ಗೂಗಲ್ ಮ್ಯಾಪ್‌ನಲ್ಲಿ ನಿಮ್ಮ ಮನೆಯ ಅಡ್ರೆಸ್ ತಪ್ಪಾಗಿ ಕಾಣಿಸ್ತಾ ಇದೀಯಾ? ಸರಿಪಡಿಸಲು ಹೀಗೆ ಮಾಡಿ!
ಗೂಗಲ್ ಮ್ಯಾಪ್‌ನಲ್ಲಿ ನಿಮ್ಮ ಮನೆಯ ಅಡ್ರೆಸ್ ತಪ್ಪಾಗಿ ಕಾಣಿಸ್ತಾ ಇದೀಯಾ? ನಿಮ್ಮ ಮನೆ ವಿಳಾಸದ ಬದಲು ಬೇರೆ ಹೆಸರು ಅಲ್ಲಿ ಕಾಣಿಸ್ತಾ ಇದೀಯಾ? ಇದಕ್ಕಾಗಿ ನೀವು ಚಿಂತಿಸುವ ಅಗತ್ಯವಿಲ್ಲ. ಏಕೆಂದರೆ ಗೂಗಲ್ ಮ್ಯಾಪ್‌ನಲ್ಲಿ ತಪ್ಪಾಗಿ ಕಾಣುವ ಅಡ್ರೆಸ್ ಅನ್ನು ಸರಿಯಾಗಿ ನಮೂದಿಸುವುದಕ್ಕೆ ಅವಕಾಶ ಕೂಡ ಲಭ್ಯವಿದೆ.
ಹೌದು, ಗೂಗಲ್ ಮ್ಯಾಪ್‌ನಲ್ಲಿ ನಿಮ್ಮ ಮನೆಯ ವಿಳಾಸ ತಪ್ಪಾಗಿ ನಮೂದಾಗಿದ್ದರೆ ಅದನ್ನು ಸರಿ ಮಾಡುವ ಆಯ್ಕೆ ಇದೆ. ಸರ್ಚ್ ಇಂಜಿನ್ ದೈತ್ಯ ಗೂಗಲ್ ತನ್ನ ಬಳಕೆದಾರರಿಗೆ ಗೂಗಲ್ ಮ್ಯಾಪ್ ನಲ್ಲಿ ತಪ್ಪಾದ ವಿಳಾಸಗಳನ್ನು ಸರಿಪಡಿಸುವುದಕ್ಕೆ ಅವಕಾಶ ಕಲ್ಪಿಸಿದೆ. ಹಾಗಾದ್ರೆ ಗೂಗಲ್ ಮ್ಯಾಪ್‌ನಲ್ಲಿ ತಪ್ಪಾಗಿ ಕಾಣುತ್ತಿರುವ ನಿಮ್ಮ ಮನೆಯ ಅಡ್ರೆಸ್ ಅನ್ನು ಸರಿಪಡಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್ ಮ್ಯಾಪ್‌ನಲ್ಲಿ ತಪ್ಪಾಗಿರುವ ಅಡ್ರೆಸ್ ಅನ್ನು ಸರಿಪಡಿಸಲು ಹೀಗೆ ಮಾಡಿ?
ವೆಬ್ ಬ್ರೌಸರ್ ಮೂಲಕ ಗೂಗಲ್ ಮ್ಯಾಪ್‌ನಲ್ಲಿ ತಪ್ಪಾಗಿರುವ ವಿಳಾಸ ಸರಿಪಡಿಸಲು ಈ ಕ್ರಮ ಅನುಸರಿಸಿ
* ಮೊದಲಿಗೆ ಗೂಗಲ್ ಕ್ರೋಮ್ ವೆಬ್ ಬ್ರೌಸರ್‌ನಲ್ಲಿ ಗೂಗಲ್ ಮ್ಯಾಪ್ ಅನ್ನು ತೆರೆಯಿರಿ.
* ಇದೀಗ ಎಡ ಭಾಗದ ಮೂಲೆಯಲ್ಲಿರುವ ಸರ್ಚ್ ಬಾರ್‌ನಲ್ಲಿ ಅಡ್ರೆಸ್ ಅನ್ನು ಸರ್ಚ್ ಮಾಡಿ
* ಪೇಜ್‌ನ ಎಡಭಾಗದಲ್ಲಿ ಕಾಣುವ ಸ್ಥಳ ವಿಭಾಗದಲ್ಲಿ, ಎಡಿಟ್ ಆಯ್ಕೆ ಕ್ಲಿಕ್ ಮಾಡಿ ಕೆಳಗೆ ಸ್ಕ್ರಾಲ್ ಮಾಡಿರಿ
* ಇದರಲ್ಲಿ ನಿಮಗೆ ಎರಡು ಆಯ್ಕೆಗಳನ್ನು ನೀಡಲಾಗುತ್ತದೆ
* ಅದರಂತೆ ಆಯ್ಕೆ ಹೆಸರು ಅಥವಾ ಇತರ ವಿವರಗಳನ್ನು ಬದಲಾಯಿಸಿ ಆಯ್ಕೆ ಟ್ಯಾಪ್ ಮಾಡಿ
* ಇದಲ್ಲದೆ ನಿಮ್ಮ ಮನೆಯ ಅಡ್ರೆಸ್ ವಿವರಗಳನ್ನು ಎಡಿಟ್ ಮಾಡಿ.
