Subscribe to Gizbot

ಶಾಕಿಂಗ್!!...ಮೊಬೈಲ್ ಸೆನ್ಸಾರ್ ಮೂಲಕವೂ ಪಾಸ್‌ವರ್ಡ್ ಕದಿಯಬಹುದು!!

Written By:

ಸ್ಮಾರ್ಟ್‌ಫೋನಿನಲ್ಲಿ ಅಡಕವಾಗಿರುವ ಸೆನ್ಸಾರ್‌ಗಳೂ ಕೂಡ ಹ್ಯಾಕರ್‌ಗಳ ಪಾಲಿಗೆ ವರವಾಗಿವೆ ಎಂದು ಸಿಂಗಪುರದ ನಾನ್ಯಾಂಗ್ ತಂತ್ರಜ್ಞಾನ ವಿಶ್ವವಿದ್ಯಾಲಯದ ಸಂಶೋಧಕರು ಹೇಳಿದ್ದಾರೆ.! ಸ್ಮಾರ್ಟ್‌ಫೋನ್‌ಗಳಲ್ಲಿನ ಸೆನ್ಸರ್‌ಗಳ ದತ್ತಾಂಶಗಳನ್ನು ಬಳಸಿ ಹ್ಯಾಕರ್‌ಗಳು ಪಾಸ್‌ವರ್ಡ್‌ಗಳನ್ನು ಕದಿಯುವ ಅಪಾಯ ಇದೆ ಎಂದು ತಿಳಿಸಿದ್ದಾರೆ.!!

ಸ್ಮಾರ್ಟ್‌ಫೋನ್‌ಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಲು ನಾಲ್ಕು ಅಂಕಿಗಳಿಗಿಂತ ಹೆಚ್ಚು ಪಿನ್‌ ಹಾಗೂ ಇತರೆ ಸುರಕ್ಷತಾ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಎಂದು ನಾನ್ಯಾಂಗ್ ತಂತ್ರಜ್ಞಾನ ವಿಶ್ವವಿದ್ಯಾಲಯದ ಸಂಶೋಧಕ ಭಾರತೀಯ ಮೂಲದ ವಿಜ್ಞಾನಿ ಶಿವಂ ಭಸಿನ್ ಹೇಳಿದ್ದಾರೆ.! ಹಾಗಾದರೆ, ಸೆನ್ಸಾರ್‌ಗಳು ಹ್ಯಾಕರ್‌ಗಳಿಗೆ ಹೇಗೆ ಸಹಾಯವಾಗುತ್ತಿವೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸೆನ್ಸರ್‌ಗಳು ಸುರಕ್ಷಿತವಲ್ಲ!!

ಸೆನ್ಸರ್‌ಗಳು ಸುರಕ್ಷಿತವಲ್ಲ!!

ಸ್ಮಾರ್ಟ್‌ಫೋನ್‌ಗಳಲ್ಲಿ ಬಳಸಲಾಗಿರುವ ಹಲವು ಸೆನ್ಸಾರ್‌ಗಳಲ್ಲಿ ದಿಕ್ಕು ಸೂಚಿಸಲು ನೆರವಾಗುವ ಗೈರೊಸ್ಕೋಪ್ ಹಾಗೂ ಸಮೀಪದಲ್ಲಿ ಇರುವ ಉಪಕರಣಗಳನ್ನು ಪತ್ತೆ ಹಚ್ಚಲು ಬಳಕೆಯಾಗುವ ಸೆನ್ಸರ್‌ಗಳು ಸುರಕ್ಷಿತವಲ್ಲ ಎಂದು ಸಂಶೋಧಕರು ಹೇಳಿದ್ದಾರೆ.!!

ಪಾಸ್‌ವರ್ಡ್‌ ಕದಿಯಬಹುದು!!

ಪಾಸ್‌ವರ್ಡ್‌ ಕದಿಯಬಹುದು!!

ಸ್ಮಾರ್ಟ್‌ಫೋನ್‌ಗಳಲ್ಲಿನ ಆಕ್ಸಲರೊಮೀಟರ್, ಗೈರೊಸ್ಕೋಪ್, ಮ್ಯಾಗ್ನೆಟೊಮೀಟರ್ ಸೇರಿ ಎಲ್ಲಾ ಸೆನ್ಸಾರ್‌ಗಳಿಂದ ಸಂಗ್ರಹಿಸಲಾದ ದತ್ತಾಂಶಗಳಿಂದ ಶೇಕಡಾ 99.5ರಷ್ಟು ನಿಖರತೆಯೊಂದಿಗೆ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳನ್ನು ಅನ್‌ಲಾಕ್ ಮಾಡುವಲ್ಲಿ ಸಂಶೋಧಕರು ಯಶಸ್ವಿಯಾಗಿದ್ದಾರೆ.!!

