ಭಾರತದ ಮೊದಲ ಬಿಟ್‌ಕಾಯಿನ್ ಎಟಿಎಂ ಬೆಂಗಳೂರಿನಲ್ಲಿ ಆರಂಭ..!
ಫೆಬ್ರವರಿಯಲ್ಲಿ ಹಣಕಾಸು ಸಚಿವಾಲಯವು ಬ್ಯಾಂಕ್ ಮತ್ತು ಸಾಮಾನ್ಯ ಹಣಕಾಸು ಸಂಸ್ಥೆಗಳು ಬಿಟ್ ಕಾಯಿನ್ ನೆಟ್ ವರ್ಕ್ ನ ಭಾಗವಾಗುವುದನ್ನು ಬ್ಯಾನ್ ಮಾಡಿದ ನಂತರ, ವಿದೇಶಿ ಅಕೌಂಟ್ ಇಲ್ಲದ ಅಥವಾ ನೆಂಟರು, ಸ್ನೇಹಿತರು ವಿದೇಶದಲ್ಲಿರುವವರ ಪರವಾಗಿ ವ್ಯವಹಾರ ಮಾಡುವುದನ್ನು ಹೊರತು ಪಡಿಸಿ ಇತರೆ ಯಾವುದೇ ಸಾಮಾನ್ಯ ಭಾರತೀಯರು ಬಿಟ್ ಕಾಯಿನ್ ಗಳನ್ನು ಖರೀದಿಸುವುದಕ್ಕೆ ಮತ್ತು ಮಾರುವುದಕ್ಕೆ ಅವಕಾಶವಿಲ್ಲ.

ಇದೀಗ ಬಳಕೆದಾರರಿಗೆ ಸಹಾಯ ಮಾಡುವ ಉದ್ದೇಶದಿಂದಾಗಿ ಕ್ರಿಪ್ಟೋಕರೆನ್ಸಿ ಎಕ್ಸ್ ಚೇಂಜ್ ಯುನೋಕಾಯಿನ್ ಹೊಸದಾಗಿ ಎಟಿಎಂ ವೊಂದನ್ನು ಬಿಡುಗಡೆಗೊಳಿಸಿದೆ. ಹೌದು ಕಿಯೋಸ್ಕ್ ಎಂದು ಕರೆಯಲ್ಪಡುವ ಕಂಪನಿಯು ಭಾರತೀಯರಿಗೆ ಬಿಟ್ ಕಾಯಿನ್ ಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಅವಕಾಶ ಮಾಡಿಕೊಡುತ್ತಿದೆ.ಮೊದಲ ಬಾರಿಗೆ ಬೆಂಗಳೂರಿನ ಮಾಲ್ ವೊಂದರಲ್ಲಿ ಇದನ್ನು ಇನ್ಸ್ಟಾಲ್ ಮಾಡಲಾಗಿದೆ.

ಎನ್‌ಸಿಆರ್‌ನಿಂದ ಎಟಿಎಂ ತಯಾರಿಕೆ
ಎಟಿಎಂ ನ್ನು ಎಟಿಎಂ ತಯಾರಕರಾಗಿರುವ ಎನ್ ಸಿಆರ್ ಅವರು ತಯಾರಿಸಿದ್ದು ಎಲ್ಲಾ ಬ್ಯಾಂಕ್ ಎಟಿಎಂಗಳಂತೆಯೇ ಕಾರ್ಯ ನಿರ್ವಹಿಸುತ್ತದೆ ಮತ್ತು ಕೆಲವು ಸಣ್ಣಪುಟ್ಟ ಬದಲಾವಣೆಯನ್ನು ಈ ಹೊಸ ಎಟಿಎಂನಲ್ಲಿ ಕಾಣಬಹುದು ಎಂದು ಹೇಳಿದ್ದಾರೆ.ಒಂದು ಪ್ರಮುಖ ಬದಲಾವಣೆ ಎಂದರೆ ಡೆಬಿಟ್/ ಕ್ರೆಡಿಟ್ ಕಾರ್ಡ್ ಸ್ಲಾಟ್ ನ್ನು ಡಿಸೇಬಲ್ ಮಾಡಲಾಗಿರುತ್ತದೆ. ಯಾಕೆಂದರೆ ಬ್ಯಾಂಕ್ ಗಳು ಕ್ರಿಪ್ಟೋಕರೆನ್ಸಿ ಇಕೋ ಸಿಸ್ಟಮ್ ನ್ನು ಬ್ಯಾನ್ ಮಾಡಿರುವ ಕಾರಣದಿಂದಾಗಿ ಇದನ್ನು ಮಾಡಲಾಗಿರುತ್ತದೆ.

1000 ದಿಂದ 10000 ರೂ.ವರೆಗೆ ಜಮೆ ಅಥವಾ ಡ್ರಾ
ಯುನೋಕಾಯಿನ್ ನ ಗ್ರಾಹಕರು ಮತ್ತು ಯುನೋಡಕ್ಸ್ ನ ಯುನಿಟ್ ನವರು 1000 ರುಪಾಯಿಯಿಂದ 10,000 ರುಪಾಯಿವರೆಗೆ ಪ್ರತಿ ಟ್ರಾನ್ಸ್ಯಾಕ್ಷನ್ ನಲ್ಲಿ ಡೆಪಾಸಿಟ್ ಅಥವಾ ವಿತ್ ಡ್ರಾ ಮಾಡಬಹುದು.ಆದರೆ 500 ರುಪಾಯಿ ಡಿನಾಮಿನೇಷನ್ ಇರಲೇಬೇಕು.ಗ್ರಾಹಕರು ತಮ್ಮ ಖಾತೆಯಲ್ಲಿರುವ ಹಣದಲ್ಲಿ ಇತರೆ ಕ್ರಿಪ್ಟೋಕರೆನ್ಸಿಗಳನ್ನು ಎಟಿಎಂ ಮುಖಾಂತರ ಖರೀದಿಸಲು ಅವಕಾಶವಿರುತ್ತದೆ. ಯುನೋಕಾಯಿನ್ ಎಥೆರಿಯಂ ಕ್ರಿಪ್ಟೋಕರೆನ್ಸಿಯನ್ನು ಮಾತ್ರವೇ ಬೆಂಬಲಿಸುತ್ತದೆ ಆದರೆ ಯುನೋಡಾಕ್ಸ್ 30 ಇತರೆ ಕ್ರಿಪ್ಟೋಕರೆನ್ಸಿಯನ್ನು ಬೆಂಬಲಿಸುತ್ತದೆ ಅದರಲ್ಲಿ ರಿಪ್ಪಲ್ ಮತ್ತು ಲೈಟ್ ಕಾಯಿನ್ ಗಳೂ ಕೂಡ ಸೇರಿವೆ.

13 ಲಕ್ಷ ಗ್ರಾಹಕರು
"ನಮ್ಮ ಬಳಿ 13 ಲಕ್ಷ ಗ್ರಾಹಕರಿದ್ದಾರೆ ಮತ್ತು ಬ್ಯಾನ್ ನ ಸುದ್ದಿ ನಮ್ಮ ಪ್ರತಿ ಗ್ರಾಹಕರಿಗೂ ನೋವು ತರಿಸುತ್ತದೆ ಎಂದು ನಮಗೆ ತಿಳಿದಿದೆ ಎಂದು ಅಭಿಪ್ರಾಯ ಪಡುತ್ತಾರೆ ಯುನೋಕಾಯಿನ್ ನ ಸಿಇಓ ಮತ್ತು ಸ್ಥಾಪಕರಾಗಿರುವ ಸಾಥ್ವಿಕ್ ವಿಶ್ವನಾಥ್. ಬ್ಯಾನ್ ಗೂ ಮುನ್ನ ಭಾರತೀಯರು ಬಿಟ್ ಕಾಯಿನ್ ಗಳನ್ನು ವಿಭಿನ್ನ ಕಾರಣಗಳಿಗಾಗಿ ಬಳಸುತ್ತಿದ್ದರು. Nafa.in ನಲ್ಲಿ ಗಿಫ್ಟ್ ಕಾರ್ಡ್ ಗಳನ್ನು ಖರೀದಿಸಲು, ಬುಕ್ಸ್ ಗಳನ್ನು ಖರೀದಿಸಲು, ಮ್ಯೂಸಿಕ್ ಸಿಡಿಗಳನ್ನು ಮತ್ತು ಪದ್ಮಾ ಬುಕ್ ಹೌಸ್ ನಲ್ಲಿ ಗೇಮ್ಸ್ ಗಳನ್ನು ಖರೀದಿಸಿಸಲು ಜೊತೆಗೆ ಬಸ್ ಟಿಕೆಟ್ ಗಳ ಖರೀದಿಗಾಗಿಯೂ ಬಳಸುತ್ತಿದ್ದರು.

