ಬ್ರೇಕಿಂಗ್..ಇನ್ಮುಂದೆ ಮೊಬೈಲ್ ಕದ್ದರೆ ಕ್ಷಣಾರ್ಧದಲ್ಲಿ ಸಿಕ್ಕಿಬೀಳ್ತಾರೆ ಕಳ್ಳರು!

|

ಆಕಸ್ಮಿಕವಾಗಿ ಅಥವಾ ಕಳ್ಳರಿಂದ ನಿಮ್ಮ ಮೊಬೈಲ್ ನಿಮ್ಮ ಕೈತಪ್ಪಿದರೆ ಅದು ಮತ್ತೆ ವಾಪಸ್ ಸಿಗುವುದು ಅಪರೂಪದಲ್ಲೇ ಅಪರೂಪ. ಆದರೆ, ಇನ್ಮುಂದೆ ಹೀಗಾಗುವುದಿಲ್ಲ. ಏಕೆಂದರೆ, ಮೊಬೈಲ್ ಫೋನ್ ಕಳೆದುಕೊಂಡವರಿಗೆ ಮತ್ತೆ ಮೊಬೈಲ್ ಸಿಗುವಂತೆ ಮಾಡುವ ಸಲುವಾಗಿ ಟೆಲಿಕಾಂ ಸಚಿವಾಲಯವು ಹೊಸ ದತ್ತಾಂಶವನ್ನು ಪರಿಚಯಿಸುತ್ತಿದೆ ಎಂದು ತಿಳಿದುಬಂದಿದೆ.

ಬ್ರೇಕಿಂಗ್..ಇನ್ಮುಂದೆ ಮೊಬೈಲ್ ಕದ್ದರೆ ಕ್ಷಣಾರ್ಧದಲ್ಲಿ ಸಿಕ್ಕಿಬೀಳ್ತಾರೆ ಕಳ್ಳರು!
ಗೂಗಲ್‌ ಪೇನಲ್ಲಿ ಕ್ರಿಕೆಟ್ ಆಡಿ ದುಡ್ಡು ಗೆಲ್ಲಿ!!

ಇನ್ನು ಕೆಲ ವಾರಗಳಲ್ಲೇ ನೂತನ ದತ್ತಾಂಶವನ್ನು ಪರಿಚಯಸಿಸಲಾಗುತ್ತಿದ್ದು, ಮೊಬೈಲ್ ಕಳೆದುಕೊಂಡವರು ಟೆಲಿಕಾಂ ಇಲಾಖೆಗೆ ಮಾಹಿತಿ ನೀಡಬಹುದು. ಹೀಗೆ ಮಾಹಿತಿ ನೀಡಿದವರ ಮೊಬೈಲ್ ಅನ್ನು ಇತರೆ ಯಾರೂ ಬಳಸಲು ಸಾಧ್ಯವಾಗದಂತೆ ಶಾಶ್ವತವಾಗಿ ಲಾಕ್ ಮಾಡಲಾಗುವುದು ಮತ್ತು ಮೊಬೈಲ್ ಟ್ರ್ಯಾಕ್ ಮಾಡಲಾಗುವುದು ಎಂದು ಸಚಿವಾಲಯ ತಿಳಿಸಿದೆ.

ಕೇಂದ್ರ ಸಾಧನಗಳ ನೋಂದಣಿಯನ್ನು ನವೀಕರಿಸಲಾಗುತ್ತಿದ್ದು, ಇದರಲ್ಲಿ ಐಎಂಇಐಗಳ ದೊಡ್ಡ ಸಂಗ್ರಹವೆ ಸಿಗಲಿದೆ. ಇದರ ನೆರವಿನಿಂದ ತನಿಖಾಧಿಕಾರಿಗಳು ಸುಲಭವಾಗಿ ಮೊಬೈಲ್ ಬಳಕೆ ಟ್ರ್ಯಾಕ್ ಮಾಡಬಹುದು ಎಂದು ಸಚಿವಾಲಯ ಹೇಳಿದೆ. ಹಾಗಾದರೆ, ಏನಿಸು ಸಿಹಿಸುದ್ದಿ? ಮೊಬೈಲ್ ಕಳ್ಳರು ಮೊಬೈಲ್ ಕದ್ದರೂ ವೇಸ್ಟ್ ಏಕೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಹೊಸ ದತ್ತಾಂಶ ತಯಾರಾಗಲಿದೆ

ಹೊಸ ದತ್ತಾಂಶ ತಯಾರಾಗಲಿದೆ

ಮೊಬೈಲ್‌ನಲ್ಲಿರುನ 15 ಅಂಕಿಗಳ ವಿಶಿಷ್ಟ ಸಂಖ್ಯೆ IMEI ಗುರುತು ಸಂಖ್ಯೆ ಬಗ್ಗೆ ನಿಮಗೆ ತಿಳಿದಿರಬಹುದು. ಇದರಿಂದ ಯಾವುದೇ ಮೊಬೈಲ್‌ನ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು. ಹಾಗಾಗಿ, ಸರ್ಕಾರ ಇದರ ಹೊಸ ದತ್ತಾಂಶ ತಯಾರಿಸಲು ಮುಂದಾಗಿದೆ. ಇದರಿಂದ ಮೊಬೈಲ್ ಕಳೆದುಕೊಂಡವರು ನೇರವಾಗಿ ಟೆಲಿಕಾಂ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಬಹುದಾಗಿದೆ.

ಇದರಿಂದ ಆಗುವ ಲಾಭ ಏನು?

ಇದರಿಂದ ಆಗುವ ಲಾಭ ಏನು?

ಮೊಬೈಲ್ ಕಳ್ಳತನವಾದ ಅಥವಾ ಕಳೆದುಕೊಂಡವರು ಸ್ಥಳೀಯ ಪೊಲೀಸರಿಗೆ ದೂರು ನೀಡಬೇಕು. ನಂತರ ಸಹಾಯವಾಣಿ ಬಳಸಿ ಟೆಲಿಕಾಂ ಇಲಾಖೆಗೆ ಮಾಹಿತಿ ನೀಡಬಹುದು. ಸೂಕ್ತ ಮಾಹಿತಿ ಪಡೆಯುವ ಟೆಲಿಕಾಂ ಇಲಾಖೆ ಮೊಬೈಲ್ ಐಎಂಇಐ ಸಂಖ್ಯೆಯನ್ನು ಬ್ಲಾಕ್ ಲಿಸ್ಟ್‌ಗೆ ಸೇರಿಸಲಿದೆ ಮತ್ತು ಆ ಮೊಬೈಲ್ ಅನ್ನು ಟ್ರ್ಯಾಕ್ ಮಾಡಿ ಪೊಲೀಸರಿಗೆ ಮಾಹಿತಿ ನೀಡಲಿದೆ.

ಕಳ್ಳರಿನ್ನೂ ಕದ್ದರೂ ವೇಸ್ಟ್!

ಕಳ್ಳರಿನ್ನೂ ಕದ್ದರೂ ವೇಸ್ಟ್!

ಟೆಲಿಕಾಂ ಇಲಾಖೆಯಿಂದ ಕಳೆದುಹೋದ ಯಾವುದೇ ಮೊಬೈಲ್ ಸಂಖ್ಯೆಯ ಐಎಂಇಐ ಬ್ಲಾಕ್ ಲಿಸ್ಟ್‌ಗೆ ಸೇರಿಸಲಾಗುತ್ತದೆ. ಇದರಿಂದ ಮೊಬೈಲ್ ಕಸಿದುಕೊಂಡವರು ಕದ್ದ ಮೊಬೈಲಿನಿಂದ ಯಾವುದೇ ಸೆಲ್ಯುಲಾರ್ ನೆಟ್ವರ್ಕ್ ಬಳಸಲು ಸಾಧ್ಯವಾಗದಂತೆ ಮಾಡಬಹುದು ಅಥವಾ ಅವರು ಮೊಬೈಲ್ ಬಳಸಿದರೂ ಆ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಗುವಂತೆ ಮಾಡಲಾಗುತ್ತಿದೆ.

ಕಳ್ಳರ ಟ್ರ್ಯಾಪ್ ಸುಲಭ!

ಕಳ್ಳರ ಟ್ರ್ಯಾಪ್ ಸುಲಭ!

ಪ್ರಮುಖ ಮಾಧ್ಯಮ ಮಾಹಿತಿಗಳಂತೆ ಟೆಲಿಕಾಂ ಇಲಾಖೆಯು ಬ್ಲಾಕ್ ಲಿಸ್ಟ್‌ಗೆ ಸೇರಿಸಲಿರುವ ಮೊಬೈಲ್ ಅನ್ನು ಟ್ರ್ಯಾಕ್ ಮಾಡಲು ಇನ್ಮುಂದೆ ಸುಲಭವಾಗಲಿದೆಯಂತೆ. ಮೊಬೈಲ್ ಕಳ್ಳರನ್ನು ಹಿಡಿಯುವ ಸಲುವಾಗಿ ಪೊಲೀಸರಿಗೆ ಟೆಲಿಕಾಂ ಇಲಾಖೆ ಸಮಗ್ರ ಮಾಹಿತಿ ಒದಗಿಸಲಿದೆ. ಇದರಿಂದ ಕಳೆದ ಮೊಬೈಲ್‌ ಮತ್ತೆ ಸಿಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ವರದಿಗಲ್ಲಿ ಹೇಳಲಾಗಿದೆ.

ಕೆಲ ವಾರಗಳಲ್ಲೇ ಈ ಹೊಸ ದತ್ತಾಂಶ

ಕೆಲ ವಾರಗಳಲ್ಲೇ ಈ ಹೊಸ ದತ್ತಾಂಶ

2012ರ ರಾಷ್ಟ್ರೀಯ ಟೆಲಿಕಾಂ ನೀತಿಯ ಅನ್ವಯ ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದ್ದು, ಕಳೆದ ಬಜೆಟ್ ನಲ್ಲಿ ಸಿಇಐಆರ್ ಯೋಜನೆಗೆ 15 ಕೋಟಿ ರು ಅನುದಾನ ನೀಡಲಾಗಿದೆ. ಇದರ ಸಹಾಯದಿಂದ ಮೊಬೈಲ್ ಗುರುತು ಪತ್ತೆ ಸಂಖ್ಯೆಯ ನೋಂದಣಿ ಪಟ್ಟಿ ತಯಾರಿಸುವ ಯೋಜನೆ ಜಾರಿಯಲ್ಲಿದೆ. ಇನ್ನು ಕೆಲ ವಾರಗಳಲ್ಲೇ ಈ ಹೊಸ ದತ್ತಾಂಶ ತಯಾರಾಗಲಿದೆ.

Best Mobiles in India

English summary
You can soon track your stolen mobile: Govt set to roll out IMEI database. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X