Home
ಸುದ್ದಿಜಾಲ

ಐಫೋನ್ ಅನ್ನು ಬಾಡಿಗೆಗೆ ಕೊಡ್ತಾರೆ ಬೆಂಗಳೂರಿನಲ್ಲಿ..! ನಿಮಗೂ ಬೇಕಾ..?

By Srinidhi

ನೀವು ದುಬಾರಿ ಬೆಲೆಯ ಟಾಪ್ ಎಂಡ್ ಎಂಡ್ ಸ್ಮಾರ್ಟ್‌ಫೋನ್ ಅನ್ನು ಬಳಕೆ ಮಾಡಬೇಕು ಎನ್ನುವ ಆಸೆಯನ್ನು ಹೊಂದಿದ್ದರೆ ಇಲ್ಲಿ ಒಂದು ಅವಕಾಶ ಇದೆ. ಮಾರುಕಟ್ಟೆಯಲ್ಲಿಯೇ ಟಾಪ್ ಎಂಡ್ ಸ್ಮಾರ್ಟ್‌ಫೋನ್ ಎಂದು ಕಾಣಿಸಿಕೊಂಡಿರುವ ಐಪೋನ್ X ಅನ್ನು ಬಾಡಿಗೆಗೆ ನೀಡುವ ವೆಬ್‌ ಸೈಟ್‌ವೊಂದು ಕಾರ್ಯಚರಣೆಗೆ ಮುಂದಾಗಿದೆ. ಇದರಲ್ಲಿ ನೀವು ಐಪೋನ್ X ಸೇರಿದಂತೆ ದುಬಾರಿ ಬೆಲೆ ಫೋನ್‌ಗಳನ್ನು ರೆಂಟ್‌ಗೆ ಪಡೆದುಕೊಳ್ಳಬಹುದಾಗಿದೆ.

ಐಫೋನ್ ಅನ್ನು ಬಾಡಿಗೆಗೆ ಕೊಡ್ತಾರೆ ಬೆಂಗಳೂರಿನಲ್ಲಿ..! ನಿಮಗೂ ಬೇಕಾ..?

ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲಾ ಮಾದರಿಯ ಟಾಪ್ ಎಂಡ್ ಸ್ಮಾರ್ಟ್‌ಫೋನ್‌ಗಳನ್ನು ರೆಂಟ್ ಮೊಜೊ.ಕಾಮ್ ಬಾಡಿಗೆಗೆ ನೀಡಲಿದೆ ಎನ್ನಲಾಗಿದೆ. ನಿಮಗೆ ಟಾಪ್ ಎಂಡ್ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಲು ಸಾಧ್ಯವಾಗದೆ ಇದ್ದರೆ, ಅವುಗಳನ್ನು ಬಾಡಿಗೆಗೆ ಪಡೆದು ಬಳಕೆ ಮಾಡುವ ಅವಕಾಶವನ್ನು ನೀಡಲಿದೆ ಎನ್ನಲಾಗಿದೆ. ಐಫೋನ್ ‍x, ಗೂಗಲ್ ಪಿಕ್ಸಲ್ ಸೇರಿದಂತೆ ಎಲ್ಲಾ ಫೋನ್‌ಗಳು ನಿಮಗೆ ದೊರೆಯಲಿದೆ ಎನ್ನಲಾಗಿದೆ.

ಪ್ರೀಮಿಯಮ್ ಫೋನ್‌ಗಳು:

ಪ್ರೀಮಿಯಮ್ ಫೋನ್‌ಗಳು:

ಸದ್ಯ ಮಾರುಕಟ್ಟೆಯಲ್ಲಿ ಆಪಲ್, ಸ್ಯಾಮ್ ಸಂಗ್, ಗೂಗಲ್ ಸೇರಿದಂತೆ ಎಲ್ಲಾ ಕಂಪನಿಗಳು ರೂ.80,000ಕ್ಕೂ ಮೇಲ್ಪಟ್ಟ ಬೆಲೆಗೆ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುತ್ತಿವೆ. ನಿಮಗೆ ಆ ಪೋನ್‌ಗಳನ್ನು ಕೊಳ್ಳಲು ಸಾಧ್ಯವಾದೆ ಇದ್ದರೆ, ರೆಂಟ್ ಮೋಜೊ.ಕಾಮ್‌ನಲ್ಲಿ ನೀವು ಎಲ್ಲಾ ಮಾದರಿಯ ಟಾಪ್ ಎಂಡ್ ಫೋನ್‌ಗಳನ್ನು ಬಾಡಿಗೆಗೆ ಪಡೆದು ಬಳಕೆ ಮಾಡಿಕೊಳ್ಳಬಹುದಾಗಿದೆ.

