Subscribe to Gizbot

ಯುರೋಪ್ ನ ಅತ್ಯಂತ ಕಿರಿಯ ಆಪ್(App) ವಿನ್ಯಾಸಕನನ್ನು ಹೊರಹಾಕಿದ ಶಾಲೆ

Posted By: Varun
ಯುರೋಪ್ ನ ಅತ್ಯಂತ ಕಿರಿಯ ಆಪ್(App) ವಿನ್ಯಾಸಕನನ್ನು ಹೊರಹಾಕಿದ ಶಾಲೆ

ಮಕ್ಕಳು ತಪ್ಪು ಮಾಡುತ್ತಾರೆ. ತಪ್ಪು ಮಾಡಿದರೆ ತಾನೆ ಕಲಿಯಲು ಸಾಧ್ಯ. ಆದರೆ ಲಂಡನ್ ನ ಶಾಲೆಯೊಂದು ತನ್ನ ಪ್ರತಿಷ್ಟಿತ ವಿದ್ಯಾರ್ಥಿಯನ್ನು ಶಾಲೆಯಿಂದಲೇ ಹೊರಹಾಕಿದೆ.

ಆರನ್ ಬಾಂಡ್ ಎಂಬ 14 ವರ್ಷದ ಹುಡುಗ, ಯುರೋಪ್ ನ ಅತ್ಯಂತ ಕಿರಿಯ ಆಪ್(App) ವಿನ್ಯಾಸಕ ಎಂಬ ಪಟ್ಟವನ್ನು ಪಡೆದಿದ್ದಾತ. ಶಾಲೆಯ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಬಗ್ಗೆ ಗೌಪ್ಯ ಮಾಹಿತಿ ಹಾಗೂ ಉಪ ಪ್ರಾಂಶುಪಾಲರ ಆರ್ಥಿಕ ಮಾಹಿತಿ ಯನ್ನು ಹ್ಯಾಕ್ ಮಾಡಿ ತನ್ನ ಸಹಪಾಟಿಗಳ ಮಾಹಿತಿಯನ್ನು ತಿದ್ದಿದ್ದನಂತೆ. ಇದೇ ಈತ ಮಾಡಿರುವ ಅಪರಾಧ.

ಸ್ಮಾರ್ಟ್ ಫೋನ್ ಬಳಕೆದಾರರಿಗೆಂತಲೇ ಆರು ಆಪ್ ಗಳನ್ನು ವಿನ್ಯಾಸ ಮಾಡಿರುವ ಆತ ತನ್ನದೇ ಸ್ವಂತ ವೆಬ್ ವಿನ್ಯಾಸ ಕಂಪನಿಯನ್ನು ಬೇರೆ ಹೊಂದಿದ್ದಾನೆ. 2011 ರ ಆಪಲ್ ಸಮ್ಮೇಳನಕ್ಕೆ ಕೂಡ ಆಯ್ಕೆಯಾಗಿದ್ದ, ಈ ಪ್ರತಿಭಾವಂತ ಹುಡುಗ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot