Home
ಸುದ್ದಿಜಾಲ

ವಿದೇಶಿ ಸಂಖ್ಯೆಯಿಂದ ವಾಟ್ಸಾಪ್‌ ಮೆಸೇಜ್‌ ಬಂದಿದೆಯಾ? ಏನು ಮಾಡೋದು ಅಂತೀರಾ?

ನಿಮ್ಮ ವಾಟ್ಸಾಪ್‌ಗೂ ಕೂಡ ಈ ರೀತಿಯ ಸಂದೇಶ ಬಂದಿದೆಯಾ? ಇದು ಯಾವುದೋ ಬೇರೆ ದೇಶದ ನಂಬರ್‌ನಿಂದ ಬಂದಿರುವ ಸಂದೇಶ ಎಂದು ಎನಿಸಿದೆಯಾ? ಕೂಡಲೇ ಈ ಸಂದೇಶವನ್ನು ರಿಪೋರ್ಟ್‌ ಮಾಡುವುದು ಸೂಕ್ತ. ಹಾಗಂತ ಈ ರೀತಿ ಅನ್ಯ ದೇಶದ ಸಂಖ್ಯೆಗಳಿಂದ ನಿಮಗೆ ಮಾತ್ರ ಸಂದೇಶ ಬರುತ್ತಿಲ್ಲ ಅನ್ನೊದು ಕೂಡ ನೆನಪಿಡಬೇಕಾದ ವಿಚಾರ.

ಹೌದು, ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ವಿದೇಶಿ ಸಂಖ್ಯೆಯ ವಾಟ್ಸಾಪ್‌ನಿಂದ ಸಂದೇಶ ಬರುವುದು ಸಾಮಾನ್ಯವಾಗಿ ಹೋಗಿದೆ. ಯಾವುದೋ ಅಪರಿಚಿತ ಸಂಖ್ಯೆಯಿಂದ ಸಂದೇಶ ಕಳುಹಿಸುವುದು, ಸಂದೇಶಕ್ಕೆ ರಿಪ್ಲೇ ಬಂದರೆ ಅವರನ್ನು ಪುಸಲಾಯಿಸಿ ಅವರ ವೈಯುಕ್ತಿಕ ಮಾಹಿತಿ ಪಡೆದು ಹಣ ಎಗರಿಸುತ್ತಿರುವ ಪ್ರಕರಣಗಳು ನಡೆಯುತ್ತಲೇ ಇವೆ. ಹಾಗಾದ್ರೆ ಯಾಕೆ ನಿಮಗೆ ವಿದೇಶದಿಂದ ಸಂದೇಶ ಬರುತ್ತಿದೆ? ಇದರ ಹಿಂದಿನ ಕಾರಣಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಿದೇಶಿ ಸಂಖ್ಯೆಯಿಂದ ವಾಟ್ಸಾಪ್‌ ಮೆಸೇಜ್‌ ಬಂದಿದೆಯಾ? ಏನು ಮಾಡೋದು ಅಂತೀರಾ?

ಭಾರತದಲ್ಲಿ ವಿದೇಶಿ ವಾಟ್ಸಾಪ್‌ ನಂಬರ್‌ನಿಂದ ಸಂದೇಶ ಬರುವುದು ಹೆಚ್ಚಾಗುತ್ತಿದೆ. ವಿದೇಶಿ ನಂಬರ್‌ನಿಂದ ವಾಟ್ಸಾಪ್‌ ಸಂದೇಶಗಳನ್ನು ಕಳುಹಿಸಿ ಜನ ಸಾಮಾನ್ಯರನ್ನು ಯಾಮಾರಿಸುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ ಎಂದು ಹೇಳಲಾಗಿದೆ. ಅಂತರರಾಷ್ಟ್ರೀಯ ಸಂಖ್ಯೆಗಳಿಂದ ಬರುವ ಅನಗತ್ಯ ವಾಟ್ಸಾಪ್‌ ವೀಡಿಯೊಗಳು ಮತ್ತು ವಾಯ್ಸ್‌ ಕಾಲ್‌ಗಳು ನಿಮ್ಮನ್ನು ಮೋಸಕ್ಕೆ ಗುರಿಮಾಡಲಿವೆ. ಈ ರೀತಿಯ ಸಂದೇಶಗಳು ನಿಮಗೆ ಮಾತ್ರವಲ್ಲ ಇದರ ಬಗ್ಗೆ ಪ್ರತಿನಿತ್ಯವೂ ವರದಿಯಾಗುತ್ತಲೇ ಇದ್ದು ಇದೊಂದು ಸ್ಕ್ಯಾಮ್‌ ಎಂದು ಹೇಳಲಾಗಿದೆ.

