ಜಿಮೇಲ್‌ನಲ್ಲಿ ಇನ್ಮುಂದೆ ಸಿಗಲಿದೆ ಸ್ವಯಂಚಾಲಿತ ರಿಪ್ಲೇಗೆ ಆಯ್ಕೆ ಮಾಡುವ ಅವಕಾಶ..!
ಈ ವರ್ಷದ ಆರಂಭದಲ್ಲಿ ಜಿಮೇಲ್ ವೆಬ್ ನಲ್ಲಿ ಹೊಸದಾಗಿ ಆಟೋ ರೆಸ್ಪಾನ್ಸ್ ವೈಶಿಷ್ಟ್ಯತೆಯನ್ನು ಗೂಗಲ್ ಪರಿಚಯಿಸಿತ್ತು.ಇದೀಗ ಆಂಡ್ರಾಯ್ಡ್ ಡಿವೈಸ್ ಮತ್ತು ಐಫೋನ್ ಗಳಲ್ಲೂ ಕೂಡ ಈ ವೈಶಿಷ್ಟ್ಯತೆ ಲಭ್ಯವಾಗುತ್ತಿದೆ. ಈ ವೈಶಿಷ್ಟ್ಯತೆಯು ಕೆಲವರಿಗೆ ಬಹಳ ಪ್ರಯೋಜನಕಾರಿ ಮತ್ತು ವೇಗವಾಗಿ ಉತ್ತರಿಸಲು ಕೂಡ ನೆರವು ನೀಡುತ್ತದೆ. ವಾಸ್ತವವಾಗಿ ಹೇಳಬೇಕೆಂದರೆ ಕೆಲವೊಮ್ಮೆ ಈ ಪ್ರತ್ಯುತ್ತರಗಳು ಸಮಂಜಸವಾಗಿ ಇರುವುದಿಲ್ಲ.

ಬಳಕೆದಾರರ ಆಯ್ಕೆಗೆ ಅವಕಾಶ:
ಈ ಪ್ರತ್ಯುತ್ತರಗಳ ವಿಚಾರದಲ್ಲಿ ಕೆಲವರಿಗೆ ಅಸಮಾಧಾನವಿತ್ತು. ಸರಿಯಾದ ಉತ್ತರಗಳು ಲಭ್ಯವಿರುವುದಿಲ್ಲ ಎಂಬ ಟೀಕೆಯೂ ಕೇಳಿಬಂದಿತ್ತು. ಹಾಗಾಗಿ ಗೂಗಲ್ ಬಳಕೆದಾರರಿಗೆ ಈ ವೈಶಿಷ್ಟ್ಯತೆಯನ್ನು ಬಳಕೆ ಮಾಡುವ ವಿಚಾರದಲ್ಲಿ ತಮ್ಮದೇ ನಿರ್ಧಾರ ಕೈಗೊಂಡು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡುತ್ತಿದೆ. ಅಂದರೆ ವಾಲ್ ಸ್ಟ್ರೀಟ್ ಜರ್ನಲ್ ವರದಿ ಹೇಳಿರುವಂತೆ, ಜಿಮೇಲ್ ಆಪ್ ಈ ವೈಶಿಷ್ಟ್ಯತೆಯನ್ನು ಬಳಕೆದಾರರು ಆನ್ ಮತ್ತು ಆಫ್ ಮಾಡಿ ಇಡುವುದಕ್ಕೆ ಇನ್ನು ಮುಂದೆ ಅವಕಾಶ ನೀಡುತ್ತದೆ.
ಅಂದರೆ ಇದರರ್ಥ ಅತೀ ಶೀಘ್ರದಲ್ಲಿ ಜಿಮೇಲ್ ಡೆಸ್ಕ್ ಟಾಪ್ ಬಳಕೆದಾರರು ಈ ಸ್ವಯಂಚಾಲಿತ ರೆಸ್ಪಾನ್ಸ್ ಗಳ ಬಳಕೆಗೆ ಕಡಿವಾಣ ಹಾಕಿಕೊಂಡು, ಅರ್ಥವಿಲ್ಲದ ಪ್ರತಿಕ್ರಿಯೆಗಳನ್ನು ಪಾಪ್ ಅಪ್ ಮಾಡುವ ಈ ವೈಶಿಷ್ಟ್ಯತೆಗಳಿಂದ ದೂರ ಉಳಿಯಲು ಅವಕಾಶ ನೀಡುತ್ತದೆ.
ಸ್ಮಾರ್ಟ್ ರಿಪ್ಲೈ ವೈಶಿಷ್ಟ್ಯತೆಯ ಇತಿಹಾಸ:
2015 ರಲ್ಲಿ ಇನ್ ಬಾಕ್ಸ್ ಆಪ್ ನಲ್ಲಿ ಮೊದಲ ಬಾರಿಗೆ ಈ ಸ್ಮಾರ್ಟ್ ರಿಪ್ಲೈ ಆಯ್ಕೆಯನ್ನು ನೀಡಲಾಯಿತು. ನಂತರ 2017 ರಲ್ಲಿ ಜಿಮೇಲ್ ನ ಆಂಡ್ರಾಯ್ಡ್ ಮತ್ತು ಐಓಎಸ್ ನಲ್ಲಿ ಇದನ್ನು ಬಿಡುಗಡೆಗೊಳಿಸಲಾಯಿತು. ಈ ವರ್ಷದ ಎಪ್ರಿಲ್ ನಲ್ಲಿ ಈ ಸೇವೆಯನ್ನು ಡೆಸ್ಕ್ ಟಾಪ್ ಬಳಕೆದಾರರಿಗೂ ಕರುಣಿಸಲಾಯಿತು.
ಪ್ರತ್ಯುತ್ತರಗಳಾದ 'Sent from my iPhone’ ಮತ್ತು 'I love you’ ನಂತಹವುಗಳನ್ನು ಗೂಗಲ್ ಮ್ಯಾನುವಲ್ ಆಗಿ ತೆಗೆದುಹಾಕಿದೆ. ಯಾಕೆಂದರೆ ಇದರ ಬಗ್ಗೆ ಬಹಳ ಟೀಕೆಗಳು ಕೇಳಿದ್ದವು. ಈ ಆಟೋ ಜನರೇಟೆಡ್ ಪ್ರತಿಕ್ರಿಯೆಗಳ ಬಗ್ಗೆ ಬಳಕೆದಾರರಿಗೆ ಬಹಳ ವಿರೋಧವಿತ್ತು.

