ಆನ್‌ಲೈನಿನಲ್ಲಿ ನಿಮ್ಮ ಹಣ ಸುರಕ್ಷಿತವಾಗಿರಲು ಇಲ್ಲಿವೆ 5 ಬೆಸ್ಟ್ ಟಿಪ್ಸ್!!

|

ಭಾರತದಲ್ಲಿ ಆನ್‌ಲೈನ್ ಬ್ಯಾಂಕಿಂಗ್ ವ್ಯವಹಾರ ಸಾವಿರಾರು ಪಟ್ಟು ಹೆಚ್ಚಾಗಿದೆ. ಇದರ ಜೊತೆಯಲ್ಲಿಯೇ ಆನ್‌ಲೈನ್‌ ಮೋಸವೂ ಸಹ ಹೆಚ್ಚಾಗಿದೆ. ಸೈಬರ್ ಕ್ರಿಮಿನಲ್‌ಗಳು ಜನರನ್ನು ಬಹಳ ಸುಲಭವಾಗಿ ಮೋಸಗೊಳಿಸುತ್ತಿದ್ದಾರೆ. ಹಾಗಂತ ಎಲ್ಲರೂ ಆನ್‌ಲೈನ್‌ ಬ್ಯಾಂಕಿಂಗ್ ವ್ಯವಹಾರ ಬಿಡಲು ಸಾಧ್ಯವೇ? ಖಂಡಿತ ಸಾಧ್ಯವಿಲ್ಲಾ. ಏಕೆಂದರೆ, ಕಾಲ ಬದಲಾದಂತೆ ನಾವು ಕೂಡ ಬದಲಾಗಬೇಕಿದ್ದು, ತಂತ್ರಜ್ಞಾನದ ಹಿಂದೆ ಎಲ್ಲರೂ ಓಡಬೇಕಿದೆ.

ಆನ್‌ಲೈನಿನಲ್ಲಿ ನಿಮ್ಮ ಹಣ ಸುರಕ್ಷಿತವಾಗಿರಲು ಇಲ್ಲಿವೆ 5 ಬೆಸ್ಟ್ ಟಿಪ್ಸ್!!

ಹಾಗಾಗಿ, ಇಂದಿನ ಲೇಖನದಲ್ಲಿ ಆನ್‌ಲೈನ್‌ ಬ್ಯಾಂಕಿಂಗ್ ವ್ಯವಹಾರ ನಡೆಸಲು ನಾವು ತೆಗೆದುಕೊಳ್ಳಬೇಕಾದ ಮನ್ನೆಚ್ಚರಿಕೆ ಕ್ರಮಗಳನ್ನು ಯಾವುವು ಎಂಬುದನ್ನು ನಾವು ತಿಳಿದುಕೊಳ್ಳೋಣ. ಕೆಲವು ಮುನ್ನೆಚ್ಚರಿಕೆಗಳಿಂದ ಆನ್‌ಲೈನ್ ಬ್ಯಾಂಕಿಂಗ್ ವ್ಯವಹಾರದಲ್ಲಿ ನೀವು ನಿಮ್ಮ ಹಣವನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳಬಹುದಾಗಿದ್ದು, ಹಾಗಾದರೆ ಆ ಮುನ್ನೆಚ್ಚರಿಕೆ ಕ್ರಮಗಳು ಯಾವುವು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ನಕಲಿ ಇ-ಮೇಲ್ಗಳು (ಫಿಷಿಂಗ್)

ನಕಲಿ ಇ-ಮೇಲ್ಗಳು (ಫಿಷಿಂಗ್)

ಯಾವುದೇ ಕಾರಣಕ್ಕೂ ಬ್ಯಾಂಕಿನವರು ಗ್ರಾಹಕರೊಂದಿಗೆ ಇ-ಮೇಲ್ ವ್ಯವಹಾರ ನಡೆಸುವುದಿಲ್ಲ. ಹಾಗಾಗಿ, ಬ್ಯಾಂಗ್ ವಿವರಗಳಿಗೆ ಸಂಬಂಧಿಸಿದಂತೆ ಯಾವುದೇ ಇ-ಮೇಲ್ ಬಂದರೂ ಪ್ರತಿಕ್ರಿಯಿಸಬೇಡಿ. ಇದು ಸೈಬರ್ ಕ್ರಿಮಿನಲ್‌ಗಳು ಕೆಲಸವಾಗಿರುತ್ತದೆ. ಇಂತಹ ಇ ಮೇಲ್‌ಗಳಿಗೆ ನೀವು ಉತ್ತರಿಸಿದರೆ ನಿಮ್ಮ ಖಾತೆಯ ಮಾಹಿತಿ ಮತ್ತು ಹಣ ಸುಲಭವಾಗಿ ವಂಚಕರ ಪಾಲಾಗುತ್ತದೆ.

