YouTube ನಿಂದ ಹೊಸ 'Premium Lite' ಚಂದಾದಾರಿಕೆ ಬಿಡುಗಡೆ!
ಆಲ್ಫಾಬೆಟ್-ಮಾಲೀಕತ್ವದ ಜನಪ್ರಿಯ ವೀಡಿಯೊ-ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ YouTube ಇದೇ ಬುಧವಾರದಿಂದ (ಮಾರ್ಚ್ 5) ಹೊಸ ಚಂದಾದಾರಿಕೆಯ ಯೋಜನೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಈ ಹೊಸ ಚಂದಾದಾರಿಕೆ ಯೋಜನೆಯನ್ನು YouTube Premium Lite ಎಂದು ಪರಿಚಯಿಸಲಾಗಿದ್ದು, ಇದು ಯುಟ್ಯೂಬ್ ಚಂದಾದಾರರು ಜಾಹೀರಾತು-ಮುಕ್ತ ವಿಷಯವನ್ನು ವೀಕ್ಷಿಸಲು ಅತ್ಯಂತ ಕೈಗೆಟುಕುವ ಮಾರ್ಗವಾಗಿದೆ. ಪ್ರಸ್ತುತ US ಗೆ ಸೀಮಿತವಾಗಿರುವ ಈ ಹೊಸ ಚಂದಾದಾರಿಕೆಯು ಮುಂಬರುವ ವಾರಗಳಲ್ಲಿ ಹೆಚ್ಚಿನ ಪ್ರದೇಶಗಳಿಗೆ ವಿಸ್ತರಿಸಲಾಗುವುದು ಎಂದು YouTube ಸಂಸ್ಥೆ ಹೇಳಿದೆ. ಹಾಗಾದರೆ, ಈ ಹೊಸ YouTube Premium Lite ಚಂದಾದಾರಿಕೆ ಹೇಗಿದೆ ಮತ್ತು ಪ್ರಯೋಜನಗಳು ಯಾವುವು ಎಂಬುದನ್ನು ಮುಂದೆ ಓದಿ ತಿಳಿಯೋಣ ಬನ್ನಿ.
YouTube ತನ್ನ ಹೊಸ Premium Lite ಚಂದಾದಾರಿಕೆ ಯೋಜನೆಯ ಮೂಲಕ ಕಡಿಮೆ ಬೆಲೆಯಲ್ಲಿ ಹೆಚ್ಚು ವೀಡಿಯೊಗಳಿಗೆ ಜಾಹೀರಾತು-ಮುಕ್ತ ಸ್ಟ್ರೀಮಿಂಗ್ ಅನ್ನು ಒದಗಿಸುವುದಾಗಿ ಹೇಳಿದೆ. ಆದರೆ, ಈ ಯೋಜನೆಯ ಅರ್ಥವೆಂದರೆ ನೀವು ಸಂಪೂರ್ಣವಾಗಿ ಜಾಹೀರಾತುಗಳನ್ನು ತಪ್ಪಿಸುತ್ತೀರಿ ಎಂಬುದಲ್ಲ. ಸಂಗೀತ ವಿಷಯ, ಕಿರುಚಿತ್ರಗಳು ಮತ್ತು ಬಳಕೆದಾರರು ವಿಷಯವನ್ನು ಹುಡುಕಿದಾಗ ಮತ್ತು ಬ್ರೌಸ್ ಮಾಡಿದಾಗ, ಜಾಹೀರಾತುಗಳು ಇನ್ನೂ ಕಾಣಿಸಬಹುದು. ಇದಲ್ಲದೆ, YouTube ಪ್ರೀಮಿಯಂ ಯೋಜನೆಯ ಹೋಲಿಸಿದರೆ ಕೆಲವು ವೈಶಿಷ್ಟ್ಯಗಳನ್ನು ಕಡಿತಗೊಳಿಸುತ್ತದೆ ಎಂದು ಹೇಳಲಾಗಿದೆ.

