Home
ಸುದ್ದಿಜಾಲ

2 ಕೋಟಿ ರೂ.ವರೆಗೂ ಹಣಗಳಿಸಬಹುದಾದ 'ಏರ್‌ಟೆಲ್‌ ಟಿವಿ ಫ್ರೀ ಹಿಟ್‌’ ಗೇಮ್‌ ಶುರು!!..ಇಲ್ಲಿದೆ ಫುಲ್ ಡೀಟೇಲ್ಸ್!!

By Bhaskar N J

ಜಿಯೋಗೆ ಭಾರೀ ಸೆಡ್ಡು ಹೊಡೆಯುತ್ತಿರುವ ಏರ್‌ಟೆಲ್ ಇದೀಗ ಮತ್ತೊಮ್ಮೆ ಜಿಯೋಗೆ ಟಾಂಗ್ ನೀಡಿದೆ. ಏರ್‌ಟೆಲ್‌ನ ಟೆಲಿವಿಷನ್‌ ಕಾರ್ಯಕ್ರಮಗಳ ನೇರ ಪ್ರಸಾರದ ಮೊಬೈಲ್‌ ಕಿರುತಂತ್ರಾಂಶ ಏರ್‌ಟೆಲ್‌ ಟಿವಿ, ಐಪಿಎಲ್ ಪಂದ್ಯಗಳಿಗೆ ಸಂಬಂಧಿಸಿದಂತೆ 'ಏರ್‌ಟೆಲ್‌ ಟಿವಿ ಫ್ರೀ ಹಿಟ್‌' ಗೇಮ್‌ ಪರಿಚಯಿಸಿದೆ.

ಐಪಿಎಲ್ ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸಲು ಭರ್ಜರಿ ಆಫರ್ ನೀಡಿದ ಜಿಯೋಗೆ ವಿರುದ್ದವಾಗಿ ಏರ್‌ಟೆಲ್ ತನ್ನದೇ ಗ್ರಾಹಕರಿಗೇ ಆಶ್ಚರ್ಯವಾಗುವಂತಹ ಆಫರ್ ನೀಡಿ ಎಲ್ಲರಿಗೂ ಆಶ್ಚರ್ಯ ಮೂಡಿಸಿದ್ದ ಏರ್‌ಟೆಲ್, ಇದೀಗ ಪ್ರತಿ ದಿನ ನಗದು ಬಹುಮಾನ ಗೆಲ್ಲಬಹುದಾದ ಅವಕಾಶ ನೀಡಿದೆ. ಇದಕ್ಕಾಗಿ ಪ್ರತಿದಿನ ₹ 2 ಕೋಟಿ ಹಣವನ್ನು ಏರ್‌ಟೆಲ್ ತೆಗೆದಿರಿಸಿದೆ.

2 ಕೋಟಿ ರೂ.ವರೆಗೂ ಹಣಗಳಿಸಬಹುದಾದ 'ಏರ್‌ಟೆಲ್‌ ಟಿವಿ ಫ್ರೀ ಹಿಟ್‌’ ಗೇಮ್‌ ಶುರು!!

ತನ್ನ ಏರ್‌ಟೆಲ್ ಆಪ್‌ನಲ್ಲಿ ಉಚಿತವಾಗಿ ಅನ್‌ಲಿಮಿಟೆಡ್ ಐಪಿಎಲ್ ಪಂದ್ಯಗಳನ್ನು ಉಚಿತವಾಗಿ ವೀಕ್ಷಣೆ ಅವಕಾಶವನ್ನು ಕಲ್ಪಿಸಿದ್ದ ಏರ್‌ಟೆಲ್ ಇದೀಗ ಪ್ರತಿ ದಿನ ನಗದು ಬಹುಮಾನ ಗೆಲ್ಲಬಹುದಾದ ಆಟವನ್ನು ಪರಿಸಯಿಸಿದ್ದು, ಹಾಗಾದರೆ, ಏನಿದು ಏರ್‌ಟೆಲ್ ಐಪಿಎಲ್ ಗೇಮ್? ಏರ್‌ಟೆಲ್ ಐಪಿಎಲ್ ಗೇಮ್ ಮೂಲಕ ಹಣಗಳಿಸುವುದು ಹೇಗೆ ಎಂಬುದನ್ನು ಮುಂದೆ ತಿಳಿಯಿರಿ.

