Home
ಸುದ್ದಿಜಾಲ

ಪ್ರತಿದಿನ ನಿಮ್ಮ ಕಾರಿನ ಬಣ್ಣ ಬದಲಾದರೆ ಹೇಗಿರುತ್ತದೆ?..ಆ ತಂತ್ರಜ್ಞಾನ ಬೆಂಗಳೂರಿನಲ್ಲಿ!!

ನಿಮ್ಮ ಕಾರು ಯಾವಾಗಲೂ ಬಣ್ಣ ಬದಲಿಸುವಂತಹ ಹೊಸ ತಂತ್ರಜ್ಞಾನವನ್ನು ಬೆಂಗಳೂರಿನ ಎಂಜಿನಿಯರ್‌ ಒಬ್ಬರು ಅಭಿವೃದ್ಧಿಪಡಿಸಿದ್ದಾರೆ.!!

By Bhaskar N J

ಒಂದೇ ಬಣ್ಣದ ಕಾರು ಬಳಕೆಯಿಂದ ನಿಮಗೆ ಬೇಜಾರಾಗಿದ್ದರೆ ಇನ್ನು ಆ ಚಿಂತೆ ಬಿಡಿ. ಏಕೆಂದರೆ, ಊಸರವಳ್ಳಿಯಂತೆ ಯಾವಾಗಲೂ ಬಣ್ಣ ಬದಲಿಸಬಹುದಾದ ಕಾರುಗಳನ್ನು ನೀವಿನ್ನು ನೋಡಬಹುದು.! ಏಕೆಂದರೆ ನಿಮ್ಮ ಕಾರು ಯಾವಾಗಲೂ ಬಣ್ಣ ಬದಲಿಸುವಂತಹ ಹೊಸ ತಂತ್ರಜ್ಞಾನವನ್ನು ಬೆಂಗಳೂರಿನ ಎಂಜಿನಿಯರ್‌ ಒಬ್ಬರು ಅಭಿವೃದ್ಧಿಪಡಿಸಿದ್ದಾರೆ.!!

ಅಮೆರಿಕದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್‌ ಆಗಿದ್ದ ಶ್ರೀನಿವಾಸನ್‌ ಡಿ.ಎಸ್‌ ಎಂಬುವವರು ಈ ತಂತ್ರಜ್ಞಾನವನ್ನು ಕಂಡುಹಿಡಿದಿದ್ದಾರೆ. ವರ್ಷಾನುಗಟ್ಟಲೇ ಒಂದೇ ಬಣ್ಣದ ಕಾರುಗಳನ್ನು ಬಳಸಿ ಬೇಜಾರಾಗಿರುವವರಿಗೆ ಖುಷಿ ಸಂಗತಿ ನೀಡಿರುವ ಅವರು ಈ ತಂತ್ರಜ್ಞಾನಕ್ಕಾಗಿ ಅವರು ಅಮೆರಿಕಾದಲ್ಲಿ ಪೇಟೆಂಟ್‌ ಸಹ ಪಡೆದಿದ್ದಾರೆ.!!

ಹಾಗಾದರೆ, ಶ್ರೀನಿವಾಸನ್‌ ಡಿ.ಎಸ್‌ ಅವರು ಕಂಡುಹಿಡಿದಿರುವ ಆ ತಂತ್ರಜ್ಞಾನ ಯಾವುದು? ಆ ತಂತ್ರಜ್ಞಾನವನ್ನು ಕಂಡುಹಿಡಿಯಲು ಅವರಿಗೆ ಪ್ರೇರಣೆ ಏನು? ಹೊಸದಾಗಿ ಕಂಡುಹಿಡಿದಿರುವ ತಂತ್ರಜ್ಞಾನ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಏನಿದು ತಂತ್ರಜ್ಞಾನ?

ಏನಿದು ತಂತ್ರಜ್ಞಾನ?

3ಡಿ ತಂತ್ರಜ್ಞಾನದ ನೆರವಿನಿಂದ ಕಾರುಗಳ ಅಳತೆಗೆ ಅನುಸಾರ ತೆಳ್ಳನೆಯ ಮತ್ತು ದೀರ್ಘಬಾಳಿಕೆ ಬರುವ ಗಟ್ಟಿಮುಟ್ಟಾದ ಪಾಲಿಮರ್‌ ತಯಾರಿಸಿ. ಕಾರಿನ ಬಾಹೊರಮೈ ಮುಚ್ಚುವಂತೆ ಹೊದಿಕೆ ಸಿದ್ಧಪಡಿಸಲಾಗುತ್ತದೆ.ನಂತರ ಪಾಲಿಮರ್ ಒಳಗೆ ಬಣ್ಣ ತುಂಬಲಾಗುತ್ತದೆ. ದ್ರಾವಣ ರೀತಿಯ ಬಣ್ಣ ಇಡೀ ಕಾರಿನ ಹೊರಮೈ ಆವರಿಸಿಕೊಂಡು ಹೊಸ ಬಣ್ಣದ ಕಾರಿನಂತೆ ಕಾಣಿಸುತ್ತದೆ.!!

ಅನುಭವವೇ ತಂತ್ರಜ್ಞಾನಕ್ಕೆ ಪ್ರೇರಣೆ!!

ಅನುಭವವೇ ತಂತ್ರಜ್ಞಾನಕ್ಕೆ ಪ್ರೇರಣೆ!!

