Home
ಸುದ್ದಿಜಾಲ

ಅತೀ ಕಡಿಮೆ ಬೆಲೆಗೆ ಐಫೋನ್ ಎಕ್ಸ್ ಆರ್ ಲಭ್ಯ- ಆದರೆ ಖರೀದಿಸುವುದು ಎಷ್ಟು ಸೂಕ್ತ?

By Gizbot Bureau

ಹೆಚ್ಚಿನ ಮಂದಿಗೆ ಐಫೋನ್ ಎಕ್ಸ್ ಆರ್ ಸದ್ಯ ಆಪಲ್ ಸಂಸ್ಥೆಯ ಬೆಸ್ಟ್ ಐಫೋನ್ ಎಂದು ಜಗತ್ತಿನಾದ್ಯಂತ ಪರಿಗಣಿಸಲಾಗುತ್ತಿದೆ. ಯಾಕೆಂದರೆ ಐಫೋನ್ ಎಕ್ಸ್ ಎಸ್ ಮತ್ತು ಐಫೋನ್ ಎಕ್ಸ್ಎಸ್ ಮ್ಯಾಕ್ಸ್ ಇದಕ್ಕಿಂತಲೂ ಹೆಚ್ಚಿನ ಬೆಲೆಯದ್ದಾಗಿದೆ ಮತ್ತು ಕಳೆದ ವರ್ಷ ಬಿಡುಗಡೆಗೊಂಡ ನಂತರ ಅಷ್ಟೇನು ಬದಲಾವಣೆಯಾಗಿಲ್ಲ.

53,910 ರುಪಾಯಿಗೆ ಐಫೋನ್ ಎಕ್ಸ್ಆರ್

53,910 ರುಪಾಯಿಗೆ ಐಫೋನ್ ಎಕ್ಸ್ಆರ್

ಇನ್ನೊಂದೆಡೆ ಐಫೋನ್ ಎಕ್ಸ್ ಆರ್ ಕೈಗೆಟುಕುವ ಬೆಲೆಯ ಫೋನ್ ಆಗಿದೆ. ಇದರ ಆರಂಭಿಕ ಬೆಲೆ ಆನ್ ಲೈನ್ ನಲ್ಲಿ ಅಂದಾಜು 60,000 ರುಪಾಯಿಗಳು. ಐಫೋನ್ ಎಕ್ಸ್ ಆರ್ ನ್ನು ನೀವು 53,910 ರುಪಾಯಿಗೂ ಖರೀದಿಸಬಹುದಾದ ಅವಕಾಶವಿದೆ.

ಅಮೇಜಾನ್ ನಲ್ಲಿ ಆಫರ್:

ಅಮೇಜಾನ್ ನಲ್ಲಿ ಆಫರ್:

ಅಮೇಜಾನ್ ಇಂಡಿಯಾದಲ್ಲಿ ಐಫೋನ್ ಎಕ್ಸ್ ಆರ್ ಆರಂಭಿಕ ಬೆಲೆ 59,900 ರುಪಾಯಿಗೆ ಲಭ್ಯವಾಗುತ್ತದೆ. ಆದರೆ 64GB ಸ್ಟೋರೇಜ್ ಮಾಡೆಲ್ ನ್ನು 53,910 ರುಪಾಯಿಗೆ ಗ್ರಾಹಕರು ಖರೀದಿಸಬಹುದಾಗಿದೆ. ಹೆಚ್ ಡಿಎಫ್ ಸಿ ಬ್ಯಾಂಕಿನ ಡೆಬಿಟ್ ಕಾರ್ಡ್ ಬಳಸುವ ಮೂಲಕ 10% ಇನ್ಸೆಂಟ್ ರಿಯಾಯಿತಿಯನ್ನು ಪಡೆದುಕೊಳ್ಳಬಹುದು. ಇಎಂಐ ಅಥವಾ ಕ್ರೆಡಿಟ್ ಕಾರ್ಡ್ ಮೇಲಿನ ಇಎಂಐ ಮತ್ತು ನಾನ್ ಇಎಂಐ ಆಯ್ಕೆಗಳೂ ಕೂಡ ರುತ್ತದೆ. ಈ ಆಫರ್ ಜೂನ್ 30,2019 ರ ವರೆಗೆ ಅಮೇಜಾನ್ ಇಂಡಿಯಾದಲ್ಲಿ ಲಭ್ಯವಿದೆ.

