Home
ಸುದ್ದಿಜಾಲ

2022 ರ ವೇಳೆಗೆ ನಿಮ್ಮ ಮನೆಯ ಕರೆಂಟ್ ಮೀಟರ್ ಗಳು ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್ ಮಾಡುವತ್ತ ಭಾರತದ ಚಿತ್ತ

By Gizbot Bureau

ಭಾರತದ ವಿದ್ಯುತ್ ವ್ಯವಸ್ಥೆಯಲ್ಲಿನ ಸಮಸ್ಯೆಗಳನ್ನು ನಿವಾರಿಸಿ, ಈ ಕ್ಷೇತ್ರದಲ್ಲಾಗುವ ಅವ್ಯವಹಾರದ ತಡೆಗೆ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಂತೆ ಕಾಣುತ್ತಿದೆ. ಹೌದು 2022 ರ ವೇಳೆಗೆ ನಿಮ್ಮ ಮನೆಯಲ್ಲಿ ಅಳವಡಿಸಲಾಗಿರುವ ಹಳೆಯ ಮೀಟರ್ ಗಳನ್ನು ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್ ಗಳನ್ನಾಗಿ ಪರಿವರ್ತಿಸುವೆಡೆಗೆ ಭಾರತ ಸರ್ಕಾರ ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲಿ ಈಗಾಗಲೇ ಎನ್ ಡಿಎ ಸರ್ಕಾರ ಕೆಲವು ಹಂತದ ಪ್ಲಾನ್ ಗಳನ್ನು ಕೂಡ ರೂಪಿಸಿದೆ ಎನ್ನಲಾಗಿದೆ.

ವಿದ್ಯುತ್ ವಿತರಣಾ ಯೋಜನೆ:

ವಿದ್ಯುತ್ ವಿತರಣಾ ಯೋಜನೆ:

ಸರ್ಕಾರವು ಸರ್ವರಿಗೂ 24*7 ವಿದ್ಯುತ್ ಪೂರೈಕೆ ಮಾಡುವುದಕ್ಕೆ ಹೇಗೆ ಸಾಧ್ಯ ಎಂಬ ಬಗ್ಗೆ ಕಾಳಜಿ ವಹಿಸುತ್ತಿದೆ. ಆ ನಿಟ್ಟಿನಲ್ಲಿ ಭಾರತದ ಉನ್ನತ ವಿದ್ಯುತ್ ವಲಯದ ಯೋಜನಾ ಸಂಸ್ಥೆಯಾಗಿರುವ ಕೇಂದ್ರ ವಿದ್ಯುತ್ ಪ್ರಾಧಿಕಾರ(ಸಿಇಎ) ಸಿದ್ಧಪಡಿಸಿರುವ ಸರ್ಕಾರದ ವಿದ್ಯುತ್ ವಿತರಣಾ ಯೋಜನೆಯ ಒಂದು ಭಾಗವಾಗಿ ಇದು ರೂಪಗೊಳ್ಳುವ ಸಾಧ್ಯತೆ ಇದೆ.

ಸಮಸ್ಯೆಗಳ ಪರಿಹಾರಕ್ಕೆ ಚಿಂತನೆ:

ಸಮಸ್ಯೆಗಳ ಪರಿಹಾರಕ್ಕೆ ಚಿಂತನೆ:

ಮೀಟರಿಂಗ್, ಬಿಲ್ಲಿಂಗ್ ಮತ್ತು ಕಲೆಕ್ಷನ್ ಪ್ರೊಸೆಸ್ ಮತ್ತು ಇತ್ಯಾದಿಗಳಲ್ಲಿ ಮನೆಮನೆಗೆ ತಿರುಗುವ ಪ್ರಮೇಯ ಇರುವುದಿಲ್ಲ ಅಂದರೆ ಆದಷ್ಟು ಕಡಿಮೆ ಖರ್ಚಿನಲ್ಲಿ ಈ ವೆಚ್ಚವನ್ನು ಭರಿಸಬೇಕು ಎಂಬ ಉದ್ದೇಶವನ್ನು ಹೊಂದಲಾಗಿದ್ದು ವಿದ್ಯುತ್ ಇಲಾಖೆಯಲ್ಲಿ ಸುಧಾರಣೆ ತರುವ ಪ್ರಯತ್ನ ಇದಾಗಿದೆ. ಅಷ್ಟೇ ಅಲ್ಲ ವಿದ್ಯುತ್ ಬಿಲ್ ಕಲೆಕ್ಷನ್ ನಲ್ಲಿ ನಡೆಯುತ್ತಿರುವ ಅವ್ಯವಹಾರವನ್ನು ಈ ನಿಟ್ಟಿನಲ್ಲಿ ತಡೆಯುವ ಉದ್ದೇಶವನ್ನು ಸರ್ಕಾರ ಹೊಂದಿದೆ.

