Home
ಸುದ್ದಿಜಾಲ

ಯೂಟ್ಯೂಬ್ ಕ್ರಿಯೇಟರ್‌ಗಳಿಗೆ ಹೊಸ ಗಿಫ್ಟ್: ವಿಡಿಯೋ ಕ್ರಿಯೇಟ್ ಇನ್ನು ಸುಲಭ!

ಗೂಗಲ್ ಒಡೆತನದ ಜನಪ್ರಿಯ ವೀಡಿಯೊ ಸ್ಟ್ರೀಮಿಂಗ್ ತಾನ ಯೂಟ್ಯೂಬ್ ತನ್ನ ಕ್ರಿಯೇಟರ್‌ಗಳಿಗಾಗಿ ವಿವಿಧ ಹೊಸ ಕೃತಕ ಬುದ್ಧಿಮತ್ತೆ (AI)-ಚಾಲಿತ ವೈಶಿಷ್ಟ್ಯಗಳನ್ನು ಬಿಡುಗಡೆ ಮಾಡಿದೆ. ಇಂದು ಮಂಗಳವಾರ ಆಯೋಜಿಸಲಾಗಿದ್ದ ಮೇಡ್ ಆನ್ ಯೂಟ್ಯೂಬ್ ಕಾರ್ಯಕ್ರಮದಲ್ಲಿ, ಯೂಟ್ಯೂಬ್ ಶಾರ್ಟ್ಸ್ ಕ್ರಿಯೇಟರ್‌ಗಳಿಗೆ, ಪಾಡ್‌ಕಾಸ್ಟರ್‌ಗಳಿಗೆ ಮತ್ತು ಲೈವ್ ಸ್ಟ್ರೀಮಿಂಗ್‌ನಲ್ಲಿ ಭಾಗವಹಿಸುವವರಿಗಾಗಿ ಯೂಟ್ಯೂಬ್ ಹೊಸ ಅನುಭವವನ್ನು ತರುತ್ತಿದೆ. ಇದನ್ನು ಸುಲಭವಾಗಿ ಹೇಳಬೇಕೆಂದರೆ, ಇನ್ನು ಮುಂದೆ AI ಮೂಲಕ ವಿಡಿಯೋಗಳನ್ನು ಸೃಷ್ಟಿಸುವುದು ಸುಲಭವಾಗಲಿದೆ.!

ಶಾರ್ಟ್ಸ್ ನಿರ್ಮಿಸುವವರಿಗೆ ಹೊಸ ಶಕ್ತಿ
ಯೂಟ್ಯೂಬ್‌ನ ವೀಕ್ಷಕರಲ್ಲಿ ಇಂದು ಶಾರ್ಟ್ಸ್ ಅತಿ ಹೆಚ್ಚು ಜನಪ್ರಿಯವಾಗಿದೆ. ಅದನ್ನು ಇನ್ನೂ ಆಕರ್ಷಕವಾಗಿ ಮಾಡಲು ಯೂಟ್ಯೂಬ್ ಹಲವಾರು AI ಆಧಾರಿತ ಫೀಚರ್‌ಗಳನ್ನು ನೀಡಿದೆ. ಗೂಗಲ್ ಡೀಪ್‌ಮೈಂಡ್‌ನೊಂದಿಗೆ ಪಾಲುದಾರಿಕೆ ಹೊಂದಿರುವ ಯೂಟ್ಯೂಬ್, ಯೂಟ್ಯೂಬ್ ವಿಯೋ 3 ವೀಡಿಯೊ ಜನರೇಷನ್ AI ಮಾದರಿಯ ಕಸ್ಟಮ್ ಆವೃತ್ತಿಯನ್ನು ಯೂಟ್ಯೂಬ್ ಶಾರ್ಟ್ಸ್‌ಗೆ ಸಂಯೋಜಿಸಿದೆ. ಈಗ ನೀವು ನಿಮ್ಮ ಕಲ್ಪನೆಗೆ ತಕ್ಕಂತೆ ಕೇವಲ ಕೆಲವೇ ಕ್ಷಣಗಳಲ್ಲಿ ಹೊಸ ವಿಡಿಯೋ ಹಿನ್ನೆಲೆಗಳನ್ನು AI ಸಹಾಯದಿಂದ ಸೃಷ್ಟಿಸಬಹುದು.

