Home
ಸುದ್ದಿಜಾಲ

ನಿಮ್ಮ ಮೊಬೈಲ್‌ನಲ್ಲಿಯೂ ಈ ಸಮಸ್ಯೆ ಕಾಣಿಸಿಕೊಂಡಿದೆಯಾ! ಕೂಡಲೇ ಈ ಕೆಲಸ ಮಾಡಿ!

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸ್ಟೋರೇಜ್‌ ಸ್ಪೇಸ್‌ ತುಂಬಿ ಹೋಗಿದೆಯಾ? ಯಾವುದೇ ಹೊಸ ಫೈಲ್‌ ಸ್ಟೋರೇಜ್‌ ಮಾಡೋಕೆ ಆಗುತ್ತಿಲ್ಲವೇ. ಸ್ಟೋರೇಜ್‌ ಸ್ಪೇಸ್‌ ಸಮಸ್ಯೆಯಿಂದ ಕಿರಿಕಿರಿ ಆಗುತ್ತಿದೆಯಾ. ಇಂತಹ ಸನ್ನಿವೇಶದಲ್ಲಿ ನೀವು ಏನು ಮಾಡಬೇಕು ಅನ್ನೊ ಗೊಂದಲದಲ್ಲಿದ್ದಾರ. ಅದಕ್ಕೆ ಉತ್ತರವನ್ನು ನಾವು ನೀಡುತ್ತೇವೆ ನೋಡಿ.

ಹೌದು, ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಎದುರಾಗುವ ಸಾಮಾನ್ಯ ಕಿರಿಕಿರಿ ಎಂದರೆ ಅದು ಸ್ಟೋರೇಜ್‌ ಸ್ಪೇಸ್‌ ಸಮಸ್ಯೆ. ಅದರಲ್ಲೂ ಬಹುಮುಖ್ಯವಾದ ಫೋಟೋ ಅಥವಾ ಫೈಲ್‌ ಅನ್ನು ಸ್ಟೋರೇಜ್‌ ಮಾಡುವ ಸಮಯದಲ್ಲಿಯೇ ಈ ರೀತಿಯ ಸಮಸ್ಯೆ ಎದುರಾದಾಗ ಬರುವ ಕೋಪ ಅಷ್ಟಿಷ್ಟಲ್ಲ. ಇಂತಹ ಸಮಸ್ಯೆ ನಿಮಗೆ ಎದುರಾಗಬಾರದು ಎಂದರೆ ನೀವು ಕೆಲವು ಟ್ರಿಕ್ಸ್‌ಗಳನ್ನು ಫಾಲೋ ಮಾಡುವುದು ಅವಶ್ಯಕವಾಗಿದೆ. ಹಾಗಾದ್ರೆ ಸ್ಮಾರ್ಟ್‌ಫೋನ್‌ನಲ್ಲಿ ಸ್ಟೋರೇಜ್‌ ಸ್ಪೇಸ್‌ ಸಮಸ್ಯೆಯನ್ನು ಹೋಗಲಾಡಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನಿಮ್ಮ ಮೊಬೈಲ್‌ನಲ್ಲಿಯೂ ಈ ಸಮಸ್ಯೆ ಕಾಣಿಸಿಕೊಂಡಿದೆಯಾ! ಕೂಡಲೇ ಈ ಕೆಲಸ ಮಾಡಿ!

ನಿಮಗೆ ಅವಶ್ಯವಿಲ್ಲದ ಅಪ್ಲಿಕೇಶನ್‌ಗಳನ್ನು ಡಿಲೀಟ್‌ ಮಾಡಿ: ನಿಮ್ಮ ಮೊಬೈಲ್‌ನಲ್ಲಿ ಸ್ಟೋರೇಜ್‌ ಸ್ಪೇಸ್‌ ಉಳಿಸಿಕೊಳ್ಳಬೇಕಾದರೆ ನೀವು ಅನುಸರಿಸಬೇಕಾದ ಮೊದಲ ಮಾರ್ಗವೆಂದರೆ ಬಳಕೆಗೆ ಬಾರದ ಅಪ್ಲಿಕೇಶನ್‌ಗಳ ಡಿಲೀಟ್‌. ನಿಮಗೆ ಅವಶ್ಯವಿಲ್ಲ ಅಪ್ಲಿಕೇಶನ್‌ಗಳಿಂದ ಸ್ಟೋರೇಜ್‌ ಸ್ಪೇಸ್‌ ತುಂಬಿ ಹೋಗುವುದಕ್ಕಿಂತ ಅವುಗಳನ್ನು ಡಿಲೀಟ್‌ ಮಾಡುವುದು ಸೂಕ್ತ. ಆದರಿಂದ ನೀವು ಬಳಸದ ಅಪ್ಲಿಕೇಶನ್‌ಗಳನ್ನು ಅನ್‌ ಇನ್‌ಸ್ಟಾಲ್‌ ಮಾಡುವ ಮೂಲಕ ಸ್ಟೋರೇಜ್‌ ಸ್ಪೇಸ್‌ ಫ್ರಿ ಆಗಿರುವಂತೆ ಮಾಡಬಹುದು.