ವರದಿಗಳು ಏನು ಹೇಳುತ್ತದೆ?
ಮತ್ತೊಂದು ವರದಿಯ ಪ್ರಕಾರ ಸ್ಮಾರ್ಟ್ ರಿಪ್ಲೈ ಜಿಮೇಲ್ ನ ಒಟ್ಟು ಪ್ರತಿಕ್ರಿಯೆಗಳಲ್ಲಿ ಶೇಕಡಾ 10 ರಷ್ಟನ್ನು ಮಾತ್ರ ಈ ಸ್ಮಾರ್ಟ ರಿಪ್ಲೈ ಆಯ್ಕೆಯಿಂದ ನಡೆಯುತ್ತದೆ. ಇಎನ್ಇಟಿ ವರದಿಯ ಪ್ರಕಾರ ಈ ವೈಶಿಷ್ಟ್ಯತೆಯು ಕೆಲವರನ್ನು ಹಿಡಿದಿಡುವಂತೆ ಮಾಡಿದೆ.ಗೂಗಲ್ ನ ಪ್ರೊಡಕ್ಟ್ ಮ್ಯಾನೇಜರ್ ಆಗಿರುವ ಅಜಿತ್ ವರ್ಮಾ ತಿಳಿಸುವಂತೆ ಈ ವೈಶಿಷ್ಟ್ಯತೆಗೆ ಧನಾತ್ಮಕ ಪ್ರತಿಕ್ರಿಯೆ ಇದೆ. ಆದರೆ ಡೆಸ್ಕ್ ಟಾಪ್ ಬಳಕೆದಾರರಿಗೆ ಇನ್ನು ಕೆಲವೇ ದಿನಗಳಲ್ಲಿ ಈ ವೈಶಿಷ್ಟ್ಯತೆಯನ್ನು ಬೇಕೇ ಅಥವಾ ಬೇಡವೇ ಎಂದು ಆಯ್ಕೆ ಮಾಡಿಕೊಳ್ಳುವುದಕ್ಕೆ ಅವಕಾಶ ನೀಡಲಾಗುತ್ತದೆ.


Click it and Unblock the Notifications








