Home
ಸುದ್ದಿಜಾಲ

ಯೂಟ್ಯೂಬ್‌ ಮೊಬೈಲ್‌ ಅಪ್ಲಿಕೇಶನ್‌ ಸೇರಿದ ಹೊಸ ವೀಡಿಯೊ ಪ್ಲೇಯರ್‌!

ಗೂಗಲ್‌ ಒಡೆತನದ ಜನಪ್ರಿಯ ಸೇವೆಗಳಲ್ಲಿ ಯೂಟ್ಯೂಬ್‌ ಪ್ಲಾಟ್‌ಫಾರ್ಮ್ ಕೂಡ ಒಂದಾಗಿದೆ. ಯೂಟ್ಯೂಬ್‌ ಜನಪ್ರಿಯ ವೀಡಿಯೋ ಪ್ಲಾಟ್‌ಫಾರ್ಮ್‌ ಎನಿಸಿಕೊಂಡಿದ್ದು, ಜಾಗತಿಕವಾಗಿ ಸಾಕಷ್ಟು ಪ್ರಸಿದ್ದಿ ಪಡೆದಿದೆ. ಇನ್ನು ಯೂಟ್ಯೂಬ್‌ನಲ್ಲಿ ವೀಡಿಯೋ ಮಾತ್ರವಲ್ಲ ಮ್ಯೂಸಿಕ್‌ ಅನ್ನು ಕೂಡ ಆಲಿಸಬಹುದು. ಇದೇ ಕಾರಣಕ್ಕೆ ಹೆಚ್ಚಿನ ಜನರು ಯೂಟ್ಯೂಬ್‌ ಅಪ್ಲಕೇಶನ್‌ ಅನ್ನ ಬಳಸುತ್ತಾರೆ. ಇನ್ನು ಯೂಟ್ಯೂಬ್‌ ಕೂಡ ಬಳಕೆದಾರರ ಅನುಕೂಲಕ್ಕಾಗಿ ಅನೇಕ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಸದ್ಯ ಇದೀಗ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ವೀಡಿಯೋ ಪ್ಲೇಯರ್‌ ಅನ್ನು ಪರಿಚಯಿಸಿದೆ.

ಯೂಟ್ಯೂಬ್‌

ಹೌದು, ಯೂಟ್ಯೂಬ್‌ ತನ್ನ ಆಂಡ್ರಾಯ್ಡ್‌ ಮತ್ತು ಐಒಎಸ್‌ ಅಪ್ಲಿಕೇಶನ್‌ಗಳಲ್ಲಿ ಹೊಸ ವೀಡಿಯೊ ಪ್ಲೇಯರ್ ಪರಿಚಯಿಸಿದೆ. ತನ್ನ ವೀಡಿಯೊ ಪ್ಲೇಯರ್‌ನಲ್ಲಿ ಯೂಸರ್‌ ಇಂಟರ್ಫೇಸ್ (UI) ಬಟನ್‌ ಸೇರಿಸುತ್ತಿದೆ. ಇದರಿಂದ ಫುಲ್‌ ಸ್ಕ್ರೀನ್‌ಮೋಡ್‌ನಲ್ಲಿಯೂ ಕೂಡ ಹಲವು ಆಯ್ಕೆಯ ಬಟನ್‌ಗಳನ್ನು ಕಾಣಬಹುದಾಗಿದೆ. ಹೊಸ ಯೂಸರ್‌ ಇಂಟರ್‌ಫೇಸ್‌ ನ ಬಟನ್‌ಗಳು ಯೂಟ್ಯೂಬ್‌ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಫುಲ್‌ ಸ್ಕ್ರೀನ್‌ ಮೋಡ್‌ನಲ್ಲಿ ಗೋಚರಿಸುತ್ತವೆ. ಇದರಲ್ಲಿ ಲೈಕ್‌ ಅಥವಾ ಡಿಸ್‌ಲೈಕ್‌, ಕಾಮೆಂಟ್‌ಗಳನ್ನು ಸೇರಿಸಲು ಬಟನ್‌ಗಳು ಸೇರಿವೆ. ಹಾಗಾದ್ರೆ ಯೂಟ್ಯೂಬ್‌ನ ಹೊಸ ವೀಡಿಯೊ ಪ್ಲೇಯರ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಯೂಟ್ಯೂಬ್‌