ಅಪ್ಲಿಕೇಶನ್‌ ಸ್ಟೋರೇಜ್‌ ಮತ್ತು ಡೇಟಾವನ್ನು ಕ್ಲಿಯರ್‌ ಮಾಡಿ: ಫೋನ್‌ನಲ್ಲಿ ಅಪ್ಲಿಕೇಶನ್‌ಗಳನ್ನು ಡಿಲೀಟ್‌ ಮಾಡುವುದು ಮಾತ್ರವಲ್ಲ. ಈಗಾಗಲೇ ಅಪ್ಲಿಕೇಶನ್‌ಗಳಿಂದ ಸ್ಮಾರ್ಟ್‌ಫೋನ್‌ನಲ್ಲಿ ಸ್ಟೋರೇಜ್‌ ಆಗಿರುವ ಡೇಟಾವನ್ನು ಕೂಡ ಕ್ಲಿಯರ್‌ ಮಾಡುವುದು ಅವಶ್ಯಕವಾಗಿದೆ. ಇದನ್ನು ನಿಯಮಿತವಾಗಿ ಮಾಡುವುದರಿಂದ ನಿರ್ದಿಷ್ಟ ಪ್ರಮಾಣದ ಸ್ಟೋರೇಜ್‌ ಸ್ಪೇಸ್‌ ಅನ್ನು ಉಳಿಸಿಕೊಳ್ಳಲು ಸಾದ್ಯವಾಗಲಿದೆ. ಇದಕ್ಕಾಗಿ ನೀವು ನಿಮ್ಮ ಡಿವೈಸ್‌ನ ಸೆಟ್ಟಿಂಗ್ಸ್‌ಗೆ ನ್ಯಾವಿಗೇಟ್‌ ಮಾಡಬೇಕಾಗುತ್ತದೆ. ಇದರಲ್ಲಿ "ಅಪ್ಲಿಕೇಶನ್‌ಗಳು" ವಿಭಾಗವನ್ನು ತೆರೆಯಿರಿ, ನಂತರ ಅವುಗಳ ಸ್ಟೋರೇಜ್‌ ಮತ್ತು ಡೇಟಾವನ್ನು ಕ್ಲಿಯರ್‌ ಮಾಡಿರಿ.

ನಿಮ್ಮ ಮೊಬೈಲ್‌ನಲ್ಲಿಯೂ ಈ ಸಮಸ್ಯೆ ಕಾಣಿಸಿಕೊಂಡಿದೆಯಾ! ಕೂಡಲೇ ಈ ಕೆಲಸ ಮಾಡಿ!

ಫೋಟೋಗಳು ಮತ್ತು ವೀಡಿಯೊಗಳನ್ನು ಬ್ಯಾಕಪ್ ಮಾಡಿ: ಇನ್ನು ಸ್ಮಾರ್ಟ್‌ಫೋನ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸ್ಟೋರೇಜ್‌ ಅನ್ನು ಖಾಲಿ ಮಾಡುವುದು ಫೋಟೋಗಳು ಮತ್ತು ವೀಡಿಯೊಗಳು. ಆದರಿಂದ ನಿಮ್ಮ ಫೋಟೋಗಳು ಮತ್ತು ವೀಡಿಯೊಗಳನ್ನು ಒಂದು ನಿರ್ಧಿಷ್ಟ ಸಮಯದ ನಂತರ ಬಾಹ್ಯ ಹಾರ್ಡ್ ಡ್ರೈವ್ ಅಥವಾ ಕ್ಲೌಡ್ ಸ್ಟೋರೇಜ್‌ನಲ್ಲಿ ಅವುಗಳನ್ನು ಬ್ಯಾಕಪ್ ಮಾಡುವುದು ಸೂಕ್ತ. ಇದರಿಂದ ನಿಮ್ಮ ಮೊಬೈಲ್‌ನಲ್ಲಿ ಅವುಗಳನ್ನು ಡಿಲೀಟ್‌ ಮಾಡಿ ಸ್ಟೋರೇಜ್‌ ಸ್ಪೇಸ್‌ ಉಳಿಸಿಕೊಳ್ಳಬಹುದು.

