲೆಸ್‌ ಇಯರ್‌ಫೋನ್‌ ಎನಿಸಿಕೊಂಡಿದೆ. ಇದು 36 ಗಂಟೆಗಳ ಪ್ಲೇ ಬ್ಯಾಕ್‌ಟೈಂ ಅನ್ನು ಹೊಂದಿದ್ದು, ಇದರ ಫ್ರಿಕ್ವೆನ್ಸಿ ರೇಂಜ್‌ 20Hz - 40,000Hz ಇರಲಿದೆ. ಇನ್ನು ಈ ಇಯರ್‌ಫೋನ್‌ ಡ್ಯುಯಲ್‌ ಚಾನಲ್‌ಗಳನ್ನು ಹೊಂದಿದೆ. ಇದು LDAC, AAC ಮತ್ತು SBC ಕೊಡೆಕ್ ಬೆಂಬಲಿಸುವುದರಿಂದ ಪವರ್‌ಫುಲ್‌ ಸೌಂಡ್‌ ಸಿಸ್ಟಂ ಅನ್ನು ನೀಡಲಿದೆ. ಪ್ರಸ್ತುತ ಅಮೆಜಾನ್‌ನಲ್ಲಿ ಇದರ ಬೆಲೆ 16,990ರೂ. ಆಗಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬಡ್ಸ್‌ 2 ಪ್ರೊ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬಡ್ಸ್‌ 2 ಪ್ರೊ ಸ್ಯಾಮ್‌ಸಂಗ್‌ ಕಂಪೆನಿಯ ಬೆಸ್ಟ್‌ ಇಯರ್‌ಫೋನ್‌ಗಳಲ್ಲಿ ಒಂದಾಗಿದೆ. ಇದು 5 ಗಂಟೆಗಳ ಪ್ಲೇ ಬ್ಯಾಕ್‌ ಟೈಂ ನೀಡಲಿದ್ದು, 20Hz - 20kHz ಫ್ರಿಕ್ವೆನ್ಸಿ ರೇಂಜ್‌ ಹೊಂದಿದೆ. ಇನ್ನು ಈ ಇಯರ್‌ಬಡ್ಸ್‌ ನಾಯ್ಸ್‌ ಕ್ಯಾನ್ಸಲೇಶನ್‌ ಫೀಚರ್ಸ್‌ ಅನ್ನು ಹೊಂದಿದ್ದು, ನಿಮಗೆ ಅತ್ಯುತ್ತಮ ಕರೆ ಅನುಭವವನ್ನು ನೀಡಲಿದೆ. ಪ್ರಸ್ತುತ ಅಮೆಜಾನ್‌ನಲ್ಲಿ ಇದರ ಬೆಲೆ 15,890ರೂ. ಆಗಿದೆ.

ಇಯರ್‌ಫೋನ್‌ ಖರೀದಿಸಬೇಕೆ? ಇಲ್ಲಿವೆ ಅತ್ಯುತ್ತಮ ಬೆಸ್ಟ್‌ ಇಯರ್‌ಫೋನ್‌ಗಳು!

ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್‌ಲೆಸ್ 3

ಸೆನ್‌ಹೈಸರ್ ಮೊಮೆಂಟಮ್ ಟ್ರೂ ವೈರ್‌ಲೆಸ್ 3 ಬೆಸ್ಟ್‌ ಇಯರ್‌ ಫೋನ್‌ಗಳಲ್ಲಿ ಒಂದಾಗಿದೆ. ಇದು 28 ಗಂಟೆಗಳ ಪ್ಲೇ ಟೈಂ ಅನ್ನು ನೀಡಲಿದ್ದು, 20Hz - 20kHz ಫ್ರಿಕ್ವೆನ್ಸಿ ರೇಂಜ್‌ ಅನ್ನು ಹೊಂದಿದೆ. ಇನ್ನು ಇಯರ್‌ಬಡ್ಸ್‌ ನಾಯ್ಸ್‌ ಕ್ಯಾನ್ಸಲೇಶನ್‌ ಮೈಕ್ರೊಫೋನ್‌ಗಳನ್ನು ಹೊಂದಿದೆ. ಇದರಿಂದ ನಿಮಗೆ ಉತ್ತಮ ಗುಣಮಟ್ಟದ ಧ್ವನಿ ಪಿಕ್-ಅಪ್ ಸ್ಪಷ್ಟವಾದ ಮಾತು ಕೇಳಲು ಸಹಾಯ ಮಾಡಲಿದೆ. ಪ್ರಸ್ತುತ ಇದರ ಬೆಲೆ 19,990ರೂ. ಆಗಿದೆ.

