Home
ಸುದ್ದಿಜಾಲ

YouTube ನಿಂದ ಹಣಗಳಿಕೆಗೆ ಹೊಸ ನಿಯಮ: ಕಂಟೆಂಟ್ ಕ್ರಿಯೇಟರ್‌ಗಳಿಗೆ ಚಿಂತೆ!

ಜನಪ್ರಿಯ ವಿಡಿಯೋ ಜಾಲತಾಣ ಯೂಟ್ಯೂಬ್‌ನಲ್ಲಿ ಹಣ ಮಾಡುವುದು ಬಹಳ ಸುಲಭ ಎನ್ನುವ ಕಾಲ ಮುಗಿಯಬಹುದು. ಏಕೆಂದರೆ, ಇದೇ ಜುಲೈ 15 ರಿಂದ YouTube ನಲ್ಲಿ ಹೊಸ ಹಣಗಳಿಕೆ ನಿಯಮಗಳು ಜಾರಿಗೆ ಬರಲಿದೆ. ಈ ಹೊಸ ನಿಯಮಗಳ ಪ್ರಕಾರ, ಪುನರಾವರ್ತಿತ ಅಥವಾ ಮರುಬಳಕೆ ಮಾಡಲಾದ ವಿಷಯಕ್ಕೆ ಯಾವುದೇ ಗಳಿಕೆ ಇಲ್ಲ ಎಂದು ವರದಿಯಾಗಿದೆ. ಈ ವಿಷಯವು ಸೇರಿದಂತೆ ಪರಿಷ್ಕೃತ ಮಾರ್ಗಸೂಚಿಗಳನ್ನು ಯೂಟ್ಯೂಬ್‌ನ ಅಧಿಕೃತ ಬೆಂಬಲ ಪುಟದಲ್ಲಿ ಪ್ರಕಟಿಸಲಾಗಿದ್ದು, ಇದರ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.

YouTube ನಿಂದ ಹೊಸ ಹಣಗಳಿಕೆ ನಿಯಮಗಳು ಹೀಗಿವೆ,
YouTube ತನ್ನ ಅಧಿಕೃತ ಬೆಂಬಲ ಪುಟದಲ್ಲಿ ಪ್ರಕಟಿಸಲಾದ ಹೇಳಿಕೆಯಲ್ಲ, "YouTube ಪಾಲುದಾರ ಕಾರ್ಯಕ್ರಮ (YPP) ದ ಭಾಗವಾಗಿ ಹಣಗಳಿಸಲು, YouTube ಯಾವಾಗಲೂ 'ಮೂಲ' ಮತ್ತು 'ಅಧಿಕೃತ' ವಿಷಯವನ್ನು ಅಪ್‌ಲೋಡ್ ಮಾಡುವುದನ್ನು ಕಡ್ಡಾಯಗೊಳಿಸುತ್ತದೆ.

ಜುಲೈ 15, 2025 ರಂದು, YouTube ಸಾಮೂಹಿಕವಾಗಿ ಉತ್ಪಾದಿಸುವ ಮತ್ತು ಪುನರಾವರ್ತಿತ ವಿಷಯವನ್ನು ಉತ್ತಮವಾಗಿ ಗುರುತಿಸಲು ನಮ್ಮ ಮಾರ್ಗಸೂಚಿಗಳನ್ನು ನವೀಕರಿಸುತ್ತಿದೆ. ಈ ನವೀಕರಣವು ಇಂದು 'ಅಧಿಕೃತ' ವಿಷಯ ಹೇಗಿದೆ ಎಂಬುದನ್ನು ಉತ್ತಮವಾಗಿ ಪ್ರತಿಬಿಂಬಿಸುತ್ತದೆ." ಎಂದು ಹೇಳಿದೆ.

