Home
ಸುದ್ದಿಜಾಲ

ಯೂಟ್ಯೂಬ್‌ನಿಂದ ಅಚ್ಚರಿಯ ಘೋಷಣೆ! ವೀಡಿಯೋ ಕ್ರಿಯೆಟರ್ಸ್‌ಗಳಿಗೆ ಗುಡ್‌ನ್ಯೂಸ್‌!

ಯೂಟ್ಯೂಬ್‌ ಜನಪ್ರಿಯ ವೀಡಿಯೊ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾಗಿದೆ. ವೀಡಿಯೊ ಮತ್ತು ಮ್ಯೂಸಿಕ್‌ ಎರಡನ್ನು ಒಳಗೊಂಡಿರುವ ಯೂಟ್ಯೂಬ್‌ ಮನರಂಜನೆಗೆ ಹೇಳಿ ಮಾಡಿಸಿದ ತಾಣವಾಗಿದೆ. ಇನ್ನು ಯೂಟ್ಯೂಬ್‌ ಕೂಡ ತನ್ನ ಬಳಕೆದಾರರಿಗೆ ಹೊಸ ಮಾದರಿಯ ಫೀಚರ್ಸ್‌ ಹಾಗೂ ಟೂಲ್‌ಗಳನ್ನು ಪರಿಚಯಿಸುತ್ತಾ ಬಂದಿದೆ.

ಹೌದು, ಯುಟ್ಯೂಬ್‌ ಬಳಕೆದಾರರ ಅನುಕೂಲಕ್ಕಾಗಿ ಹೊಸ ಆಯ್ಕೆಯ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಇದೀಗ ಯೂಟ್ಯೂಬ್‌ ಹೊಸ ಅಪ್ಲಿಕೇಶನ್‌ ಮತ್ತು ಹೊಸ ಎಐ ಚಾಲಿತ ಫೀಚರ್ಸ್‌ಗಳನ್ನು ಘೋಷಣೆ ಮಾಡಿದೆ. ಇದರಲ್ಲಿ ವೀಡಿಯೊ ಎಡಿಟ್‌ ಮಾಡುವುದಕ್ಕೆ ಅವಕಾಶ ನೀಡುವ ಯೂಟ್ಯೂಬ್‌ ಕ್ರಿಯೆಟ್‌ ಆ್ಯಪ್‌ ಅನ್ನು ಪರಿಚಯಿಸಿದೆ. ಇದರೊಂದಿಗೆ ಡ್ರೀಮ್‌ ಸ್ಕ್ರೀನ್‌ ಫೀಚರ್ಸ್‌ ಅನ್ನು ಕೂಡ ಪರಿಚಯಿಸಿದೆ. ಹಾಗಾದ್ರೆ ಯೂಟ್ಯೂಬ್‌ ಸೇರಿರುವ ಹೊಸ ಫೀಚರ್ಸ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಯೂಟ್ಯೂಬ್‌ನಿಂದ ಅಚ್ಚರಿಯ ಘೋಷಣೆ! ವೀಡಿಯೋ ಕ್ರಿಯೆಟರ್ಸ್‌ಗಳಿಗೆ ಗುಡ್‌ನ್ಯೂಸ್‌!

ಮೇಡ್‌ ಆನ್‌ ಯೂಟ್ಯೂಬ್‌ ಈವೆಂಟ್‌ನಲ್ಲಿ ಗೂಗಲ್‌ ಭರಪೂರ ಘೋಷಣೆಗಳನ್ನು ಮಾಡಿದೆ. ಈ ಮೂಲಕ ಯೂಟ್ಯೂಬ್‌ ಹೊಸ ಕ್ರಾಂತಿ ಬರೆಯುವ ಸೂಚನೆ ನೀಡಿದೆ. ಇನ್ಮುಂದೆ ನೀವು ವೀಡಿಯೊಗಳನ್ನು ಎಡಿಟ್‌ ಮಾಡುವುದಕ್ಕೆ ಬೇರೆ ಅಪ್ಲಿಕೇಶನ್‌ ಬಳಸುವ ಅವಶ್ಯಕತೆ ಬರುವುದಿಲ್ಲ. ಬದಲಿಗೆ ಯೂಟ್ಯೂಬ್‌ ಕ್ರಿಯೆಟ್‌ ಎನ್ನುವ ಅಪ್ಲಿಕೇಶನ್‌ ಅನ್ನು ಪರಿಚಯಿಸಲಾಗಿದೆ. ಇದು ವೀಡಿಯೋಗಳನ್ನು ಎಡಿಟ್‌ ಮಾಡುವುದಕ್ಕೆ ಅವಕಾಶ ನೀಡಲಿದೆ.

ಇದಲ್ಲದೆ ಯೂಟ್ಯೂಬ್‌ ಡ್ರೀಮ್‌ ಸ್ಕ್ರೀನ್‌ ಎನ್ನುವ ಫೀಚರ್ಸ್‌ ಘೋಷಣೆ ಮಾಡಿದೆ. ಇದು ಶಾರ್ಟ್ಸ್‌ ಕ್ರಿಯೆಟರ್‌ಗಳಿಗೆ ಎಐ ಸಹಾಯದಿಂದ ವೀಡಿಯೊ ಬ್ಯಾಕ್‌ಗ್ರೌಂಡ್‌ಗಳನ್ನು ಕ್ರಿಯೆಟ್‌ ಮಾಡಲು ಸಹಾಯ ಮಾಡಲಿದೆ. ಇನ್ನು ಕ್ರಿಯೆಟರ್ಸ್‌ಗೆ ಇನ್‌ಸೈಟ್ಸ್‌ ಸೇರಿದಂತೆ ಹಲವು ಫೀಚರ್ಸ್‌ಗಳನ್ನು ನೀಡುವುದಕ್ಕಾಗಿ ಎಐ ಅನ್ನು ಬಳಸಿಕೊಳ್ಳುವುದಕ್ಕೆ ಯೂಟ್ಯೂಬ್‌ ಮುಂದಾಗಿದೆ.

ಯೂಟ್ಯೂಬ್‌ ಕ್ರಿಯೆಟ್‌ ಡೌನ್‌ಲೋಡ್‌ ಮಾಡಿ
ಯೂಟ್ಯೂಬ್‌ ಕ್ರಿಯೆಟ್‌ ಅಪ್ಲಿಕೇಶನ್‌ ಇದೀಗ ಡೌನ್‌ಲೋಡ್‌ಗೆ ಲಭ್ಯವಿದೆ. ಇದು ವೀಡಿಯೋ ಎಡಿಟಿಂಗ್‌ ಅಪ್ಲಿಕೇಶನ್‌ ಆಗಿದ್ದು, ಸಪೂರ್ಣ ಉಚಿತವಾಗಿ ಲಭ್ಯವಾಗುವ ಅಪ್ಲಿಕೇಶನ್ ಆಗಿದೆ. ಇದರ ಮೂಲಕ ಲಾಂಗ್‌ ಫಾರ್ಮ್‌ ವೀಡಿಯೋ ಮತ್ತು ಶಾರ್ಟ್ಸ್‌ಗಳನ್ನು ಎಡಿಟ್ ಮಾಡಲು ಬಳಸಬಹುದಾಗಿದೆ. ಇದರಲ್ಲಿ ವಿವಿಧ ವೀಡಿಯೊ ಎಡಿಟಿಂಗ್ ಫೀಚರ್ಸ್‌ಗಳನ್ನು ಸಹ ನೀಡಲಾಗಿದೆ. ಅದರಂತೆ ಬಳಕೆದಾರರಿಗೆ ನಿಖರವಾದ ಎಡಿಟಿಂಗ್‌ ಮತ್ತು ಟ್ರಿಮ್ಮಿಂಗ್, ಆಟೋಮ್ಯಾಟಿಕ್‌ ಕ್ಯಾಪ್ಶನಿಂಗ್‌ ಮತ್ತು ವಾಯ್ಸ್‌ಓವರ್ ಸಾಮರ್ಥ್ಯಗಳನ್ನು ಒಳಗೊಂಡಿದೆ.

