ಸೊಶೀಯಲ್ ಮೀಡಿಯಾ ಸಹವಾಸವೇ ಸಾಕು ಎನಿಸಿದೆಯಾ? ಹಾಗಾದ್ರೆ ಹೀಗೆ ಮಾಡಿ!
ಅರೆ ಕ್ಷಣವಾದರೂ ಸೊಶೀಯಲ್ ಮೀಡಿಯಾ ಕಡೆಗೆ ಕಣ್ಣಾಡಿಸಲೇಬೇಕು ಎನ್ನುವ ಕಾಲಘಟ್ಟದಲ್ಲಿ ನಾವಿದ್ದೇವೆ. ಅಜ್ಜಿಯಿಂದ ಹಿಡಿದು ಮೊಮ್ಮಗನ ತನಕ ಸೊಶೀಯಲ್ ಮೀಡಿಯಾದಲ್ಲಿ ಒಂದು ಅಕೌಂಟ್ ಹೊಂದಿರೋದು ಕಾಮನ್ ಆಗೋಗಿದೆ. ಆದರೆ ಸೊಶೀಯಲ್ ಮೀಡಿಯಾದಿಂದ ಸ್ವಲ್ಪ ಬ್ರೇಕ್ ಪಡೆದುಕೊಳ್ಳೊಣ ಅನ್ನೊರು ಕೂಡ ನಮ್ಮ ನಡುವೆ ಇದ್ದಾರೆ.
ಹೌದು, ಸೊಶೀಯಲ್ ಮೀಡಿಯಾ ಬಳಸಿ ನಿಮಗೆ ಬೇಸರ ಆಗೋಗಿದೆಯಾ? ಸೊಶೀಯಲ್ ಮೀಡಿಯಾ ಸಹವಾಸವೇ ಸಾಕು, ಇದರಿಂದ ಸ್ವಲ್ಪ ಬ್ರೇಕ್ ತೆಗೆದುಕೊಳ್ಳಬೇಕು ಎನ್ನುವ ಆಸೆ ಇದೆಯಾ? ಹಾಗಾದ್ರೆ ಸೊಶೀಯಲ್ ಮೀಡಿಯಾದಿಂದ ವಿರಾಮ ತೆಗೆದುಕೊಳ್ಳಲು ನೀವು ಏನ್ ಮಾಡಬೇಕು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸೊಶೀಯಲ್ ಮೀಡಿಯಾ ಇಂದು ಸಾಕಷ್ಟು ಪ್ರಭಾವಶಾಲಿಯಾಗಿದೆ. ವಯಸ್ಸಿನ ಅಂತರವನ್ನು ಮೀರಿ ಎಲ್ಲಾ ವಯೋಮಾನದವರನ್ನು ಕೂಡ ಸೆಳೆಯುವ ತಾಕತ್ತನ್ನು ಸೊಶೀಯಲ್ ಮೀಡಿಯಾ ಹೊಂದಿದೆ. ಅಷ್ಟೇ ಅಲ್ಲ ಸ್ವಲ್ಪ ಸಮಯ ಫ್ರಿ ಸಿಕ್ಕರೆ ಸಾಕು ಸೊಶೀಯಲ್ ಮೀಡಿಯಾ ಸೈಟ್‌ನಲ್ಲಿ ಕಾಲ ಕಳೆಯುವ ಮಟ್ಟಿಗೆ ಸೆಳೆದಿದೆ. ಐದು ನಿಮಿಷಕ್ಕೊಮ್ಮೆಯಾದರೂ ಸೊಶೀಯಲ್ ಮೀಡಿಯಾದಲ್ಲಿ ಏನಾಗ್ತಿದೆ ಅಂತಾ ಇಣುಕಿ ನೋಡುವುದು ಸಾಮಾನ್ಯವಾಗಿ ಹೋಗಿದೆ.
ಹೀಗೆ ಸೊಶೀಯಲ್ ಮೀಡಿಯಾದಲ್ಲಿ ಕಾಲ ಕಳೆಯುವ ಮಂದಿಗೆ, ಸ್ವಲ್ಪಿ ಬ್ರೇಕ್ ಬೇಕು ಅಂತಾ ಅನಿಸೋದು ಕೂಡ ಸಹಜ. ಪ್ರತಿ ನಿತ್ಯವೂ ಸೊಶೀಯಲ್ ಮೀಡಿಯಾದಲ್ಲಿ ಕಾಲ ಕಳೆದ ಬೇಸರವಾದವರಿಗೆ ಸೊಶೀಯಲ್ ಮೀಡಿಯಾದಿಂದ ಸ್ವಲ್ಪ ಕಾಲ ದೂರ ಉಳಿಯಬೇಕು ಅನಿಸುತ್ತೆ. ಇಂತಹ ಸಮಯದಲ್ಲಿ ನೀವು ನಿಮ್ಮ ಸೊಶೀಯಲ್ ಮೀಡಿಯಾ ಅಕೌಂಟ್‌ಗಳನ್ನು ಏನು ಮಾಡೋದು ಅನ್ನೊಸ ಗೊಂದಲ ಇರುತ್ತದೆ. ಇಂತಹ ಸಮಯದಲ್ಲಿ ನೀವು ನಿಮ್ಮ ಸೊಶೀಯಲ್ ಮೀಡಿಯಾ ಅಕೌಂಟ್‌ಗಳನ್ನು ಡಿ ಆ್ಯಕ್ಟಿವ್ ಮಾಡುವುದು ಸೂಕ್ತವಾಗಿದೆ.