ವಿದೇಶದಲ್ಲಿ ಬಿಟ್‌ಕಾಯಿನ್‌ಗೆ ಮಾನ್ಯತೆ
ಇಂದಿನ ದಿನಗಳಲ್ಲಿ ಬಿಟ್ ಕಾಯಿನ್ ಗಳನ್ನು ಹೆಚ್ಚಾಗಿ ವಿದೇಶಿದಲ್ಲಿರುವವರು ಬಳಸುತ್ತಾರೆ. ಅದರಲ್ಲೂ ಪ್ರಮುಖವಾಗಿ ಜಪಾನ್ ನಂತಹ ದೇಶದಲ್ಲಿರುವವರು ಆಯ್ಕೆ ಮಾಡಿಕೊಳ್ಳುತ್ತಾರೆ ಯಾಕೆಂದರೆ ಜಪಾನ್ ನಲ್ಲಿ ಊಟ, ವಿಮಾನದ ಟಿಕೆಟ್, ಮತ್ತು ಚಲನಚಿತ್ರದ ಶೋಗಳಿಗೂ ಕೂಡ ಬಿಟ್ ಕಾಯಿನ್ ನ್ನು ಬಳಕೆ ಮಾಡಲು ಅವಕಾಶವಿದೆ. ಅಷ್ಟೇ ಅಲ್ಲ ಅವರು ವಿದೇಶಿ ವೆಬ್ ಸೈಟ್ ಗಳಲ್ಲಿ ಖರೀದಿಸಲು ಉದಾಹರಣೆಗೆ ಅಲಿ ಎಕ್ಸ್ಪ್ರೆಸ್.ಇನ್ ನಲ್ಲಿ ಖರೀದಿಸಲು ಕೂಡ ಬಳಸುತ್ತಾರೆ. ಇನ್ನು ಭಾರತದಲ್ಲಿ ಕೆಲವು ಟೆಕ್ ವೆಬ್ ಸೈಟ್ ಗಳು ಫ್ರೀಲ್ಯಾನ್ಸರ್ ಗಳಿಗೆ ಗೆಜೆಟ್ ರಿವ್ಯೂಗೆ ಪಾವತಿ ಮಾಡಲು ಕೂಡ ಬಳಕೆ ಮಾಡುತ್ತಾರೆ.

ಹೂಡಿಕೆಯಾಗಿ ಮಾತ್ರ ಯೋಚನೆ
ಇದೀಗ ಅಂತಹ ಎಲ್ಲಾ ಟ್ರಾನ್ಸ್ಯಾಕ್ಷನ್ ಗಳನ್ನು ಕ್ರಿಪ್ಟೋ ಎಕ್ಸ್ ಚೇಂಜ್ ಮೂಲಕ ಗಮನಿಸಲಾಗುತ್ತಿತ್ತು. ಆದರೆ, ಹೆಚ್ಚಿನವರು ತಮ್ಮ ಬಿಟ್ ಕಾಯಿನ್ ಗಳನ್ನು ಕೇವಲ ತಮ್ಮ ಹೂಡಿಕೆಯಾಗಿ ಮಾತ್ರ ಯೋಚಿಸುತ್ತಿದ್ದರು ಮತ್ತು ಅದರ ಬೆಲೆಯು ಅಧಿಕಗೊಂಡಾಗ ಎನ್ ಕ್ಯಾಷ್ ಮಾಡಿಕೊಳ್ಳುತ್ತಿದ್ದರು.ಫೆಬ್ರವರಿಯಲ್ಲಿ ಬ್ಯಾಂಕ್ ಬ್ಯಾನ್ ನಡೆದ ನಂತರ ವಿಶ್ವನಾಥ್ ಹೇಳುವ ಪ್ರಕಾರ ತಮ್ಮ ಪ್ಲಾಟ್ ಫಾರ್ಮ್ ನಲ್ಲಿ 18 ಶೇಕಡಾ ಬಳಕೆದಾರರ ಅಭಿವೃದ್ಧಿ ನಡೆಯುತ್ತಿದ್ದು 13 ಲಕ್ಷ ಬಳಕೆದಾರರು ಇದ್ದಾರೆ ಎಂದಿದ್ದಾರೆ.