ಬೆಲೆ:

ಬೆಲೆ:

ಟಾಪ್ ಎಂಡ್ ಸ್ಮಾರ್ಟ್‌ಫೋನ್‌ಗಳನ್ನು ಮಾತ್ರವೇ ನೀಡಲಿರುವ ರೆಂಟ್ ಮೋಜೊ.ಕಾಮ್‌, ತಿಂಗಳಿಗೆ ರೂ.2099 ರಿಂದ ಹಿಡಿದು ರೂ.9299 ವರೆಗೆನ ಬೆಲೆಗೆ ಸ್ಮಾರ್ಟ್‌ಫೋನ್‌ಗಳನ್ನು ಬಾಡಿಗೆಗೆ ನೀಡಲಿದೆ. ಹೀಗಾಗಿ ನಿಮಗೆ ಬೇಕಾದ ಫೋನ್ ಅನ್ನು ನೀವು ಇಲ್ಲಿ ಬಾಡಿಗೆಗೆ ಪಡೆದು ನಿಮಗೆ ಬೇಕಾದಷ್ಟು ದಿನ ಬಳಕೆ ಮಾಡಿಕೊಂಡು ಹಿಂದಿರುಗಿಸಬಹುದಾಗಿದೆ.

ಎಷ್ಟು ದಿನ:

ಎಷ್ಟು ದಿನ:

ರೆಂಟ್ ಮೋಜೊ.ಕಾಮ್‌ ನಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಬಾಡಿಗೆಗೆ ಪಡೆದುಕೊಳ್ಳಬೇಕಾದರೆ ಮಿನಿಮಮ್ ಆರು ತಿಂಗಳು ಬಳಕೆ ಮಾಡಲೇ ಬೇಕು ಎನ್ನಲಾಗಿದೆ. ಇದನ್ನು ಬಿಟ್ಟರೆ 12 ತಿಂಗಳು, 18 ತಿಂಗಳು ಹಾಗೂ 24 ತಿಂಗಳಿಗೂ ನೀವು ಬಾಡಿಗೆಗೆ ಪಡೆದುಕೊಳ್ಳಬಹುದಾಗಿದೆ.

ಗೂಗಲ್ ಹೋಮ್ ಸಹ:

ಗೂಗಲ್ ಹೋಮ್ ಸಹ:

ಸದ್ಯ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಗೂಗಲ್ ಬಿಡುಗಡೆ ಮಾಡಿರುವ ಗೂಗಲ್ ಹೋಮ್ ಸ್ಮಾರ್ಟ್ ಸ್ಪೀಕರ್ ಅನ್ನು ನೀವು ಬಾಡಿಗೆಗೆ ಪಡೆದುಕೊಳ್ಳಬಹುದಾಗಿದೆ. ರೂ.399 ಪ್ರತಿ ತಿಂಗಳು ಕಟ್ಟುವ ಮೂಲಕ ಬಳಕೆ ಮಾಡಿಕೊಳ್ಳುವ ಅವಕಾಶವನ್ನು ರೆಂಟ್ ಮೋಜೊ.ಕಾಮ್‌ ಮಾಡಿಕೊಡುತ್ತಿದೆ.

ಬೆಂಗಳೂರಲ್ಲಿಯೂ ಇದೆ

ಬೆಂಗಳೂರಲ್ಲಿಯೂ ಇದೆ

ರೆಂಟ್ ಮೋಜೊ.ಕಾಮ್‌ ಸೇವೆಯೂ ಸದ್ಯ ಬೆಂಗಳೂರು, ದೆಹಲಿ, ಗುರುಗ್ರಾಮ್, ಮುಂಬೈ ಮತ್ತು ನೋಯ್ಡಾಗಳಲ್ಲಿ ಮಾತ್ರವೇ ದೊರೆಯುತ್ತಿದೆ ಎನ್ನಲಾಗಿದೆ. ಶೀಘ್ರವೇ ಈ ಸೇವೆಯನ್ನು ದೇಶದ ಎಲ್ಲಾ ನಗರಗಳೀಗೂ ವಿಸ್ತರಿಸುವ ಯೋಜನೆಯನ್ನು ರೆಂಟ್ ಮೋಜೊ.ಕಾಮ್‌ ಹೊಂದಿದೆ ಎನ್ನಲಾಗಿದೆ.

Best Mobiles in India

English summary
You Can Now Rent The iPhone X and Google Home From RentoMojo. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+