ಅಗತ್ಯತೆಗಳು:

ಅಗತ್ಯತೆಗಳು:

ಇದಕ್ಕಾಗಿ ಎರಡು ಮಾರ್ಗದ ಸಂವಹನ ನೆಟ್ ವರ್ಕ್, ನಿಯಂತ್ರಣ ಕೇಂದ್ರದಲ್ಲಿ ಉಪಕರಣಗಳು ಮತ್ತು ಸಾಫ್ಟ್ ವೇರ್ ಅಪ್ಲಿಕೇಷನ್ ಗಳ ಅಗತ್ಯವಿದೆ. ಹೊಸ ಯೋಜನೆಯಿಂದಾಗಿ ಸಮಯದ ಉಳಿತಾಯ, ಶಕ್ತಿಯ ಬಳಕೆಯ ಮಾಹಿತಿಯ ವರ್ಗಾವಣೆಯು ಸಕ್ರಿಯಗೊಳ್ಳುತ್ತದೆ.

ಕರಡು ಯೋಜನೆ:

ಕರಡು ಯೋಜನೆ:

ಕರಡು ಯೋಜನೆಯು ವಿತರಣಾ ಮಟ್ಟದಲ್ಲಿ ಮೊಟ್ಟಮೊದಲ ಯೋಜನೆಯಾಗಿದ್ದು, ವಿದ್ಯುತ್ ಸಚಿವಾಲಯದ ಮಾರ್ಗದರ್ಶನದಲ್ಲಿ ಸಿಇಎ ಸಿದ್ಧಪಡಿಸಿದೆ. ಇದುವರೆಗೂ ಕೇಂದ್ರ ಸರ್ಕಾರ ರಾಷ್ಟ್ರೀಯ ವಿದ್ಯುತ್ ಯೋಜನೆ(ಎನ್ಇಪಿ)ಆಶ್ರಯದಲ್ಲಿ ಉತ್ಪಾದನೆ ಮತ್ತು ಪ್ರಸರಣ ಕ್ಷೇತ್ರಗಳಿಗೆ ಕೆಲವು ಯೋಜನೆಗಳನ್ನು ಸಿದ್ಧಪಡಿಸಿದೆ.ವಿತರಣಾ ಯೋಜನೆಯಲ್ಲಿ ಗ್ರಾಹಕರ ಬೇಡಿಕೆಯೇ ಕೇಂದ್ರಬಿಂದುವಾಗಿರುತ್ತದೆ ಎಂದು ವಿದ್ಯುತ್ ಸಚಿವಾಲಯ ತಿಳಿಸಿದೆ.

ಸರ್ಕಾರದ ನಷ್ಟ:

ಸರ್ಕಾರದ ನಷ್ಟ:

ಪಾವತಿ ವಿಳಂಬ, ಬಿಲ್ಲಿಂಗ್ ಸಮಸ್ಯೆ, ಪಾವತಿಯಲ್ಲಿ ಮೋಸ, ಸಮಯದ ಬಳಕೆ ಇತ್ಯಾದಿ ಎಲ್ಲಾ ಸಮಸ್ಯೆಗಳಿಗೆ ಇದು ಫುಲ್ ಸ್ಟಾಪ್ ಇಡುವ ಸಾಧ್ಯತೆ ಇದೆ. ಡಿಸ್ಕೋಮ್ ಗಳು ಇದುವರೆಗೂ ಆರ್ಥಿಕ ವ್ಯವಸ್ಥೆಯಲ್ಲಿ ಬಹಳ ದುರ್ಬಲ ಕೊಂಡಿ ಎನ್ನಿಸಿಕೊಂಡಿದೆ.ಸರ್ಕಾರಿ ಸ್ವಾಮ್ಯದ ಡಿಸ್ಕೋಮ್ ಗಳ ಕಳಪೆ ಪಾವತಿಯಿಂದಾಗಿ ಮತ್ತು ದಾಖಲೆಗಳಲ್ಲಿನ ಮೋಸದಿಂದಾಗಿ ವಿದ್ಯುತ್ ವಿತರಣಾ ಕಂಪೆನಿಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ.ಇದೇ ಕಾರಣದಿಂದಾಗಿ ವಿದ್ಯುತ್ ವಲಯವು ಸುಮಾರು 1 ಟ್ರಿಲಿಯನ್ ರುಪಾಯಿ ಮೌಲ್ಯದ ಕೆಟ್ಟ ಸಾಲಗಳ ಸುಳಿಯಲ್ಲಿ ಸಿಲುಕುವಂತಾಗಿದೆ. ಸುಮಾರು 66 ಗಿಗಾವ್ಯಾಟ್ ನಷ್ಟು ವಿವಿಧ ಹಂತಹ ಆರ್ಥಿಕ ಒತ್ತಡವನ್ನು ಎದುರಿಸಲಾಗುತ್ತಿದೆ.

