Home
ಸುದ್ದಿಜಾಲ

ಎಚ್ಚರ..! ಇನ್ಮುಂದೆ ಇಂಥ ವಿಡಿಯೋ ಅಪ್ಲೋಡ್ ಮಾಡಂಗಿಲ್ಲ; ಯೂಟ್ಯೂಬ್‌ನಿಂದ ಕಠಿಣ ಕ್ರಮ!

ಯೂಟ್ಯೂಬ್ ಬಳಕೆದಾರರೇ ಎಚ್ಚರ.. ಎಚ್ಚರ..! ಸಣ್ಣ ತಪ್ಪಿನಿಂದ ದೊಡ್ಡ ಶಿಕ್ಷೆ ಕಟ್ಟಿಟ್ಟ ಬುತ್ತಿ! ಹೌದು, ಹಲವರ ನೆಚ್ಚಿನ ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಯೂಟ್ಯೂಬ್‌ (YouTube) ಮಹತ್ವದ ನಿರ್ಧಾರ ಕೈಗೊಂಡಿದೆ. ಭಾರತೀಯ ಕಂಟೆಂಟ್ ಕ್ರಿಯೇಟರ್ಸ್‌ ಮತ್ತು ಬಳಕೆದಾರರಿಗೆ ದೊಡ್ಡ ಶಾಕಿಂಗ್ ಸುದ್ದಿ ನೀಡಿದೆ. ಹೌದು, ಕ್ಲಿಕ್‌ಬೈಟ್ ಶೀರ್ಷಿಕೆ ಅಥವಾ ಥಂಬ್‌ನೇಲ್‌ನೊಂದಿಗೆ ವಿಡಿಯೋಗಳನ್ನು ಯೂಟ್ಯೂಬ್‌ನಲ್ಲಿ ಅಪ್ಲೋಡ್‌ ಮಾಡುವ ಕಂಟೆಂಟ್ ಕ್ರಿಯೇಟರ್ಸ್‌ ಮತ್ತು ಬಳಕೆದಾರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ. ಇನ್ಮುಂದೆ ಥಂಬ್‌ನೇಲ್‌ ಬಳಸುವಾಗ ಎಚ್ಚರದಿಂದರಬೇಕಿದೆ.

ಯೂಟ್ಯೂಬ್‌ ಡಿಸೆಂಬರ್ 18 ರಂದು ತನ್ನ ಬ್ಲಾಗ್ ಪೋಸ್ಟ್‌ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ನೀವು, ಅಪ್ಲೋಡ್‌ ಮಾಡುವ ವಿಡಿಯೋಗೆ ಸಂಬಂಧವಿಲ್ಲದ ಶೀರ್ಷಿಕೆ ಅಥವಾ ಥಂಬ್‌ನೇಲ್‌ ಬಳಸಿದರೆ ಯಾವೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎನ್ನುವುದನ್ನು ಯೂಟ್ಯೂಬ್‌ ಸ್ಪಷ್ಟವಾಗಿದೆ. ಬ್ರೇಕಿಂಗ್ ನ್ಯೂಸ್ ಅಥವಾ ಇತರೆ ಪ್ರಸ್ತುತ ಘಟನೆಗಳ ಸಮಯದಲ್ಲಿ ಈ ರೀತಿಯ ಸನ್ನಿವೇಶಗಳು ಬಹುತೇಕ ಸಾಮಾನ್ಯವಾಗಿದೆ. ಯಾವುದೇ ತುರ್ತು ಅಥವಾ ಪ್ರಮುಖ ಸಮಯದಲ್ಲಿ ಸಂಪೂರ್ಣ ವಿವರಗಳನ್ನು ತಿಳಿಯಲು ಯೂಟ್ಯೂಬ್‌ಗೆ ಬರುವ ಬಳಕೆದಾರರು ಈ ರೀತಿಯ ಶೀರ್ಷಿಕೆಗಳು ಮತ್ತು ಥಂಬ್‌ನೇಲ್‌ಗಳಿಂದ ಮೋಸ ಹೋಗುತ್ತಾರೆ ಎಂದು ಯೂಟ್ಯೂಬ್‌ ಹೇಳಿದೆ.

ಎಚ್ಚರ! ಇನ್ಮುಂದೆ ಇಂಥ ವಿಡಿಯೋ ಅಪ್ಲೋಡ್ ಮಾಡಂಗಿಲ್ಲ; ಯೂಟ್ಯೂಬ್‌ನಿಂದ ಕಠಿಣ ಕ್ರಮ!