ಈ ಹೊಸ Premium Lite ಚಂದಾದಾರಿಕೆಯು YouTube ವೀಡಿಯೊಗಳಿಗೆ ಜಾಹೀರಾತು-ಮುಕ್ತ ಸ್ಟ್ರೀಮಿಂಗ್ ಅನ್ನು ಒದಗಿಸುತ್ತಿದ್ದರೂ, ಆಲ್ಫಾಬೆಟ್-ಮಾಲೀಕತ್ವದ ಈ ಪ್ಲಾಟ್‌ಫಾರ್ಮ್ YouTube ಮ್ಯೂಸಿಕ್ ಅನ್ನು ಈ ಯೋಜನೆಯೊಂದಿಗೆ ಸೇರಿಸುತ್ತಿಲ್ಲ ಎನ್ನಲಾಗಿದೆ. ಅಂದರೆ, ಜಾಹೀರಾತು-ಮುಕ್ತ ಸಂಗೀತ ಮತ್ತು ಸಂಗೀತ ವೀಡಿಯೊಗಳ ಸ್ಟ್ರೀಮಿಂಗ್ ಈ ಚಂದಾದಾರಿಕೆಯಲ್ಲಿ ಇಲ್ಲದಿರಬಹುದು. ಬಳಕೆದಾರರು ಅಪ್ಲಿಕೇಶನ್‌ನಲ್ಲಿ ಜಾಹೀರಾತುಗಳೊಂದಿಗೆ ಟ್ರ್ಯಾಕ್‌ಗಳನ್ನು ಕೇಳಬಹುದು, ಆದರೆ YouTube ಪ್ರಕಾರ, ಹಿನ್ನೆಲೆ ಪ್ಲೇ ಮತ್ತು ಆಫ್‌ಲೈನ್ ಆಲಿಸುವಿಕೆಗಾಗಿ ಮ್ಯೂಸಿಕ್ ಡೌನ್‌ಲೋಡ್ ವೈಶಿಷ್ಟ್ಯಗಳಿಗೆ ಪ್ರವೇಶವಿಲ್ಲದಿರಬಹುದು.
ಪ್ರಸ್ತುತ ಈ ಪ್ರೀಮಿಯಂ ಲೈಟ್ ಯೋಜನೆಯನ್ನು ಯುಎಸ್‌ನಲ್ಲಿ (ಅಮೆರಿಕಾ) ಪ್ರಾಯೋಗಿಕವಾಗಿ ಪರಿಚಯಿಸಲಾಗಿದೆ ಮತ್ತು ಮುಂದಿನ ವಾರಗಳಲ್ಲಿ ಆಸ್ಟ್ರೇಲಿಯಾ, ಜರ್ಮನಿ ಮತ್ತು ಥೈಲ್ಯಾಂಡ್‌ಗ ದೇಶಗಳಿಗೆ ವಿಸ್ತರಿಸಲಾಗುವುದು ಎಂದು ಹೇಳಲಾಗಿದೆ (ಈ ವೈಶಿಷ್ಟ್ಯವು ಭಾರತದಲ್ಲಿ ಬಿಡುಗಡೆಯಾಗುವುದೇ ಎಂಬ ಕುರಿತು ಕಂಪೆನಿಯಿಂದ ಯಾವುದೇ ಯಾವುದೇ ಮಾಹಿತಿ ಲಭ್ಯವಿಲ್ಲ). ಇದೀಗ YouTube ಪ್ರೀಮಿಯಂ ಲೈಟ್ ಚಂದಾದಾರಿಕೆ ಅಮೆರಿಕಾದಲ್ಲಿ ತಿಂಗಳಿಗೆ $7.99 (ಸುಮಾರು ರೂ. 695) ಬೆಲೆಗೆ ಜಾಹೀರಾತು-ಮುಕ್ತ ಸ್ಟ್ರೀಮಿಂಗ್ ಸೇವೆಯನ್ನು ನೀಡುತ್ತದೆ. ಇದುವರೆಗೆ, ಅಮೆರಿಕಾದಲ್ಲಿ YouTube ನ ಜಾಹೀರಾತು-ಮುಕ್ತ ಚಂದಾದಾರಿಕೆ ಬೇಸಿಕ್ ಶ್ರೇಣಿಯ ಬೆಲೆ ತಿಂಗಳಿಗೆ $13.99 (ಸುಮಾರು ರೂ. 1,200) ಆಗಿತ್ತು.
YouTube ನಿಂತ ಮತ್ತೊಂದು ಸುದ್ದಿ ಏನೆಂದರೆ, YouTube ತನ್ನ ಅಪ್ಲಿಕೇಶನ್ ಅನ್ನು ನೆಟ್‌ಫ್ಲಿಕ್ಸ್‌ನಂತೆ ಮರುವಿನ್ಯಾಸಗೊಳಿಸಲು ಯೋಜಿಸುತ್ತಿದೆ ಎನ್ನಲಾಗಿದೆ. ಒಂದು ವರದಿಯ ಪ್ರಕಾರ, ಕಂಪನಿಯು ಈ ವರ್ಷ ತನ್ನ 20ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದು, 125 ಮಿಲಿಯನ್ ಚಂದಾದಾರರನ್ನು ಹೊಂದಿದೆ. ಈ ಹೊಸ ಯೋಜನೆಯ ಮೂಲಕ YouTube ಪ್ರೀಮಿಯಂನ ವಿಸ್ತರಣೆಯು ಬಳಕೆದಾರರಿಗೆ ವಿಷಯವನ್ನು ಒದಗಿಸಲು ವಿಭಿನ್ನ ಮಾರ್ಗಗಳನ್ನು ಒದಗಿಸಲು ವೇದಿಕೆಯ ಉದ್ದೇಶವಾಗಿದೆ. ಈ ಕುರಿತಂತೆ YouTube ನಿಂದ ಮತ್ತಷ್ಟು ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.


Click it and Unblock the Notifications