ಇದು ರಾಯಲ್ಟಿ-ಫ್ರೀ ಮ್ಯೂಸಿಕ್‌, ಫಿಲ್ಟರ್‌ಗಳು, ಎಫೆಕ್ಟ್ಸ್‌ ಮತ್ತು ಟ್ರಾನ್ಸಕ್ಷನ್‌ ಲೈಬ್ರರಿಗೆ ಪ್ರವೇಶವನ್ನು ನೀಡಲಿದೆ. ವೀಡಿಯೊ ಕ್ಲಿಪ್‌ನೊಂದಿಗೆ ಮ್ಯೂಸಿನ್‌ ಅನ್ನು ಆಟೋಮ್ಯಾಟಿಕ್‌ ಸಿಂಕ್ ಮಾಡುವ ಬೀಟ್-ಮ್ಯಾಚಿಂಗ್ ಟೆಕ್ನಾಲಜಿಯನ್ನು ಒಳಗೊಂಡಿದೆ. ಈ ಅಪ್ಲಿಕೇಶನ್‌ ಅನ್ನು ಯಾರು ಬೇಕಾದರೂ ಬಳಸಬಹುದಾಘಿದೆ. ಆದರೆ ಇದು ಪೂರ್ಣ ಪ್ರಮಾಣದ ಪಿಸಿ ವೀಡಿಯೊ ಎಡಿಟಿಂಗ್‌ ಸಾಫ್ಟ್‌ವೇರ್‌ ಅನ್ನು ಬಳಸಿಕೊಂಡು ಪ್ರವೇಶವನ್ನು ಹೊಂದಿರದ ಮೊಬೈಲ್‌ ಕ್ರಿಯೆಟರ್ಸ್‌ಗಳನ್ನು ಗುರಿಯಾಗಿಸಿಕೊಂಡಿದೆ. ಸದ್ಯ ಈ ಅಪ್ಲಿಕೇಶನ್‌ ಬೀಟಾ ಲೆವೆಲ್‌ನಲ್ಲಿದ್ದು, ಭಾರತ ಸೇರಿದಂತೆ ಎಂಟು ದೇಶಗಳಲ್ಲಿ ಆಂಡ್ರಾಯ್ಡ್‌ನಲ್ಲಿ ಲಭ್ಯವಿದೆ.

ಏನಿದು ಡ್ರೀಮ್‌ ಸ್ಕ್ರೀನ್‌ ಫೀಚರ್ಸ್‌?
ಡ್ರೀಮ್‌ ಸ್ಕ್ರೀನ್‌ ಶಾರ್ಟ್ಸ್ ಕ್ರಿಯೆಟರ್ಸ್‌ಗಳಿಗೆ ಲಭ್ಯವಾಗುತ್ತಿರುವ ಹೊಸ ಪ್ರಾಯೋಗಿಕ AI-ಚಾಲಿತ ಫೀಚರ್ಸ್‌ ಆಗಿದೆ. ಇದು AI ಸಹಾಯದಿಂದ ಶಾರ್ಟ್ಸ್‌ಗಳಿಗಾಗಿ ಮತ್ತು ವೀಡಿಯೊ ಬ್ಯಾಕ್‌ಗ್ರೌಂಡ್‌ಗಳನ್ನು ಕ್ರಿಯೆಟ್‌ ಮಾಡಲು ಬಳಕೆದಾರರಿಗೆ ಅವಕಾಶ ನೀಡಲಿದೆ. ಇದಕ್ಕಾಗಿ ಶಾರ್ಟ್ಸ್‌ ಕ್ರಿಯೆಟರ್ಸ್‌ ಟೆಕ್ಷ್ಟ್‌ ಫಿಲ್ಡ್‌ನಲ್ಲಿ ಐಡಿಯಾ ಪ್ರಾಂಪ್ಟ್ ಅನ್ನು ನಮೂದಿಸಿ ಮತ್ತು AI ತನ್ನ ಮ್ಯಾಜಿಕ್ ಮಾಡಲು ಅವಕಾಶ ಮಾಡಿಕೊಡಬೇಕಾಗುತ್ತದೆ.

ಈ ಡ್ರೀಮ್‌ ಸ್ಕ್ರೀನ್‌ ಫೀಚರ್ಸ್‌ ಈ ವರ್ಷದ ಕೊನೆಯಲ್ಲಿ ಪರೀಕ್ಷೆಗೆ ಒಳಗಾಗಲಿದೆ ಎಂದು ಯೂಟ್ಯೂಬ್‌ ಹೇಳಿಕೊಂಡಿದೆ. ಇದು ಪ್ರಾರಂಭದಲ್ಲಿ ಆಯ್ದ ರಚನೆಕಾರರಿಗೆ ಮಾತ್ರ ಲಭ್ಯವಾಗಲಿದೆ. ಇದನ್ನು ಮುಂದಿನ ವರ್ಷದ ಆರಂಭದಲ್ಲಿ ಹೆಚ್ಚಿನ ಕ್ರಿಯೆಟರ್ಸ್‌ಗಳಿಗೆ ಲಭ್ಯವಾಗುವಂತೆ ಮಾಡುವುದಾಗಿ ಹೇಳಿದೆ.

Best Mobiles in India

English summary
YouTube announced a new app and a few new AI-powered features
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+