ಯೂಟ್ಯೂಬ್ ವಿಡಿಯೋ ಕದ್ದು ತಮ್ಮದೆನ್ನುವವರಿಗೆ ಅಂಕುಶ ಹಾಕಲು ಬಂದಿದೆ ಹೊಸ ವಿಧಾನ..!
ಎಷ್ಟೋ ಬಾರಿ ಯೂಟ್ಯೂಬ್ನಲ್ಲಿ ನೋಡಿದ ವಿಡಿಯೋಗಳೇ ಬೇರೆ ಬೇರೆ ಚಾನಲ್‌ಗಳ ಹೆಸರಿನ ಮೂಲಕ ಬರುತ್ತವೆ. ಇದರಿಂದ ಯೂಟ್ಯೂಬ್ ಬಳಕೆದಾರರಿಗೆ ಬಹಳಷ್ಟು ಕಿರಿಕಿರಿಯಾಗುತ್ತಿತ್ತು. ಇದಲ್ಲದೇ ಯೂಟ್ಯೂಬ್‌ನಲ್ಲಿಯೇ ವಿಡಿಯೋ ಡೌನ್‌ಲೋಡ್ ಮಾಡಿಕೊಂಡು ಸ್ವಲ್ಪ ಎಡಿಟಿಂಗ್ ಮಾಡಿ ಮತ್ತೇ ಅದೇ ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡುತ್ತಿರುವವರ ಸಂಖ್ಯೆ ಹೆಚ್ಚಾಗಿತ್ತು. ಇದರಿಂದ ಸೃಜನಶೀಲವಾಗಿ ನೈಜವಾಗಿ ವಿಡಿಯೋಗಳನ್ನು ಸೃಷ್ಟಿಸಿದವರಿಗೆ ಬಹಳಷ್ಟು ನಷ್ಟ ಆಗುತ್ತಿತ್ತು.

ಆದ್ದರಿಂದಲೇ ಯೂಟ್ಯೂಬ್ ಈ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದು, ಇನ್ನು ಮುಂದೆ ಒಂದೇ ವಿಡಿಯೋವನ್ನು ಯೂಟ್ಯೂಬ್‌ಗೆ ಮರು ಅಪ್‌ಲೋಡ್ ಮಾಡಿದರೆ ವಿಡಿಯೋ ಸೃಷ್ಟಿಕರ್ತರಿಗೆ ನೊಟಿಫೀಕೆಷನ್ ನೀಡಲು ಯೂಟ್ಯೂಬ್ ಕಾಪಿರೈಟ್ ಮ್ಯಾಚ್ ಟೂಲ್ ಎಂಬ ವಿಧಾನ ಪರಿಚಯಿಸಿದ್ದು, ಇದರಿಂದ ಮರು ಅಪಲೋಡ್ ಆಗುವ ಪ್ರಮೇಯ ತಪ್ಪುತ್ತದೆ ಎಂದು ಯೂಟ್ಯೂಬ್ ನಂಬಿದೆ.

ಏನೀದು ಕೃತಿಸ್ಮಾಮ್ಯ ಮ್ಯಾಚಿಂಗ್ ಟೂಲ್?
ಸರ್ಚ್ ಇಂಜಿನ್ ದೈತ್ಯ ಗೂಗಲ್ ಮಾಲೀಕತ್ವದಲ್ಲಿರುವ ಯೂಟ್ಯೂಬ್ನಲ್ಲಿ ಹೊಸ ವಿಡಿಯೋವನ್ನು ಅಪ್‌ಲೋಡ್ ಮಾಡಿದರೆ, ಆ ವಿಡಿಯೋಗೆ ಹೋಲಿಕೆಯಾಗುವ ವಿಡಿಯೋ ಅಥವಾ ತುಣುಕು ಈ ಮೊದಲೇ ಇದೆಯೇ ಎಂಬುದನ್ನು ತಿಳಿಯಲು ಸ್ಕ್ಯಾನ್ ಮಾಡಲು ಪ್ರಾರಂಭಿಸುತ್ತದೆ. ಆ ವಿಡಿಯೋ ಬೇರೆ ವಿಡಿಯೋಗೆ ಮ್ಯಾಚ್ ಆದರೆ ಮ್ಯಾಚ್‌ಸ್ ಎಂಬ ಟ್ಯಾಬ್ ಅಲ್ಲಿ ಪ್ರದರ್ಶನವಾಗುತ್ತದೆ ಎಂದು ಯೂಟ್ಯೂಬ್ ತನ್ನ ಬ್ಲಾಗ್‌ನಲ್ಲಿ ಬರೆದುಕೊಂಡಿದೆ.

ಒಂದು ವರ್ಷದಿಂದ ಪ್ರಯೋಗ
ಈ ಕಾಪಿರೈಟ್ ಮ್ಯಾಚಿಂಗ್ ಟೂಲ್‌ನ್ನು ಯೂಟ್ಯೂಬ್ ಒಂದು ವರ್ಷದಿಂದ ಪ್ರಯೋಗಿಸುತ್ತಿತ್ತು. ಇಡೀ ಸಮುದಾಯಕ್ಕೆ ಸುರಕ್ಷಿತ ಹಾಗೂ ಪರಿಣಾಮಕಾರಿಯಾದ ಸೇವೆ ನೀಡಲು ಸುಮಾರು ಒಂದು ವರ್ಷದಿಂದ ವಿಡಿಯೋ ಮ್ಯಾಚಿಂಗ್ ಟೂಲ್‌ನ್ನು ಪರೀಕ್ಷಿಸುತ್ತಿದ್ದೇವೆ ಎಂದು ಯೂಟ್ಯೂಬ್ ಹೇಳಿಕೊಂಡಿದೆ.