ಆಫ್ ಲೈನ್ ಸ್ಟೋರ್ ನಲ್ಲೂ ಲಭ್ಯ:

ಆಫ್ ಲೈನ್ ಸ್ಟೋರ್ ನಲ್ಲೂ ಲಭ್ಯ:

ಐಫೋನ್ ಎಕ್ಸ್ಆರ್ ಗೆ ಆಫ್ ಲೈನ್ ನಲ್ಲೂ ಕೂಡ ಆಪಲ್ ಇದೇ ರೀತಿಯ ಆಫರ್ ನ್ನು ನೀಡುತ್ತಿದೆ. ಇನ್ನು ಆಪಲ್ ನ ಅಧಿಕೃತ ಸ್ಟೋರ್ ಗಳಲ್ಲೂ ಕೂಡ ಇದೇ ಬೆಲೆಯಲ್ಲಿ ಖರೀದಿಸಬಹುದಾಗಿದೆ. ಐಫೋನ್ ಎಕ್ಸ್ ಆರ್ ನ 53,910 ರುಪಾಯಿ ಬೆಲೆಯು ಉತ್ತಮ ಡೀಲ್ ಆಗಿದ್ದು ಐಫೋನ್ ಎಕ್ಸ್ ಎಸ್ ತ್ತು ಐಫೋನ್ ಎಕ್ಸ್ಎಸ್ ಮ್ಯಾಕ್ಸ್ ನ ಪ್ರೀಮಿಯಂ ಮಾಡೆಲ್ ನ ರೀತಿಯಲ್ಲೇ ಇದು ಲಭ್ಯವಾಗುತ್ತಿದೆ.

ಅತ್ಯುತ್ತಮ ಬ್ಯಾಟರಿ ಲೈಫ್:

ಅತ್ಯುತ್ತಮ ಬ್ಯಾಟರಿ ಲೈಫ್:

ಐಫೋನ್ ಎಕ್ಸ್ ಪ್ರಾರಂಭಿಕವಾಗಿ ಭಾರತದಲ್ಲಿ 76,900 ರುಪಾಯಿ ಬೆಲೆಗೆ ಬಿಡುಗಡೆಗೊಂಡಿತ್ತು.ಇತ್ತೀಚೆಗಿನ ಐಫೋನ್ ಎಕ್ಸ್ ಆರ್ ಬಗೆಗಿನ ರಿವ್ಯೂನಲ್ಲಿ ಇದು ಬಿಡುಗಡೆಗೊಂಡ ಆರು ತಿಂಗಳ ನಂತರವೂ ಕೂಡ ಗ್ರಾಹಕರಿಗೆ ಮೆಚ್ಚುಗೆ ಪಡೆಯುತ್ತಿರುವ ಫೋನ್ ಆಗಿದೆ ಎಂದು ತಿಳಿಸಿದ್ದೆವು ಮತ್ತು ಅದಕ್ಕೆ ಕಾರಣ ಐಫೋನ್ ಎಕ್ಸ್ ಆರ್ ಅತ್ಯುತ್ತಮ ಬ್ಯಾಟರಿ ಲೈಫ್ ನ್ನು ಹೊಂದಿದ್ದು ಇದುವರೆಗೆ ಬಿಡುಗಡೆಗೊಂಡಿರುವ ಎಲ್ಲಾ ಐಫೋನ್ ಗಳಿಗಿಂತ ಉತ್ತಮ ಬ್ಯಾಟರಿ ಲೈಫ್ ನ್ನು ಈ ಫೋನ್ ನೀಡುತ್ತಿದೆ.