ಶ್ರೀನಿವಾಸ್‌ ಅವರು ಮೂರು ಬಾರಿ ಸೆಕೆಂಡ್ ಹ್ಯಾಂಡ್ ಖರೀದಿಸಿದ್ದಾರೆ. ಇದರಿಂದ ಬೇಸತ್ತ ಅವರಿಗೆ ಆಗಲೇ ಕಾರುಗಳ ಬಣ್ಣ ಬದಲಿಸುವ ಹುಚ್ಚು ಶುರುವಾಯಿತು. ಕಾರುಗಳ ಬಣ್ಣವನ್ನು ಸುಲಭವಾಗಿ ಬದಲಾಯಿಸುವ ಕಲ್ಪನೆ ಹೊಳೆದದ್ದೇ ಇಂತಹ ತಂತ್ರಜ್ಞಾನ ಕಂಡುಹಿಡಿಯಲು ಮುಂದಾಗಿದ್ದಾರೆ.!!

ಜೆಡ್ 3 ಸ್ಟಾರ್ಟ್‌ ಅಪ್‌

ಜೆಡ್ 3 ಸ್ಟಾರ್ಟ್‌ ಅಪ್‌

ಅಮೆರಿಕಾದಲ್ಲಿ ಈ ತಂತ್ರಜ್ಞಾನಕ್ಕೆ ಪೇಟೆಂಟ್‌ ಪಡೆದಿರುವ ಅವರಿಗೆ ಮುಂದಿನ 20 ವರ್ಷ ಈ ಆವಿಷ್ಕಾರದ ಮೇಲೆ ಹಕ್ಕಿರುತ್ತದೆ.ಹಾಗಾಗಿಯೇ, ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದ ಶ್ರೀನಿವಾಸ್‌ ಇಂದು ಬೆಂಗಳೂರಿಗೆ ಬಂದು ಜೆಡ್ 3 ಎಂಬ ಆಟೊಮೊಬೈಲ್ ಸ್ಟಾರ್ಟ್‌ ಅಪ್‌ ಆರಂಭಿಸಿದ್ದಾರೆ.!!

1800 ಬಣ್ಣ ಬದಲಿಸಬಹುದು!!

1800 ಬಣ್ಣ ಬದಲಿಸಬಹುದು!!

ಕಾರಿನ ಮಾಲೀಕರ ಅಭಿರುಚಿಗೆ ತಕ್ಕಂತೆ ಅತ್ಯುತ್ತಮ ದರ್ಜಿಯ ಬಣ್ಣಗಳನ್ನು ತಮಗೆ ಇಷ್ಟದಂತೆ ಬದಲಿಸಿಕೊಳ್ಳಬಹುದು.!! ಒಟ್ಟು 1800 ರೀತಿಯ ಬಣ್ಣಗಳು ಲಭ್ಯವಿದ್ದು, ಅವುಗಳಲ್ಲಿ ಯಾವುದೇ ರೀತಿ ಬಣ್ಣದಲ್ಲಿ ನಿಮ್ಮ ಕಾರು ಮೂಡಿರುತ್ತದೆ.!

ಒಮ್ಮೆ ಮಾತ್ರ ಕಡಿಮೆ ಖರ್ಚು!!

ಒಮ್ಮೆ ಮಾತ್ರ ಕಡಿಮೆ ಖರ್ಚು!!

ಸಾಮಾನ್ಯವಾಗಿ ಒಮ್ಮೆ ಕಾರುಗಳ ಬಣ್ಣ ಬದಲಿಸಬೇಕೆಂದರೆ ಕನಿಷ್ಠ ₹50 ಸಾವಿರ ವೆಚ್ಚವಾಗುತ್ತದೆ. ಆದರೆ, ಶ್ರೀನಿವಾಸ್‌ ಅವರು ಕಂಡುಹಿಡಿದಿರುವ ಈ ತಂತ್ರಜ್ಞಾನಕ್ಕೆ ₹25,000 ರೂ.ವರೆಗೂ ಒಮ್ಮೆ ಮಾತ್ರ ಖರ್ಚಾಗುತ್ತದೆ.!! ನಂತರ ಬಣ್ಣ ಬದಲಾಯಿಸಿಕೊಳ್ಳಲು ಹೆಚ್ಚು ಹಣದ ಅವಶ್ಯಕತೆ ಇಲ್ಲ.!!

ಡೆಮೊ ಹಂತದಲ್ಲಿ ತಂತ್ರಜ್ಞಾನ!

ಡೆಮೊ ಹಂತದಲ್ಲಿ ತಂತ್ರಜ್ಞಾನ!

ಶ್ರೀನಿವಾಸ್‌ ಅವರು ಅಭಿವೃದ್ದಿಪಡಿಸಿರುವ ಈ ಯೋಜನೆ ಇನ್ನೂ ಡೆಮೊ ಹಂತದಲ್ಲಿಯೇ ಇದ್ದು, ಕೆಲವೇ ತಿಂಗಳಿನಲ್ಲಿ ತಂತ್ರಜ್ಞಾನವನ್ನು ಹೆಚ್ಚು ಪ್ರಚಲಿತಗೊಳಿಸಲು ಶ್ರೀನಿವಾಸ್‌ ಮುಂದಾಗಿದ್ದಾರೆ. ಹಾಗಾಗಿ, 2018ರ ಒಳಗಾಗಿ ಬಣ್ಣ ಬದಲಿಸುವ ಕಾರುಗಳನ್ನು ರೋಡಿನಲ್ಲಿ ಕಾಣಬಹುದಾಗಿದೆ.!!

Best Mobiles in India

English summary
If you want create a new look for your vehicle, then changing the car paint color can help you do just that. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+