ಜಿ-ಮೇಲ್‌ ಬಳಕೆದಾರರಿಗೆ ಹೊಸ ಫೀಚರ್ಸ್ ಪರಿಚಯಿಸಿದ ಗೂಗಲ್‌!

|

ನೀವು ಯಾರಿಗಾದರೂ ಪ್ರಮುಖ ಮಾಹಿತಿಯನ್ನ ಕಳುಹಿಸಬೇಕೆಂದು ಕೊಂಡರೆ ಥಟ್ಟನೇ ನೆನಪಾಗೋದು ಇಮೇಲ್‌. ಇಮೇಲ್‌ ಕಳುಹಿಸಬೇಕು ಅಂದ್ರೆ ಜಿ-ಮೇಲ್‌ ಒಪನ್‌ ಮಾಡಿದರೆ ಸಾಕು. ಗೂಗಲ್‌ನ ಜಿ-ಮೇಲ್‌ ಸೇವೆ ಇಂದು ಪ್ರತಿಯೊಬ್ಬರು ಕೂಡ ಬಳಸುತ್ತಿದ್ದಾರೆ. ಅಷ್ಟೇ ಅಲ್ಲ ಗ್ರಾಹಕ ಸ್ನೇಹಿಯಾಗಿರೋ ಜಿ-ಮೇಲ್‌ ಕೂಡ ತನ್ನ ಬಳಕೆದಾರರಿಗೆ ಹೊಸ ಹೊಸ ಪೀಚರ್ಸಗಳನ್ನ ಪರಿಚಯಿಸುತ್ತಲೇ ಬಂದಿದ್ದು. ಸದ್ಯ ಗ್ರಾಹಕರ ಅನುಕೂಲಕ್ಕಾಗಿ ಮತ್ತೊಂದು ಫೀಚರ್ಸ್‌ ಅನ್ನ ಜಿ-ಮೇಲ್‌ ಪರಿಚಯಿಸಿದೆ.

ಇಮೇಲ್‌

ಹೌದು, ಮಾಹಿತಿಯನ್ನ ಇಮೇಲ್‌ ಮಾಡಲು ಬಳಸುವ ಗೂಗಲ್‌ನ ಜಿ-ಮೇಲ್‌ ಹೊಸ ಫಿಚರ್ಸ್‌ ಅನ್ನ ಪರಿಚಯಿಸಿದೆ. ಬಳಕೆದಾರನ ಜಿ-ಮೇಲ್‌ ಅಕೌಂಟ್‌ನಿಂದ ಇಮೇಲ್‌ಗಳನ್ನ ಮತ್ತೊಂದು ಇ-ಮೇಲ್‌ ಮಾಡಲು ಆಗುತ್ತಿದ್ದ ವಿಳಂಬವನ್ನ ಕಡಿಮೆ ಮಾಡುವ ಅವಕಾಶವನ್ನ ಕಲ್ಪಿಸಿದೆ. ಈ ಹಿಂದೆ ಜಿಮೇಲ್‌ಗೆ ಬಂದಿರೋ ಇ-ಮೇಲ್‌ ಫೈಲ್‌ಗಳನ್ನ ಡೌನ್‌ಲೋಡ್‌ ಮಾಡಿದ ನಂತರ ಇನ್ನೊಂದು ಇಮೇಲ್‌ಗೆ ಕಳುಹಿಸಲು ಅವಕಾಶ ಸಿಗುತ್ತಿತ್ತು. ಇದರಿಂದ ಡೌನ್‌ಲೋಡ್‌ ಮಾಡಬೇಕಾದ ಅನಿವಾರ್ಯತೆ ಮತ್ತು ಸಮಯ ಎರಡೂ ವ್ಯರ್ಥವಾಗ್ತಿತ್ತು.