ಬಳಕೆದಾರರನ್ನು ದಾರಿ ತಪ್ಪಿಸುತ್ತಿರು 'ಥಂಬ್‌ನೇಲ್‌'

ಕೆಲವು ಕಂಟೆಂಟ್ ಕ್ರಿಯೇಟರ್ಸ್‌ ಈ ರೀತಿಯ ವಿಷಯದೊಂದಿಗೆ ಬಳಕೆದಾರರನ್ನು ದಾರಿತಪ್ಪಿಸುತ್ತದೆ ಎಂದು ಯೂಟ್ಯೂಬ್‌ ತನ್ನ ಬ್ಲಾಗ್‌ನಲ್ಲಿ ತಿಳಿಸಿದೆ. ಬ್ರೇಕಿಂಗ್ ಅಥವಾ ಪ್ರಸ್ತುತ ಘಟನೆಗಳಿಗೆ ಸಂಬಂಧಿಸಿದ ಸುದ್ದಿಗಳನ್ನು ಕವರ್ ಮಾಡುವ ಯೂಟ್ಯೂಬ್ ಚಾನೆಲ್‌ಗಳು ಹೊಸ ನಿರ್ಧಾರದ ಅಡಿಯಲ್ಲಿ ಬರುತ್ತವೆ ಎಂದು ಯೂಟ್ಯೂಬ್ ಸ್ಪಷ್ಟಪಡಿಸಿದೆ. ಹೀಗಾಗಿ, ಕಂಟೆಂಟ್ ಕ್ರಿಯೇಟರ್ಸ್‌ ಬಹಳ ಎಚ್ಚರಿಕೆಯಿಂದಿರಬೇಕಿದೆ.

ಈ ನಿಯಮಗಳನ್ನು ಅನುಸರಿಸಬೇಕು

ಕ್ರಿಯೇಟಿವ್ (ಆಕರ್ಷಣೀಯ) ಶೀರ್ಷಿಕೆ ಮತ್ತು ಥಂಬ್‌ನೇಲ್‌ಗಳೊಂದಿಗೆ ಯೂಟ್ಯೂಬ್ ವಿಡಿಯೋಗಳನ್ನು ಕ್ರಿಯೇಟ್ ಮಾಡುವುದು ಮತ್ತು ಬಳಕೆದಾರರನ್ನು ದಾರಿ ತಪ್ಪಿಸುವುದು ಯೂಟ್ಯೂಬ್‌ನ ಹೊಸ ನೀತಿಗೆ ವಿರುದ್ಧವಾಗಿದೆ. ಆದರೆ, ಬ್ರೇಕಿಂಗ್ ಅಥವಾ ಪ್ರಸ್ತುತ ಘಟನೆಗಳನ್ನು ಒಳಗೊಂಡಿರುವ ಯಾವುದೇ ನಿಯಮಗಳನ್ನು ಸದ್ಯ ಯೂಟ್ಯೂಬ್ ಪ್ರಕಟಿಸಿಲ್ಲ. ಮುಂದಿನ ದಿನಗಳಲ್ಲ ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.

ಬಂದಿದೆ ಸ್ವಯಂ ಡಬ್ಬಿಂಗ್ ವೈಶಿಷ್ಟ್ಯ

ಇತ್ತೀಚೆಗೆ ಯೂಟ್ಯೂಬ್‌ನ ಸ್ವಯಂ ಡಬ್ಬಿಂಗ್ ವೈಶಿಷ್ಟ್ಯದ ವಿವರಗಳನ್ನು ಬಹಿರಂಗಪಡಿಸಲಾಗಿದೆ. ಈ ವೈಶಿಷ್ಟ್ಯವು ಕೃತಕ ಬುದ್ಧಿಮತ್ತೆಯ (ಎಐ) ಆಧಾರದ ಮೇಲೆ ಕೆಲಸ ನಿರ್ವಹಿಸುತ್ತದೆ. ಈ ವೈಶಿಷ್ಟ್ಯದ ಮೂಲಕ ಇತರೆ ಭಾಷೆಗಳಲ್ಲಿನ ವಿಡಿಯೋವನ್ನು ಸಹ ವೀಕ್ಷಿಸಬಹುದು ಎಂದು ಹೇಳಲಾಗಿದೆ. ಕಂಟೆಂಟ್ ಕ್ರಿಯೇಟರ್ಸ್‌ ಅಪ್ಲೋಡ್‌ ಮಾಡಿದ ವಿಡಿಯೋಗಳನ್ನು ಸ್ವಯಂ ಡಬ್ಬಿಂಗ್ ವೈಶಿಷ್ಟ್ಯದ ಮೂಲಕ ಸ್ವಯಂಚಾಲಿತವಾಗಿ ಇತರೆ ಭಾಷೆಗಳಿಗೆ ಅನುವಾದಿಸಲಾಗುತ್ತದೆ.

