Subscribe to Gizbot

ಶೀಘ್ರವೇ ವಾಟ್ಸ್‌ಆಪ್‌ ಡಿಜಿಟಲ್ ಪೇಮೆಂಟ್ ಬಳಸಲು ರೆಡಿಯಾಗಿ!..ಏಕೆ ಗೊತ್ತಾ?!

Written By:

ಹಣಪಾವತಿ ವ್ಯವಹಾರ ನಡೆಸಲು ವಾಟ್ಸ್‌ಆಪ್‌ಗೆ ನ್ಯಾಷನಲ್ ಪೇಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾ ಅನುಮತಿ ನೀಡಿದೆ.!! ದೇಶದಲ್ಲಿ ಅತೀ ಹೆಚ್ಚಿನ ಬಳಕೆದಾರರನ್ನು ಹೊಂದಿರುವ ಫೇಸ್‌ಬುಕ್ ಮಾಲೀಕತ್ವದ ವಾಟ್ಸ್ಆಪ್ ಶೀಘ್ರವೇ ಡಿಜಿಟಲ್ ಪೇಮೆಂಟ್ ಸೇವೆಯನ್ನು ಆರಂಭಿಸಲಿದೆ.!!

ವಾಟ್ಸ್ಆಪ್ ಈಗಾಗಲೇ ಡಿಜಿಟಲ್ ಪೇಮೆಂಟ್ ಸೇವೆಯನ್ನು ಆರಂಭಿಸುವ ಸಲುವಾಗಿ ಕಾರ್ಯ ಚಟುವಟಿಕೆಯನ್ನು ಆರಂಭಿಸಿದ್ದು ಹಾಗಾದರೆ, ವಾಟ್ಸ್ಆಪ್ ಡಿಜಿಟಲ್ ಪೇಮೆಂಟ್ ಯಾವಾಗ ಜಾರಿಗೆ ಬರುತ್ತದೆ.? ವಾಟ್ಸ್ಆಪ್ ಪೇಮೆಂಟ್ ಉತ್ತಮ ಏಕೆ? ವಾಟ್ಸ್ಆಪ್ ಮೂಲಕ ಪೇಮೆಂಟ್ ಮಾಡುವುದು ಹೇಗೆ? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
1 ತಿಂಗಳಿನಲ್ಲಿ ಕಾರ್ಯಾಚರಣೆ ಸಾಧ್ಯತೆ!!

1 ತಿಂಗಳಿನಲ್ಲಿ ಕಾರ್ಯಾಚರಣೆ ಸಾಧ್ಯತೆ!!

ಈಗಾಗಲೇ ನ್ಯಾಷನಲ್ ಪೇಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾ ದಿಂದ ಅನುಮತಿ ಪಡೆದಿರುವ ವಾಟ್ಸ್‌ಆಪ್ ಇದಕ್ಕಾಗಿ ತಂತ್ರಜ್ಞಾನವನ್ನು ಅಭಿವೃಧ್ದಿ ಪಡಿಸುತ್ತಿದೆ. ಹಾಗಾಗಿ, ಇನ್ನು ಒಂದು ತಿಂಗಳಿನಲ್ಲಿ ಪೇಮೆಂಟ್ ಆಪ್ ಕಾರ್ಯಚರಣೆ ಆರಂಭಿಸುವ ಸಾಧ್ಯತೆ ಇದೆ.!!

UPI ಬಳಕೆಕೊಂಡು ಪೇಮೆಂಟ್ ಸೇವೆ.!!

UPI ಬಳಕೆಕೊಂಡು ಪೇಮೆಂಟ್ ಸೇವೆ.!!

UPI ಮತ್ತು ಭೀಮ್ ಬಳಕೆ ಮಾಡಿಕೊಂಡು ಪಾವತಿ ಮಾಡುವ ಆನೇಕ ಸೇವೆಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯವಿದೆ. ಸದ್ಯ ಇದೇ ಹಾದಿಯಲ್ಲಿ ವಾಟ್ಸ್‌ಆಪ್ ಸಹ ಸೇವೆ ನೀಡಲು ಮುಂದಾಗಿದ್ದು, ಮೆಸೇಂಜಿಂಗ್ ಜೊತೆಗೆ ಮತ್ತೊಂದು ಫೀಚರ್ ಆಡ್ ಆಗುತ್ತಿದೆ.!!

