Home
ಸುದ್ದಿಜಾಲ

ವೈಫೈ ಮೂಲಕ ಕರೆಗಳನ್ನು ಮಾಡುವ ಅವಕಾಶ

By Sushma Charhra

ರಾಷ್ಟ್ರೀಯ ಟೆಲಿಕಾಂ ನೀತಿಯ ಕರಡು ಪ್ರತಿ ಬಿಡುಗಡೆಗೊಂಡಿದೆ. ಈ ಹೊಸ ನಿಯಮಾವಳಿಗಳ ಪ್ರಕಾರ, ಲೈಸನ್ಸ್ ಇರುವ ಟೆಲಿಕಾಂ ಒದಗಿಸುವವರು ಉದಾಹರಣೆಗೆ ಏರ್ ಟೆಲ್, ಐಡಿಯಾ, ರಿಲಯನ್ಸ್,ಜಿಯೋ, ವಡಾಫೋನ್, ಇತ್ಯಾದಿಗಳು ಇನ್ನು ಮುಂದೆ ಆಪ್ ನಂತರ ಒಂದು ಕರೆಗಳನ್ನು ಮಾಡಬಹುದಾದ ಸರ್ವೀಸನ್ನು ವೈಫೈ ಮೂಲಕ ಒದಗಿಸಿಕೊಡಲಿವೆ. ಈ ಕರೆಗಳು ನೀವು ಈಗ ಬಳಸುವ ನಾರ್ಮಲ್ ಕರೆಗಳಂತೆಯೇ ಇದ್ದು, ಆಪರೇಟರ್ ಗಳು ಟ್ರಾಯ್ ಹೇಳುವ ಮಾರ್ಗದರ್ಶಿ ಸೂಚ್ಯಗಳನ್ನು ಪಾಲಿಸಬೇಕಾಗುತ್ತದೆ. ಹಾಗಾದ್ರೆ ಇದು ಹೇಗೆ ಕೆಲಸ ನಿರ್ವಹಿಸುತ್ತದೆ ಎಂಬ ಗೊಂದಲವೇ.. ಇಲ್ಲಿದೆ ನೋಡಿ ವಿವರ

ವೈಫೈ ಮೂಲಕ ಕರೆಗಳನ್ನು ಮಾಡುವ ಅವಕಾಶ


ಉದಾಹರಣೆಗೆ ನೀವು ವಡಾಫೋನ್ ನಂಬರ್ ಬಳಕೆ ಮಾಡುತ್ತಿದ್ದೀರಾದರೆ, ಒಂದು ವೇಳೆ ನಿಮಗೆ ಸರಿಯಾದ ಕನೆಕ್ಷನ್ ಸಿಗುತ್ತಿಲ್ಲ, ನೀವಿರುವ ಪ್ರದೇಶದಲ್ಲಿ ಸಮಸ್ಯೆಯಾಗುತ್ತಿದೆ ಮತ್ತು ಎಷ್ಟು ಬಾರಿ ಕರೆ ಮಾಡಿದರೂ ಕಟ್ ಆಗುತ್ತಿದೆಯಾದರೆ, ಆಗ ನೀವು ಒಂದು ಆಪ್ ಬಳಕೆ ಮಾಡಬಹುದು. ಅದು ನಿಮ್ಮ ಮನೆಯ ಅಥವಾ ಆಫೀಸಿನ ವೈಫೈ ಬಳಕೆ ಮಾಡಿ ಕರೆಗಳನ್ನು ಮಾಡಲು ಅವಕಾಶ ನೀಡುತ್ತದೆ. ಟೆಲಿಫೋನಿ ಆಪ್ ನೀವು ಬಳಸುವ ಸರ್ವೀಸ್ ಪ್ರೊವೈಡರ್ ದೇ ಆಗಿರಬೇಕು ಎಂದೇನಿಲ್ಲ ಬೇರೆಯದ್ದೂ ಆಗಿರಬಹುದು.

ನೀವು ವಡಾಫೋನ್ ಸಿಮ್ ನ್ನು ಕರೆ ಮಾಡಲು ಬಳಸುತ್ತಿದ್ದು, ಕಾಲ್ ಮಾಡಲು ಬೇರೆ ಸರ್ವೀಸ್ ಪ್ರೊವೈಡರ್ ನ ಟೆಲಿಫೋನಿ ಆಫ್ ಬಳಸುವ ಸಂದರ್ಬ ಬಂದರೆ ನೀವು ಕಂಪೆನಿಯ ಒಂದು ಅಪ್ಲಿಕೇಷನನ್ನು ಡೌನ್ ಲೋಡ್ ಮಾಡಿಕೊಳ್ಳಬೇಕಾಗುತ್ತದೆ. ಈ ಸಂದರ್ಬದಲ್ಲಿ ನಿಮಗೆ 10 ಸಂಖ್ಯೆಯ ಒಂದು ಮೊಬೈಲ್ ನಂಬರ್ ನ್ನು ನೀಡಲಾಗುತ್ತೆ. ಆದರೆ ನೀವು ವಡಾಫೋನ್ ಬಳಕೆದಾರರೇ ಆಗಿದ್ದು, ವಡಾಫೋನ್ ಟೆಲಿಫೋನ್ ಆಪ್ ನ್ನೇ ವೈಫೈ ಮೂಲಕ ಬಳಸಲು ಇಚ್ಛಿಸುತ್ತಿದ್ದೀರಾದರೆ ಈ 10 ಸಂಖ್ಯೆಯ ಹೊಸ ಫೋನ್ ನಂಬರ್ ಬೇಕಾಗುವುದಿಲ್ಲ.

ಆದರೆ ನೆನಪಿರಲಿ, ಈ ಎರಡೂ ಸಂದರ್ಬದಲ್ಲೂ ಹೊಸ ಸಿಮ್ ಕಾರ್ಡ್ ಬೇಕಾಗುವುದಿಲ್ಲ.

ಫೇಸ್‌ಬುಕ್ ಅನ್ನು ಸಹ ಬಳಸಬಹುದಾದ ಈ ಫೀಚರ್ ಪೋನ್ ಅತ್ಯುತ್ತಮವಾಗಿದೆ

Voice over Internet Protocol (VOIP) ವಿಶ್ವದಾದ್ಯಂತ ಕರೆಗಳ ವೆಚ್ಚವನ್ನು ಕಡಿತಗೊಳಿಸಲು ಪ್ರಯತ್ನಿಸುತ್ತಿತ್ತು. ಆದರೆ ಭಾರತವು ಇದರಿಂದ ಹೊರಗುಳಿದಿತ್ತು. ಆದರೆ ಈಗಿನ ಮೋದಿ ಸರ್ಕಾರವು ಈ ನಿಟ್ಟಿನಲ್ಲಿ ಪ್ರಯತ್ನ ಮಾಡಿದ್ದು, ಮುಂದಿನ ದಿನಗಳಲ್ಲಿ ಕರೆಗಳ ವೆಚ್ಚವು ಭಾರೀ ಮಟ್ಟದಲ್ಲಿ ಕಡಿಮೆಯಾಗಲಿದೆ.ಆ ನಿಟ್ಟಿನಲ್ಲಿ ಈ ವೈಫೈ ಕರೆಗಳು ದೊಡ್ಡ ಮಟ್ಟದ ಬದಲಾವಣೆಗೆ ಕಾರಣವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ನಮ್ಮಲ್ಲಿರುವ ಜನಸಂಖ್ಯೆಗೆ ಈ ಕರೆಗಳ ವೆಚ್ಚವನ್ನು ಕಡಿಮೆ ಮಾಡುವುದು ಬಹಳ ಅನಿವಾರ್ಯ ಕೂಡ ಹೌದು.

Best Mobiles in India

English summary
You will soon be able to use your Wi-Fi network to make calls: Here's how it will work. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+