ಪಾಸ್‌ವರ್ಡ್ ಬಗ್ಗೆ ಜಾಗೃತ

ಪಾಸ್‌ವರ್ಡ್ ಬಗ್ಗೆ ಜಾಗೃತ

ನಿಮ್ಮ ಪಾಸ್‌ವರ್ಡ್ ಬಹಳ ಶಕ್ತಿಶಾಲಿಯಾಗಿರುವಂತೆ ನೋಡಿಕೊಳ್ಳಿ. ಬ್ಯಾಂಕಿಂಗ್ ವ್ಯವಹಾರಕ್ಕಾಗಿ ಯಾವುದೇ ಕಾರಣಕ್ಕೂ ಹೆಚ್ಚು ನೆನಪಿರುವ ಮತ್ತು ಹೆಚ್ಚು ಬಳಕೆ ಮಾಡುತ್ತಿರುವ ಯೂಸರ್ ನೇಮ್/ಐಡಿ ಮತ್ತು ಪಾಸ್‌ವರ್ಡ್‌ ಅನ್ನೇ ಕೊಡಬಾರದು. ನಮ್ಮ ಖಾತೆಯ ಮಾಹಿತಿ ಮತ್ತು ಹಣದ ರಕ್ಷಣೆಗೆ ಆನ್‌ಲೈನ್ ಬ್ಯಾಂಕಿಂಗ್ ಐಡಿ ಮತ್ತು ಪಾಸ್‌ವರ್ಡ್‌ ಹೆಚ್ಚು ಖಾಸಗಿಯಾಗಿರಬೇಕು.!

 ಅಧಿಕೃತ ತಾಣವೇ ಪರೀಕ್ಷಿಸಿ

ಅಧಿಕೃತ ತಾಣವೇ ಪರೀಕ್ಷಿಸಿ

ಆನ್‌ಲೈನ್ ಬ್ಯಾಂಕಿಂಗ್ ಆರಂಭಿಸುವುದಕ್ಕೂ ಮುನ್ನ ನೀವು ಬಳಸುತ್ತಿರುವ ತಾಣ ಅಧಿಕೃತವಾದುದೆ ಎಂದು ಖಾತ್ರಿಪಡಿಸಿಕೊಳ್ಳಬೇಕು. ಕೆಲವು ನಕಲಿ ಆನ್‌ಲೈನ್ ತಾಣಗಳು ನಮ್ಮ ಮಾಹಿತಿ ಪಡೆಯಲು ಲಾಗಿನ್ ಆಗಲು ಪ್ರೇರೇಪಿಸುತ್ತವೆ ಅವುಗಳಿಂದ ದೂರವಿರಿ. ಇಲ್ಲವಾದರೆ, ಕೆಲವೇ ಕ್ಷಣಗಳಲ್ಲಿ ನಿಮ್ಮ ಬ್ಯಾಂಕ್ ಅಕೌಂಟ್‌ನಲ್ಲಿರುವ ಹಣ ಮಂಗಮಾಯವಾಗುತ್ತದೆ.

 ಸ್ಮಾರ್ಟ್‌ಫೋನ್ ರಕ್ಷಣೆ

ಸ್ಮಾರ್ಟ್‌ಫೋನ್ ರಕ್ಷಣೆ

ಕಂಪ್ಯೂಟರ್ ಮತ್ತು ಸ್ಮಾರ್ಟ್‌ಫೋನ್‌ ಅನ್ನು ವೈರಸ್‌ಗಳಿಂದ ರಕ್ಷಣೆ ಮಾಡುವುದು ಅತ್ಯಗತ್ಯ. ಹ್ಯಾಕರ್‌ಗಳಿಂದ ಹುಟ್ಟಿರುವ ಇಂತಹ ವೈರಸ್ ತಂತ್ರಾಂಶಗಳು ಬ್ಯಾಂಕ್ ಖಾತೆಯ ಮಾಹಿತಿ ಪಡೆಯುವ ಸಾಧ್ಯತೆ ಇರುತ್ತದೆ. ಹಾಗಾಗಿ, ಆಂಟಿ ವೈರಸ್ ಉಪಯೋಗಿಸಬೇಕು ಜೊತೆಗೆ ಬ್ಯಾಂಕಿಂಗ್ ಹಿಸ್ಟರಿಯನ್ನು ಡಿಲೀಟ್ ಮಾಡಬೇಕು.

ಒನ್‌ಟೈಮ್ ಪಾಸ್ವರ್ಡ್ .

ಒನ್‌ಟೈಮ್ ಪಾಸ್ವರ್ಡ್ .

ಮೊಬೈಲ್ ನಂಬರನ್ನು ಬ್ಯಾಂಕಿನಲ್ಲಿ ನಮೂದಿಸಿದರೆ ನೋಂದಾಯಿತ ಫೋನ್ ನಂಬರಿಗೆ ಬರುವ ಕೋಡ್ ನಿಮ್ಮ ವ್ಯವಹಾರವನ್ನು ಸುರಕ್ಷಿತವಾಗಿಡುತ್ತದೆ. ಈ ಒನ್‌ಟೈಮ್ ಪಾಸ್ವರ್ಡ್ ಬಳಕೆಯಿಂದ ನಿಮ್ಮ ಹಣವನ್ನು ಅಷ್ಟು ಸುಲಭವಾಗಿ ಕದಿಯಲಾಗದು. ಈ ಎಲ್ಲಾ ಅಂಶಗಳು ಸುರಕ್ಷತಾ ಆನ್‌ಲೈನ್ ವ್ಯವಹಾರಕ್ಕೆ ಅತ್ಯಗತ್ಯವಾಗಿದೆ. ಹಾಗಾಗಿ, ಇದನ್ನು ಶೇರ್ ಮಾಡಿ ಇತರರಿಗೂ ಸಹಾಯ ಮಾಡಿ.

Best Mobiles in India

English summary
Follow these tips and you can minimise the risks to your finances and bank safely online. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X