ಸ್ವಂತ ರಿಸ್ಕ್ ಮೇಲೆ ಹೂಡಿಕೆ
ಆದರೆ ಹಣಕಾಸು ಸಚಿವರು ಸ್ಪಷ್ಟವಾಗಿ ಹೇಳಿದ್ದಾರೆ. ಭಾರತದಲ್ಲಿ ಕ್ರಿಪ್ಟೋಕರೆನ್ಸಿ ಕಾನೂನಾತ್ಮಕ ವ್ಯವಹಾರವಲ್ಲ. ಹಾಗಂತ ಅವರು ಇದನ್ನು ಕಾನೂನು ಬಾಹಿರ ವ್ಯವಹಾರ ಎಂದಿಲ್ಲ. ಇದರಲ್ಲಿ ಬಹಳ ದೊಡ್ಡ ವ್ಯತ್ಯಾಸವಿದೆ. ಇದರರ್ಥ ಇಷ್ಟೇ, ನಿಮ್ಮ ಸ್ವಂತ ರಿಸ್ಕ್ ನ ಮೇಲೆ ನೀವು ಹೂಡಿಕೆಯನ್ನು ಮಾಡಬೇಕು ಇದರಲ್ಲಿ ವ್ಯತ್ಯಯವಾದಲ್ಲೂ ನಾವು ಜವಾಬ್ದಾರರಲ್ಲ ಎಂಬುದು ಅವರ ಅರ್ಥ. 2018-19 ರ ಬಜೆಟ್ ಭಾಷಣದಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, " ಸರ್ಕಾರನು ಕ್ರಿಪ್ಟೋಕರೆನ್ಸಿಯನ್ನು ಕಾನೂನಾತ್ಮಕ ಟೆಂಡರ್ ಅಥವಾ ಕಾಯಿನ್ ಎಂದು ಪರಿಗಣಿಸುವುದಿಲ್ಲ ಮತ್ತು ಪಾವತಿಯ ಭಾಗವಾಗಿ ಮತ್ತು ಕ್ರಿಪ್ಟೋ ಅಸೆಟ್ ಗಳನ್ನು ಹಣಕಾಸು ಅವ್ಯವಹಾರದ ಆಕ್ಟಿವಿಟಿಗಳಿಗೆ ಬಳಸುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

2013 ಡಿಸೆಂಬರ್‌ನಲ್ಲಿ ಸ್ಥಾಪನೆ
ಯುನಿಕಾಯಿನ್ ನ್ನು 2013 ರ ಡಿಸೆಂಬರ್ ನಲ್ಲಿ ಸ್ಥಾಪಿಸಲಾಯಿತು ಮತ್ತು ಮುಂದಿನ ಕಿಯೋಸ್ಕ್ ನ್ನು ದೆಹಲಿ ಮತ್ತು ಮುಂಬೈ ನಲ್ಲಿ ಸೆಟ್ ಅಪ್ ಮಾಡಲಾಗುತ್ತದೆ. ಸಾಮಾನ್ಯ ಎಟಿಎಂಗಳಲ್ಲಿ ಜನರು ತಪ್ಪು ತಿಳಿದಿದ್ದರಿಂದಾಗಿ ಮತ್ತು ಅದರಲ್ಲೇ ಹಣವನ್ನು ವಿತ್ ಡ್ರಾ ಮಾಡಲು ಪ್ರಯತ್ನಿಸುತ್ತಿದ್ದ ಕಾರಣದಿಂದಾಗಿ ನಾವು ಕಿಯೋಸ್ಕ್ ನ್ನು ರೀಬ್ರ್ಯಾಂಡ್ ಮಾಡಿದ್ದೇವೆ ಎಂದು ವಿಶ್ವನಾಥ್ ಅವರು ತಿಳಿಸಿದ್ದಾರೆ.


Click it and Unblock the Notifications