ವಿದೇಶಿ ಸಂಖ್ಯೆಯಿಂದ ವಾಟ್ಸಾಪ್‌ ಮೆಸೇಜ್‌ ಬಂದಿದೆಯಾ? ಏನು ಮಾಡೋದು ಅಂತೀರಾ?

ಹಲವಾರು ಬಳಕೆದಾರರು ಅಪರಿಚಿತ WhatsApp ಕರೆಗಳನ್ನು ಸ್ವೀಕರಿಸುತ್ತಿದ್ದಾರೆ

ಭಾರತದಲ್ಲಿರುವ ಜನ ಸಾಮಾನ್ಯರಿಗೆ ವಿದೇಶದಿಂದ ಬರುವ ಕರೆಗಳು ಹೆಚ್ಚಿನವು +84 (ವಿಯೆಟ್ನಾಂಗೆ ಕೋಡ್), +62 (ಇಂಡೋನೇಷ್ಯಾ ದೇಶದ ಕೋಡ್), ಮತ್ತು +223 (ಮಾಲಿಗಾಗಿ ಕೋಡ್)ನಿಂದ ಬರುತ್ತಿವೆ ಎನ್ನಲಾಗಿದೆ. ಈ ಕರೆಗಳು ನಿಮಗೆ ಯಾವುದಾದರೂ ಬಹುಮಾನದ ಆಸೆ ಇಲ್ಲವೇ ಹಣ ಗಳಿಸುವುದರ ಬಗ್ಗೆ ಮಾಹಿತಿ ನೀಡುವ ಸಂದೇಶವನ್ನು ನೀಡಲಿವೆ. ಆದರೆ ಅಸಲಿಗೆ ಈ ಕರೆಗಳಿಂದ ನಿಮಗೆ ಯಾವುದೇ ಉಪಯೋಗವಿಲ್ಲ ಬದಲಿಗೆ ನೀವು ಹಣ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬಂದರೂ ಅಚ್ಚರಿಯಿಲ್ಲ.

ಇನ್ನು ಹೀಗೆ ವಿದೇಶಿ ಸಂಖ್ಯೆಗಳಿಂದ ಸಂದೇಶ ಕಳುಹಿಸುವ ಸ್ಕ್ಯಾಮರ್‌ಗಳು ನಿಜವಾಗಿ ವಿದೇಶದಲ್ಲಿಯೇ ಇದ್ದಾರಾ? ಇಲ್ಲವೇ ಅನ್ನೊದನ್ನ ಇನ್ನು ಕೂಡ ಗುರುತಿಸಲಾಗಿಲ್ಲ ಅನ್ನೊದು ವಿಪರ್ಯಾಸ ಸಂಗತಿಯಾಗಿದೆ. ಆದರೆ ವಂಚಕರು ಸಂತ್ರಸ್ತರಿಗೆ ಕರೆ ಮಾಡಲು WhatsApp ಆನ್‌ಲೈನ್‌ನಲ್ಲಿ VoIP (ವಾಯ್ಸ್ ಓವರ್ ಇಂಟರ್ನೆಟ್ ಪ್ರೋಟೋಕಾಲ್) ಸಂಖ್ಯೆಗಳನ್ನು ಖರೀದಿಸುತ್ತಾರೆ ಎಂದು ವರದಿಯಾಗಿದೆ. ಇದರಿಂದ ದೇಶದಲ್ಲಿಯೇ ಕುಳಿತು ವಿದೇಶಿ ಸಂಖ್ಯೆಗಳ ಮೂಲಕ ನಿಮ್ಮನ್ನು ಯಾಮಾರಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ವಿದೇಶಿ ಸಂಖ್ಯೆಯಿಂದ ವಾಟ್ಸಾಪ್‌ ಮೆಸೇಜ್‌ ಬಂದಿದೆಯಾ? ಏನು ಮಾಡೋದು ಅಂತೀರಾ?

ಏನಿದು ಇಂಟರ್‌ನ್ಯಾಷನಲ್‌ ವಾಟ್ಸಾಪ್‌ ಕಾಲ್‌ ಸ್ಕ್ಯಾಮ್‌?

ನಿಮಗೆ ಪರಿಚಯವೇ ಇಲ್ಲದ ವಿದೇಶ ಸಂಖ್ಯೆಗಳಿಂದ ವಾಟ್ಸಾಪ್‌ ಸಂದೇಶ ಬಂದರೆ ಹೆದರುವ ಅಗತ್ಯವಿಲ್ಲ. ಆದರೆ ಈ ರೀತಿಯ ಸಂದೇಶಗಳಿಗೆ ರಿಪ್ಲೇ ಮಾಡಬೇಡಿ. ಯಾಕೆಂದರೆ ಇದೊಂದು ಸ್ಕ್ಯಾಮ್‌ ಆಗಿದೆ. ಇಂಟರ್‌ನ್ಯಾಷನಲ್‌ ನಂಬರ್‌ನಿಂದ ವಾಟ್ಸಾಪ್‌ ಕಾಲ್‌ ಅಥವಾ ಮೆಸೇಜ್‌ ಮಾಡುವ ವಂಚಕರು ನಿಮಗೆ ಬಹುಮಾಮನ ಬಂದಿದೆ ಏರ್‌ಪೋರ್ಟ್‌ನಲ್ಲಿದೆ ಅದಕ್ಕಾಗಿ ಹಣ ಕಳುಹಿಸಬೇಕೆಂದು ವಂಚಿಸಲಿದ್ದಾರೆ. ಅಲ್ಲದೆ ನಿಮಗೆ ಆನ್‌ಲೈನ್‌ನಲ್ಲಿ ಉದ್ಯೋಗ ನೀಡಲಿದ್ದೇವೆ ನೀವು ಕುಳಿತಲ್ಲಿಯೇ ಹಣ ಸಂಪಾದಿಸಿ ಎನ್ನುವ ಆಮಿಷಗಳನ್ನು ನೀಡುವ ಮೂಲಕ ಆನ್‌ಲೈನ್‌ ವಂಚನೆಗೆ ನಿಮ್ಮನ್ನು ಬಳಸಿಕೊಳ್ಳಲಿದ್ದಾರೆ. ಆದರಿಂದ ಈ ರೀತಿಯ ಸಂದೇಶಗಳ ಬಗ್ಗೆ ಎಚ್ಚರಿಕೆ ವಹಿಸಿರಿ.

ಇನ್ನು ಇತ್ತೀಚಿಗೆ ಪಾರ್ಟ್‌ ಟೈಂ ಜಾಬ್‌ ಜಾಹಿರಾತನ್ನು ನೀಡಿ ಜನರನ್ನು ಯಾಮಾರಿಸಿ ಹಣ ದೋಚುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಇದಕ್ಕೆ ಮತ್ತೊಂದು ಉದಾಹರಣೆ ಎಂಬಂತೆ ಪುಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಇಬ್ಬರು ಸಂತ್ರಸ್ತರು ಪಾರ್ಟ್‌ ಟೈಂ ಜಾಬ್‌ಗಾಗಿ ಒಟ್ಟು 33ಲಕ್ಷಕ್ಕೂ ಹೆಚ್ಚು ಹಣವನ್ನು ಕಳೆದುಕೊಂಡಿದ್ದಾರೆ.

Best Mobiles in India

English summary
You Are Receiving Unwanted Whatsapp Calls From International Numbers?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+