'ಪುನರಾವರ್ತಿತ' ಅಥವಾ 'ಸಾಮೂಹಿಕ-ನಿರ್ಮಿತ' ಎಂದರೆ ಏನು?
ಇನ್ನು ಮುಂದೆ YouTube ತನ್ನ ಪ್ಲಾಟ್‌ಫಾರ್ಮ್ನಲ್ಲಿ ಹಣಗಳಿಕೆಗೆ ಸೂಕ್ತವಲ್ಲ ಎಂದು ಪರಿಗಣಿಸುವ ವಿಷಯದಲ್ಲಿ 'ಪುನರಾವರ್ತಿತ' ಅಥವಾ 'ಸಾಮೂಹಿಕ-ನಿರ್ಮಿತ' ಎಂಬುದನ್ನು ಸೇರಿಸಿದೆ. ಮೊದಲನೆಯದಾಗಿ, ಇತರ ಮೂಲಗಳಿಂದ ಎರವಲು ಪಡೆದ ಕಂಟೆಂಟ್ ಅನ್ನು ಕೇವಲ ಮೂಲವೆಂದು ಪರಿಗಣಿಸಲು ಸಾಧ್ಯ,

ಒಂದು ವೇಳೆ ಕ್ರಿಯೇಟ್‌ಗಳು ಕಂಟೆಂಟ್‌ನಲ್ಲಿ ಗಮನಾರ್ಹವಾಗಿ ಬದಲಾವಣೆ ಮಾಡದಿದ್ದರೆ, ಅದನ್ನು 'ಸಾಮೂಹಿಕ-ನಿರ್ಮಿತ' ಎಂದು ಪರಿಗಣಿಸಬಹುದು. ಎರಡನೆಯದಾಗಿ, ಪುನರಾವರ್ತಿತ ವಿಷಯವು ವೀಕ್ಷಣೆಗಳನ್ನು ಪಡೆಯುವುದನ್ನು ಮೀರಿದ ಉದ್ದೇಶವನ್ನು ಪೂರೈಸಬೇಕು. ಅದು ಮನರಂಜನೆ ಅಥವಾ ಶೈಕ್ಷಣಿಕವಾಗಿರಬೇಕು ಎಂದು ಹೇಳಲಾಗಿದೆ.

(ಉದಾಹರಣೆಗೆ ಮೂವಿಗಳಿಗೆ ರಿಯಾಕ್ಷನ್ ಕೊಡುವ ವಿಡಿಯೋಗಳು ಪುನರಾವರ್ತಿತ ವಿಷಯದಲ್ಲಿ ಇರುವ ಸಾಧ್ಯತೆ ಇದೆ).

YouTube ನಿಂದ ಹಣಗಳಿಕೆಗೆ ಹೊಸ ನಿಯಮ: ಕಂಟೆಂಟ್ ಕ್ರಿಯೇಟರ್‌ಗಳಿಗೆ ಚಿಂತೆ!

ಯೂಟ್ಯೂಬ್ ತನ್ನ ನಿಯಮಗಳನ್ನು ಬದಲಾಯಿಸುತ್ತಿರುವುದು ಏಕೆ ?
YouTube ನಿಜವಾದ ಕಂಟೆಂಟ್ ಕ್ರಿಯೇಟ್‌ಗಳನ್ನು ರಕ್ಷಿಸಲು ಮತ್ತು ಚಾನಲ್‌ಗಳ ಸಂಖ್ಯೆಯನ್ನು ಕಡಿಮೆ ಮಾಡಲು ಗುರಿಯನ್ನು ಹೊಂದಿದೆ, ಮುಖ್ಯವಾಗಿ ವೇದಿಕೆಯ ದುರುಪಯೋಗವನ್ನು ನಿಲ್ಲಿಸುವ ಗುರಿ ಇದಾಗಿದೆ.

