Home
ಸುದ್ದಿಜಾಲ

ಬೆಂಗಳೂರಲ್ಲಿ ರೂ.20ಕ್ಕೆ 1 GB ಡೇಟಾ: 4G ವೇಗಕ್ಕಿಂತ ಜಾಸ್ತಿ, ಸಿಮ್‌ಕಾರ್ಡ್ ಬೇಕಿಲ್ಲ, ಮತ್ತೇ ಹೇಗೆ..?

By Srinidhi

ಸಿಲಿಕಾನ್ ಸಿಟಿ ಬೆಂಗಳೂರು ಸ್ಟಾರ್ಟ್ಅಪ್‌ಗಳ ರಾಜಧಾನಿ ಎನ್ನುವ ಖ್ಯಾತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಇದಕ್ಕೆ ಸಾಕ್ಷಿಯಾಗುವಂತೆ ಬೆಂಗಳೂರಿನ ಸ್ಟಾರ್ಟ್ಅಪ್ ಕಂಪನಿಯೊಂದು ವಿಶ್ವದಲ್ಲೇ ಮೊದಲ ಬಾರಿಗೆ ಹೊಸದೊಂದು ಪ್ರಯತ್ನಕ್ಕೆ ಕೈ ಹಾಕಿದೆ. ಈ ಮೂಲಕ ಟೆಲಿಕಾಂ ವಲಯದ ದೈತ್ಯ ಕಂಪನಿಗಳು ನೀಡಲಾಗದ ಸೇವೆಯೊಂದನ್ನು ಅತೀ ಕಡಿಮೆ ಬೆಲೆಗೆ ನೀಡಲು ಮುಂದಾಗಿದೆ.

ಬೆಂಗಳೂರಲ್ಲಿ ರೂ.20ಕ್ಕೆ 1 GB ಡೇಟಾ: 4G ವೇಗಕ್ಕಿಂತ ಜಾಸ್ತಿ...!

ಸದ್ಯ ದೇಶದಲ್ಲಿ ಮೊಬೈಲ್ ಡೇಟಾ ದರ ಕಡಿಮೆಯಾಗಿದ್ದರೂ ಸಹ ಗ್ರಾಹಕರಿಗೆ ತಮ್ಮ ಅಗತ್ಯಕ್ಕೆ ತಕ್ಕಂತೆ ಅದನ್ನು ಬಳಕೆ ಮಾಡಿಕೊಳ್ಳುವ ಅವಕಾಶವನ್ನು ನೀಡಲಾಗಿಲ್ಲ. ಆದರೆ ಬೆಂಗಳೂರು ಮೂಲದ ಸ್ಟಾರ್ಟ್‌ಆಪ್ ಕಂಪನಿಯಾದ 'Wi-Fi ಡಬ್ಬ' ಗ್ರಾಹಕರಿಗೆ ರೂ.2 ಗೆ ಹೈ ಸ್ಪೀಡ್ ವೈ-ಫೈ ಡೇಟಾವನ್ನು ಬಳಕೆಗೆ ನೀಡುತ್ತಿದೆ.

ಓದಿರಿ: ಇನ್ಮುಂದೆ ಮನೆ ಬಾಗಿಲಿಗೆ ಬರಲಿದೆ ಸಿಮ್‌ ಕಾರ್ಡ್: ಹೇಗೆ..?

ಇದಕ್ಕಾಗಿಯೇ ನಗರದ ಹಲವು ಕಡೆಗಳಲ್ಲಿ ವೈ-ಫೈ ಜೋನ್ ಗಳನ್ನು ನಿರ್ಮಿಸಿದ್ದು, ಈ ಮೂಲಕ ಸೇವೆಯನ್ನು ಒದಗಿಸುತ್ತಿದೆ. ಇಲ್ಲಿ ಗ್ರಾಹಕರು ಕೇವಲ ರೂ.20ಕ್ಕೆ ಒಂದು GB ಡೇಟಾವನ್ನು ಬಳಕೆಗೆ ಪಡೆಯಬಹುದಾಗಿದೆ.

'Wi-Fi ಡಬ್ಬ' ಡೇಟಾ ಆಫರ್ ಗಳು:

'Wi-Fi ಡಬ್ಬ' ಡೇಟಾ ಆಫರ್ ಗಳು:

ವಿಶ್ವದಲ್ಲೇ ಮೊದಲ ಪ್ರಯತ್ನ ಎನ್ನಲಾಗಿರುವ 'Wi-Fi ಡಬ್ಬ' ರೂ. 2 ಕ್ಕೆ 100MB ಡೇಟಾವನ್ನು ನೀಡುತ್ತಿದ್ದು, ಇದೇ ಮಾದರಿಯಲ್ಲಿ ರೂ.10 ಕ್ಕೆ 500MB ಮತ್ತು ರೂ.20 ಕ್ಕೆ 1GB ಡೇಟಾವನ್ನುಮಾರಾಟ ಮಾಡುತ್ತಿದೆ. ಇದುವೇ 4G ಸ್ಪೀಡ್‌ಗಿಂತಲೂ ಅಧಿಕ ವೇಗದಲ್ಲಿ ಎನ್ನಲಾಗಿದೆ. ಈ ಮೂಲಕ ಹೊಸ ಸಾಧ್ಯತೆಯನ್ನು ಜಗತ್ತಿಗೆ ತೋರಿಸುವ ಪ್ರಯತ್ನಕ್ಕೆ ಕೈ ಹಾಕಿದೆ.

ಜಿಯೋ ಗಿಂತಲೂ ಕಡಿಮೆ ಬೆಲೆಗೆ ಸೇವೆ:

ಜಿಯೋ ಗಿಂತಲೂ ಕಡಿಮೆ ಬೆಲೆಗೆ ಸೇವೆ:

'Wi-Fi ಡಬ್ಬ' ದೇಶದ ಟೆಲಿಕಾಂ ಕ್ರಾಂತಿಗೆ ಕಾರಣವಾದ ಜಿಯೋಗಿಂತಲೂ ಅತೀ ಕಡಿಮೆ ಬೆಲೆಗೆ ಡೇಟಾ ಸೇವೆಯನ್ನು ದೊರೆಯುವಂತೆ ಮಾಡಿದೆ. ಜಿಯೋ 1GB ಗೆ ರೂ.51 ನಿಗಧಿ ಮಾಡಿದೆ. ಇದಕ್ಕಿಂತ ರೂ.31 ಕಡಿಮೆಗೆ 'Wi-Fi ಡಬ್ಬ' 1GB ಡೇಟಾವನ್ನು ರೂ.20ಕ್ಕೆ ಗ್ರಾಹಕರ ಬಳಕೆಗೆ ನೀಡುತ್ತಿದೆ .

'Wi-Fi ಡಬ್ಬ' ಸೇವೆ ಪಡೆಯುವುದು ಹೇಗೆ:

'Wi-Fi ಡಬ್ಬ' ಸೇವೆ ಪಡೆಯುವುದು ಹೇಗೆ:

ಟೆಲಿಕಾಂ ಕಂಪನಿಗಳ ಮಾದರಿಯನ್ನು ಅನುಸರಿಸಲು ಮುಂದಾಗಿರುವ 'Wi-Fi ಡಬ್ಬ' ಕಿರಾಣಿ ಅಂಗಡಿಗಳಲ್ಲಿ ತನ್ನ ಡೇಟಾ ರಿಚಾರ್ಜ್ ಕೂಪನ್ ಗಳನ್ನು ಮಾರಾಟ ಮಾಡುತ್ತಿದೆ. ಇದು ಪ್ರೀ ಪೇಯ್ಡ್ ಟೋಕನ್ ಗಳಾಗಿದ್ದು, ಇದರ ಮೂಲಕ ರೀಚಾರ್ಜ್ ಮಾಡಿಕೊಳ್ಳಬಹುದಾಗಿದೆ.

ಯಾವುದೇ ಆಪ್ ಬೇಕಾಗಿಲ್ಲ:

ಯಾವುದೇ ಆಪ್ ಬೇಕಾಗಿಲ್ಲ:

'Wi-Fi ಡಬ್ಬ' ಸೇವೆಯನ್ನು ಪಡೆಯುವ ಸಲುವಾಗಿ ನೀವು ಯಾವುದೇ ಆಪ್‌ ಇನ್‌ಸ್ಟಾಲ್ ಮಾಡಿಕೊಳ್ಳುವ ಅಗತ್ಯತೆ ಇಲ್ಲ, ನಿಮ್ಮ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳ ಬೇಕಾಗಿಲ್ಲ. ಇದಕ್ಕಾಗಿ ನೀವು www.wifidabba.comಗೆ ಭೇಟಿ ನೀಡಿ ನಿಮ್ಮ ಮೊಬೈಲ್ ನಂಬರ್ ನೊಂದಿಗೆ ಕೂಪನ್ ಕೀಯನ್ನು ಹಾಕಿದರೆ ಸಾಕು ನಂಬರ್ ಗೆ OTP ಬರಲಿದೆ. ಅದು ವರಿಫಿಕೇಷನ್ ಆದ ಮೇಲೆ ನೀವು ಸೇವೆಯನ್ನು ಪಡೆಯಬಹುದಾಗಿದೆ.

50 Mbps ವೇಗದ ಇಂಟರ್‌ನೆಟ್:

50 Mbps ವೇಗದ ಇಂಟರ್‌ನೆಟ್:

ಈಗಾಗಲೇ ಹೇಳಿದಂತೆ 4G ವೇಗಕ್ಕಿಂತ ಹೆಚ್ಚಿನ ವೇಗದ ಇಂಟರ್‌ನೆಟ್ ಬಳಕೆದಾರರಿಗೆ ದೊರೆಯಲಿದೆ. 50 Mbps ವೇಗದ ಇಂಟರ್‌ನೆಟ್ ಸೇವೆಯನ್ನು ನೀಡುವುದಾಗಿ 'Wi-Fi ಡಬ್ಬ' ತಿಳಿಸಿದೆ. ಇದಕ್ಕಾಗಿ ನಗರದಲ್ಲಿ 350 ರೌಟರ್ ಗಳನ್ನು ಅಳವಡಿಸಿದೆ ಎನ್ನಲಾಗಿದ್ದು, ಈಗಾಗಲೇ 1800 ಮಂದಿ ಈ ಸೇವೆಯನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ.

Best Mobiles in India

English summary
You can buy 1GB data at just Rs. 20 from this Bengaluru-based startup. to know more visit kananda.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+