ಲ್ಯಾಪ್‌ಟಾಪ್‌ನಲ್ಲಿ ನಿಮ್ಮ ಫೇಸ್‌ಬುಕ್ ಅಕೌಂಟ್ ಡಿ ಆ್ಯಕ್ಟಿವ್ ಮಾಡಲು ಹೀಗೆ ಮಾಡಿ!
* ಮೊದಲಿಗೆ ವೆಬ್ ಬ್ರೌಸರ್ ಮೂಲಕ ನಿಮ್ಮ ಫೇಸ್‌ಬುಕ್ ಅಕೌಂಟ್ ತೆರೆಯಿರಿ
* ಇದೀಗ ನಿಮ್ಮ ಪ್ರೊಫೈಲ್ ಚಿತ್ರವನ್ನು ಕ್ಲಿಕ್ ಮಾಡಿ.
* ನಂತರ ಸೆಟ್ಟಿಂಗ್ಸ್ ಮತ್ತು ಪ್ರೈವೆಸಿ ಆಯ್ಕೆಯನ್ನು ಟ್ಯಾಪ್ ಮಾಡಿ
* ಇದೀಗ ಸೆಟ್ಟಿಂಗ್ಸ್ ಆಯ್ಕೆಯನ್ನು ಕ್ಲಿಕ್ ಮಾಡಿ.
* ನಂತರ ಪ್ರೈವೆಸಿ ಆಯ್ಕೆಯನ್ನು ಕ್ಲಿಕ್ ಮಾಡಿ ಇದರಲ್ಲಿ ನಿಮ್ಮ ಫೇಸ್‌ಬುಕ್ ಇನ್‌ಫಾರ್ಮೆಶನ್ ಮೇಲೆ ಕ್ಲಿಕ್ ಮಾಡಿ.
* ಇದರಲ್ಲಿ ಡಿಆ್ಯಕ್ಟಿವೇಟ್ ಮತ್ತು ಡಿಲೀಟ್ ಆಯ್ಕೆಯನ್ನು ಕ್ಲಿಕ್ ಮಾಡಿ.
* ಇದೀಗ ನೀವು ಅಕೌಂಟ್ ಅನ್ನು ಡಿಆ್ಯಕ್ಟಿವ್ ಮಾಡಿ ಆಯ್ಕೆಯನ್ನು ಟ್ಯಾಪ್ ಮಾಡಿ.
* ನಂತರ ಕಂಟಿನ್ಯೂ ಟು ಅಕೌಂಟ್ ಡಿಆ್ಯಕ್ಟಿವೇಶನ್ ಆಯ್ಕೆಯನ್ನು ಕ್ಲಿಕ್ ಮಾಡಿ.
ನಂತರದ ಸೂಚನೆಗಳನ್ನು ಅನುಸರಿಸಿದರೆ ನಿಮ್ಮ ಫೇಸ್‌ಬುಕ್ ಅಕೌಂಟ್ ಅನ್ನು ಡಿ ಆ್ಯಕ್ಟಿವೇಟ್ ಮಾಡಬಹುದಾಗಿದೆ.

ಲ್ಯಾಪ್‌ಟಾಪ್‌ನಲ್ಲಿ ನಿಮ್ಮ ಇನ್‌ಸ್ಟಾಗ್ರಾಮ್ ಅಕೌಂಟ್ ಡಿ ಆ್ಯಕ್ಟಿವ್ ಮಾಡಲು ಹೀಗೆ ಮಾಡಿ!
* ಮೊದಲು ನಿಮ್ಮ ಲ್ಯಾಪ್‌ಟಾಪ್‌ನಿಂದ ಇನ್‌ಸ್ಟಾಗ್ರಾಮ್.ಕಾಮ್‌ಗೆ ಲಾಗ್ ಇನ್ ಮಾಡಿ.
* ನಂತರ ನಿಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್ ಅನ್ನು ಕ್ಲಿಕ್ ಮಾಡಿ.
* ಇದೀಗ ಎಡಿಟ್ ಪ್ರೊಫೈಲ್ ಆಯ್ಕೆಯನ್ನು ಕ್ಲಿಕ್ ಮಾಡಿ.
* ನಂತರ ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಕೆಳಗಿನ ಬಲ ಮೂಲೆಯಲ್ಲಿ ನನ್ನ ಖಾತೆಯನ್ನು ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸಿ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.
* ಇದೀಗ ನಿಮ್ಮ ಅಕೌಂಟ್ ಅನ್ನು ಯಾಕೆ ಡಿ ಆ್ಯಕ್ಟಿವೇಟ್ ಮಾಡ್ತಾ ಇದ್ದಿರಾ ಅನ್ನೊದನ್ನ ಡ್ರಾಪ್ ಡೌನ್ ಮೆನುವಿನಲ್ಲಿ ಕಾಣುವ ಆಯ್ಕೆಯ ಮೂಲಕ ತಿಳಿಸಿ.
* ನಂತರ ನಿಮ್ಮ ಪಾಸ್‌ವರ್ಡ್ ಅನ್ನು ರಿ ಎಂಟ್ರಿ ಮಾಡಿ.
* ಇದಾದ ಮೇಲೆ ಅಕೌಂಟ್ ಅನ್ನು ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸಿ ಆಯ್ಕೆಯನ್ನು ಕ್ಲಿಕ್ ಮಾಡಿ.
* ಡಿ ಆ್ಯಕ್ಟಿವೇಟ್ ಕನ್ಫರ್ಮ್ ಮಾಡುವುದಕ್ಕೆ ಹೌದು ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.


Click it and Unblock the Notifications








