ಟರ್ಮಿನೇಟ್ ಆದ ಯೂಟ್ಯೂಬ್ ಕ್ರಿಯೇಟರ್ಸ್‌ಗೆ ಮತ್ತೆ ಚಾನೆಲ್ ತೆರೆಯಲು ಅವಕಾಶ!
ಇತ್ತೀಚೆಗೆ ಗಮನ ಸೆಳೆದ ಒಂದು ಘಟನೆಯೆಂದರೆ, ಜನಪ್ರಿಯ ಇನ್‌ಸ್ಟಾಗ್ರಾಮ್ ಕ್ರಿಯೇಟರ್ ಒಬ್ಬರು ಯೂಟ್ಯೂಬ್‌ಗೆ ಕಾಲಿಡುವ ಮುನ್ನವೇ ತೊಂದರೆ ಅನುಭವಿಸಿದ್ದು. ಕಾರಣ, ಕಳ್ಳರು ಅವರ ಕಂಟೆಂಟ್‌ಗಳನ್ನು ಯೂಟ್ಯೂಬ್‌ನಲ್ಲಿ ಅಪ್ಲೋಡ್ ಮಾಡಿ, ಅವರ ಮೂಲ ಖ್ಯಾತಿಗೆ ಧಕ್ಕೆ ತಂದಿದ್ದರು. ಯಾರು ಮೂಲ, ಯಾರು ನಕಲು ಎಂಬ ಗೊಂದಲದಿಂದ, ಮೂಲ ರಚನಕಾರರಿಗೇ ಸಮಸ್ಯೆಯಾಗಿತ್ತು. ಆದರೆ, ಇಂತಹ ಗೊಂದಲಗಳಿಂದ ಮತ್ತು ಸಮುದಾಯ ಮಾರ್ಗಸೂಚಿಗಳ ಸಣ್ಣ ಉಲ್ಲಂಘನೆಗಳಿಂದಾಗಿ ಚಾನೆಲ್ ಕಳೆದುಕೊಂಡ ಕ್ರಿಯೇಟರ್‌ಗಳಿಗೆ ಇದೀಗ ಯೂಟ್ಯೂಬ್ ಒಂದು ಸಿಹಿ ಸುದ್ದಿಯನ್ನು ನೀಡಿದೆ.
ವಜಾಗೊಂಡ ಕ್ರಿಯೇಟರ್‌ಗಳಿಗೆ ಎರಡನೇ ಅವಕಾಶ
ಯೂಟ್ಯೂಬ್, ತಮ್ಮ ಚಾನೆಲ್‌ಗಳನ್ನು ಈ ಹಿಂದೆ ವಜಾಗೊಳಿಸಿದ (Terminated) ರಚನೆಕಾರರಿಗಾಗಿ ಹೊಸ ಪೈಲಟ್ ಕಾರ್ಯಕ್ರಮವನ್ನು ಪ್ರಕಟಿಸಿದೆ. ಈ ಕಾರ್ಯಕ್ರಮದಡಿ, ಅರ್ಹ ಕ್ರಿಯೇಟರ್‌ಗಳು ಹೊಸ ಚಾನೆಲ್ ತೆರೆಯಲು ವಿನಂತಿಸಬಹುದು ಮತ್ತು ತಮ್ಮ ಸಮುದಾಯವನ್ನು ಮೊದಲಿನಿಂದ ಮತ್ತೆ ಕಟ್ಟಿಕೊಳ್ಳಲು ಅವಕಾಶ ಪಡೆಯಬಹುದು. ಯೂಟ್ಯೂಬ್ ಪಾರ್ಟ್‌ನರ್ ಪ್ರೋಗ್ರಾಂ (YPP) ಮೂಲಕ ಹಣಗಳಿಸಲು ಅವಕಾಶ ನೀಡುತ್ತದೆ
ಇದುವರೆಗೆ, ವಜಾಗೊಂಡ ಚಾನೆಲ್ ಅನ್ನು ಮರಳಿ ಪಡೆಯಲು ನೇರ ಮಾರ್ಗವಿರಲಿಲ್ಲ.ಈ ಹೊಸ ಅವಕಾಶ, ವಜಾಗೊಂಡ ರಚನಕಾರರಿಗೆ ತಮ್ಮ ತಪ್ಪನ್ನು ತಿದ್ದಿಕೊಂಡು, ಹೊಸದಾಗಿ ಪ್ರಾರಂಭಿಸಲು ದಾರಿ ಮಾಡಿಕೊಡುತ್ತದೆ. ಯೂಟ್ಯೂಬ್ ತನ್ನ ಬ್ಲಾಗ್ ಪೋಸ್ಟ್‌ನಲ್ಲಿ ಈ ಬದಲಾವಣೆಯನ್ನು ದೃಢಪಡಿಸಿದ್ದು, ಇದು ಕ್ರಿಯೇಟರ್ ಎಕಾನಮಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.
ಆದರೆ, ಯೂಟ್ಯೂಬ್ ಎಲ್ಲ ವಜಾಗೊಂಡ ಕ್ರಿಯೇಟರ್‌ಗಳಿಗೂ ಈ ಅವಕಾಶ ನೀಡುತ್ತಿಲ್ಲ. ಬದಲಿಗೆ, ಕೆಲವು ಕಟ್ಟುನಿಟ್ಟಿನ ಅಂಶಗಳನ್ನು ಪರಿಗಣಿಸಲಾಗುವುದು.ಯಾರು ಅರ್ಹರು? ಮಾನದಂಡಗಳೇನು? ಹಾಗೂ ಅರ್ಹತೆಯನ್ನು ನಿರ್ಧರಿಸುವ ಪ್ರಮುಖ ಅಂಶಗಳು ಹೀಗಿವೆ.
ಉಲ್ಲಂಘನೆಯ ತೀವ್ರತೆ: ಚಾನೆಲ್ ವಜಾಗೊಳಿಸಲು ಕಾರಣವಾದ ಸಮುದಾಯ ಮಾರ್ಗಸೂಚಿಗಳ ಉಲ್ಲಂಘನೆಗಳು ತೀವ್ರವಾಗಿಲ್ಲದಿದ್ದಲ್ಲಿ ಅಥವಾ ಪುನರಾವರ್ತಿತ ಉಲ್ಲಂಘನೆಗಳಿಲ್ಲದಿದ್ದಲ್ಲಿ ಅವಕಾಶ ಸಿಗಬಹುದು.
ವೇದಿಕೆಯ ನಡವಳಿಕೆ: ಕ್ರಿಯೇಟರ್‌ನ ಆನ್‌ಲೈನ್ ಅಥವಾ ಆಫ್‌ಲೈನ್ ಚಟುವಟಿಕೆಗಳು ಯೂಟ್ಯೂಬ್ ಸಮುದಾಯಕ್ಕೆ ಹಾನಿ ಮಾಡಿಲ್ಲ ಅಥವಾ ಹಾನಿ ಮುಂದುವರಿಸುವುದಿಲ್ಲ ಎಂದು ವೇದಿಕೆ ಖಚಿತಪಡಿಸಿಕೊಳ್ಳುತ್ತದೆ.

ಅರ್ಹರಲ್ಲದವರು ಯಾರು?
ಹಕ್ಕುಸ್ವಾಮ್ಯ (Copyright) ಉಲ್ಲಂಘನೆ ಅಥವಾ ಕ್ರಿಯೇಟರ್ ಜವಾಬ್ದಾರಿ ನೀತಿಗಳ (Creator Responsibility Policies) ಉಲ್ಲಂಘನೆಗಾಗಿ ಚಾನೆಲ್ ಕಳೆದುಕೊಂಡವರು ಈ ಪೈಲಟ್ ಕಾರ್ಯಕ್ರಮಕ್ಕೆ ಅರ್ಹರಲ್ಲ.
ತಮ್ಮ ಚಾನೆಲ್ ಅಥವಾ ಗೂಗಲ್ ಖಾತೆಯನ್ನು ತಾವೇ ಅಳಿಸಿ ಹಾಕಿದ ಕ್ರಿಯೇಟರ್‌ಗಳು ಸಹ ಹೊಸ ಚಾನೆಲ್‌ಗೆ ವಿನಂತಿಸಲು ಸಾಧ್ಯವಿಲ್ಲ.
ವಿನಂತಿಸುವುದು ಹೇಗೆ?
ಅರ್ಹ ರಚನಕಾರರು, ತಮ್ಮ ವಜಾಗೊಂಡ ಚಾನೆಲ್‌ನೊಂದಿಗೆ ಡೆಸ್ಕ್‌ಟಾಪ್‌ನಲ್ಲಿರುವ ಯೂಟ್ಯೂಬ್ ಸ್ಟುಡಿಯೋಗೆ (YouTube Studio) ಲಾಗಿನ್ ಆದಾಗ, 'ಹೊಸ ಚಾನೆಲ್ ಅನ್ನು ವಿನಂತಿಸಿ' (Request a new channel) ಎಂಬ ಆಯ್ಕೆಯನ್ನು ನೋಡಲು ಪ್ರಾರಂಭಿಸುತ್ತಾರೆ. ಅವರ ವಿನಂತಿಯನ್ನು ಯೂಟ್ಯೂಬ್ ಸ್ವೀಕರಿಸಿದರೆ, ಅವರು ಹೊಸ ಚಾನೆಲ್ ರಚಿಸಲು ಸಾಧ್ಯವಾಗುತ್ತದೆ.ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ, ಚಾನೆಲ್ ವಜಾಗೊಂಡ ಒಂದು ವರ್ಷದ ನಂತರ ಕ್ರಿಯೇಟರ್‌ಗಳು ಹೊಸ ಚಾನೆಲ್‌ಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ. ಆ ಅವಧಿಯೊಳಗೆ ಅವರು ಚಾನೆಲ್ ಮುಕ್ತಾಯದ ವಿರುದ್ಧ ಮೇಲ್ಮನವಿ ಸಲ್ಲಿಸಬೇಕಾಗುತ್ತದೆ.
ಹೊಸ ಚಾನೆಲ್ ತೆರೆದ ನಂತರ, ಕ್ರಿಯೇಟರ್‌ಗಳು ತಮ್ಮ ಹಿಂದಿನ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸದ ವೀಡಿಯೊಗಳನ್ನು ಮರು-ಅಪ್‌ಲೋಡ್ ಮಾಡಬಹುದು. ಅಲ್ಲದೆ, ತಮ್ಮ ಹೊಸ ಚಾನೆಲ್ ಯೂಟ್ಯೂಬ್ ಪಾಲುದಾರ ಕಾರ್ಯಕ್ರಮದ ಮಾನದಂಡಗಳನ್ನು (ಗಂಟೆಗಳ ವೀಕ್ಷಣೆ ಮತ್ತು ಸಬ್‌ಸ್ಕ್ರೈಬರ್ ಎಣಿಕೆ) ಪೂರೈಸಿದರೆ, ಅವರು ಮತ್ತೆ ಹಣ ಗಳಿಕೆಗೆ ಅರ್ಜಿ ಸಲ್ಲಿಸಬಹುದು. ಇದು ಒಂದು ಹೊಸ ಆರಂಭವಾಗಿದ್ದು, ರಚನಕಾರರು ತಮ್ಮ ಸಮುದಾಯವನ್ನು ಮತ್ತು ತಮ್ಮ ವೃತ್ತಿಜೀವನವನ್ನು ತಾಳ್ಮೆಯಿಂದ ಮತ್ತೆ ನಿರ್ಮಿಸಬೇಕಾಗಿದೆ. ಈ ಹೆಜ್ಜೆ ಕಂಟೆಂಟ್ ಕ್ರಿಯೇಟರ್‌ಗಳ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂಬುದಂತೂ ಸತ್ಯ. ಏನಂತಿರಾ?


Click it and Unblock the Notifications








