ವಿಶ್ವದ ಮೂರನೇ ಅತೀ ದೊಡ್ಡ ರಾಷ್ಟ್ರ ಯೂಟ್ಯೂಬ್
ಯೂಟ್ಯೂಬ್ ಹೊಸ ದಾಖಲೆ ಸೃಷ್ಟಿಸಿದೆ. ಯೂಟ್ಯೂಬ್ ಪ್ರಪ್ರಥಮ ಭಾರಿಗೆ ಘೋಷಣೆ ಮಾಡಿಕೊಂಡಿದ್ದು ಒಂದು ತಿಂಗಳಿನಲ್ಲಿ ಒಂದು ಬಿಲಿಯನ್ ವೀಕ್ಷಕರು ಯೂಟ್ಯೂಬ್‌ನಲ್ಲಿ ವೀಡಿಯೋ ವೀಕ್ಷಿಸುತ್ತಾರೆ ಎಂದು ತನ್ನ ಬ್ಲಾಗ್‌ನಲ್ಲಿ ಹೇಳಿಕೊಂಡಿದೆ. ಅಷ್ಟೇ ಅಲ್ಲದೇ ಈ ದಾಖಲೆ ಸೃಷ್ಟಿಸಲು ನೆರವಾದ ಎಲ್ಲಾ ವೀಕ್ಷಕರಿಗೆ ಯೂಟ್ಯೂಬ್ ಧನ್ಯವಾದ ತಿಳಿಸಿದೆ.
ಬ್ಲಾಗ್‌ಲ್ಲಿ ಯೂಟ್ಯೂಬ್ ಏನು ಹೇಳಿದೆ ?
* ಇಂಟರ್‌ನೆಟ್ ಬಳಕೆ ಮಾಡುವ ಇಬ್ಬರಲ್ಲಿ ಒಬ್ಬರು ಯೂಟ್ಯೂಬ್‌ನಲ್ಲಿ ವೀಡಿಯೋ ವೀಕ್ಷಣೆ ಮಾಡುತ್ತಾರೆ.
* ಒಂದು ತಿಂಗಳು ಯೂ ಟ್ಯೂಬ್ ವೀಕ್ಷಣೆ ಮಾಡುವವರ ಸಂಖ್ಯೆ 10 ಸುಪರ್ ಬೌಲ್ ಆಟದ ಪ್ರೇಕ್ಷಕರ ಸಂಖ್ಯೆಗೆ ಸಮ( ಸುಪರ್ ಬೌಲ್- ಅಮೆರಿಕದ ರಾಷ್ಟ್ರೀಯ ಫುಟ್‌ಬಾಲ್ ಲೀಗ್. ಕಳೆದ ವರ್ಷ ಸುಪರ್ ಬೌಲ್ ವೀಕ್ಷಿಸಿದ ಒಟ್ಟು ಪ್ರೇಕ್ಷಕರ ಸಂಖ್ಯೆ 166.8 ಮಿಲಿಯನ್)
* ಒಂದು ವೇಳೆ ಯೂಟ್ಯೂಬ್‌ನ್ನು ಒಂದು ದೇಶವನ್ನಾಗಿ ಗಣನೆಗೆ ತಗೆದುಕೊಂಡರೇ, ಚೀನಾ ಮತ್ತು ಭಾರತದ ನಂತರ ವಿಶ್ವದ ಮೂರನೇ ರಾಷ್ಟ್ರ ಯೂಟ್ಯೂಬ್ ಎಂದು ಪರಿಗಣಿಸಬಹುದು.
ಈ ಹಿನ್ನೆಲೆಯಲ್ಲಿ ಯೂಟ್ಯೂಬ್‌ನಲ್ಲಿ ವಿಶ್ವದ ಅತಿ ಹೆಚ್ಚು ಜನ ವೀಕ್ಷಿಸುತ್ತಿರುವ ಟಾಪ್ 10 ವೀಡಿಯೋಗಳು ಇಲ್ಲಿವೆ. ನೋಡಿ ಆನಂದಿಸಿ.


Click it and Unblock the Notifications