ಒಪ್ಪೋ ಎನ್ಕೋ X2

ಒಪ್ಪೋ ಎನ್ಕೋ X2 ಇಯರ್‌ಫೋನ್‌ ಕೂಡ ನೀವು ಆಯ್ಕೆ ಮಾಡಬಹುದಾದ ಬೆಸ್ಟ್‌ ಚಾಯ್ಸ್‌ ಆಗಿದೆ. ಇದು ಅತ್ಯುತ್ತಮ ಸೌಂಡ್‌ ಸಿಸ್ಟಂ ಮತ್ತು ಡಿಸೈನ್‌ನಿಂದಾಗ ಗಮನಸೆಳೆದಿದೆ. ಇದರಲ್ಲಿ ನಿಮಗೆ 40 ಗಂಟೆಗಳ ಪ್ಲೇ ಬ್ಯಾಕ್‌ ಟೈಂ ಸಿಗಲಿದೆ. ಇದು 20Hz - 40kHz ಫ್ರಿಕ್ವೆನ್ಸಿ ರೇಂಜ್‌ ಅನ್ನು ಹೊಂದಿದೆ. ಅಲ್ಲದೆ ಅಲ್ಟ್ರಾ-ವೈಡ್ ಫ್ರೀಕ್ವೆನ್ಸಿ 45dB ಸ್ಮಾರ್ಟ್ ಅಡಾಪ್ಟಿವ್ ಆಕ್ಟಿವ್ ನಾಯ್ಸ್‌ ಕ್ಯಾನ್ಸಲೇಶನ್‌ ಸಿಸ್ಟಂ ಅನ್ನು ಕೂಡ ಒಳಗೊಂಡಿದೆ. ಪ್ರಸ್ತುತ ಅಮೆಜಾನ್‌ನಲ್ಲಿ ಇದರ ಬೆಲೆ 10,999ರೂ. ಆಗಿದೆ.

ಇಯರ್‌ಫೋನ್‌ ಖರೀದಿಸಬೇಕೆ? ಇಲ್ಲಿವೆ ಅತ್ಯುತ್ತಮ ಬೆಸ್ಟ್‌ ಇಯರ್‌ಫೋನ್‌ಗಳು!

ಬೋಸ್ ಕ್ವೈಟ್ ಕಂಫರ್ಟ್ ಇಯರ್‌ಬಡ್ಸ್ (ಕಪ್ಪು)

ಬೋಸ್ ಕ್ವೈಟ್ ಕಂಫರ್ಟ್ ಇಯರ್‌ಬಡ್ಸ್ 6 ಗಂಟೆಗಳ ಪ್ಲೇ ಬ್ಯಾಕ್‌ ಟೈಮ ನೀಡಲಿದೆ. ಇದು 20Hz - 20kHz ಫ್ರಿಕ್ವೆನ್ಸಿ ರೇಂಜ್‌ ಅನ್ನು ಪಡೆದಿದ್ದು, ನಾಯ್ಸ್‌ ಕ್ಯಾನ್ಸಲಿಂಗ್‌ ವ್ಯವಸ್ಥೆಯನ್ನು ಹೊಂದಿದೆ. ಇದರಲ್ಲಿ ಟಚ್‌ ಕಂಟ್ರೋಲ್‌ ಅನ್ನು ಸಹ ನೀಡಲಾಗಿದ್ದು, ನಿಮ್ಮ ಕರೆಗಳು ಹಾಗೂ ಮ್ಯೂಸಿಕ್‌ ಅನ್ನು ಕಂಟ್ರೋಲ್‌ ಮಾಡುವ ಅವಕಾಶ ನೀಡಿದೆ. ಇದನ್ನು ನೀವು ಅಮೆಜಾನ್‌ನಲ್ಲಿ 20,128ರೂ. ಬೆಲೆಗೆ ಖರೀದಿಸಬಹುದಾಗಿದೆ.

Best Mobiles in India

English summary
Your looking for earphones? Here's Best Earphones in India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+