ಈ ಮೂಲಕ ನಿಮ್ಮ ಮನೆಯ ಅಡ್ರೆಸ್ ವಿವರಗಳನ್ನು ಎಡಿಟ್ ಮಾಡಬಹುದಾಗಿದೆ.
ಆಂಡ್ರಾಯ್ಡ್ ಫೋನ್ ನಲ್ಲಿ ಗೂಗಲ್ ಮ್ಯಾಪ್‌ನಲ್ಲಿ ತಪ್ಪಾಗಿರುವ ವಿಳಾಸವನ್ನು ಬದಲಾಯಿಸಲು ಹೀಗೆ ಮಾಡಿ
* ಮೊದಲಿಗೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್ ಮ್ಯಾಪ್ ತೆರೆಯಿರಿ
* ಇದರಲ್ಲಿ ನೀವು ಅಡ್ರೆಸ್ ಬದಲಾಯಿಸಲು ಬಯಸುವ ಸ್ಥಳದ ಹೆಸರಿನ ಮೇಲೆ ಟ್ಯಾಪ್ ಮಾಡಿ
* ಇದೀಗ ಮೇಲಕ್ಕೆ ಸ್ವೈಪ್ ಮಾಡಿ ಮತ್ತು ಎಡಿಟ್ ಅನ್ನು ಸೂಚಿಸು ಆಯ್ಕೆ ಟ್ಯಾಪ್ ಮಾಡಿ.
* ನಂತರ ಲಭ್ಯವಾಗುವ ಆಯ್ಕೆಗಳ ಮೂಲಕ ಹೆಸರು ಅಥವಾ ಇತರ ವಿವರಗಳನ್ನು ಬದಲಾಯಿಸಿ.
* ಇದಲ್ಲದೆ ನಿಮ್ಮ ಮನೆಯ ಅಡ್ರೆಸ್‌ನಲ್ಲಿ ಆಗಬೇಕಾದ ಬದಲಾವಣೆಗಳನ್ನು ಕೂಡ ಮಾಡಿರಿ.
ಗೂಗಲ್ ಮ್ಯಾಪ್‌ನಲ್ಲಿ ನಿಮ್ಮ ಮನೆಯ ವಿಳಾಸವನ್ನು ಸೇರಿಸಲು ಹೀಗೆ ಮಾಡಿ
* ಮೊದಲಿಗೆ ಗೂಗಲ್ ಮ್ಯಾಪ್ ತೆರೆಯಿರಿ
* ಇದರಲ್ಲಿ ಸೇವ್ ಆಯ್ಕೆಯನ್ನು ಟ್ಯಾಪ್ ಮಾಡಿ.
* ನಂತರ ನಿಮ್ಮ ಮನೆ ಮತ್ತು ಕೆಲಸದ ವಿಳಾಸಗಳನ್ನು ತೋರಿಸುವ ಲೇಬಲ್‌ಗೆ ಸ್ವೈಪ್ ಮಾಡಿ.
* ಇದರಲ್ಲಿ ಕಾಣುವ ಮೂರು ಚುಕ್ಕೆಗಳನ್ನು ಟ್ಯಾಪ್ ಮಾಡಿ ಮತ್ತು ಹೋಮ್ ಎಡಿಟ್ ಅನ್ನು ಆಯ್ಕೆಮಾಡಿ.
* ನಂತರ ನೀವು ಕೆಲಸದ ವಿಳಾಸವನ್ನು ಬದಲಾಯಿಸಲು ಬಯಸಿದರೆ, ಎಡಿಟ್ ವರ್ಕ್ ಅನ್ನು ಆಯ್ಕೆಮಾಡಿ.
* ಪ್ರಸ್ತುತ ಇರುವ ವಿಳಾಸವನ್ನು ತೆರವುಗೊಳಿಸಿ, ಹೊಸ ವಿಳಾಸವನ್ನು ಸೇರಿಸಿ.
ಇದೀಗ ನೀವು ನಿಮ್ಮ ಮನೆಯನ್ನು ಬದಲಾಯಿಸಿದ್ದರೆ ನಿಮ್ಮ ಮನೆಯ ವಿಳಾಸವನ್ನು ಸುಲಭವಾಗಿ ಗೂಗಲ್ ಮ್ಯಾಪ್ ಮೂಲಕ ಸರ್ಚ್ ಮಾಡಬಹುದಾಗಿದೆ. ಇದಲ್ಲದೆ ನಿಮ್ಮ ಕಚೇರಿಯ ವಿಳಾಸವನ್ನು ಕೂಡ ಸರ್ಚ್ ಮಾಡಲು ಸಾಧ್ಯವಾಗಲಿದೆ.


Click it and Unblock the Notifications