ಜಿ-ಮೇಲ್‌

ಹಿಂದೆ ಜಿ-ಮೇಲ್‌ನಲ್ಲಿ ಯಾರಿಗಾದರೂ ನೀವು ತುರ್ತಾಗಿ ಎರಡೂ ಮೂರು ಇಮೇಲ್‌ಗಳನ್ನ ಫಾರ್ವಡ್‌ ಮಾಡಲು ಒಂದೊಂದೆ ಇ-ಮೇಲ್‌ ಆಯ್ಕಮಾಡಬೇಕಾಗಿತ್ತು. ಅಲ್ಲದೆ ಪ್ರತಿಯೊಂದು ಇ-ಮೇಲ್‌ ಅನ್ನು ಓಪನ್‌ ಮಾಡಿ ಅದರಲ್ಲಿನ ಫೈಲ್‌ ಅನ್ನ ಡೌನ್‌ಲೋಡ್‌ ಮಾಡಿ ನಂತರ ಫಾರ್ವಡ್‌ ಮಾಡಬೇಕಾಗಿತ್ತು ಆದ್ರೆ ಈ ಹೊಸ ಫೀಚರ್ಸ್ ನ ಪ್ರಕಾರ ಇನ್ಮುಂದೆ ಬಳಕೆದಾರನ ಜಿ-ಮೇಲ್‌ ಅಕೌಂಟ್‌ಗೆ ಬಂದ ಇಮೇಲ್‌ ಅನ್ನ ಡೌನ್‌ಲೋಡ್‌ ಮಾಡದೇ ನೇರವಾಗಿ ಇಮೇಲ್‌ ಮಾಡಬಹುದಾಗಿದೆ.

ಫಾರ್ವಡ್‌

ಜಿ-ಮೇಲ್‌ನಿಂದ ನೀವು ಕಳುಹಿಸಬೇಕಾದ ಇ-ಮೇಲ್‌ಗಳನ್ನ ಆಯ್ಕೆಮಾಡಿ ಜಿ-ಮೇಲ್‌ ಕಂಪೋಸ್‌ ವಿಂಡೋ ಮೇಲೆ ಡ್ರ್ಯಾಗ್‌ ಮಾಡಿದ ನಂತರ ಫಾರ್ವಡ್‌ ಆಯ್ಕೆ ಮಾಡಿದ್ರೆ ನೇರವಾಗಿ ಇಮೇಲ್‌ ರವಾನೆಯಾಗಲಿದೆ. ಅಲ್ಲದೆ ನೀವು ಕಳುಹಿಸಿದ ಪ್ರತಿ ಇ-ಮೇಲ್‌ ಫೈಲ್‌ ಕೂಡ ಸಂದೇಶ ಸ್ವೀಕರಿಸಿದ ಜಿ-ಮೇಲ್‌ನಲ್ಲಿ ಓಪನ್‌ ಆಗಲಿದೆ. ಇದರಿಂದ ನೀವು ತುರ್ತಾಗಿ ಮುಟ್ಟಿಸಬೇಕಾದ ಫೈಲ್‌ ಅಥವಾ ಸಂದೇಶಗಳನ್ನ ನೇರವಾಗಿ ತಲುಪಿಸಬಹುದಾಗಿದೆ.

 ಆಯ್ಕೆ

ಇನ್ನು ಪ್ರತ್ಯೇಕ ಇ-ಮೇಲ್‌ಗಳನ್ನು ಫಾರ್ವರ್ಡ್ ಮಾಡುವುದಕ್ಕಿಂತ ಇಮೇಲ್‌ಗಳನ್ನು ಒಂದೇ ಬಾರಿಗೆ ಆಯ್ಕೆ ಮಾಡಿ ಲಗತ್ತಿಸುವುದು ಸೂಕ್ತವಾಗಿದೆ. ಅಲ್ಲದೆ ಒಂದೇ ವಿಷಯಕ್ಕೆ ಸಂಬಂಧಿಸಿದ ಬಹು ಸಂದೇಶಗಳನ್ನು ಫಾರ್ವರ್ಡ್ ಮಾಡಲು ನೀವು ಬಯಸಿದರೆ ಅದರ ಸಂಪೂರ್ಣ ಸಂಭಾಷಣೆ ವೀಕ್ಷಣೆಯನ್ನು ಸಂರಕ್ಷಿಸಲಾಗುತ್ತದೆ. ಇದರಿಂದಾಗಿ ನೀವು ಅದರ ಪ್ರತಿಯೊಂದು ಭಾಗಗಳನ್ನು ಒಂದೊಂದಾಗಿ ಫಾರ್ವರ್ಡ್ ಮಾಡುತ್ತಿರುವುದಕ್ಕಿಂತ ಮೂರನೇ ವ್ಯಕ್ತಿಯಿಂದ ಅನುಸರಿಸುವುದು ಸುಲಭವಾಗುತ್ತದೆ.

ಸಾರಾಂಶ

ಅಲ್ಲದೆ ಇ-ಮೇಲ್‌ಗಳನ್ನು ಲಗತ್ತುಗಳಾಗಿ ಕಳುಹಿಸುವುದರಿಂದ ನಿಮ್ಮ ಇ-ಮೇಲ್‌ ಸ್ವೀಕರಿಸುವವರಿಗೆ ಸಾರಾಂಶ ಸಂದೇಶವನ್ನು ಬರೆಯಲು ಸಹ ಅವಕಾಸ ಸಿಗುತ್ತದೆ. ಅವರು ಓದಲು ಕೂಡ ಅನುವು ಮಾಡಿಕೊಡುತ್ತದೆ. ಜೊತೆಗೆ ಲಗತ್ತಿಸಲಾದ ಪ್ರತಿಯೊಂದು ಇ-ಮೇಲ್ ನಲ್ಲಿನ ಫೈಲ್‌ ಅನ್ನ ಆಯ್ಕೆಯ ಮೇಲ್ ಕ್ಲೈಂಟ್‌ನಲ್ಲಿ ನೇರವಾಗಿ ತೆರೆಯಬಹುದಾಗಿರುತ್ತದೆ. ಈ ಫಿಚರ್ಸ್‌ನಿಂದಾಗಿ ನೀವು ನಿಮಗೆ ಬೇಕಾದಷ್ಟು ಇ-ಮೇಲ್‌ಗಳನ್ನು ಒಮ್ಮೆಲೆ ಕಳುಹಿಸಬಹುದಾಗಿದೆ.

ಕ್ಲಿಕ್

ಜೊತೆಗೆ ನೀವು ಕಳುಹಿಸಿದ ಇ-ಮೇಲ್‌ ಮೇಲೆ ಕ್ಲಿಕ್ ಮಾಡಿದಾಗ, ಅದು ಹೊಸ ವಿಂಡೋದಲ್ಲಿ ತೆರೆಯಲು ಅವಕಾಶ ನೀಡಲಾಗಿದೆ. ಗೂಗಲ್‌ ಜಿ-ಮೇಲ್‌ನ ಹೊಸ ಫೀಚರ್ಸ್‌ ಇಂದಿನಿಂದ 2020 ಜನವರಿ 21ರ ತನಕ ಸೇವೆಯಲ್ಲಿರಲಿದ್ದು ಆ ಸಮಯದಲ್ಲಿ ಪ್ರತಿಯೊಬ್ಬ ಜಿ-ಮೇಲ್‌ ಬಳಕೆದಾರನೂ ಕೂಡ ಇದರ ಅವಕಾಶವನ್ನ ಪಡೆದುಕೊಳ್ಳಲಿದ್ದಾರೆ.

Most Read Articles
Best Mobiles in India

English summary
Gmail's newest feature is definitely an interesting one, weird as it may sound. The email service will let you attach emails to other emails - without needing to download them first. Just drag and drop one or more emails into the Compose window and you're all set. Alternatively, you can select one or more emails from the conversation view, and using the overflow (three-dot) menu button select "Forward as attachment".

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more