ಡೌನ್‌ಲೋಡ್‌ಗಳನ್ನು ಸರಿಯಾಗಿ ನಿರ್ವಹಿಸಿ: ಸ್ಮಾರ್ಟ್‌ಫೋನ್‌ನಲ್ಲಿ ನೀವು ಡೌನ್‌ಲೋಡ್‌ ಫೋಲ್ಡರ್‌ಗಳನ್ನು ಮ್ಯಾನೇಜ್‌ ಮಾಡುವುದು ಕೂಡ ಸೂಕ್ತ. ಸುಖಾ ಸುಮ್ಮನೇ ಅನಗತ್ಯ ಫೈಲ್‌ಗಳನ್ನು ಡೌನ್‌ಲೋಡ್‌ ಮಾಡಿದರೆ ಫೋನ್‌ನ ಸ್ಟೋರೇಜ್‌ ಸ್ಪೇಸ್‌ ತುಂಬಿಹೋಗಲಿದೆ. ಇದಕ್ಕೆ ಬದಲಾಗಿ ನಿಮ್ಮ ಮೊಬೈಲ್‌ನಲ್ಲಿರುವ ಅನಗತ್ಯ ಫೈಲ್‌ಗಳು, ಹಳೆಯ ದಾಖಲೆಗಳು ಮತ್ತು ಯಾವುದೇ ನಕಲಿ ಡೌನ್‌ಲೋಡ್‌ಗಳನ್ನು ಪರಿಶೀಲಿಸಿ ಮತ್ತು ಡಿಲೀಟ್‌ ಮಾಡಿರಿ.

ನಿಮ್ಮ ಮೊಬೈಲ್‌ನಲ್ಲಿಯೂ ಈ ಸಮಸ್ಯೆ ಕಾಣಿಸಿಕೊಂಡಿದೆಯಾ! ಕೂಡಲೇ ಈ ಕೆಲಸ ಮಾಡಿ!

ಸ್ಟೋರೇಜ್‌ ಮ್ಯಾನೇಜ್‌ಮೆಂಟ್‌ ಟೂಲ್ಸ್‌ ಬಳಸಿ: ಇತ್ತೀಚಿನ ಬಹುತೇಕ ಸ್ಮಾರ್ಟ್‌ಫೋನ್‌ಗಳು ಇಂಟರ್‌ಬಿಲ್ಟ್‌ ಸ್ಟೋರೇಜ್‌ ಮ್ಯಾನೇಜ್‌ಮೆಂಟ್‌ ಟೂಲ್‌ ಅನ್ನು ಹೊಂದಿರುತ್ತವೆ. ಈ ಟೂಲ್‌ಗಳು ಬಳಕೆದಾರರಿಗೆ ಮೊಬೈಲ್‌ನಲ್ಲಿನ ಸ್ಟೋರೇಜ್‌ ಬಳಕೆಯ ಮಾಹಿತಿಯನ್ನು ನೀಡುತ್ತಿರುತ್ತವೆ. ಅಲ್ಲದೆ ಸ್ಟೋರೇಜ್‌ ಸ್ಪೇಸ್‌ ತುಂಬಿ ಹೋಗುವ ಮುನ್ನವೇ ನಿಮಗೆ ಆಲರ್ಟ್‌ ಮಾಡಲಿವೆ. ಅಲ್ಲದೆ ನಿಮ್ಮ ಮೊಬೈಲ್‌ನಲ್ಲಿರುವ ಬಿಗ್‌ಸೈಜ್‌ ಫೈಲ್‌ಗಳು, ಬಳಕೆಯಾಗದ ಅಪ್ಲಿಕೇಶನ್‌ಗಳು ಅಥವಾ ಫೋಟೋಗಳನ್ನು ಡಿಲೀಟ್‌ ಮಾಡುವಂತೆ ಸೂಚಿಸುತ್ತವೆ. ಅಲ್ಲದೆ ನಿಮ್ಮ ಸ್ಟೋರೇಜ್‌ ಸ್ಪೇಸ್‌ ಉತ್ತಮಗೊಳಿಸುವ ಪ್ರಕ್ರಿಯೆಯನ್ನು ಹೆಚ್ಚು ಅನುಕೂಲಕರವಾಗಿಸುತ್ತದೆ.

Best Mobiles in India

English summary
There are several ways you can free up some storage space on your smartphone.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+