TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಶಾಕಿಂಗ್ ನ್ಯೂಸ್..ಡಿಸೆಂಬರ್ 31 ರಿಂದ ಎಲ್ಲಾ ಡೆಬಿಟ್/ಕ್ರೆಡಿಟ್ ಕಾರ್ಡ್ಗಳು ಸ್ಥಗಿತ!!
ನಿಮ್ಮ ಡೆಬಿಟ್ ಕಾರ್ಡ್ ಅನ್ನು ಒಮ್ಮೆ ಗಮನಿಸಿ, ಹಿಂಬದಿಯಲ್ಲಿ ಕಪ್ಪು ಬಣ್ಣದ ಉದ್ದ ಪಟ್ಟಿ ಇದ್ದು, ಮುಂಬದಿಯಲ್ಲಿ ಯಾವುದೇ ಚಿಪ್ ಇಲ್ಲದಿದ್ದರೆ ಅದು ಸಾಮಾನ್ಯ ಮ್ಯಾಗ್ನೆಟಿಕ್ ಕಾರ್ಡ್ ಎಂದು ಅರ್ಥ. ಆದರೆ, ವಿಷಯ ಇದಲ್ಲ. ಈಗಲೂ ನೀವು ಇಂತಹ ಹಳೆಯ ಡೆಬಿಟ್ ಕಾರ್ಡ್‌ಗಳನ್ನೇ ಬಳಸುತ್ತಿದ್ದರೆ, ಡಿಸೆಂಬರ್ ನಂತರ ಎಟಿಎಂ ಸ್ಥಗಿತದಂತಹ ಪರಿಸ್ಥಿತಿಯೇ ಎದುರಿಸಬೇಕಾಗುತ್ತದೆ.
ಹೌದು, ಹಲವು ಬ್ಯಾಂಕ್‌ಗಳು ಇಂತಹ ಕಾರ್ಡ್‌ಗಳನ್ನು ಹತ್ತು ವರ್ಷದ ಅವಧಿವರೆಗೆ ಬಳಕೆಗೆ ತಂದವು. ಈ ಅವಧಿ ಮುಗಿದ ನಂತರ ಅವುಗಳ ಆಯಸ್ಸನ್ನು ಮತ್ತೆ ಹತ್ತು ವರ್ಷ ಹೆಚ್ಚಿಸಿದವು. ಆದರೆ, ಭಾರತೀಯ ರಿಸರ್ವ್ ಬ್ಯಾಂಕ್ ಹೊರಡಿಸಿರುವ ಇತ್ತೀಚಿನ ಆದೇಶಗಳ ಪ್ರಕಾರ, ಈ ಮ್ಯಾಗ್ನೆಟಿಕ್ ಕಾರ್ಡ್‌ಗಳು ಡಿಸೆಂಬರ್ 31ರ ನಂತರ ಸಂಪೂರ್ಣವಾಗಿ ನಿಷ್ಕ್ರಿಯಗೊಳ್ಳಲಿವೆ.
ಹಣ ಪಡೆಯುವುದಕ್ಕೆ, ವಸ್ತುಗಳನ್ನು ಖರೀದಿಸುವುದಕ್ಕೆ ಸೇರಿದಂತೆ ಬಿಟ್ ಕಾರ್ಡ್ ಕೂಡ ನಮ್ಮ ಜೀವನದ ಒಂದು ಭಾಗವಾಗಿ ಬಿಟ್ಟಿದೆ. ಹೀಗೆ ಹಲವು ಸಂದರ್ಭಗಳಲ್ಲಿ ನಮಗೆ ನೆರವಾಗುವ ಈ ಕಾರ್ಡ್ ಒಂದು ದಿನ ಸ್ಥಗಿತವಾದರೂ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾದರೆ, ಡೆಬಿಟ್ ಕಾರ್ಡ್ ಸ್ಥಗಿತವಾಗುವ ಮುನ್ನ ಏನು ಮಾಡಬೇಕು ಎಂಬುದನ್ನು ಮುಂದೆ ಓದಿ.
ಬದಲಾಯಿಸಿಕೊಳ್ಳುವುದು ಹೇಗೆ?
ಎಲ್ಲ ಬ್ಯಾಂಕ್‌ಗಳೂ ಮ್ಯಾಗ್ನೆಟಿಕ್ ಡೆಬಿಟ್ ಕಾರ್ಡ್‌ಗಳನ್ನು ಹೊಸ ಇಎಂವಿ (ಯುರೊಪೇ ಮಾಸ್ಟರ್ ವೀಸಾ) ಚಿಪ್ ಕಾರ್ಡ್‌ಗಳಾಗಿ ಬದಲಿಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿವೆ. ಕಾರ್ಡ್ ಬದಲಿಸಿಕೊಳ್ಳುವಂತೆ ಗ್ರಾಹಕರ ಮೊಬೈಲ್‌ಫೋನ್‌ಗಳಿಗೆ ಸಂದೇಶಗಳನ್ನು ಕಳುಹಿಸುತ್ತಿವೆ. ನೀವು ನಿಮ್ಮ ಬ್ಯಾಂಕ್ ಶಾಖೆಗೆ ಹೋಗಿ ಹಳೆ ಕಾರ್ಡ್ ಕೊಟ್ಟು ಹೊಸ ಕಾರ್ಡ್ ಪಡೆದುಕೊಳ್ಳಿ.
ಯಾವುದೇ ಶುಲ್ಕವಿಲ್ಲ.
ಮ್ಯಾಗ್ನೆಟಿಕ್ ಡೆಬಿಟ್ ಕಾರ್ಡ್‌ಗಳನ್ನು ಹೊಸ ಇಎಂವಿ (ಯುರೊಪೇ ಮಾಸ್ಟರ್ ವೀಸಾ) ಚಿಪ್ ಕಾರ್ಡ್‌ಗೆ ಬದಲಾಯಿಸಿಕೊಳ್ಳಲು ಯಾವುದೇ ಶುಲ್ಕ ವಸೂಲಿ ಮಾಡುತ್ತಿಲ್ಲ. ನಿಮ್ಮ ಬ್ಯಾಂಕ್ ಶಾಖೆಗೆ ಹೋಗಿ ಹಳೆ ಕಾರ್ಡ್ ಕೊಟ್ಟು ಹೊಸ ಕಾರ್ಡ್ ಪಡೆದುಕೊಳ್ಳುವುದು ಮಾತ್ರ. ಈ ಬಗ್ಗೆ ಇತರರಿಗೆ ಯಾವುದೇ ಮಾಹಿತಿಯನ್ನು ನೀಡುವ ಅಗತ್ಯತೆ ಸಹ ಇಲ್ಲಿಲ್ಲ.
ಏನಿದು ಯುರೊಪೇ ಮಾಸ್ಟರ್ ವೀಸಾ?
ಖಾತೆದಾರ ನಮೂದಿಸುವ ಪಿನ್, ವಹಿವಾಟಿಗೆ ಎರಡು ಹಂತದ ರಕ್ಷಣೆ ಒದಗಿಸುವ ನೂತನ ತಂತ್ರಜ್ಞಾನದ ಚಿಪ್ ಕಾರ್ಡ್ಗಳನ್ನು ಯುರೊಪೇ ಮತ್ತು ಮಾಸ್ಟರ್ ವೀಸಾ ಸಂಸ್ಥೆಗಳು ಜೊತೆಗೂಡಿ ತಂದಿದ್ದಾವೆ. ಈ ಕಾರ್ಡ್‌ನ ಮುಂಬದಿಯಲ್ಲಿರುವ ಚಿಪ್‌ನಲ್ಲಿ ಖಾತೆದಾರನ ಬ್ಯಾಂಕ್ ವಿವರ ಎನ್‌ಕ್ರಿಪ್ಟ್ ರೂಪದಲ್ಲಿ ಅಡಗಿರುತ್ತದೆ ಎಂದು ಮಾಹಿತಿ ಸಿಕ್ಕಿದೆ.
ಇಎಂವಿ ಕಾರ್ಡ್‌ನ ವಿಶೇಷಗಳೇನು?
ಈ ಕಾರ್ಡ್ ಅನ್ನು ಸ್ವೈಪ್ ಮಾಡಿದ ಪ್ರತಿ ಬಾರಿ, ಆ ವಹಿವಾಟಿಗೆ ಮಾತ್ರ ಸೀಮಿತವಾಗುವಂತೆ ಒಂದು ಪ್ರತ್ಯೇಕ ಕೋಡ್ ರಚನೆಯಾಗುತ್ತದೆ. ಈ ಕೋಡ್ ಮತ್ತೊಂದು ವಹಿವಾಟಿಗೆ ಉಪಯೋಗವಾಗುವುದಿಲ್ಲ. ಹೀಗಾಗಿ ಖಾತೆಯಲ್ಲಿನ ಹಣ ಸೋರಿಕೆಯಾಗುವುದಿಲ್ಲ. ಜೊತೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ವಹಿವಾಟು ನಡೆಸಲು ಸಹ ಸಾಧ್ಯವಾಗುತ್ತದೆ.
ಗ್ರಾಹಕರಿಗೆ ಎಚ್ಚರ ಅಗತ್ಯ.
ಯಾವುದೇ ಬ್ಯಾಂಕ್‌ನವರು ಸಹ ಮೊಬೈಲ್ ಮೂಲಕ ಅಥವಾ ಇಮೇಲ್ ಮೂಲಕ ಗ್ರಾಹಕರ ವೈಯಕ್ತಿಕ ಮಾಹಿತಿಯನ್ನು ಕೇಳುವುದಿಲ್ಲ. ಫೋನ್ ಮೂಲಕವಾಗಲೀ, ಇ-ಮೇಲ್ ಮೂಲಕವಾಗಲೀ ಖಾತೆ ಮತ್ತು ಕಾರ್ಡ್‌ಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ. ನೇರವಾಗಿ ಬ್ಯಾಂಕ್‌ಗೆ ತೆರಳಿ ನಿಮ್ಮ ಕೆಲಸ ಮುಗಿಸಿಕೊಳ್ಳಿ.