Home
ಸುದ್ದಿಜಾಲ

ಐಫೋನ್ ಖರೀದಿಸಲು ಕಿಡ್ನಿ ಮಾರಿ ಸಾವು ಬದುಕಿನ ನಡುವೆ ಯುವಕನ ಹೋರಾಟ!!

ಐಫೋನ್ ಖರೀದಿಸಲು ಕಿಡ್ನಿ ಮಾರಬೇಕು ಎಂದು ತಮಾಷೆಯಾಗಿ ಹೇಳಲಾಗುತ್ತದೆ. ಆದರೆ, ಇಲ್ಲೋರ್ವ ನಿಜವಾಗಿಯೂ ಐಫೋನ್ ಖರೀದಿಸಲು ತನ್ನ ಕಿಡ್ನಿಯನ್ನು ಮಾರಿ ಆಸ್ಪತ್ರೆ ಸೇರಿರುವ ಘಟನೆ ಚೀನಾದಲ್ಲಿ ನಡೆದಿದೆ. ಚೀನಾ ದೇಶದ ಕ್ಸಿಯಾವೊ ವಾಂಗ್ ಎಂಬ ಯುವಕಯೋರ್ವ​ ಐಫೋನ್ ಖರೀದಿಸಲು ಕಿಡ್ನಿ ಮಾರಿ ಈಗ ಸಾವುಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.

ಹೌದು, ಇದನ್ನು ನಂಬಲು ಸಾಧ್ಯವಾಗದಿದ್ದರೂ ನಂಬಲೇಬೇಕು. ಐಫೋನ್​ ಕೊಂಡುಕೊಳ್ಳಬೇಕಾದರೆ ಒಂದು ಕಿಡ್ನಿ ಮಾರಬೇಕು ಎಂದು ತಮಾಷೆಯಾಗಿಯೂ ಹೇಳುತ್ತಿದ್ದರು. ಆದರೆ ಏಳು ವರ್ಷದ ಹಿಂದೆ ಈ ತಮಾಷೆ ಮಾತನ್ನು ಗಂಭೀರವಾಗಿ ಪರಿಗಣಿಸಿದ್ದ ಚೀನಾದ ಯುವಕ ಕ್ಸಿಯಾವೊ ವಾಂಗ್​ ಐಫೋನ್​ 4 ಖರೀದಿಸಲು ಉತ್ಸುಕನಾಗಿ, ತನ್ನ ಕಿಡ್ನಿಯನ್ನೇ ಮಾರಿದ್ದಾನೆ.

ಐಫೋನ್ ಖರೀದಿಸಲು ಕಿಡ್ನಿ ಮಾರಿ ಸಾವು ಬದುಕಿನ ನಡುವೆ ಯುವಕನ ಹೋರಾಟ!!

2011 ರಲ್ಲಿ, ಕ್ಸಿಯಾವೊ ವಾಂಗ್ ಆಪಲ್ ಐಫೋನ್ 4 ಖರೀದಿಸಲು ಮುಂದಾಗಿದ್ದಾನೆ. ಆದರೆ, ಆ ಕಾಲದಲ್ಲಿ ಐಫೋನ್​ ದುಬಾರಿಯಾದ್ದರಿಂದ 3200 ಡಾಲರ್‌ಗಳಿಗೆ ತನ್ನ 17 ನೇ ವಯಸ್ಸಿನಲ್ಲೇ ಕಿಡ್ನಿಯನ್ನು ಮಾರಿ ಐಫೋನ್ ಖರೀದಿಸಿದ್ದಾನೆ. ಆದರೆ, ಈ ಸುದ್ದಿ ಈಗ ಹೊರಬೀಳಲು, ಆತ ಮಾಡಿದ ಆ ಒಂದು ತಪ್ಪಿನಿಂದ ಈಗ ಆತ ತನ್ನ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ.

ಕಿಡ್ನಿಯನ್ನು ಆತ ಮಾರಿದ್ದ ವೇಳೆಯಲ್ಲಿ ಕಿಡ್ನಿ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿರಲಿಲ್ಲ ಎಂದು ತಿಳಿದುಬಂದಿದೆ. ಶಸ್ತ್ರ ಚಿಕಿತ್ಸೆ ಮಾಡಿದ್ದ ಗಾಯ ವಾಸಿಯಾಗುವುದಿಲ್ಲ. ಇದರಿಂದ ಸೋಂಕು ತಗುಲಿ ಮತ್ತೊಂದು ಕಿಡ್ನಿ ಮೇಲೂ ಪರಿಣಾಮ ಬೀಳುತ್ತದೆ. ಇದರ ಪರಿಣಾಮ ಸದ್ಯ ಕ್ಸಿಯಾವೋ ತಾನು ಬದುಕಿರುವಷ್ಟು ದಿನ ಡಯಾಲಿಸಿಸ್​ ಮೊರೆ ಹೋಗಬೇಕಿದೆ ಎಂದು ವೈದ್ಯರು ಹೇಳಿದ್ದಾರೆ.

ಐಫೋನ್ ಖರೀದಿಸಲು ಕಿಡ್ನಿ ಮಾರಿ ಸಾವು ಬದುಕಿನ ನಡುವೆ ಯುವಕನ ಹೋರಾಟ!!

ಶಸ್ತ್ರ ಚಿಕಿತ್ಸೆಗೂ ಮುಂಚೆ ಏನೂ ಅಪಾಯವಾಗುವುದಿಲ್ಲ ಎಂದು ಆಸ್ಪತ್ರೆಯವರು ಆತನಿಗೆ ಭರವಸೆ ನೀಡಿದ್ದರಾದರೂ ಈ ಘಟನೆ ನಡೆದಿದೆ. ಈಗ ಹಾಸಿಗೆ ಹಿಡಿದಿರುವ ಕ್ಸಿಯಾವೊ ಚಿಕಿತ್ಸೆಗೆ ಹಣ ಹೊಂದಿಸಲು ಆತನ ಪಾಲಕರು ಪರದಾಡುವ ಸ್ಥಿತಿ ಬಂದಿದೆ. ಒಂದು ಐಫೋನ್ ಖರೀದಿಸುವ ಸಲುವಾಗಿ ಚಿಕ್ಕ ವಯಸ್ಸಿನಲ್ಲೇ ಆತ ಮಾಡಿದ ತಪ್ಪು ಈಗಿನ ಯುವಕರಿಗೆ ಪಾಠವಾಗಿದೆ.
Best Mobiles in India

English summary
in 2011, a young man in China was dying for an Apple iPhone 4, which was the company's hot new phone at the time. In order to get the iPhone 4 he so craved for, Wang sold one of his kidneys for the equivalent of $3,200 USD. to know more this visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+