ಡಿಲೀಟ್ ಮಾಡುವ ಅವಕಾಶ
ವಿಡಿಯೋದಲ್ಲಿ ಹೋಲಿಕೆ ಕಂಡು ಬಂದರೆ ಮೊದಲು ಅಪ್‌ಲೋಡ್ ಮಾಡಿದ ಚಾನಲ್ ಅಥವಾ ಬಳಕೆದಾರನಿಗೆ ನೊಟಿಫೀಕೆಷನ್‌ನ್ನು ಯೂಟ್ಯೂಬ್ ಕಳಿಸುತ್ತದೆ. ಆತ ವಿಡಿಯೋವನ್ನು ಮರು ಅಪ್ಲೋಡ್ ಮಾಡಿದವರ ಜತೆ ಸಂಪರ್ಕದಲ್ಲಿರಬಹುದು. ಅಥವಾ ಯೂಟ್ಯೂಬ್‌ಗೆ ಮರು ಅಪ್‌ಲೋಡ್ ಮಾಡಿದ ವಿಡಿಯೋವನ್ನು ಪ್ಲಾಟ್‌ಫಾರ್ಮ್‌ನಿಂದ ತೆಗೆದುಹಾಕಲು ವಿನಂತಿಸುವ ಆಯ್ಕೆ ನೀಡಲಾಗಿದೆ.

ಮುಂದಿನ ವಾರದಿಂದ ಬಳಕೆಗೆ ಲಭ್ಯ
ಈ ವೈಶಿಷ್ಟ್ಯ ಮುಂದಿನ ವಾರದಿಂದ ಯೂಟ್ಯೂಬ್‌ನ ಒಂದಕ್ಕಿಂತ ಹೆಚ್ಚು ಸಬ್‌ಸ್ಕ್ರೈಬರ್‌ಗಳಿಗೆ ಲಭ್ಯವಾಗಲಿದೆ. ನಂತರ ಯೂಟ್ಯೂಬ್‌ನ ಪ್ರತಿ ಬಳಕೆದಾರರಿಗೂ ಈ ಸೇವೆಯನ್ನು ವಿಸ್ತರಿಸುತ್ತೇವೆ.

ದೀರ್ಘಾವದಿ ಗುರಿ
ಯೂಟ್ಯೂಬ್‌ನ ಕಾಪಿರೈಟ್ ಮ್ಯಾಚ್ ಟೂಲ್‌ನ್ನು ದೀರ್ಘಕಾಲದ ಗುರಿಯೊಂದಿಗೆ ಬಳಕೆಗೆ ತಂದಿದ್ದೇವೆ. ಇದು ಪ್ರಬಲ ವೈಶಿಷ್ಟ್ಯವಾಗಿರುವುದರಿಂದ ಇದರ ಬಳಕೆಯನ್ನು ನಿರಂತರ ಮೇಲ್ವಿಚಾರಣೆ ಮಾಡುತ್ತೇವೆ. ಈ ಸೇವೆಯನ್ನು ಮುಂದಿನ ತಿಂಗಳುಗಳಲ್ಲಿ ಯುಟ್ಯೂಬ್ ಪಾರ್ಟ್‌ನರ್ ಪ್ರೋಗ್ರಾಂನ ಪ್ರತಿ ವಿಡಿಯೋ ಸೃಷ್ಟಿಕರ್ತರಿಗೆ ವಿಸ್ತರಿಸುತ್ತೇವೆ ಎಂದು ಬ್ಲಾಗ್‌ನಲ್ಲಿ ಯೂಟ್ಯೂಬ್ ಬರೆದುಕೊಂಡಿದೆ.

12 ತಿಂಗಳಲ್ಲಿ 4 ಸಾವಿರ ಗಂಟೆ ವೀಕ್ಷಣೆ
ಯೂಟ್ಯೂಬ್ ಪಾರ್ಟ್‌ನರ್ ಪ್ರೋಗ್ರಾಂನಲ್ಲಿನ ವಿಡಿಯೋ ಕ್ರಿಯೆಟರ್ಸ್ ಅಪ್‌ಲೋಡ್ ಮಾಡಿದ ವಿಡಿಯೋಗಳು ಕಳೆದ 12 ತಿಂಗಳುಗಳಲ್ಲಿ 4 ಸಾವಿರ ಗಂಟೆ ವೀಕ್ಷಣೆಯನ್ನು ಗಿಟ್ಟಿಸಕೊಂಡಿವೆ. ಅದಲ್ಲದೇ ಈ ಪ್ರೋಗ್ರಾಂನಡಿಯಲ್ಲಿ 1,000ಕ್ಕೂ ಹೆಚ್ಚು ಚಂದಾದಾರರು ತಮ್ಮ ಕಂಟೇಂಟ್‌ನ್ನು ಮಾನಟೈಸ್ ಮಾಡುತ್ತಿದ್ದಾರೆ.


Click it and Unblock the Notifications