ಈ ಹೊಸ ನಿಯಮಗಳು ಕ್ಲಿಕ್‌ಬೈಟ್ (ಹೆಡ್‌ಲೈನ್, ಫೋಟೊ ಚೆನ್ನಾಗಿದ್ದು, ಕಂಟೆಂಟ್ ಇಲ್ಲದಿರುವುದು), ಟೆಂಪ್ಲೇಟ್ ಮಾಡಿದ ಮತ್ತು AI-ರಚಿತ ವಿಷಯದ ಮೇಲೆ ಪರಿಣಾಮ ಬೀರುತ್ತದೆ ಎಂದು ನಿರೀಕ್ಷಿಸಲಾಗಿದೆ,

ವಿಶೇಷವಾಗಿ AI-ರಚಿತ ಧ್ವನಿಗಳನ್ನು ಅವಲಂಬಿಸಿರುವ ಅಥವಾ ಇತರ ಕ್ರಿಯೇಟ್‌ಗಳ ವಿಷಯವನ್ನು ಎಡಿಮ್ ಮಾಡಿ ಮರುಬಳಕೆ ಮಾಡುವ ವೀಡಿಯೊಗಳು ಇದರ ಮುಖ್ಯ ಗುರಿಯಾಗಿರುವ ಸಾಧ್ಯತೆ ಇದೆ.

ಕಂಟೆಂಟ್ ಕ್ರಿಯೇಟರ್‌ಗಳ ಮೇಲೆ ಪರಿಣಾಮ ಏನು?
ಜುಲೈ 15 ರಿಂದ ಜಾರಿಗೆ ಬರಲಿರುವ ಈ ಹೊಸ ನಿಯಮಗಳನ್ನು ಉಲ್ಲಂಘಿಸಿದರೆ ರಚನೆಕಾರರು ಯಾವ ಪರಿಣಾಮಗಳನ್ನು ಎದುರಿಸಬಹುದು ಎಂಬುದನ್ನು YouTube ನಿರ್ದಿಷ್ಟಪಡಿಸಿಲ್ಲ. ನವೀಕರಿಸಿದ ನಿಯಮಗಳ ಅಡಿಯಲ್ಲಿ ದಂಡಗಳು, ಅಮಾನತುಗಳು ಅಥವಾ ಸ್ಟ್ರೈಕ್‌ಗಳ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಈ ಬಗ್ಗೆ ಶೀಘ್ರದಲ್ಲೇ ಮಾಹಿತಿ ಹೊರೆಯುವ ಸಾಧ್ಯತೆ ಇದೆ.

ಇನ್ನು AI-ನೆರವಿನಿಂದ ರಚಿಸಲಾದ ವಿಷಯವು ಪರಿಷ್ಕೃತ ಮಾರ್ಗಸೂಚಿಗಳ ಅಡಿಯಲ್ಲಿ ಬರುತ್ತದೆಯೇ ಎಂಬುದನ್ನು YouTube ದೃಢೀಕರಿಸದಿದ್ದರೂ, ಈ ಅಪ್‌ಡೇಟ್ ಅಂತಹ ಸ್ವರೂಪಗಳ ಮೇಲೆ ಬಿಗಿಯಾದ ನಿಯಂತ್ರಣವನ್ನು ಸೂಚಿಸಿದೆ.

ಈ ಕುರಿತಂತೆ ನಿಮ್ಮ ಅಭಿಪ್ರಾಯ ಏನು? ಈ ಹೊಸ ನಿಯಮಗಳು ನಿಜವಾದ ಕಂಟೆಂಟ್ ಕ್ರಿಯೇಟ್‌ಗಳನ್ನು ರಕ್ಷಿಸಲು ಮತ್ತು ಚಾನಲ್‌ಗಳ ಸಂಖ್ಯೆಯನ್ನು ಕಡಿಮೆ ಮಾಡಲು ಸಹಾಯವಾಗುತ್ತದೆಯೇ? ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
The new YouTube policy is anticipated to affect clickbait, templated, and AI-generated content, particularly videos that utilize AI-generated voices or repurpose other creators' materials with little editing.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+