ಎನ್‌ಸ್ಕ್ರಿಪ್ಟ್ ಆಗಿರುತ್ತದೆ ನಿಮ್ಮ ಅಕೌಂಟ್.!!

ಎನ್‌ಸ್ಕ್ರಿಪ್ಟ್ ಆಗಿರುತ್ತದೆ ನಿಮ್ಮ ಅಕೌಂಟ್.!!

ನಿಮ್ಮ ವಾಟ್ಸ್‌ಆಪ್ ಮೆಸೇಜ್ ರೀತಿಯಲ್ಲಿಯೇ ನಿಮ್ಮ ಹಣದ ವಿವರಗಳು ಸಹ ವಾಟ್ಸ್‌ಆಪ್‌ನಲ್ಲಿ ಎನ್‌ಸ್ಕ್ರಿಪ್ಟ್ ಆಗಿರುತ್ತವೆ. ಯಾವುದೇ ಮೂರನೆ ವ್ಯಕ್ರಿಯಿಂದ ನಿಮ್ಮ ಯಾವುದೇ ವಿವರವನ್ನು ಸಹ ಕದಿಯಲು ಸಾಧ್ಯವಾಗುವುದಿಲ್ಲ. ಮತ್ತು ಪೇಮೆಂಟ್‌ ಸೇವೆಗೆ ಬೇರೆ ಪಾಸ್‌ವರ್ಡ್ ಆಯ್ಕೆ ನೀಡಲಾಗುತ್ತದೆ.!!

ಬ್ಯಾಂಕ್‌ಗೂ ಹಣ ಸೆಂಡ್ ಮಾಡಬಹುದು.!!

ಬ್ಯಾಂಕ್‌ಗೂ ಹಣ ಸೆಂಡ್ ಮಾಡಬಹುದು.!!

ನಿಮ್ಮ ವಾಟ್ಸ್‌ಆಪ್ ಪೇಮೆಂಟ್ ಅಕೌಂಟ್‌ನಿಂದ ಬ್ಯಾಂಕ್ ಅಕೌಂಟ್‌ಗಳಿಗೂ ನೇರವಾಗಿ ಹಣ ಸೆಂಡ್ ಮಾಡುವ ಆಯ್ಕೆ ಹೊಂದಿರುತ್ತದೆ. ಈಗಾಗಲೇ ಐಸಿಐಸಿಐ , ಹೆಚ್‌ಡಿಎಫ್‌ಸಿ ಸೇರಿದಂತೆ ಹಲವು ಬ್ಯಾಂಕ್‌ಗಳ ಜೊತೆ ವಾಟ್ಸ್‌ಆಪ್ ಒಪ್ಪಂದ ಮಾಡಿಕೊಂಡಿದೆ.!!

ಬೆನಿಫಿಷರಿ ಅಕೌಂಟ್ ವಿವರ ಬೇಕಿಲ್ಲ.!!

ಬೆನಿಫಿಷರಿ ಅಕೌಂಟ್ ವಿವರ ಬೇಕಿಲ್ಲ.!!

UPI ಬಳಕೆಕೊಂಡು ಪೇಮೆಂಟ್ ಸೇವೆ ನೀಡುತ್ತಿರುವ ವಾಟ್ಸ್ಆಪ್‌ನಲ್ಲಿ ಬೆನಿಫಿಷರಿ ಅಕೌಂಟ್‌ನ ಯಾವುದೇ ವಿವರಗಳು ಇಲ್ಲದೇ ಹಣ ಕಳಿಸಬಹುದಾಗಿದೆ ಎಂದು ಹೇಳಲಾಗಿದೆ. ಆದರೆ, ಈ ಬಗ್ಗೆ ಸ್ಪಷ್ಟ ಮಾಹಿತಿ ಇನ್ನು ಹೊರಬಿದ್ದಿಲ್ಲ.!!

ಓದಿರಿ:ನಿಮ್ಮ ಫೋನ್ ವೇಗ ಕಡಿಮೆಯಾಗಿದ್ದರೆ ಹೀಗೆ ಮಾಡಿ!..ಖಂಡಿತ ಸ್ಪೀಡ್ ಆಗುತ್ತೆ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
he world's most-popular messaging application WhatsApp has received permission from the National Payments Corporation of India. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot