Google Pay ಬಳಕೆದಾರರಿಗೆ ಇದು ಶುಭ ಸುದ್ದಿ!

|

ಜನಪ್ರಿಯ ಯಪಿಐ ಪಾವತಿ ಸೇವೆಗಳಲ್ಲಿ ಗೂಗಲ್‌ಪೇ ಕೂಡ ಒಂದಾಗಿದೆ. ತನ್ನ ಬಳಕೆದಾರರಿಗೆ ಹಲವು ಫೀಚರ್ಸ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಅಲ್ಲದೆ ಪ್ರತಿ ಪಾವತಿಗೂ ಕ್ಯಾಶ್‌ಬ್ಯಾಕ್‌ ನೀಡುವ ಮೂಲಕ ಬಳಕೆದಾರರನ್ನು ಆಕರ್ಷಿಸಿದೆ. ಬಳಕೆದಾರರ ಮೊಬೈಲ್‌ ರೀಚಾರ್ಜ್‌, ವಾಟರ್‌ ಬಿಲ್, ವಿದ್ಯುತ್ ಬಿಲ್, ಇನ್ಶುರೆನ್ಸ ಪ್ರೀಮಿಯಂ, ಡಿಟಿಎಚ್‌ ರೀಚಾರ್ಜ್‌ ಸೇರಿದಂತೆ ಹಲವು ಪಾವತಿಗಳಿಗೆ ಕ್ಯಾಶ್‌ಬ್ಯಾಕ್‌ ನೀಡುವ ಗೂಗಲ್‌ಪೇ ಇದೀಗ ಅಂತರರಾಷ್ಟ್ರೀಯ ಹಣ ವರ್ಗಾವಣೆ ಮಾಡುವ ಅವಕಾಶವನ್ನು ಪರಿಚಯಿಸಿದೆ.

ಗೂಗಲ್ ಪೇ

ಹೌದು, ಗೂಗಲ್ ಪೇ ತನ್ನ ಯು.ಎಸ್. ಪಾವತಿ ಅಪ್ಲಿಕೇಶನ್‌ನ ಬಳಕೆದಾರರಿಗಾಗಿ ರವಾನೆ ಸಂಸ್ಥೆಗಳಾದ ವೈಸ್ ಮತ್ತು ವೆಸ್ಟರ್ನ್ ಯೂನಿಯನ್ ಕೋ ಜೊತೆ ಅಂತರರಾಷ್ಟ್ರೀಯ ಹಣ ವರ್ಗಾವಣೆ ಸಹಭಾಗಿತ್ವವನ್ನು ಪ್ರಾರಂಭಿಸಿದೆ ಎಂದು ಕಂಪನಿಗಳು ಮಂಗಳವಾರ ತಿಳಿಸಿವೆ. ಯುನೈಟೆಡ್ ಸ್ಟೇಟ್ಸ್‌ನಲ್ಲಿನ ಗೂಗಲ್ ಪೇ ಬಳಕೆದಾರರು ಈಗ ಭಾರತ ಮತ್ತು ಸಿಂಗಾಪುರದ ಅಪ್ಲಿಕೇಶನ್ ಗ್ರಾಹಕರಿಗೆ ಹಣವನ್ನು ವರ್ಗಾಯಿಸಬಹುದಾಗಿದೆ. ಹಾಗಾದ್ರೆ ಗೂಗಲ್‌ ಪೇ ಬಳಸಿ ಯಾವ ದೇಶದವರು ಅಂತರರಾಷ್ಟ್ರೀಯ ಹಣ ವರ್ಗಾವಣೆ ಮಾಡಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌ ಪೇ

ಗೂಗಲ್‌ ಪೇ ತನ್ನ ಯುಎಸ್‌ ಪಾವತಿ ಅಪ್ಲಿಕೇಶನ್‌ ಅಲ್ಲಿ ಇಂಟರ್‌ನ್ಯಾಷನಲ್‌ ಮನಿ ಟ್ರಾನ್ಸಫರ್‌ಗೆ ಅವಕಾಶ ನೀಡಿದೆ. ಇದಕ್ಕಾಗಿ ಮನಿ ಟ್ರಾನ್ಸಫರ್‌ ಸಂಸ್ಥೆಗಳಾದ ವೈಸ್‌ ಮತ್ತು ವೆಸ್ಟರ್ನ್‌ ಯೂನಿಯನ್‌ ಗಳ ಜೊತೆ ಸಹಭಾಗಿತ್ವವನ್ನು ಹೊಂದಿದೆ. ಇನ್ನು ವೈಸ್ ಮೂಲಕ ಲಭ್ಯವಿರುವ 80 ದೇಶಗಳಿಗೆ ಮತ್ತು ವರ್ಷಾಂತ್ಯದಲ್ಲಿ ವೆಸ್ಟರ್ನ್‌ ಯೂನಿಯನ್‌ ಮೂಲಕ 200ದೇಶಗಳಿಗೆ ಈ ಯೋಜನೆಯನ್ನು ವಿಸ್ತರಿಸುವ ಪ್ಲ್ಯಾನ್‌ ರೂಪಿಸಿಕೊಂಡಿದೆ.