ಜನರಿಗೆ ಅನುಕೂಲ:

ಜನರಿಗೆ ಅನುಕೂಲ:

ಸ್ಮಾರ್ಟ್ ಮೀಟರ್ ಗಳ ಅಳವಡಿಕೆಯಿಂದಾಗಿ ಜನರು ತಮ್ಮ ಎಲೆಕ್ಟ್ರಿಸಿಟಿ ವೆಚ್ಚವನ್ನು ಮತ್ತು ಬಳಕೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ ಮತ್ತು ವಿದ್ಯುತ್ ಉಳಿತಾಯದ ಜೊತೆಗೆ ತಮ್ಮ ಹಣದ ಉಳಿತಾಯವನ್ನು ಮಾಡುವುದಕ್ಕೂ ಜನರಿಗೆ ಇದರಿಂದ ಅನುಕೂಲವಾಗುತ್ತದೆ. ಅಷ್ಟೇ ಅಲ್ಲ ಪಾವತಿಯೂ ಕೂಡ ನಿರಂಕುಶವಾಗಿ ಯಾವುದೇ ಮೋಸವಿಲ್ಲದೆ ನಡೆಯುವುದಕ್ಕೆ ಇದು ನೆರವು ನೀಡುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಲಾಭಗಳು:

ಲಾಭಗಳು:

ಈ ಯೋಜನೆಯಿಂದಾಗಿ 2022 ರ ವೇಳೆಗೆ ವಿತರಣಾ ಸಬ್ ಸ್ಟೇಷನ್ ಸಾಮರ್ಥ್ಯವನ್ನು 38% ಹೆಚ್ಚಿಸುವುದಕ್ಕೆ ಸಾಧ್ಯವಾಗುತ್ತದೆ ಎಂದು ಸರ್ಕಾರ ನಂಬಿದೆ. ಯೋಜನೆಯನ್ನು ಪರಿಶೀಲಿಸುವ ಸಂದರ್ಬದಲ್ಲಿ ವಿದ್ಯುತ್ ಸಚಿವ ರಾಜ್ ಕುಮಾರು ಸಿಂಗ್ ಅವರು ಒಂದು ತಂಡವನ್ನು ವಿದ್ಯುತ್ ಕ್ಷೇತ್ರದ ಸುಧಾರಣೆಗಳು 2.0 ಎಂಬ ಅಧ್ಯಯನಕ್ಕೆ ಒಳಪಡಿಸಿದ್ದರು. ಈ ತಂಡವು ಯೋಜನೆ ಬಿಡುಗಡೆಗೂ ಮುನ್ನವೇ ಅದರ ಲಾಭ ಮತ್ತು ಪರಿಪೂರ್ಣತೆಯ ಬಗ್ಗೆ ಸಂಶೋಧನೆ ಕೈಗೊಳ್ಳಲಿದೆ.

ವಿದ್ಯುತ್ ವಲಯದ ಕ್ರಾಂತಿ:

ವಿದ್ಯುತ್ ವಲಯದ ಕ್ರಾಂತಿ:

ಇದರಲ್ಲಿ ಹೊಸ ತಾರಿಫ್ ಪಾಲಿಸಿಗಳು ಮತ್ತು ರಚನಾತ್ಮಕ ಸುಧಾರಣೆಗಳು ಈ ಬಾರಿಯ ಬಜೆಟ್ ಘೋಷಣೆಯಲ್ಲಿ ನಿರ್ಮಲಾ ಸೀತಾರಾಮನ್ ಮಾಡಿರುವಂತೆ ಇವುಗಳು ಒಳಗೊಂಡಿರುತ್ತದೆ. ಉದ್ದೇಶಿತ ರಾಷ್ಟ್ರೀಯ ಸುಂಕ ನೀತಿಯಲ್ಲಿ ಹಲವಾರು ಸುಧಾರಣೆಗಳ ಬಗ್ಗೆ ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಇದರಲ್ಲಿ ಅನಪೇಕ್ಷಿತ ಲೋಡ್ ಶೆಡ್ಡಿಂಗ್, ಅಡ್ಡ ಸಬ್ಸಿಡಿಗಳನ್ನು ಸೀಮಿತಗೊಳಿಸುವುದು, ಸಮರ್ಪಕ ವಿದ್ಯುತ್ ಸರಬರಾಜು ವ್ಯವಸ್ಥೆ, ಅನಗತ್ಯವಾದ ಪರವಾನಗಿಗಳನ್ನು ರದ್ದುಗೊಳಿಸುವಿಕೆ, ಪೊರೈಕೆಯಲ್ಲಿನ ಅಡೆತಡೆಗಳಲ್ಲಿ ದಂಡ ವಿಧಿಸುವಿಕೆ ಇತ್ಯಾದಿ ನೀತಿಗಳು ಕೂಡ ಸೇರಿವೆ.

ಒಟ್ಟಾರೆ ಸರ್ಕಾರದ ಹೊಸ ಚಿಂತನೆಯೊಂದು ವಿದ್ಯುತ್ ವಲಯದಲ್ಲಿ ಹೊಸ ಕ್ರಾಂತಿಗೆ ಕಾರಣವಾಗಿ ಜನರ ಅಭ್ಯುದಯಕ್ಕೆ ಮುನ್ನಡಿ ಬರೆದರೆ ಅಷ್ಟೇ ಸಾಕು!

Best Mobiles in India

English summary
Your Electricity Meter Might Soon Go Obsolete
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+