Home
ಸುದ್ದಿಜಾಲ

ತನ್ನ ಬಳಕೆದಾರರಿಗೆ ಹೊಸ ಫೀಚರ್ಸ್‌ ಪರಿಚಯಿಸಿದ ಯೂಟ್ಯೂಬ್‌!

ಪ್ರಸ್ತುತ ಸೋಶಿಯಲ್‌ ಮೀಡಿಯಾ ಪ್ಲಾರ್ಟ್‌ಫಾರ್ಮ್‌ಗಳಲ್ಲಿ ಒಂದಾದ ಯೂಟ್ಯೂಬ್ ಹೊಸ ಫೀಚರ್ಸ್‌ ಅನ್ನು ಪರಿಚಯಿಸಿದೆ. ಯೂಟ್ಯೂಬ್‌ ತನ್ನ ಆಂಡ್ರಾಯ್ಡ್ ಮತ್ತು ಐಒಎಸ್ ಅಪ್ಲಿಕೇಶನ್‌ ನಲ್ಲಿ ಹೊಸ 'ಎಕ್ಸ್‌ಪ್ಲೋರ್' ಟ್ಯಾಬ್ ಅನ್ನು ಪರಿಚಯಿಸಿದೆ. ಈ ಫೀಚರ್ಸ್‌ ಮುಖ್ಯ ಫೀಡ್‌ನಿಂದ ಪ್ರತ್ಯೇಕವಾಗಿದ್ದು, ಇದು ಯೂಟ್ಯೂಬ್‌ನಲ್ಲಿ ಹೆಚ್ಚಿನ ವಿಷಯವನ್ನು ಸರ್ಚ್‌ ಮಾಡಲು ಬಳಕೆದಾರರಿಗೆ ಸಹಾಯ ಮಾಡಲಿದೆ.

ಹೌದು

ಹೌದು, ಜನಪ್ರಿಯ ಸೊಶೀಯಲ್‌ಮೀಡಿಯಾ ಆಪ್ಲಿಕೇಶನ್‌ ಯೂಟ್ಯೂಬ್‌ನಲ್ಲಿ ಇದೀಗ ಹೊಸದಾಗಿ ಎಕ್ಸ್‌ಪ್ಲೋರ್ ಟ್ಯಾಬ್ ಫಿಚರ್ಸ್‌ ಅನ್ನು ಪರಿಚಯಿಸಲಾಗಿದೆ. ಇದು ಅಂಡ್ರಾಯ್ಡ್‌ ಮತ್ತು ಐಒಎಸ್‌ ಎರಡು ಮಾದರಿಯ ಡಿವೈಸ್‌ಗಳಲ್ಲೂ ಸಹ ಲಭ್ಯವಾಗಲಿದೆ. ಯೂಟ್ಯೂಬ್‌ನ ಹೋಮ್‌ ಮೆನುವಿನ ಪಕ್ಕದಲ್ಲಿ ಎಕ್ಸ್‌ಪ್ಲೋರ್ ಐಕಾನ್ ಅನ್ನು ನೀಡಲಾಗಿದ್ದು, ಇದರ ಮೇಲೆ ಟ್ಯಾಪ್ ಮಾಡಿ ಸರ್ಚ್‌ ಪೇಜ್‌ ಓಪನ್‌ ಮಾಡಿದರೆ ಎಲ್ಲಾ ವಿಭಾಗದ ವಿಡಿಯೋಗಳನ್ನ ಕಾಣಬಹುದಾಗಿದೆ.

ಯೂಟ್ಯೂಬ್

ಅಲ್ಲದೆ ಯೂಟ್ಯೂಬ್ ಪರಿಚಯಿಸಿರುವ ಎಕ್ಸಪ್ಲೋರ್‌ ಟ್ಯಾಬ್‌ ಫೀಚರ್ಸ್‌ ಮೇಲೆ ನೀವು ಟ್ಯಾಪ್‌ ಮಾಡಿದರೆ ಸಾಕು ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್ ಇರುವ , ಸಂಗೀತ, ಗೇಮಿಂಗ್, ಸುದ್ದಿ, ಚಲನಚಿತ್ರಗಳು ಮತ್ತು ಫ್ಯಾಷನ್ ಮತ್ತು ಸೌಂದರ್ಯದಂತ ವಿಡಿಯೋಗಳನ್ನ ವೀಕ್ಷಿಸಬಹುದಾಗಿದೆ. ಎಲ್ಲಾ ವರ್ಗದ ವಿಡಿಯೋಗಳು ಈ ಪೇಜ್‌ನಲ್ಲಿ ತೆರೆದುಕೊಳ್ಳುತ್ತವೆ. ಅಲ್ಲದೆ ಪ್ರತಿಯೊಂದು ವಿಭಾಗದ ವಿಡಿಯೋಗಳ ಪೇಜ್‌ಗಳನ್ನ ನೋಡಬಹುದಾಗಿರುತ್ತೆ. ಈ ವಿಡಿಯೋಗಳ ಮೇಲೆ ನೀವು ಟ್ಯಾಪ್ ಮಾಡಿ ವೀಕ್ಷಿಸಬಹುದು. ಇಲ್ಲವೆ ನಿಮಗೆ ಯಾವ ಪ್ರಕಾರದ ವಿಡಿಯೋಗಳು ಬೇಕೋ ಅದನ್ನ ಇಲ್ಲಿ ನೀವು ಪರಿಶೀಲಿಸಬಹುದಾಗಿದೆ.

