Home
ಸುದ್ದಿಜಾಲ

Facebook ಮತ್ತು Instagram ನಲ್ಲಿ ಲೈಕ್ಸ್‌ ಹೈಡ್‌ ಮಾಡುವುದು ಹೇಗೆ?

ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಬಳಕೆದಾರರ ನೆಚ್ಚಿನ ಸೊಶಿಯಲ್‌ ಮೀಡಿಯಾ ಅಪ್ಲಿಕೇಶನ್‌ ಆಗಿ ಗುರುತಿಸಿಕೊಂಡಿವೆ. ಈಗಾಗಲೇ ಹಲವು ಅನುಕೂಲಕರ ಫೀಚರ್ಸ್‌ಗಳನ್ನು ಪರಿಚಯಿಸಿ ಬಳಕೆದಾರರ ಮನಗೆದ್ದಿವೆ. ಇದೀಗ ಬಳಕೆದಾರರಿಗೆ ಲೈಕ್ಸ್‌ ಕೌಂಟ್‌ ಹೈಡ್‌ ಮಾಡುವ ಆಯ್ಕೆಯನ್ನು ನೀಡಿದೆ. ಅಂದರೆ ಬಳಕೆದಾರರ ಪೋಸ್ಟ್‌ಗಳು ಸಾರ್ವಜನಿಕರಿಂದ ಪಡೆಯುವ ಲೈಕ್‌ಗಳ ಸಂಖ್ಯೆಯನ್ನು ಮರೆಮಾಚಲಿದೆ. ಇದು ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳನ್ನು ಬಳಸುವಾಗ ಜನರಿಗೆ ತಮ್ಮ ಅನುಭವದ ಮೇಲೆ ನಿಯಂತ್ರಣವನ್ನು ನೀಡುತ್ತದೆ ಎಂದು ಸೊಶೀಯಲ್‌ ಮೀಡಿಯಾ ನೆಟ್‌ವರ್ಕ್ ಉಲ್ಲೇಖಿಸಿದೆ.

ಫೇಸ್‌ಬುಕ್‌

ಹೌದು, ಫೇಸ್‌ಬುಕ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹಾಗೂ ತನ್ನ ಒಡೆತನದ ಇನ್‌ಸ್ಟಾಗ್ರಾಮ್‌ನಲ್ಲಿ ಲೈಕ್ಸ್‌ ಕೌಂಟ್‌ ಹೈಡ್‌ ಮಾಡುವ ಫೀಚರ್ಸ್‌ ಅನ್ನು ಪರಿಚಯಿಸಿದೆ. ತಮ್ಮ ಪೊಸ್ಟ್‌ಗಳಿಗೆ ಹೆಚ್ಚಿನ ಲೈಕ್ಸ್‌ ದೊರೆಯದೆ ಹೋದಾಗ ಹೆಚ್ಚಿನವರು ಖಿನ್ನತೆಗೆ ಒಳಗಾಗುವುದು ಕೂಡ ಉಂಟೂ. ಆದರಿಂದ ಬಳಕೆದಾರರ ಅನುಭವವನ್ನು ‘ಖಿನ್ನತೆಗೆ' ಒಳಪಡಿಸುವ ಲೈಕ್ಸ್‌ ಕೌಂಟ್‌ ಅನ್ನು ಮರೆಮಾಚುವ ಆಯ್ಕೆಯನ್ನು ಫೇಸ್‌ಬುಕ್ ಮೊದಲಿನಿಂದಲೂ ಪರೀಕ್ಷಿಸುತ್ತಿದೆ. ಇನ್‌ಸ್ಟಾಗ್ರಾಮ್ ಕೂಡ ಹಲವಾರು ವಿಭಿನ್ನ ವಿಧಾನಗಳನ್ನು ಪ್ರಯೋಗಿಸುತ್ತಿದೆ. ಹಾಗಾದ್ರೆ ಲೈಕ್ಸ್‌ ಕೌಂಟ್‌ ಹೈಡ್‌ ಫೀಚರ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫೇಸ್‌ಬುಕ್‌

