ಏಕಾಏಕಿ ಭಾರತದಲ್ಲಿ ಯೂಟ್ಯೂಬ್, ಜಿಮೇಲ್, ಗೂಗಲ್ ಡ್ರೈವ್ ಸೇವೆಯಲ್ಲಿ ಭಾರಿ ವ್ಯತ್ಯಯ

|

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ನ ಜಿ-ಮೇಲ್‌ ಸೇವೆ ಹಾಗೂ ಯೂಟ್ಯೂಬ್ ವೆಬ್‌ಸೈಟ್‌ಗಳ ಕಾರ್ಯನಿರ್ವಹಣೆಯಲ್ಲಿ ದೋಷಕಾಣಿಸಿಕೊಂಡಿದೆ. ಭಾರತದಾದ್ಯಂತ ಅನೇಕ ಬಳಕೆದಾರರಿಗಾಗಿ ಈ ದೋಷ ಕಾಣಿಸಿಕೊಂಡಿದ್ದು, ಸೇವೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ. ಸದ್ಯ ಟ್ವಿಟ್ಟರ್‌ನಲ್ಲಿ ಯುಟ್ಯೂಬ್‌ ಮತ್ತು ಜಿ-ಮೇಲ್‌ ಸೇವೆಯಲ್ಲಿ ಉಂಟಾಗಿರುವ ದೋಷದ ಬಗ್ತೆಯೆ ಹೆಚ್ಚು ಚರ್ಚೆ ನಡೆಯುತ್ತಿದೆ.

ಯೂಟ್ಯೂಬ್

ಹೌದು, ಯೂಟ್ಯೂಬ್, ಜಿಮೇಲ್, ಗೂಗಲ್ ಮತ್ತು ಗೂಗಲ್ ಡ್ರೈವ್ ಸೇರಿದಂತೆ ಅನೇಕ ಗೂಗಲ್ ಸೇವೆಗಳು ಅನೇಕ ಬಳಕೆದಾರರಿಗೆ ಕಾರ್ಯನಿರ್ವಹಿಸುತ್ತಿಲ್ಲ. ಈ ವೆಬ್‌ಸೈಟ್‌ಗಳ ಹೊರತಾಗಿ, ಗೂಗಲ್ ಪ್ಲೇ, ಗೂಗಲ್ ಮ್ಯಾಪ್‌, ಗೂಗಲ್ ಹ್ಯಾಂಗ್‌ ಔಟ್ಸ್‌, ಗೂಗಲ್ ಡ್ಯುವೋ ಮತ್ತು ಗೂಗಲ್ ಮೀಟ್ ಸಹ ಅನೇಕರಿಗೆ ಕೆಲಸ ಮಾಡುತ್ತಿಲ್ಲ ಎಂದು ವರದಿ ಆಗಿದೆ.

ಗೂಗಲ್

ಸದ್ಯ ಭಾರತದಲ್ಲಿ ಎಲ್ಲಾ ಕಡೆಗಳಲ್ಲೂ ಯೂಟ್ಯೂಬ್, ಜಿಮೇಲ್, ಗೂಗಲ್ ಮತ್ತು ಗೂಗಲ್ ಡ್ರೈವ್ ಸೇವೆಗಳಲ್ಲಿ ಭಾರಿ ವ್ಯತ್ಯ ಉಂಟಾಗಿದೆ. ಎಲ್ಲ ಬಳಕೆದಾರರಿಗೂ ಕಾರ್ಯನಿರ್ವಹಿಸದೆ ದೋಷ ಕಾಣಿಸಿಕೊಂಡಿದೆ. ಅಲ್ಲದೆ ಈ ಎಲ್ಲಾ ಸೇವೆಗಳು ಭಾರತದಲ್ಲಿ ಮಾತ್ರವಲ್ಲದೆ ಯುರೋಪ್, ಯುನೈಟೆಡ್ ಸ್ಟೇಟ್ಸ್ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ವಿಶ್ವದ ಅನೇಕ ಭಾಗಗಳಲ್ಲಿ ತೊಂದರೆಗಳನ್ನು ಎದುರಿಸುತ್ತಿವೆ ಎಂದು ವೆಬ್‌ಸೈಟ್ ನಲ್ಲಿ ವರದಿ ಆಗಿದೆ.

ಯೂಟ್ಯೂಬ್‌

ಇನ್ನು ಇಲ್ಲಿಯವರೆಗೆ ಯೂಟ್ಯೂಬ್‌ ಸೇವೆಯಲ್ಲಿ ಉಂಟಾಗಿರುವ ವ್ಯತ್ಯಯದಿಂದ ಬಳಕೆದಾರರಿಂದ 26,000 ಕ್ಕೂ ಹೆಚ್ಚು ಜನರಿಂದ ದೂರುಗಳನ್ನು ಸ್ವೀಕರಿಸಿದೆ ಎನ್ನಲಾಗಿದೆ. ಗೂಗಲ್‌ನ ಜಿ-ಮೇಲ್‌ ಉಂಟಾಗಿರುವ ದೋಷದಿಂದ ಎಲ್ಲಾ ಕಡೆ ಜಿ-ಮೇಲ್‌ ಸೆಂಡ್‌ ತೊಂದೆರಯನ್ನು ಸಾಕಷ್ಟು ಅನುಭವಿಸಿದ್ದಾರೆ. ಯೂಟ್ಯೂಬ್, ಜಿಮೇಲ್, ಗೂಗಲ್ ಮತ್ತು ಗೂಗಲ್ ಡ್ರೈವ್ ಸೇವೆಳು ಯಾವ ಕಾರಣಕ್ಕೆ ತಮ್ಮ ಕಾರ್ಯಗಳಲ್ಲಿ ದೋಷ ಕಾಣಿಸಿಕೊಂಡಿದೆ ಅನ್ನೊದನ್ನ ಇನ್ನೂ ಬಹಿರಂಗ ಪಡಿಸಿಲ್ಲ. ಆದರೆ ಟ್ವಿಟ್ಟರ್‌ನಲ್ಲಿ ಮಾತ್ರ ಬಗೆ ಬಗೆಯ ಕಾಮೆಂಟ್‌ಗಳು ಹರಿದಾಡುತ್ತಿವೆ.

Best Mobiles in India

English summary
YouTube, Gmail, and Google Google Services Not Working In India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X