ವಾಟ್ಸಾಪ್‌ನಲ್ಲಿ ನಿಮ್ಮ ಬೆಸ್ಟ್‌ ಫ್ರೆಂಡ್‌ ಯಾರು ಅಂತಾ ತಿಳಿಯಲು ಹೀಗೆ ಮಾಡಿ?

|

ಫೇಸ್‌ಬುಕ್‌ ಒಡೆತನದ ವಾಟ್ಸಾಪ್‌ ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ಪ್ರಸ್ತುತ ಸ್ಮಾರ್ಟ್‌ಫೋನ್‌ ಬಳಸುವ ಪ್ರತಿಯೊಬ್ಬರೂ ಕೂಡ ವಾಟ್ಸಾಪ್‌ ಬಳಸುವುದು ಸಾಮಾನ್ಯ ಎನಿಸಿಬಿಟ್ಟಿದೆ. ಇನ್ನು ವಾಟ್ಸಾಪ್‌ ಕೂಡ ತನ್ನ ಬಳಕೆದಾರರಿಗೆ ಹಲವು ಅನುಕೂಲಕರ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಇನ್ನು ವಾಟ್ಸಾಪ್‌ ಒಳಗೊಂಡಿರುವ ಅನೇಕ ಫೀಚರ್ಸ್‌ಗಳ ಬಗ್ಗೆ ಬಳಕೆದಾರರಿಗೆ ತಿಳಿದೆ ಇರುವುದಿಲ್ಲ. ಇಂತಹ ಫೀಚರ್ಸ್‌ಗಳಲ್ಲಿ ನಿಮ್ಮ ಅತ್ಯುತ್ತಮ ಸ್ನೇಹಿತ ಯಾರು ಎಂದು ತಿಳಿಸುವ ಫೀಚರ್ಸ್‌ ಕೂಡ ಒಂದಾಗಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ಒಂದು ವಿಶೇಷ ಫೀಚರ್ಸ್‌ ಇದ್ದು ಅದು ನಿಮ್ಮ ಬೆಸ್ಟ್‌ ಫ್ರೆಂಡ್ಸ್‌ ಯಾರು ಎಂಬ ಬಗ್ಗೆ ಮಾಹಿತಿ ನೀಡುತ್ತದೆ. ಇದನ್ನು ತಿಳಿಯುವ ಪ್ರಕ್ರಿಯೆಯು ತುಂಬಾ ಸರಳ ಮತ್ತು ಸುಲಭವಾಗಿದ್ದು, ಇದ್ದಕ್ಕಾಗಿ ಕೆಲವು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ನೂರಾರು ಸ್ನೇಹಿತರ ಸಂಪರ್ಕ ಹೊಂದಿರುವ ನಿಮ್ಮ ವಾಟ್ಸಾಪ್‌ನಲ್ಲಿ ನೀವು ಬಹಳಷ್ಟು ಜನರ ಜೊತೆ ಸಂದೇಶ ವಿನಿಯ ಮಾಡಿಕೊಳ್ಳಬಹುದು. ಆದರೆ ಇವರುಗಳಲ್ಲಿ ನಿಮ್ಮ ಉತ್ತಮ ಸ್ನೇಹಿತ ಯಾರೂ ಅಂತಾ ಗುರುತಿಸೋದು ಕಷ್ಟ? ಆದರೆ ಇದನ್ನು ವಾಟ್ಸಾಪ್‌ ಸುಲಭವಾಗಿ ಗುರುತಿಸಲಿದೆ. ಅದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌

ಇಂದಿನ ದಿನಗಳಲ್ಲಿ ವಾಟ್ಸಾಪ್‌ನಲ್ಲಿಯೇ ಹೆಚ್ಚಿನ ಜನರು ಸಂದೇಶ ವಿನಿಮಯ ಮಾಡಿಕೊಳ್ಳುತ್ತಾರೆ. ತಮ್ಮ ಸ್ನೇಹಿತರು ಸಂಬಂದಿಕರ ಜೊತೆ ವೀಡಿಯೊ ಕರೆ ಮಾಡಿ ಖುಷಿ ಹಂಚಿಕೊಳ್ಳುತ್ತಾರೆ. ಆದರೆ ನಿಮ್ಮ ಜೊತೆ ಸಂದೇಶ ವಿನಿಮಯ ಮಾಡುವ, ಸ್ನೇಹಿತರು ಗಳಲ್ಲಿ ನಿಮ್ಮ ಬೆಸ್ಟ್‌ ಫ್ರೆಂಡ್ಸ್‌ ಯಾರು ಅಂತಾ ತಿಳಿಯೋದು ನಿಮಗೆ ಕಷ್ಟವಾಗಬಹುದು. ಆದರೆ ವಾಟ್ಸಾಪ್‌ ಇದನ್ನು ಸುಲಭವಾಗಿ ಪರಿಹರಿಸಿಬಿಡುತ್ತೆ. ಹಾಗಂತ ವಾಟ್ಸಾಪ್‌ ಹೇಳಿದ ಮಾತ್ರಕ್ಕೆ ನಿಮ್ಮ ಬೆಸ್ಟ್‌ ಫ್ರೆಂಡ್ಸ್‌ ಯಾರು ಅಂತಾ ನಿರ್ಧರಿಸುವ ಪರೀಕ್ಷೆ ಮಾಡುವ ಅಗತ್ಯವಿಲ್ಲ. ಆದರೆ ವಾಟ್ಸಾಪ್‌ ಒಳಗೊಂಡಿರುವ ಟ್ರಿಕ್ಸ್‌ಗಳಲ್ಲಿ ಇದು ಕೂಡ ಒಂದು ಎಂದೇ ಹೇಳಬಹುದಾಗಿದೆ.

