ಹಳೆಯ ಐಫೋನ್,ಐಪ್ಯಾಡ್ ಇಟ್ಟುಕೊಂಡಿದ್ದರೆ ಹೀಗೆ ಮಾಡಲೇ ಬೇಕು!

By Gizbot Bureau
|

ಒಂದು ವೇಳೆ ನೀವು ಈಗಲೂ ಕೂಡ ಹಳೆಯ ಐಫೋನ್ ಗಳನ್ನು ಅಥಾ ಐಪ್ಯಾಡ್ ಗಳನ್ನು ಉದಾಹರಣೆಗೆ ಐಫೋನ್ 4ಎಸ್/5 ಅಥವಾ ಐಪ್ಯಾಡ್ 2 ಬಳಕೆ ಮಾಡುತ್ತಿದ್ದರೆ ಕೆಲವೇ ದಿನಗಳಲ್ಲಿ ನಿಮ್ಮ ಡಿವೈಸ್ ಸರಿಯಾಗಿ ಕೆಲಸ ಮಾಡದೇ ಇರುವ ಸಾಧ್ಯತೆ ಇದೆ. ಇದು ಆಪಲ್ ಸಂಸ್ಥೆ ನೀವು ಹಳೆಯ ಫೋನ್ ನ್ನು ಎಸೆಯಬೇಕು ಎಂದು ಬಯಸುತ್ತಿದೆ ಎಂದಲ್ಲ ಬದಲಾಗಿ ಆಪಲ್ ಸಂಸ್ಥೆ ನೂತನ ಐಓಎಶ್ ಅಪ್ ಡೇಟ್ ನ್ನು ಈ ಡಿವೈಸ್ ಗಳಿಗೆ ನೀಡುವುದನ್ನು ನಿಲ್ಲಿಸುತ್ತಿದೆ ಅಷ್ಟೇ!

ಹಳೆಯ ಐಫೋನ್,ಐಪ್ಯಾಡ್ ಇಟ್ಟುಕೊಂಡಿದ್ದರೆ ಹೀಗೆ ಮಾಡಲೇ ಬೇಕು!

ಆಪಲ್ ಸಂಸ್ಥೆ ತನ್ನ ಹೊಸ ಐಓಎಸ್ 12.4 ನ್ನು ಅಪ್ ಡೇಟ್ ಮಾಡಿದ ಸಂದರ್ಬದಲ್ಲಿ ಈ ವಿಚಾರವನ್ನು ತಿಳಿಸಿದ್ದು ಹಳೆಯ ಐಫೋನ್ ಮತ್ತು ಐಪ್ಯಾಡ್ ಗಳು ಇನ್ನು ಮುಂದೆ ಹೊಸ ಅಪ್ ಡೇಟ್ ನ್ನು ಬೆಂಬಲಿಸುವುದಿಲ್ಲ ಯಾಕೆಂದರೆ ಅದರ ಹಾರ್ಡ್ ವೇರ್ ಗಳು ತುಂಬಾ ಹಳೆಯದಾಗಿವೆ ಮತ್ತು ಹೊಸ ಸಾಫ್ಟ್ ವೇರ್ ನ್ನು ರನ್ ಮಾಡುವ ಸಾಮರ್ಥ್ಯವನ್ನು ಹಳೆಯ ಹಾರ್ಡ್ ವೇರ್ ಗಳು ಹೊಂದಿಲ್ಲ ಎಂಬುದಾಗಿ ಆಪಲ್ ತಿಳಿಸಿದೆ.

ಈ ಹಳೆಯ ಡಿವೈಸ್ ಗಳಿಗಾಗಿ ಹೊಸ ಸಾಫ್ಟ್ ವೇರ್ ಅಪ್ ಡೇಟ್ ನ್ನು ಆಪಲ್ ನೀಡಲಿದೆ ಆ ಮೂಲಕ ಜಿಪಿಎಸ್ ಅನೇಬಲ್ ಆಗಿರುವ ಪ್ರೊಡಕ್ಟ್ ಗಳಿಗೆ ಸಮಸ್ಯೆಯಾಗುತ್ತಿರುವ ಜಿಪಿಎಸ್ ಟೈಮ್ ರೋಲ್ ಓವರ್ ಸಮಸ್ಯೆಯನ್ನು ಪರಿಹರಿಸಲಿದೆ.

ಜಿಪಿಎಸ್ ಟೈಮ್ ರೋಲ್ ಓವರ್ ಸಮಸ್ಯೆಗೆ ಪರಿಹಾರ :

ಹಾಗಾದ್ರೆ ಜಿಪಿಎಸ್ ಟೈಮ್ ರೋಲ್ ಓವರ್ ಸಮಸ್ಯೆ ಎಂದರೇನು? ಸರಿಯಾದ ಜಿಪಿಎಸ್ ಲೊಕೇಷನ್ ಟ್ರ್ಯಾಕಿಂಗ್ ಗಾಗಿ ಜಿಪಿಎಸ್ ಸಿಗ್ನಲ್ ಟೈಮ್ ಸ್ಟ್ಯಾಂಪ್ ನ್ನು ಕೇಳುತ್ತದೆ. ಸದ್ಯ ಟೈಮ್ ಸ್ಟ್ಯಾಂಪ್ 10 ಬೈನರಿ ಬಿಟ್ಸ್ ನ್ನು ಬಳಸುತ್ತದೆ ಮತ್ತು ವಾರದ ನಂಬರ್ ನ್ನು ಸ್ಟೋರ್ ಮಾಡುತ್ತದೆ. ಈ ಬೈನರಿ ಬಿಟ್ ನ ರೇಂಜ್ 0 ರಿಂದ 1024 ವಾರಗಳು.ಪ್ರತಿ 20 ವರ್ಷಕ್ಕೆ ಅಥವಾ 1024 ವಾರಕ್ಕೆ ಕೌಂಟರ್ 1024 ರಿಂದ 0 ಕ್ಕೆ ರೋಲ್ ಆಗುತ್ತದೆ. ಈ ವರ್ಷದ ಎಪ್ರಿಲ್ 6 ರಿಂದ ಜಿಪಿಎಸ್ ಅನೇಬಲ್ ಆಗಿರುವ ಪ್ರೊಡಕ್ಟ್ ಗಳಲ್ಲಿ ಸರಿಯಾದ ಲೊಕೇಷನ್ ತೋರಿಸುವುದರಲ್ಲಿ ಸಮಸ್ಯೆಗಳು ಕಾಣಿಸುತ್ತಿದೆ.

ಆದರೆ, ಆಪಲ್ ನ ಐಫೋನ್ ಗಳು ಮತ್ತು ಐಪ್ಯಾಡ್ ಗಳು ನವೆಂಬರ್ 3,2019 ರ ವರಗೆ ಇದರ ಪರಿಣಾಮಕ್ಕೆ ಒಳಗಾಗಿರುವುದಿಲ್ಲ. ಈ ಸಮಸ್ಯೆಯು ಐಪಾಡ್ ಟಚ್ ಅಥವಾ ವೈಫೈ ಓನ್ಸಿ ಇರುವ ಐಪ್ಯಾಡ್ ಮಾಡೆಲ್ ಗಳಿಗೆ ಸಮಸ್ಯೆಯನ್ನುಂಟು ಮಾಡುವುದಿಲ್ಲ. ಇದು ಮೇಲೆ ಲಿಸ್ಟ್ ಮಾಡಿರುವ ಹಳೆಯ ಐಓಎಸ್ ಡಿವೈಸ್ ಗಳನ್ನು ಹೊರತುಪಡಿಸಿದರೆ ಹೊಸ ಡಿವೈಸ್ ಗಳಿಗೂ ಯಾವುದೇ ಎಫೆಕ್ಟ್ ಮಾಡುವುದಿಲ್ಲ.

ನವೆಂಬರ್ 3 ರಿಂದ ಕೆಲವು ಅಂದರೆ 2012 ಮತ್ತು ಅದಕ್ಕಿಂತ ಮುಂಚೆ ಪರಿಚಯಿಸಲಾಗಿರುವ ಐಫೋನ್ ಮತ್ತು ಐಪ್ಯಾಡ್ ಮಾಡೆಲ್ ಗಳು ಐಓಎಸ್ ಅಪ್ ಡೇಟ್ ನ್ನು ಕೇಳಲಿದ್ದು ಅದಕ್ಕಾಗಿ ನಿಗದಿತ ಜಿಪಿಎಸ್ ಲೊಕೇಷನ್ ಮತ್ತು ದಿನಾಂಕ,ಸಮಯವನ್ನು ಸರಿಯಾಗಿ ಸೆಟ್ ಮಾಡಿ ಇಟ್ಟುಕೊಳ್ಳಿ ಎಂದು ಆಪಲ್ ತಿಳಿಸಿದೆ.

ನಿಮ್ಮ ಡಿವೈಸ್ ಗೆ ನವೆಂಬರ್ 3,2019 ರ ಒಳಗೆ ನೂತನ ಐಓಎಸ್ ನ್ನು ಒಂದು ವೇಳೆ ಅಪ್ ಡೇಟ್ ಮಾಡಿಕೊಳ್ಳದೇ ಇದ್ದಲ್ಲಿ ಕೆಲವು ಮಾಡೆಲ್ ಗಳು ಸರಿಯಾಗಿ ನಿರ್ವಹಣೆಗೆ ಸಿಗುವುದಿಲ್ಲ ಮತ್ತು ಸರಿಯಾದ ಜಿಪಿಎಸ್ ಪ್ರದೇಶವನ್ನು ತೋರಿಸುವುದಕ್ಕೆ ಅಸಾಧ್ಯ. ಅಷ್ಟೇ ಅಲ್ಲ ಇಮೇಲ್ ಪಡೆಯುವುದು ಐಕ್ಲೌಡ್ ಸಿನ್ಕ್ರನೈಜೇಷನ್ ಇತ್ಯಾದಿ ದಿನಾಂಕ ಮತ್ತು ಸಮಯದ ವ್ಯತ್ಯವೂ ಆಗುವ ಸಾಧ್ಯತೆ ಇದ್ದು ಕಾರ್ಯನಿರ್ವಹಣೆ ಕ್ಲಿಷ್ಟವಾಗಲಿದೆ ಎಂದು ಕಂಪೆನಿ ತಿಳಿಸಿದೆ.

ಹಾಗಾಗಿ ಒಂದು ವೇಳೆ ಯಾವುದೇ ಹಳೆಯ ಆಪಲ್ ಡಿವೈಸ್ ಗಳಿದ್ದರೂ ಕೂಡ ಸೆಟ್ಟಿಂಗ್ಸ್ ಮೆನುವಿಗೆ ತೆರಳಿ ಮತ್ತು ಅದನ್ನು ಕೂಡಲೇ ಅಪ್ ಡೇಟ್ ಮಾಡಿಕೊಳ್ಳಿ. ಅಪ್ ಡೇಟ್ ಆದ ನಂತರ, ಸಾಫ್ಟ್ ವೇರ್ ಅಪ್ ಡೇಟ್ ನಂಬರ್ ನಲ್ಲಿ ಐಓಎಸ್ 9.3.6 ಎಂದು ಐಫೋನ್ 4ಎಸ್ ನಲ್ಲಿ, ಐಪ್ಯಾಡ್ ಮಿನಿ(1St ಜನರೇಷನ್) ವೈ-ಫೈ+ಸೆಲ್ಯುಲರ್, ಐಪ್ಯಾಡ್ 2 ವೈ-ಫೈ+ಸೆಲ್ಯುಲರ್, ಮತ್ತು ಐಪ್ಯಾಡ್ (3ನೇ ಜನರೇಷನ್ ) ವೈ-ಫೈ+ಸೆಲ್ಯುಲರ್ ಕಾಣಿಸಬೇಕು. ಒಂದು ವೇಳೆ ನೀವು ಐಫೋನ್ 5 ಅಥವಾ ಐಪ್ಯಾಡ್ (4ನೇ ಜನರೇಷನ್ )ವೈ-ಫೈ+ಸೆಲ್ಯುಲರ್ ಬಳಕೆದಾರರಾಗಿದ್ದಲ್ಲಿ ಸಾಫ್ಟ್ ವೇರ್ ವರ್ಷನ್ ನಂಬರ್ 10.3.4 ಎಂದು ಕಾಣಿಸಬೇಕು.

Best Mobiles in India

Read more about:
English summary
Your Old iPhones And iPads Might Stop Working If You Don't Do This

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X