ಫ್ರೀ ಹಿಟ್‌ ಲೈವ್‌!!

ಫ್ರೀ ಹಿಟ್‌ ಲೈವ್‌!!

ಐಪಿಎಲ್ ಪಂದ್ಯ ಆರಂಭಗೊಳ್ಳುವ ಮುಂಚೆ 7.30ಕ್ಕೆ ಫ್ರೀ ಹಿಟ್‌ ಲೈವ್‌ ಮತ್ತು ಪಂದ್ಯ ನಡೆಯುತ್ತಿರುವ ಸಂದರ್ಭದಲ್ಲಿ ‘ನಾನ್‌ ಲೈವ್‌' ಹೀಗೆ ಎರಡು ಬಗೆಯಲ್ಲಿ ಏರ್‌ಟೆಲ್ ಫ್ರೀ ಹಿಟ್ ಲೈವ್ ಗೇಮ್‌ನಲ್ಲಿ ಪಾಲ್ಗೊಳ್ಳಬಹುದು. ‘ಐಪಿಎಲ್‌ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ಗೆಲ್ಲುವ ಅವಕಾಶವಿದ್ದು, ಸ್ಪರ್ಧೆಯಲ್ಲಿ ಭಾಗವಹಿಸಲು ಏರ್‌ಟೆಲ್‌ ಟಿವಿ ಆಪ್‌ನ ಹೊಸ ಮಾದರಿ ಡೌನ್‌ಲೋಡ್ ಮಾಡಿಕೊಳ್ಳಬೇಕು ಎಂದು ಸಂಸ್ಥೆ ತಿಳಿಸಿದೆ

ಉಚಿತ ಐಪಿಎಲ್ ಆಕ್ಷನ್!!

ಉಚಿತ ಐಪಿಎಲ್ ಆಕ್ಷನ್!!

ಭಾರತದ ಕ್ರಿಕೆಟ್ ಹಬ್ಬ ಎಂದೇ ಕರೆಸಿಕೊಳ್ಳುವ ಐಪಿಎಲ್ ( ಇಂಡಿಯನ್ ಪ್ರೀಮಿಯರ್ ಲೀಗ್) ಹಿಂದೆ ಬಿದ್ದಿರುವ ಏರ್‌ಟೆಲ್ ಗ್ರಾಹಕರನ್ನು ಸೆಳೆಯಲು ಹೊಸ ತಂತ್ರವನ್ನು ಹಾಕಿಕೊಂಡಿದೆ. ತನ್ನ "ಏರ್‌ಟೆಲ್ ಟಿವಿ" ಆಪ್‌ ಮೂಲಕ ಉಚಿತವಾಗಿ ಅನ್‌ಲಿಮಿಟೆಡ್ ಐಪಿಎಲ್ ವೀಕ್ಷಣೆ ಅವಕಾಶವನ್ನು ನೀಡಿ ಏರ್‌ಟೆಲ್ ಗಮನಸೆಳೆದಿದೆ.

ಹಲವು ಉಚಿತ ಸೇವೆಗಳು!!

ಹಲವು ಉಚಿತ ಸೇವೆಗಳು!!