ಇಷ್ಟೇ ಅಲ್ಲದೆ, ಕೇವಲ ಸ್ಟಿಲ್ ಚಿತ್ರಕ್ಕೆ ಚಲನೆಯನ್ನು ನೀಡಿ ಅದನ್ನು ಹೆಚ್ಚು ಜೀವಂತಗೊಳಿಸಬಹುದು. ಇದರೊಂದಿಗೆ, ಪಾಪ್ ಆರ್ಟ್ ಅಥವಾ ಪೇಪರ್ ಕಲೆಯಂತಹ ವಿಭಿನ್ನ ಶೈಲಿಗಳಲ್ಲಿ ನಿಮ್ಮ ವಿಡಿಯೋಗಳನ್ನು ಈಗ ಸುಲಭವಾಗಿ ಮಾರ್ಪಡಿಸಬಹುದು. ನೀವು ಹೇಳಿದ ಮಾತುಗಳನ್ನು AI ಆಕರ್ಷಕ ಹಾಡಾಗಿ ಪರಿವರ್ತಿಸಿ ನಿಮ್ಮ ಶಾರ್ಟ್ಸ್‌ಗೆ ವಿಭಿನ್ನ ಆಯಾಮ ನೀಡುತ್ತದೆ. ಅತಿ ಮುಖ್ಯವಾಗಿ, ನೀವು ರೆಕಾರ್ಡ್ ಮಾಡಿದ ದೀರ್ಘ ವಿಡಿಯೋಗಳಲ್ಲಿ ಯಾವ ಭಾಗಗಳನ್ನು ಶಾರ್ಟ್ಸ್‌ಗೆ ಬಳಸಬಹುದು ಎಂಬುದನ್ನು AI ತಾನೇ ಗುರುತಿಸಿ, ಸ್ವಯಂಚಾಲಿತವಾಗಿ ಸಣ್ಣ ಕ್ಲಿಪ್‌ಗಳನ್ನು ಸೃಷ್ಟಿಸುತ್ತದೆ.

ಇದು ವಿಡಿಯೋ ಎಡಿಟಿಂಗ್‌ಗೆ ಬೇಕಾಗುವ ಸಮಯವನ್ನು ಬಹಳಷ್ಟು ಕಡಿಮೆ ಮಾಡುತ್ತದೆ. AI-ಸಕ್ರಿಯಗೊಳಿಸಿದ ಉಪಕರಣದ ಸಹಾಯದಿಂದ ಹೊಸ ವೀಡಿಯೊ ಹಿನ್ನೆಲೆಗಳು ಮತ್ತು ಕ್ಲಿಪ್‌ಗಳನ್ನು ಧ್ವನಿಯೊಂದಿಗೆ ಉಚಿತವಾಗಿ ರಚಿಸಲು ಸಾಧ್ಯವಾಗುತ್ತದೆ ಎಂದು ತಿಳಿದುಬಂದಿದೆ. ಉಚಿತವಾಗಿರುವ ಈ ಉಪಕರಣವು 480p ರೆಸಲ್ಯೂಶನ್ ವೀಡಿಯೊಗಳನ್ನು ಉಚಿತವಾಗಿ ರಚಿಸುತ್ತದೆ ಎಂದು ಹೇಳಲಾಗಿದೆ. ಈ ಹೊಸ Shorts ವೈಶಿಷ್ಟ್ಯವು ಎಲ್ಲ ಪ್ರದೇಶಗಳಲ್ಲೂ ಲಭ್ಯವಾಗಲಿದೆ ಮತ್ತು ಇದನ್ನು sparkle icon ಬಟನ್ ಅನ್ನು ಟ್ಯಾಪ್ ಮಾಡುವ ಮೂಲಕ ಉಪಯೋಗಿಸಬಹುದು ಎಂದು ಕಂಪೆನಿ ಹೇಳಿದೆ.

ಯೂಟ್ಯೂಬ್ ಕ್ರಿಯೇಟರ್‌ಗಳಿಗೆ ಹೊಸ ಗಿಫ್ಟ್: ವಿಡಿಯೋ ಕ್ರಿಯೇಟ್ ಇನ್ನು ಸುಲಭ!

ಪಾಡ್‌ಕಾಸ್ಟರ್‌ಗಳಿಗೂ ಸಿಕ್ಕಿದೆ ಹೊಸ ಬೆಂಬಲ
ಪಾಡ್‌ಕಾಸ್ಟ್‌ಗಳ ಜನಪ್ರಿಯತೆ ಹೆಚ್ಚುತ್ತಿರುವ ಈ ಸಮಯದಲ್ಲಿ, ಕೇವಲ ಆಡಿಯೋ ಮಾಡುವವರಿಗೆ ಪ್ರೇಕ್ಷಕರನ್ನು ತಲುಪಲು ಯೂಟ್ಯೂಬ್ ಹೊಸ ದಾರಿಯನ್ನು ತೋರಿಸಿದೆ. ಈಗ AI ತಂತ್ರಜ್ಞಾನ ಬಳಸಿ ನಿಮ್ಮ ಆಡಿಯೋ ಪಾಡ್‌ಕಾಸ್ಟ್‌ಗೆ ಅದ್ಭುತ ವಿಡಿಯೋ ರೂಪವನ್ನು ನೀಡಬಹುದು. ನಿಮ್ಮ ಪಾಡ್‌ಕಾಸ್ಟ್‌ನ ಪ್ರಮುಖ ಮತ್ತು ಆಕರ್ಷಕ ಕ್ಷಣಗಳನ್ನು AI ತಾನೇ ಗುರುತಿಸಿ ಅವುಗಳನ್ನು ಪ್ರಚಾರಕ್ಕೆ ಸೂಕ್ತವಾದ ಶಾರ್ಟ್ಸ್ ವಿಡಿಯೋಗಳಾಗಿ ಪರಿವರ್ತಿಸುತ್ತದೆ. ಇದು ನಿಮ್ಮ ವಿಡಿಯೋಗಳನ್ನು ಹೆಚ್ಚು ಜನರಿಗೆ ತಲುಪಿಸಲು ಸಹಾಯ ಮಾಡುತ್ತದೆ.

ಲೈವ್ ಸ್ಟ್ರೀಮಿಂಗ್‌ನಲ್ಲಿ ಹೊಸ ಅನುಭವ
ಯೂಟ್ಯೂಬ್ ಲೈವ್ ಸ್ಟ್ರೀಮಿಂಗ್ ಅನ್ನು ಇನ್ನಷ್ಟು ಸರಳಗೊಳಿಸಿದೆ. ಇನ್ನು ಮುಂದೆ, ನೀವು ಲೈವ್ ಮಾಡುವಾಗ ಪ್ರೇಕ್ಷಕರು ಮೊಬೈಲ್ ಅಥವಾ ಟಿವಿಯಲ್ಲಿ ವಿಡಿಯೋ ನೋಡುತ್ತಿದ್ದರೂ ಅದಕ್ಕೆ ತಕ್ಕಂತೆ ಲೈವ್ ವಿಡಿಯೋ ಹೊಂದಿಕೊಳ್ಳುತ್ತದೆ. ಲೈವ್ ಹೋಗುವ ಮುನ್ನ 'ರಿಹರ್ಸಲ್ ಮೋಡ್' ಬಳಸಿ ನೀವು ಪೂರ್ವ ತಯಾರಿ ಮಾಡಿಕೊಳ್ಳಬಹುದು. ಇದರ ಜೊತೆಗೆ, ಲೈವ್ ಸಮಯದಲ್ಲಿ ಪ್ರೇಕ್ಷಕರೊಂದಿಗೆ ಆಟಗಳನ್ನು ಆಡಲು 75ಕ್ಕೂ ಹೆಚ್ಚು ಗೇಮ್‌ಗಳನ್ನು ಯೂಟ್ಯೂಬ್ ಪರಿಚಯಿಸಿದೆ. ಲೈವ್ ಸ್ಟ್ರೀಮಿಂಗ್ ಮುಗಿದ ನಂತರ, AI ನಿಮ್ಮ ಲೈವ್‌ನ ಅತ್ಯಂತ ಪ್ರಮುಖ ಕ್ಷಣಗಳನ್ನು ತಾನೇ ಗುರುತಿಸಿ, ಶಾರ್ಟ್ಸ್ ವಿಡಿಯೋಗಳಾಗಿ ಮಾರ್ಪಡಿಸುತ್ತದೆ

ಇಂದಿನ ಡಿಜಿಟಲ್ ಯುಗದಲ್ಲಿ, ಯೂಟ್ಯೂಬ್ ಕೇವಲ ವಿಡಿಯೋ ನೋಡುವ ವೇದಿಕೆಯಾಗಿಲ್ಲ, ಅದೊಂದು ಬಹುದೊಡ್ಡ ಸೃಜನಶೀಲ ಜಗತ್ತು. ಕೋಟ್ಯಂತರ ಜನರು ವಿಡಿಯೋಗಳನ್ನು ಮಾಡಿ ಅದರಿಂದಲೇ ತಮ್ಮ ಜೀವನ ರೂಪಿಸಿಕೊಳ್ಳುತ್ತಿದ್ದಾರೆ. ಈ ಸೃಜನಶೀಲತೆಯನ್ನು ಇನ್ನಷ್ಟು ಸುಲಭ, ವೇಗ ಮತ್ತು ಪರಿಣಾಮಕಾರಿಯನ್ನಾಗಿ ಮಾಡಲು ಯೂಟ್ಯೂಬ್, ಗೂಗಲ್‌ನ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿಕೊಂಡು ಹಲವು ಹೊಸ ಉಪಕರಣಗಳನ್ನು ಪರಿಚಯಿಸಿದೆ. ಈ ಉಪಕರಣಗಳು ಶಾರ್ಟ್ಸ್, ಪಾಡ್‌ಕಾಸ್ಟ್ ಮತ್ತು ಲೈವ್ ವಿಡಿಯೋ ಮಾಡುವವರಿಗೆ ದೊಡ್ಡ ಮಟ್ಟದ ಬದಲಾವಣೆಗಳನ್ನು ತರಲಿವೆ ಎನ್ನಬಹುದು.

Best Mobiles in India

English summary
YouTube has announced new AI-powered tools aimed at simplifying video creation for creators. With these updates, producing Shorts, podcasts, and full-length videos becomes faster and more accessible, allowing anyone to create high-quality content with minimal effort
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+