ಯೂಟ್ಯೂಬ್‌ ತನ್ನ ವೀಡಿಯೋ ಪ್ಲೇಯರ್‌ ವಿಂಡೋದಲ್ಲಿ ಹೊಸ ಯೂಸರ್‌ ಇಂಟರ್‌ಫೇಸ್‌ ಬಟನ್‌ಗಳನ್ನು ಪರಿಚಯಿಸಿದೆ. ಈ ಬಟನ್‌ಗಳು ನಿಮ್ಮ ವೀಡಿಯೋ ವೀಕ್ಷಣೆಯ ಅನುಭವವನ್ನು ಇನ್ನಷ್ಟು ಉತ್ತಮಗೊಳಿಸಲಿದೆ. ಜೊತೆಗೆ ವೀಡಿಯೊಗಳೊಂದಿಗೆ ಸಂವಹನವನ್ನು ಮೊದಲಿಗಿಂತ ಸುಲಭವಾಗಿಸಲಿದೆ. ಇನ್ನು ಈ ಹೊಸ ಬಟನ್‌ಗಳಲ್ಲಿ ಲೈಕ್ಸ್‌, ಡಿಸ್‌ಲೈಕ್ಸ್‌, ಕಾಮೆಂಟ್‌ಗಳು, ಪ್ಲೇ ಲಿಸ್ಟ್‌ನಲ್ಲಿ ಸೇವ್‌ ಮಾಡಲು ಮತ್ತು ಶೇರ್‌ಮಾಡುವುದಕ್ಕೆ ಶಾರ್ಟ್‌ಕಟ್‌ಗಳನ್ನು ಒಳಗೊಂಡಿವೆ. ಜೊತೆಗೆ ಈ ಬಟನ್‌ಗಳು ಫುಲ್‌ ಸ್ಕ್ರೀನ್‌ ಮೋಡ್‌ನಲ್ಲಿ ವೀಡಿಯೊ ಪ್ಲೇಯರ್‌ನ ಕೆಳಗಿನ ಎಡ ಮೂಲೆಯಲ್ಲಿ ಗೋಚರಿಸುತ್ತವೆ.

ಯೂಟ್ಯೂಬ್‌

ಇದರಿಂದ ಯೂಟ್ಯೂಬ್‌ನ ಮೊಬೈಲ್ ಅಪ್ಲಿಕೇಶನ್‌ನ ವೀಡಿಯೊ ಪ್ಲೇಯರ್ ರಿ ಡಿಸೈನ್‌ ರೂಪದಲ್ಲಿ ಕಾಣಲಿದೆ. ನೀವು ವೀಡಿಯೊವನ್ನು ವಿರಾಮಗೊಳಿಸಿದಾಗ ಅಥವಾ ಪರದೆಯ ಮೇಲೆ ಟ್ಯಾಪ್ ಮಾಡಿದಾಗ ಬಟನ್‌ಗಳು ಆಟೋಮ್ಯಾಟಿಕ್‌ ಕಾಣಲಿವೆ. ಇಲ್ಲದಿದ್ದರೆ ನಿಮ್ಮ ವೀಕ್ಷಣೆಯ ಅನುಭವಕ್ಕೆ ಅಡ್ಡಿಯಾಗದಂತೆ ಹೈಡ್‌ ಮಾಡುವ ಅವಕಾಶ ಕೂಡ ಇದೆ. ಈ ಬಟನ್‌ಗಳ ಮೂಲಕ ನೀವು ವೀಡಿಯೊವನ್ನು ಶೇರ್‌ ಮಾಡುವುದಕ್ಕೆ ಮತ್ತು ಅದನ್ನು ಪ್ಲೇ ಲಿಸ್ಟ್‌ನಲ್ಲಿ ಸೇವ್‌ ಮಾಡುವುದಕ್ಕೂ ಕೂಡ ಒಂದು ಬಟನ್ ನೀಡಲಾಗಿದೆ. ಇದಲ್ಲದೆ ಕೆಳಗಿನ ಬಲ ಮೂಲೆಯಲ್ಲಿ ಹೆಚ್ಚಿನ ವೀಡಿಯೊಗಳಿಗಾಗಿ ಯೂಟ್ಯೂಬ್‌ ವಿಭಾಗವನ್ನು ಸಹ ಸೇರಿಸಿದೆ.

ಯೂಟ್ಯೂಬ್‌

ಇನ್ನು ಈ ಎಲ್ಲಾ ಆಯ್ಕೆಗಳು ಯೂಟ್ಯೂಬ್‌ ಅಪ್ಲಿಕೇಶನ್‌ಗೆ ಹೊಸತಲ್ಲ. ಆದರೆ ಈ ಆಯ್ಕೆಗಳಿಗಾಗಿ ಬಳಕೆದಾರರು ಈ ಹಿಂದೆ ಫುಲ್‌ ಸ್ಕ್ರೀನ್‌ ಮೋಡ್‌ನಿಂದ ಎಕ್ಸಿಟ್‌ ಆಗಬೇಕಿತ್ತು. ಅಲ್ಲದೆ ಈ ಬಟನ್‌ಗಳನ್ನು ಪೋರ್ಟ್ರೇಟ್ ಲೇಔಟ್‌ನಲ್ಲಿ ಕಾಣಬಹುದಾಗಿತ್ತು. ಆದರೆ ಇದೀಗ ಇವೆಲ್ಲವೂ ನೇರವಾಗಿ ಕಾಣಿಸಲಿವೆ. ಸದ್ಯ ಈ ಹೊಸ ವೀಡಿಯೊ ಪ್ಲೇಯರ್ UI ಅನ್ನು ಆಂಡ್ರಾಯ್ಡ್‌ ಮತ್ತು ಐಒಎಸ್‌ ಡಿವೈಸ್‌ಗಳಿಗೆ ಪರಿಚಯಿಸಲಾಗಿದೆ. ಆದರೆ ಸ್ಪಷ್ಟವಾಗಿ ಇನ್ನೂ ಕೂಡ ವ್ಯಾಪಕವಾಗಿ ಎಲ್ಲರಿಗೂ ಲಭ್ಯವಾಗಿಲ್ಲ.

ಯೂಟ್ಯೂಬ್

ಇದಲ್ಲದೆ, ಯೂಟ್ಯೂಬ್ ಹೊಸ ಲೂಪಿಂಗ್ ಫೀಚರ್ಸ್‌ ಅನ್ನು ಪರೀಕ್ಷಿಸುತ್ತಿದೆ ಎಂದು ವರದಿಯಾಗಿದೆ. ಇದು ಪ್ಲೇಬ್ಯಾಕ್ ಸ್ಲೈಡರ್ ಅನ್ನು ನಿರ್ದಿಷ್ಟ ಹ್ಯಾಂಡ್‌ಫ್ರಿಯಾಗಿ ಸಂಪೂರ್ಣ ವೀಡಿಯೊಗಳನ್ನು ಅಥವಾ ವೀಡಿಯೊದ ನಿರ್ದಿಷ್ಟ ಅಧ್ಯಾಯಗಳನ್ನು ಅನಂತವಾಗಿ 'ಲೂಪ್' ಮಾಡಲು ಅನುಮತಿಸುತ್ತದೆ. ಈ ಫೀಚರ್ಸ್‌ ಇನ್ನೂ ಕೂಡ ಪರೀಕ್ಷಾ ಹಂತದಲ್ಲಿದೆ. ಇದು ಬಳಕೆದಾರರಿಗೆ ಲಭ್ಯವಾಗುವುದಕ್ಕೆ ಇನ್ನಷ್ಟು ದಿನಗಳಾಗಬಹುದು ಎಂದು ಹೇಳಲಾಗಿದೆ.

Best Mobiles in India

English summary
YouTube is adding new video player user interface (UI) buttons on its Android and iOS apps.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+