ವೈಶಿಷ್ಟ್ಯತೆಗಳು:

ವೈಶಿಷ್ಟ್ಯತೆಗಳು:

ಐಫೋನ್ ಎಕ್ಸ್ ಆರ್ ಸ್ಪೋರ್ಟ್ ಸರಣಿ 7000 ಅಲ್ಯೂಮಿನಿಯಂ ಫ್ರೇಮ್ ಜೊತೆಗೆ ಗ್ಲಾಸ್ ನ್ನು ಹಿಂಭಾಗ ಮತ್ತು ಮುಂಭಾಗದಲ್ಲಿ ಹೊಂದಿದೆ.ಐಫೋನ್ ಎಕ್ಸ್ಎಸ್ ಮತ್ತು ಎಕ್ಸ್ಎಸ್ ಮ್ಯಾಕ್ಸ್ ನ AMOLED ಪೆನಲ್ ನಂತೆಯೇ ಐಫೋನ್ ಎಕ್ಸ್ ಆರ್ 6.1-ಇಂಚಿನ HD (1792x828) LCD ಯನ್ನು ಹೊಂದಿದೆ.

ಕ್ಯಾಮರಾ ವೈಶಿಷ್ಟ್ಯತೆಗಳು:

ಕ್ಯಾಮರಾ ವೈಶಿಷ್ಟ್ಯತೆಗಳು:

ಇದು ಬ್ಲೇಝಿಂಗ್ ಫಾಸ್ಟ್ A12 ಬಯೋನಿಕ್ ಚಿಪ್ ಸೆಟ್ ನ್ನು ಹೊಂದಿದೆ.ಮೃದುವಾದ iOS 12 ಸಾಫ್ಟ್ ವೇರ್ ನ್ನು ಒಳಗೊಂಡಿದೆ. 12- ಮೆಗಾಪಿಕ್ಸಲ್ f/1.8 ಸೆನ್ಸರ್ ಕ್ಯಾಮರಾವಿದ್ದು ನ್ಯಾಚುರಲ್ ಕ್ಯಾಪ್ಚರ್ ಮತ್ತು ಹಗಲಿನ ಬೆಳಕಿನಲ್ಲಿ ಅಧ್ಬುತ ಶಾಟ್ಸ್ ಗಳನ್ನು ಶೂಟ್ ಮಾಡುವುದಕ್ಕೆ ನೆರವು ನೀಡುತ್ತದೆ. ಆದರೆ ಐಫೋನ್ ಎಕ್ಸ್ ಆರ್ ಹೊಸ ಫ್ಲ್ಯಾಗ್ ಶಿಪ್ ಸ್ಮಾರ್ಟ್ ಫೋನ್ ಗಳಿಗೆ ಸ್ಪರ್ಧೆಯೊಡ್ಡಲು ಸಾಧ್ಯವಾಗುತ್ತಿಲ್ಲ ಯಾಕೆಂದರೆ ಕಡಿಮೆ ಬೆಳಕಿನ ಫೋಟೋಗ್ರಫಿಗೆ ಅಂದರೆ ನೈಟ್ ಮೋಡ್ಸ್ ಗೆ ಇದು ಹೆಚ್ಚಿನ ಸಹಕಾರವನ್ನು ನೀಡುತ್ತಿಲ್ಲ.

ಖರೀದಿಸುವುದು ಬಿಡುವುದು ನಿಮ್ಮಿಷ್ಟ:

ಖರೀದಿಸುವುದು ಬಿಡುವುದು ನಿಮ್ಮಿಷ್ಟ:

ಇಷ್ಟೆಲ್ಲ ಹೇಳಿದ ಮೇಲೆ ನಿಮಗೇ ಅರ್ಥವಾಗಿರಬೇಕಲ್ಲವೆ. ಅಧ್ಬುತ ಫೋನ್ ಕಡಿಮೆ ಬೆಲೆಗೆ ಲಭ್ಯವಾಗುತ್ತಿರುವುದೇನೋ ನಿಜ. ಆದರೆ ಖರೀದಿಸಬೇಕೇ ಅಥವಾ ಬೇಡವೇ ಎಂಬ ನಿರ್ಧಾರ ನಿಮ್ಮದು!

Best Mobiles in India

English summary
You can buy iPhone XR at Rs. 53,990 from Amazon India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+