ಗೂಗಲ್‌ ಪೇ

ಹಣ ವರ್ಗಾವಣೆ ಮಾರುಕಟ್ಟೆಯಲ್ಲಿ ಗೂಗಲ್‌ ಪೇ $470 ಬಿಲಿಯನ್ ನಷ್ಟು ಮೌಲ್ಯವನ್ನು ಹೊಂದಿದ. ಈ ಮೂಲಕ ಹಣಕಾಸು ಸೇವೆಗಳ ಕೊಡುಗೆಯನ್ನು ವಿಸ್ತರಿಸಲು ಮುಂದಿನ ಹಂತವನ್ನು ಪ್ಲ್ಯಾನ್‌ ಮಾಡಿದೆ. ಅಲ್ಲದೆ ಡಿಜಿಟಲ್ ಪಾವತಿ ಕ್ಷೇತ್ರದಲ್ಲಿ ಇನ್ನಷ್ಟು ಸ್ಪರ್ಧೆಯನ್ನು ಹುಟ್ಟುಹಾಕಲು ಮುಂದಾಗಿದೆ. ಇನ್ನು ಅಂತರರಾಷ್ಟ್ರೀಯ ಹಣ ವರ್ಗಾವಣೆಯನ್ನು ಅಗ್ಗದ ಮತ್ತು ಸುಲಭವಾಗಿಸುವ ಉದ್ದೇಶದಿಂದ 2011 ರಲ್ಲಿ ಲಂಡನ್ ಮೂಲದ ವೈಸ್ ಸಂಸ್ಥೆ ಪ್ರಾರಂಭವಾಗಿತ್ತು. ಜೊತೆಗೆ ವೆಸ್ಟರ್ನ್ ಯೂನಿಯನ್ ಹಣ ವರ್ಗಾವಣೆ ಮಾರುಕಟ್ಟೆಯಲ್ಲಿ ಮುಂಚೂಣಿ ನಾಯಕನಂತೆ ಗುರುತಿಸಿಕೊಂಡಿದೆ. ಇದೇ ಕಾರಣಕ್ಕೆ ಗೂಗಲ್‌ ಈ ಎರಡು ಸಂಸ್ಥೆಗಳ ಜೊತೆ ಕೈ ಜೋಡಿಸಿದೆ.

 ಗೂಗಲ್ ಪೇ

ಸದ್ಯ 40 ದೇಶಗಳಲ್ಲಿ 150 ಮಿಲಿಯನ್ ಬಳಕೆದಾರರನ್ನು ಹೊಂದಿರುವ ಗೂಗಲ್ ಪೇ COVID-19 ಸಮಯದಲ್ಲಿ ಆನ್‌ಲೈನ್ ಪಾವತಿಗಳಲ್ಲಿ ಸಾಕಷ್ಟು ಸಹಾಯಕವಾಗಿದೆ. ಆದರೆ ಒಟ್ಟಾರೆ ಹಣ ವರ್ಗಾವಣೆಯಲ್ಲಿ ಅಂದಾಜು ಕುಸಿತವನ್ನು ಹೊಂದಿದೆ. ವಿಶ್ವಬ್ಯಾಂಕ್‌ನ ಇತ್ತೀಚಿನ ಅಂದಾಜಿನ ಪ್ರಕಾರ, 2019 ರಿಂದ 14% ರಷ್ಟು ಕುಸಿದಿದೆ ಎಂದು ಊಹಿಸಲಾಗಿದೆ. ಕೊರೊನಾ ಕಾರಣದಿಂದಾಗಿ ಹೆಚ್ಚಿನ ಜನರು ತಮ್ಮ ಮೂಲ ಸ್ಥಳಗಳಿಗೆ ಹೋಗಿದ್ದಾರೆ. ಬಹಳಷ್ಟು ಜನರು ಪ್ರಪಂಚದಾದ್ಯಂತ ಸ್ಥಳಾಂತರಗೊಂಡಿದ್ದಾರೆ. ಅಂತಹವರಿಗೆ ಅವರ ಪಾವತಿಗಳನ್ನು ಸುಗಮಗೊಳಿಸಲು ನಾವು ಹೊಸ ಹೆಜ್ಜೆ ಇರಿಸಿದ್ದೆವೆ ಎಂದು ಗೂಗಲ್‌ಪೇ ಹೇಳಿಕೊಂಡಿದೆ.

ಗೂಗಲ್‌ಪೇ

ಹೊಸ ಹಣ ವರ್ಗಾವಣೆ ಕಾರ್ಯವು ಗ್ರಾಹಕರ ಹಣ ಮತ್ತು ಡೇಟಾದ ಮೇಲೆ ತಂತ್ರಜ್ಞಾನ ಕಂಪನಿಗಳು ಮತ್ತು ಸಾಂಪ್ರದಾಯಿಕ ಹಣಕಾಸು ಸಂಸ್ಥೆಗಳ ನಡುವೆ ಸ್ಪರ್ಧೆಯನ್ನು ಹೆಚ್ಚಿಸಲಿದೆ. ಪೂರೈಕೆದಾರರು ತಮ್ಮ ಬಳಕೆದಾರರ ಆರ್ಥಿಕ ಅಗತ್ಯಗಳಿಗಾಗಿ ಗೂಗಲ್‌ಪೇ ಬಳಸುವುದಕ್ಕೆ ಮುಂದಾಗುತ್ತಾರೆ. ಆಂಟ್ ಗ್ರೂಪ್, ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ ಕೋ, ಆಪಲ್ ಇಂಕ್ ಮತ್ತು ಪೇಪಾಲ್ ಹೋಲ್ಡಿಂಗ್ಸ್ ಇಂಕ್ ಸಹ ಮೊಬೈಲ್ ವ್ಯಾಲೆಟ್‌ಗಳನ್ನು ಗಡಿಯಾಚೆಗಿನ ಪಾವತಿಗಳಿಂದ ಹಿಡಿದು ಕ್ರೆಡಿಟ್‌ವರೆಗಿನ ಸೇವೆಗಳಿಗೆ ಹಬ್‌ಗಳಾಗಿ ನೀಡುವ ಗುರಿಯನ್ನು ಹೊಂದಿವೆ ಎನ್ನಲಾಗಿದೆ.

Best Mobiles in India

Read more about:
English summary
Google Pay users in the United States can now transfer money to app customers in India and Singapore.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X