ಫೇಸ್‌ಬುಕ್‌ ಬಳಕೆದಾರರು ಫೀಡ್‌ನಲ್ಲಿ ಹಂಚಿಕೊಳ್ಳುವ ಪೋಸ್ಟ್‌ಗಳಲ್ಲಿ ಎಷ್ಟು ಸಂಖ್ಯೆಯ ಲೈಕ್‌ಗಳನ್ನು ಜನರು ನೋಡಬಹುದು ಎಂದು ಆಯ್ಕೆ ಮಾಡಲು ಈ ಹೊಸ ಫೀಚರ್ಸ್‌ನಿಂದ ಸಾಧ್ಯವಾಗುತ್ತದೆ. ಸಾಮಾನ್ಯವಾಗಿ ಹೆಚ್ಚಿನ ಲೈಕ್ಸ್‌ ಬಂದರೆ ಕೆಲವರು ಖಷಿ ಪಡುತ್ತಾರೆ. ಆದರೆ ಇನ್ನು ಕೆಲವರಿಗೆ ಈ ಲೈಕ್ಸ್‌ ಕೌಂಟ್‌ ಕಿರಿಕಿರಿ ಉಂಟುಮಾಡುತ್ತದೆ. ಅದರಲ್ಲೂ ವಿಶೇಷವಾಗಿ ಜನರು ಲೈಕ್ಸ್‌ಗಳ ಕಡೆಗೆ ಹೆಚ್ಚಿನ ಗಮನ ನೀಡುವುದರಿಂದ ಕೆಲವರು ಹತಾಶೆಗೆ ಒಳಗಾಗುತ್ತಾರೆ. ಆದರಿಂದ ಲೈಕ್ಸ್‌ ಕೌಂಟ್‌ ಹೈಡ್‌ ಮಾಡುವ ಫೀಚರ್ಸ್‌ ಪರಿಚಯಿಸಿದೆ. ಇದರಿಂದ ಸಾರ್ವಜನಿಕರಿಂದ ಲೈಕ್ಸ್‌ ಕೌಂಟ್‌ ಹೈಡ್‌ ಆಗಲಿದೆ.

Instagram ನಲ್ಲಿ ಲೈಕ್ಸ್‌ ಹೈಡ್‌ ಮಾಡುವುದು ಹೇಗೆ?

Instagram ನಲ್ಲಿ ಲೈಕ್ಸ್‌ ಹೈಡ್‌ ಮಾಡುವುದು ಹೇಗೆ?

Instagram ನಲ್ಲಿನ ಬಳಕೆದಾರರು ಪೋಸ್ಟ್ ಅನ್ನು ಹಂಚಿಕೊಳ್ಳುವ ಮೊದಲು ಅಥವಾ ನಂತರ ಅವರ ಲೈಕ್ಸ್‌ ಅನ್ನು ಹೈಡ್‌ ಮಾಡಬಹುದು. ಹಾಗೆ ಮಾಡಲು ಪೋಸ್ಟ್‌ನ ಮೇಲಿನ ಬಲ ಮೂಲೆಯಲ್ಲಿರುವ ಮೂರು ಚುಕ್ಕೆಗಳನ್ನು ಆರಿಸಿ ಮತ್ತು ನಂತರ ‘ಹಿಟ್ ಲೈಕ್ ಕೌಂಟ್' ಆಯ್ಕೆಯನ್ನು ಟ್ಯಾಪ್ ಮಾಡಿ. ಸೆಟ್ಟಿಂಗ್‌ಗಳಲ್ಲಿ ಈ ಆಯ್ಕೆಯನ್ನು ಆಫ್ ಮಾಡುವ ಮೂಲಕ ಲೈಕ್ಸ್‌ ಕೌಂಟ್‌ ಅನ್ನು ಹೈಡ್‌ ಮಾಡಬಹುದಾಗಿದೆ.

Instagram ಫೀಡ್‌ನಲ್ಲಿ ಲೈಕ್ಸ್‌ ಅನ್ನು ಹೈಡ್‌ಮಾಡುವುದು ಹೇಗೆ?

Instagram ಫೀಡ್‌ನಲ್ಲಿ ಲೈಕ್ಸ್‌ ಅನ್ನು ಹೈಡ್‌ಮಾಡುವುದು ಹೇಗೆ?

Instagram ನಲ್ಲಿ ಇತರ ಜನರ ಪೋಸ್ಟ್‌ಗಳಲ್ಲಿ ಕೌಂಟ್ಸ್‌ ಮರೆಮಾಡಲು, ಸೆಟ್ಟಿಂಗ್‌ಗಳಿಗೆ ಹೋಗಿ ನಂತರ ಪೋಸ್ಟ್‌ಗಳಿಗಾಗಿ ನೋಡಿ. ಅದರ ನಂತರ "ಲೈಕ್ ಮತ್ತು ವ್ಯೂ ಕೌಂಟ್ಸ್‌ಗಳನ್ನುಹೈಡ್‌ಮಾಡಿ" ಪಕ್ಕದಲ್ಲಿ ಟಾಗಲ್ ಅನ್ನು ಒತ್ತಿ ಮತ್ತು ಅದು ಫೀಡ್‌ನಲ್ಲಿರುವ ಎಲ್ಲಾ ಪೋಸ್ಟ್‌ಗಳಿಗೆ ಅನ್ವಯಿಸುತ್ತದೆ.

ಫೇಸ್‌ಬುಕ್‌ನಲ್ಲಿ ಲೈಕ್‌ ಕೌಂಟ್‌ ಹೈಡ್‌ ಮಾಡುವುದು ಹೇಗೆ?

ಫೇಸ್‌ಬುಕ್‌ನಲ್ಲಿ ಲೈಕ್‌ ಕೌಂಟ್‌ ಹೈಡ್‌ ಮಾಡುವುದು ಹೇಗೆ?

ಇನ್ನು ಫೇಸ್‌ಬುಕ್‌ನಲ್ಲಿ ಲೈಕ್‌ ಕೌಂಟ್‌ ಹೈಡ್‌ ಮಾಡುವುದು ಕೂಡ ಥೇಟ್‌ ಇನ್‌ಸ್ಟಾಗ್ರಾಮ್‌ ಮಾದರಿಯಂತೆಯೇ ಇದೆ ಎಂದು ಹೇಳಲಾಗುತ್ತದೆ. ನಿಮ್ಮ ವಿಷಯದ ಮೇಲೆ ಎಣಿಕೆ ಅಥವಾ ಪ್ಲಾಟ್‌ಫಾರ್ಮ್‌ನಲ್ಲಿರುವ ಇತರ ಬಳಕೆದಾರರ ಪೋಸ್ಟ್‌ನಂತೆ ಮರೆಮಾಚುವ ಎರಡೂ ಆಯ್ಕೆಗಳು ಮುಂದಿನ ವಾರಗಳಲ್ಲಿ ಫೇಸ್‌ಬುಕ್‌ಗೆ ಹೊರಹೊಮ್ಮಲಿವೆ. ಈ ಆಯ್ಕೆಯನ್ನು ತರಲು ಹಿಂದಿನ ಕಾರಣ ಬೆದರಿಸುವಿಕೆ ಮತ್ತು ಟೀಕೆಗಳಿಗೆ ಒಡ್ಡಿಕೊಂಡಾಗ ಕೆಲವು ಬಳಕೆದಾರರು ಎದುರಿಸುತ್ತಿರುವ ಒತ್ತಡ ಮತ್ತು ಆತಂಕ. ಈ ಸೇವೆಯು "ಯುವಜನರ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಅತ್ಯಂತ ಹಾನಿಕಾರಕ" ಎಂದು ಅಧ್ಯಯನಗಳು ಕೂಡ ಹೇಳಿವೆ.

Best Mobiles in India

English summary
Facebook, Instagram now brings the option to hide likes on posts, the feature is rolling out on Instagram and will arrive on Facebook in the coming weeks.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+