ಕ್ರಿಕೆಟ್ ಮ್ಯಾಚ್‌ಗಳ ಲೈವ್ ಜೊತೆಗೆ ಕ್ರಿಕೆಟ್ ಹೈಲೈಟ್ಸ್, ಕ್ರಿಕೆಟ್ ತಜ್ಞರ ವಿಶ್ಲೇಷಣೆ, ನೆಚ್ಚಿನ ತಂಡಗಳನ್ನು ಆಯ್ಕೆ, ನಡೆಯುತ್ತಿರುವ ಪಂದ್ಯಗಳು, ಮುಂಬರುವ ವೇಳಾಪಟ್ಟಿ ಮತ್ತು ವಿಶೇಷ ಸ್ಕೋರ್‌ಕಾರ್ಡ್ ಅಧಿಸೂಚನೆಗಳನ್ನು ಸೇರಿ ಹಲವು ವಿಶೇಷತೆಗಳನ್ನು ಏರ್‌ಟೆಲ್ ನೀಡಿದ್ದು, ಈ ಎಲ್ಲಾ ಸೇವೆಗಳು ಏರ್‌ಟೆಲ್ ಟಿವಿ ಆಪ್‌ನಲ್ಲಿ ಉಚಿತವಾಗಿ ಸಿಗಲಿದೆ.

ಉಚಿತ ಐಪಿಎಲ್ ವೀಕ್ಷಣೆ ಹೇಗೆ?

ಉಚಿತ ಐಪಿಎಲ್ ವೀಕ್ಷಣೆ ಹೇಗೆ?

ಏರ್‌ಟೆಲ್ ಟೆಲಿಕಾಂ ಕಂಪೆನಿ ತನ್ನ "ಏರ್‌ಟೆಲ್ ಟಿವಿ" ಆಪ್‌ನಲ್ಲಿ ಐಪಿಎಲ್ ಕ್ರಿಕೆಟ್‌ಗಾಗಿಯೇ ಪ್ರತ್ಯೇಕ ವಿಭಾಗವನ್ನು ತೆರೆದಿದೆ. ಏರ್‌ಟೆಲ್‌ನ ಎಲ್ಲಾ ಬಳಕೆದಾರರು ಉಚಿತವಾಗಿ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಂಡು, ಐಪಿಎಲ್ ಕ್ರಿಕೆಟ್‌ಗಾಗಿಯೇ ಇರುವ ವಿಭಾಗದಲ್ಲಿ ಎಲ್ಲಾ ಐಪಿಎಲ್ ಪಂದ್ಯಗಳನ್ನು ಉಚಿತವಾಗಿ ವೀಕ್ಷಿಸಬಹುದು ಎಂದು ಏರ್‌ಟೆಲ್ ತಿಳಿಸಿದೆ.!

How to use WhatsApp in Kannada - GIZBOT KANNADA
ಏರ್‌ಟೆಲ್ ಸಿಇಒ ಹೇಳಿದ್ದೇನು?

ಏರ್‌ಟೆಲ್ ಸಿಇಒ ಹೇಳಿದ್ದೇನು?

ಏರ್‌ಟೆಲ್ ಟಿವಿ ಮೂಲಕ ಉಚಿತವಾಗಿ ಅನಿಯಮಿತ ಐಪಿಎಲ್ ಲೈವ್ ಮ್ಯಾಚ್‌ಗಳನ್ನು ಪ್ರಸಾರವನ್ನು ಸೇರಿಸಲು ನಾವು ರೋಮಾಂಚನಗೊಂಡಿದ್ದೇವೆ. ಏರ್ಟೆಲ್ ಟಿವಿ ಅಪ್ಲಿಕೇಶನ್ ಬಳಕೆದಾರರು ಒಂದು ಕ್ಷಣವೂ ಸಹ ಅತಿದೊಡ್ಡ ಕ್ರಿಕೆಟ್ ಪ್ರದರ್ಶನದಿಂದ ಹೊರಗುಳಿಯವುದಿಲ್ಲ ಎಂದು ಏರ್‌ಟೆಲ್‌ ಕಂಟೆಂಟ್ ಸಿಇಒ ಸಮೀರ್ ಬಾತ್ರಾ ತಿಳಿಸಿದ್ದಾರೆ.

Best Mobiles in India

English summary
Users will just have to answer a set of questions related to the ongoing IPL T20 matches where they can win daily cash prizes from a total kitty of Rs 2 crore. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+