ಏನೆಲ್ಲಾ ಮಾಹಿತಿ ಕದಿಯುತ್ತಾರೆ?

ಏನೆಲ್ಲಾ ಮಾಹಿತಿ ಕದಿಯುತ್ತಾರೆ?

ಸ್ಮಾರ್ಟ್‌ಫೋನ್‌ಗಳಲ್ಲಿ ಯಾವ ಅಂಕಿಗಳನ್ನು ಬಳಸುತ್ತಾರೆ, ಯಾವ ರೀತಿ ಸ್ಮಾರ್ಟ್‌ಫೋನ್‌ಗಳನ್ನು ವಾಲಿಸುತ್ತಾರೆ ಮತ್ತು ಫೋನ್‌ಗಳಿಂದ ಹೊರಹೊಮ್ಮುವ ವಿಕಿರಣಗಳೂ ಎಷ್ಟು ಪ್ರಮಾಣದಲ್ಲಿ ಇರರುತ್ತದೆ ಎಂಬೆಲ್ಲಾ ಮಾಹಿತಿಗಳನ್ನು ಹ್ಯಾಕರ್‌ಗಳು ಸೆನ್ಸಾರ್ ಸಹಾಯದಿಂದ ಕದಿಯಬಹುದಾಗಿದೆ.!!

4 ಅಂಕಿ ಪಿನ್ ಬಳಕೆ ತಪ್ಪು!!

4 ಅಂಕಿ ಪಿನ್ ಬಳಕೆ ತಪ್ಪು!!

ಸ್ಮಾರ್ಟ್‌ಫೋನ್‌ಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಲು ನಾಲ್ಕು ಅಂಕಿಗಳಿಗಿಂತ ಹೆಚ್ಚು ಪಿನ್‌ ಹಾಗೂ ಇತರೆ ಸುರಕ್ಷತಾ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು ಎಂದು ನಾನ್ಯಾಂಗ್ ತಂತ್ರಜ್ಞಾನ ವಿಶ್ವವಿದ್ಯಾಲಯದ ಸಂಶೋಧಕ ಭಾರತೀಯ ಮೂಲದ ವಿಜ್ಞಾನಿ ಶಿವಂ ಭಸಿನ್ ಅವರು ಸಲಹೆ ನೀಡಿದ್ದಾರೆ.!!

ಹೊಸ ವರ್ಷಕ್ಕೆ ಮತ್ತೊಂದು Jio Surprise Cashback ಆಫರ್!!
ಶೇಕಡ 99.5 ನಿಖರತೆ!!

ಶೇಕಡ 99.5 ನಿಖರತೆ!!

ಸೆನ್ಸಾರ್ ಸಹಾಯದಿಂದ ಈ ಹಿಂದೆ ಶೇಕಡಾ 74ರಷ್ಟು ನಿಖರತೆಯೊಂದಿಗೆ ಫೋನ್‌ ಅನ್‌ಲಾಕ್‌ ಮಾಡಿದ ದಾಖಲೆ ಇತ್ತು. ಆದರೆ ಎನ್‌ಟಿಯು ಸಂಶೋಧಕರ ತಂತ್ರಜ್ಞಾನ ಬಳಸಿ ನಾಲ್ಕು ಅಂಕಿಯ ಪಿನ್‌ಗಳನ್ನು ಬಳಸಲು ಸಾಧ್ಯವಿರುವ ಎಲ್ಲಾ ಸಾಧ್ಯತೆಗಳನ್ನು ಅಂದಾಜಿಸಬಹುದು ಎನ್ನಲಾಗಿದೆ.!!

ಓದಿರಿ:ಬೆಂಗಳೂರಿನಲ್ಲಿ ಗೂಗಲ್ ಕೆಲಸಗಳಿಗಾಗಿ ಈಗಲೇ ಅರ್ಜಿ ಸಲ್ಲಿಸಿ!!..ಎಲ್ಲಾ ಮಾಹಿತಿ ತಿಳಿಯಿರಿ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Even if some shady character were to get hold of your smartphone. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot