ಮೊಬಿಕ್ವೀಕ್ ನಲ್ಲಿ ಕರೆಂಟ್ ಬಿಲ್ ಮೇಲೆ ರೂ.300 ಕಡಿತ..!
ಸದ್ಯ ಈ ಆಫರ್ ದೆಹಲಿಯ ನಾಗರೀಕರಿಗೆ ಮಾತ್ರವೇ ದೊರೆಯಲಿದೆ. BSES ನೊಂದಿಗೆ ಮೊಬಿಕ್ವೀಕ್ ಒಪ್ಪಂದವನ್ನು ಮಾಡಿಕೊಂಡಿದ್ದು, ತನ್ನ ಆಪ್ ಬಳಕೆದಾರರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡುವ ಸಲುವಾಗಿ ಈ ಆಯ್ಕೆಯನ್ನು ನೀಡಿದೆ ಎನ್ನಲಾಗಿದೆ.
ಡಿಜಿಟಪ್ ಪೇಮೆಂಟ್ ಪ್ಲಾಟ್ ಫಾರ್ಮ್ ಮೊಬಿ ಕ್ವೀಕ್ ಎಲೆಕ್ಟ್ರಿಸಿಟಿ ಬಿಲ್ ಪೇಮೆಂಟ್ ಮಾಡಬಹುದಾಗಿದ್ದು, ಮೊಬಿಕ್ವೀಕ್ ಮೂಲಕ ಬಿಲ್ ಪಾವತಿ ಮಾಡುವುದರಿಂದ 300 ರೂ.ಗಳ ಕಡಿತವನ್ನು ಪಡೆಯಬಹುದಾಗಿದೆ.

ಸದ್ಯ ಈ ಆಫರ್ ದೆಹಲಿಯ ನಾಗರೀಕರಿಗೆ ಮಾತ್ರವೇ ದೊರೆಯಲಿದೆ. BSES ನೊಂದಿಗೆ ಮೊಬಿಕ್ವೀಕ್ ಒಪ್ಪಂದವನ್ನು ಮಾಡಿಕೊಂಡಿದ್ದು, ತನ್ನ ಆಪ್ ಬಳಕೆದಾರರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡುವ ಸಲುವಾಗಿ ಈ ಆಯ್ಕೆಯನ್ನು ನೀಡಿದೆ ಎನ್ನಲಾಗಿದೆ.
ಗ್ರಾಹಕರು ಮೊಬಿಕ್ವೀಕ್ ವೆಬ್ ಮತ್ತು ಆಪ್ ಮೂಲಕ ಪೇಮೆಂಟ್ ಮಾಡಬಹುದಾಗಿದೆ ಎನ್ನಲಾಗಿದೆ. ಒಟ್ಟು ಒಂದು ವರ್ಷಗಳ ಕಾಲ ಈ ಆಫರ್ ಪಡೆಯಬಹುದಾಗಿದ್ದು, ಪ್ರತಿ ತಿಂಗಳು 10% ಇಲ್ಲದೇ ರೂ. 300ಗಳನ್ನು ಪ್ರತಿ ತಿಂಗಳ ವಿದ್ಯುತ್ ಬಿಲ್ ನಲ್ಲಿ ಕಡಿತವನ್ನು ಕಾಣಬಹುದಾಗಿದೆ.
ತಿಂಗಳಲ್ಲಿ ಮೊದಲ ವಾರದಲ್ಲಿ ಗ್ರಾಹಕರು ಬಿಲ್ ಪಾವತಿ ಮಾಡಿದರೆ ನಂತರದಲ್ಲಿ ತಿಂಗಳ ಕೊನೆಯಲ್ಲಿ ಕ್ಯಾಷ್ ವೋಚರ್ ಅನ್ನು ಪಡೆದುಕೊಳ್ಳಬಹುದಾಗಿದೆ. ದಿನೇ ದಿನೇ ಡಿಜಿಟಲ್ ಪೇಮೆಂಟ್ ಆಪ್ ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನಲೆಯಲ್ಲಿ ಹೊಸ ಗ್ರಾಹಕರಿಗೆ ಗಾಳ ಹಾಕಲು ಇದು ಉತ್ತಮ ಮಾರ್ಗವಾಗಿದೆ.

Click it and Unblock the Notifications