ಇತರೆ

ಇದಲ್ಲದೆ ಇತರೆ ವಿಡಿಯೋಗಳನ್ನ ನೀವು ಸರ್ಚ್‌ ಮಾಡುತ್ತಿದ್ದರೆ ನೀವು ಮತ್ತೆ ವಾಪಾಸ್‌ ಹೋಗುವ ಅಗತ್ಯವಿಲ್ಲ, ಏಕೆಂದರೆ ಬಳಕೆದಾರರು ಅದೇ ಪುಟದಿಂದ ಮುಂದಿನ ಟ್ಯಾಬ್‌ಗೆ ಹೋಗಬಹುದು. ಇನ್ನು ಯೂಟ್ಯೂಬ್‌ನಲ್ಲಿನ ಇತರ ಟ್ಯಾಬ್‌ಗಳಂತೆ, ಎಕ್ಸ್‌ಪ್ಲೋರ್ ಪೇಜ್‌ನಲ್ಲಿ ಸರ್ಚ್‌ ಟೂಲ್‌ ಕಾಸ್ಟಿಂಗ್‌ ಬಟನ್‌ ಅನ್ನು ಸಹ ಹೊಂದಿದೆ. ಜೊತೆಗೆ ಎಕ್ಸಪ್ಲೋರ್‌ ಟ್ಯಾಬ್‌ನಲ್ಲಿ ಓಪನ್‌‌ ಆದ ವಿಡಿಯೋಗಳ ಟೈಟಲ್‌ ಕಾರ್ಡ್‌ಗಳ ಕೆಳಗೆ ನ್ಯೂ ಕ್ರಿಯೇಟರ್ ಆನ್ ದಿ ರೈಸ್ ಅನ್ನುವ ವಿಭಾಗವನ್ನ ನೀಡಲಾಗಿದೆ. ಇದು ಒಬ್ಬ ಯೂಟ್ಯೂಬ್ ಚಾನೆಲ್‌ ಕ್ರಿಯೆಟರ್‌ ಹಾಗೂ ಕ್ರಿಯೆಟರ್‌ ವೀಡಿಯೊಗಳ ಪಟ್ಟಿಯನ್ನು ನೀಡಲಾಗಿರುತ್ತದೆ.

ಯೂಟ್ಯೂಬ್‌ನಲ್ಲಿ

ಅಲ್ಲದೆ, ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್ ವೀಡಿಯೊಗಳ ಪಟ್ಟಿಯನ್ನು ತೋರಿಸುವ ಎಕ್ಸ್‌ಪ್ಲೋರ್ ಪುಟದಲ್ಲಿ ಫೀಡ್ ಕೂಡ ಇರುತ್ತದೆ. ಇನ್ನು ಕಳೆದ ನವೆಂಬರ್‌ನಲ್ಲಿ ಯೂಟ್ಯೂಬ್ ಅನ್ನು ರಿ ಡಿಸೈನ್‌ ಮಾಡಲಾಗಿದ್ದು, ಇದಾದ ನಂತರೆ ಈ ಫೀಚರ್ಸ್ ಅನ್ನು ಪರಿಚಯಿಸಲಾಗಿದ್ದು, ಹಲವು ಟ್ಯಾಭ್‌ಗಳನ್ನ ತೆರೆಯುವ ಬದಲು ಎಕ್ಸಪ್ಲೋರ್‌ ಮೂಲಕ ನಿಮಗೆ ಬೇಕಾದನ್ನೂ ಆರಿಸಿಕೊಳ್ಳುವ ಅವಕಾಶವನ್ನ ನೀಡಿದೆ. ಈ ಮೂಲಕ ಸಮಯದ ಉಳಿತಾಯವನ್ನ ಮಾಡಬಹುದು ಎಂದು ಯುಟ್ಯೂಬ್‌ ಹೇಳಿದೆ.

ಯುಟ್ಯೂಬ್‌

ಇದಲ್ಲದೆ ಯುಟ್ಯೂಬ್‌ ಹೋಮ್‌ಪೇಜ್‌ನಲ್ಲಿ ನೀವು ಆಯ್ಕೆ ಮಾಡಿದ ವರ್ಗದ ವೀಡಿಯೊಗಳನ್ನು ಹೈಲೈಟ್ ಮಾಡಲು ಹೆಚ್ಚಿನ ಸ್ಥಳವನ್ನು ಸಹ ನೀಡಲಾಗಿದೆ. ಈ ಹೊಸ ಫೀಚರ್ಸ್‌ನಿಂದಾಗಿ ಇನ್ಮುಂದೆ ಯುಟ್ಯೂಬ್‌ ಬಳಕೆದಾರರು ಕೇವಲ ಎಕ್ಸಪ್ಲೋರ್‌ ಟ್ಯಾಬ್‌‌ ಅನ್ನು ಟ್ಯಾಪ್‌ ಮಾಡಿದರೆ ಸಾಕು ಎಲ್ಲಾ ಮಾದರಿಯ ವಿಡಿಯೋಗಳನ್ನ ನೋಡಬಹುದಾಗಿದೆ.

Best Mobiles in India

English summary
YouTube has added a new explore section on its Android and iOS apps which basically brings back the different categories of videos.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+