ಯಾವೆಲ್ಲಾ ಭಾಷೆಗಳಿಗೆ ಡಬ್ಬಿಂಗ್?

ಯೂಟ್ಯೂಬ್‌ ಬೆಂಬಲಿತ ಭಾಷೆಗಳಲ್ಲಿ ಬಳಕೆದಾರರು ಯಾವುದೇ ವಿಡಿಯೋಯೊವನ್ನು ವೀಕ್ಷಿಸಬಹುದು. ಇಂತಹ ವಿಡಿಯೋಗಳು ಸ್ವಯಂ ಸಂಪಾದಿತ ಎಂಬ ವಿಶೇಷ ಲೇಬಲ್ ಅನ್ನು ಹೊಂದಿರುತ್ತದೆ. ಪ್ರಸ್ತುತ, ಯೂಸರ್ಸ್‌ ಸ್ವಯಂ ಡಬ್ಬಿಂಗ್ ವೈಶಿಷ್ಟ್ಯವು ಫ್ರೆಂಚ್, ಜರ್ಮನ್, ಹಿಂದಿ, ಸ್ಪ್ಯಾನಿಷ್, ಪೋರ್ಚುಗೀಸ್, ಜಪಾನೀಸ್, ಇಟಾಲಿಯನ್ ಮತ್ತು ಇಂಗ್ಲಿಷ್ ಭಾಷೆಗಳನ್ನು ಸಫೋರ್ಟ್‌ ಮಾಡುತ್ತದೆ. ಈ ಭಾಷೆಗಳ ನಡುವೆ ಕಂಟೆಂಟ್ ಅನ್ನು ಸ್ವಯಂ ಡಬ್ ಮಾಡಲಾಗುತ್ತದೆ. ಈ ವೈಶಿಷ್ಟ್ಯವು ವಿಡಿಯೋವನ್ನು ಅಪ್ಲೋಡ್‌ ಮಾಡುವಾಗ ಸ್ವಯಂಚಾಲಿತವಾಗಿ ಧ್ವನಿಯನ್ನು ಪತ್ತೆ ಮಾಡುತ್ತದೆ. ಬೆಂಬಲಿತ ಭಾಷೆಗಳಿಗೆ ಸ್ವಯಂಚಾಲಿತವಾಗಿ ಪರಿವರ್ತಿಸುತ್ತದೆ.

ಆರಂಭಿಕ ಹಂತದಲ್ಲಿ ಸಮಸ್ಯೆ ಆಗಬಹುದು!

ಸ್ವಯಂ ಡಬ್ಬಿಂಗ್ ವೈಶಿಷ್ಟ್ಯ ವೈಶಿಷ್ಟ್ಯವು ಧ್ವನಿಯನ್ನು ಗುರುತಿಸದಿದ್ದರೆ, ಅದರ ಬಗ್ಗೆ ವಿವರಗಳನ್ನು ಸಹ ಪ್ರದರ್ಶಿಸುತ್ತದೆ. ಅಂದರೆ, ಸ್ವಯಂ ಡಬ್ಬಿಂಗ್ ವೈಶಿಷ್ಟ್ಯದ ಮೂಲಕ ಅಪ್ಲೋಡ್‌ ಮಾಡಿದ ವಿಡಿಯೋವನ್ನು ಇತರೆ ಭಾಷೆಗಳಿಗೆ ಡಬ್ಬಿಂಗ್ ಮಾಡಲು ಸಾಧ್ಯವಿಲ್ಲ. ಆರಂಭಿಕ ಹಂತದಲ್ಲಿ ದೋಷಗಳಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಮುಂದಿನ ದಿನಗಳಲ್ಲಿ ಅತ್ಯಂತ ನಿಖರತೆಯೊಂದಿಗೆ ಈ ಸ್ವಯಂ ಡಬ್ಬಿಂಗ್ ವೈಶಿಷ್ಟ್ಯ ಲಭ್ಯವಾಗಲಿದೆ.

Best Mobiles in India

English summary
YouTube announces key decision against indian users and Content creators: know details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+