ವಾಟ್ಸಾಪ್‌

ಇನ್ನು ನಿಮ್ಮ ವಾಟ್ಸಾಪ್‌ನಲ್ಲಿ ಉತ್ತಮ ಸ್ನೇಹಿತರು ಯಾರು ಅಂತಾ ತಿಳಿಯಲು ಮೊದಲು ನೀವು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನಿಮ್ಮ WhatsApp ಖಾತೆಯನ್ನು ತೆರೆಯಿರಿ ಮತ್ತು ನೇರವಾಗಿ ಸೆಟ್ಟಿಂಗ್‌ಗಳ ಟ್ಯಾಬ್‌ಗೆ ಹೋಗಿ. ಸ್ಟೋರೇಜ್‌ ಮತ್ತು ಡೇಟಾ ಟ್ಯಾಬ್ ಮೇಲೆ ಕ್ಲಿಕ್ ಮಾಡಿ, ಅದು ನಿಮ್ಮ ನೆಟ್‌ವರ್ಕ್ ಬಳಕೆ ಮತ್ತು ಸ್ವಯಂ ಡೌನ್‌ಲೋಡ್‌ಗಳ ಬಗ್ಗೆ ಹೇಳುತ್ತದೆ. ನಂತರ ಶೇಖರಣೆಯನ್ನು ನಿರ್ವಹಿಸಿ ಮೇಲೆ ಕ್ಲಿಕ್ ಮಾಡಿ. ಇಲ್ಲಿ ನೀವು ನಿಮ್ಮ ಎಲ್ಲಾ ಚಾಟ್‌ಗಳು ಮತ್ತು ಫೋಟೋಗಳನ್ನು ಪಟ್ಟಿ ಮಾಡಲಾಗಿರುತ್ತದೆ. ಇಲ್ಲಿ ಹೆಚ್ಚಿನ ಸ್ಟೋರೇಜ್‌ ಯಾವ ಕಂಟ್ಯಾಕ್ಟ್‌ ಹೊಂದಿರುತ್ತದೆಯೋ ಅದು ನಿಮ್ಮ ಉತ್ತಮ ಸ್ನೇಹಿತನಾಗಿರುವುದು ಖಂಡಿತ. ಅಂದರೆ ನೀವು ಯಾರ ಜೊತೆ ಹೆಚ್ಚು ಚಾಟ್‌ ಮಾಡಿರುತ್ತೀರಿ ಅನ್ನೊದನ್ನ ಇಲ್ಲಿ ತಿಳಿದುಕೊಳ್ಳಬಹುದು.

ವಾಟ್ಸಾಪ್

ಆದಾಗ್ಯೂ, ಈ ವಾಟ್ಸಾಪ್ ವೈಶಿಷ್ಟ್ಯವು ಮತ್ತೊಂದು ಹೆಚ್ಚು ಪ್ರಚಲಿತ ಕಾರ್ಯವನ್ನು ಹೊಂದಿದೆ. ಇದು ವಾಸ್ತವವಾಗಿ ನಿಮ್ಮ ಸಂಗ್ರಹಣೆಯನ್ನು ಟ್ರ್ಯಾಕ್ ಮಾಡಲು ಅನುಮತಿಸುವ ಒಂದು ವೈಶಿಷ್ಟ್ಯವಾಗಿದೆ. ಇದರಿಂದ ನೀವು ಹೆಚ್ಚು ಸ್ಟೋರೇಜ್‌ ಸ್ಪೇಸ್‌ ಕಿಲ್‌ ಮಾಡುವ ಚಾಟ್‌ಗಳನ್ನು ನೀವು ಅಳಿಸಬಹುದು. ಈ ವಾಟ್ಸಾಪ್ ಮೀಡಿಯಾ ಚಾಟ್‌ಗಳನ್ನು ಡಿಲೀಟ್‌ ಮಾಡಲು. ನೀವು ಬಯಸುವ ಚಾಟ್‌ ಒಂದನ್ನು ಕ್ಲಿಕ್ ಮಾಡಬೇಕಾಗುತ್ತದೆ, ಇದು ಹೊಸ ವಿಂಡೋದಲ್ಲಿ ತೆರೆಯುತ್ತದೆ ಮತ್ತು ಅಲ್ಲಿರುವ ಎಲ್ಲಾ ಫೈಲ್‌ಗಳನ್ನು ಆ ಒಬ್ಬ ವ್ಯಕ್ತಿ ಅಥವಾ ಗುಂಪಿನಿಂದ ತೋರಿಸುತ್ತದೆ. ನೀವು ಎಲ್ಲವನ್ನೂ, ಒಂದನ್ನು ಅಥವಾ ನಿಮಗೆ ಬೇಕಾದಷ್ಟು ಆಯ್ಕೆ ಮಾಡಬಹುದು ಮತ್ತು ಇಲ್ಲವೇ ಎಲ್ಲವನ್ನೂ ಡಿಲೀಟ್‌ ಮಾಡಬಹುದಾಗಿದೆ.

Best Mobiles in India

English summary
There is a feature on WhatsApp that can really give some inkling about who is the one that is closest to you.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X